ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಧೈರ್ಯದಿಂದ ಆಡಿ ಭಾರತವನ್ನು ಸೋಲಿಸಿʼ: ಪಾಕಿಸ್ತಾನ ತಂಡಕ್ಕೆ ಶೋಯೆಬ್‌ ಅಖ್ತರ್‌ ಸಲಹೆ!

ಭಾನುವಾರ 2025ರ ಏಷ್ಯಾ ಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕಾದಾಟ ನಡೆಸಲಿವೆ. ಇನ್ನು ಈ ಪಂದ್ಯದ ನಿಮಿತ್ತ ತಮ್ಮ ರಾಷ್ಟ್ರೀಯ ತಂಡಕ್ಕೆ ಪಾಕ್ ಮಾಜಿ ವೇಗಿ ಶೋಯೆಬ್‌ ಅಖ್ತರ್‌ ಮಹತ್ವದ ಸಲಹೆಯನ್ನು ನೀಡಿದ್ದಾರೆ.

ಭಾರತ ಪಂದ್ಯದ ನಿಮಿತ್ತ ಪಾಕ್‌ಗೆ ಅಖ್ತರ್‌ ಮಹತ್ವದ ಸಲಹೆ!

ಭಾರತವನ್ನು ಮಣಿಸಲು ಪಾಕಿಸ್ತಾನಕ್ಕೆ ಸಲಹೆ ನೀಡಿದ ಶೋಯೆಬ್‌ ಅಖ್ತರ್‌. -

Profile Ramesh Kote Sep 26, 2025 7:45 PM

ದುಬೈ: ಪ್ರಸ್ತುತ ನಡೆಯುತ್ತಿರುವ 2025ರ ಏಷ್ಯಾ ಕಪ್ (Asia Cup 2025) ಟೂರ್ನಿಯು ಅಂತಿಮ ಹಂತವನ್ನು ತಲುಪಿದೆ. ಸೆಪ್ಟಂಬರ್‌ 28 ರಂದು ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ (IND vs PAK) ತಂಡಗಳು ಕಾದಾಟ ನಡೆಸಲಿವೆ. ಟೂರ್ನಿಯಲ್ಲಿ ಈಗಾಗಲೇ ಉಭಯ ತಂಡಗಳು ಎರಡು ಬಾರಿ ಮುಖಾಮುಖಿಯಾಗಿವೆ. ಎರಡು ಬಾರಿಯೂ ಕೂಡ ಟೀಮ್ ಇಂಡಿಯಾ, ಪಾಕಿಸ್ತಾನವನ್ನು ಮಣಿಸಿದೆ. ಗುರುವಾರ ಬಾಂಗ್ಲಾದೇಶ ವಿರುದ್ಧ ನಡೆದಿದ್ದ ಸೂಪರ್-4ರ ಪಂದ್ಯದಲ್ಲಿ ಪಾಕ್ 11 ರನ್‌ಗಳ ಜಯಗಳಿಸಿ ಫೈನಲ್‌ಗೆ ಪ್ರವೇಶ ಮಾಡಿತ್ತು. ಈ ಹಿನ್ನೆಲೆ ಪಾಕ್ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ (Shoaib Akhtar), 2025ರ ಏಷ್ಯಾ ಕಪ್ ಫೈನಲ್‌ ಪಂದ್ಯದಲ್ಲಿ ಭಾರತವನ್ನು ಧೈರ್ಯದಿಂದ ಎದುರಿಸುವಂತೆ ಪಾಕಿಸ್ತಾನಕ್ಕೆ ಸಲಹೆ ನೀಡಿದ್ದಾರೆ. ಏಷ್ಯಾ ಕಪ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿ ಎರಡೂ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿವೆ.

ಸ್ಥಳೀಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶೋಯೆಬ್‌ ಅಖ್ತರ್, ಸೆಪ್ಟೆಂಬರ್ 28ರ ಭಾನುವಾರದಂದು ನಡೆಯುವ ಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಪ್ರದರ್ಶಿಸಿದ ಮನಸ್ಥಿತಿಯನ್ನೇ ಪ್ರದರ್ಶಿಸಬೇಕೆಂದು ಪಾಕಿಸ್ತಾನ ತಂಡಕ್ಕೆ ಮಾಜಿ ವೇಗಿ ಶೋಯೆಬ್ ಅಖ್ತರ್ ಸಲಹೆ ನೀಡಿದ್ದಾರೆ. ಗುರುವಾರ ಬಾಂಗ್ಲಾದೇಶ ವಿರುದ್ಧ 11 ರನ್‌ಗಳ ಜಯದೊಂದಿಗೆ ಪಾಕಿಸ್ತಾನ ತಂಡ ಫೈನಲ್ ಪಂದ್ಯಕ್ಕೆ ಲಗ್ಗೆ ಇಟ್ಟಿದೆ. ಏಷ್ಯಾ ಕಪ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿ ಎರಡೂ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿವೆ.

BAN vs PAK: ಲೋ ಸ್ಕೋರಿಂಗ್‌ ಪಂದ್ಯ ಸೋತ ಬಾಂಗ್ಲಾದೇಶ, ಫೈನಲ್‌ನಲ್ಲಿ ಭಾರತ vs ಪಾಕ್‌ ಮುಖಾಮುಖಿ!

"ಬಾಂಗ್ಲಾದೇಶ ವಿರುದ್ಧ ತೋರಿದ್ದ ಮನಸ್ಥಿತಿಯಲ್ಲಿಯೇ ಭಾರತ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಮುಂದುವರಿಯಿರಿ. ಆ ಮೂಲಕ ಭಾರತದ ಪ್ರಾಬಲ್ಯವನ್ನು ಮುರಿಯಿರಿ. ಭಾರತ ತಂಡವನ್ನು ಸೋಲಿಸಬೇಕೆಂದರೆ, ಬಾಂಗ್ಲಾ ವಿರುದ್ಧ ತೋರಿದ್ದ ಮನಸ್ಥಿತಿಯನ್ನು ತೋರಬೇಕಾಗಿದೆ," ಎಂದು ಶೋಯೆಬ್‌ ಅಖ್ತರ್‌ ಸಲಹೆ ನೀಡಿದ್ದಾರೆ.

"ನಾವು ಕೇವಲ 20 ಓವರ್‌ಗಳನ್ನು ಪೂರ್ಣಗೊಳಿಸಬೇಕಾಗಿಲ್ಲ, ವಿಕೆಟ್‌ಗಳನ್ನು ತೆಗೆದುಕೊಳ್ಳಬೇಕು. ನೀವು ವಿಕೆಟ್‌ಗಳನ್ನು ಪಡೆಯಲು ಹೋದಾಗ, ಭಾರತ ತಂಡ ಹಿನ್ನಡೆ ಅನುಭವಿಸಬಹುದು ಹಾಗೂ ಮುಕ್ತವಾಗಿ ರನ್ ಗಳಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಭಾರತ ಮನವರಿಕೆ ಮಾಡಿಕೊಳ್ಳಬಹುದು. ಮೊದಲ ಎರಡು ಓವರ್‌ಗಳಲ್ಲಿ ಅಭಿಷೇಕ್ ಶರ್ಮಾ ಔಟಾದರೆ, ಭಾರತ ಸಂಕಷ್ಟಕ್ಕೆ ಸಿಲುಕಲಿದೆ. ನನ್ನ ಪದಕಗಳನ್ನು ಗುರುತು ಮಾಡಿ ಇಟ್ಟುಕೊಳ್ಳಿ. ಇತ್ತೀಚಿಗೆ ಭಾರತ ತಂಡ ಉತ್ತಮ ಆರಂಭವನ್ನು ಪಡೆಯುತ್ತಿದೆ. ಆದರೆ ಆ ಆರಂಭ ಮುರಿದ ನಂತರ, ಅವರು ಸಹ ಕಷ್ಟಪಡುತ್ತಾರೆ," ಎಂದು ಶೋಯೆಬ್‌ ಅಖ್ತರ್‌ ಭವಿಷ್ಯ ನುಡಿದಿದ್ದಾರೆ.

Asia Cup 2025: ʻನಿಮ್ಮ ಮಾತು ತಪ್ಪುʼ-ಮೊಹಮ್ಮದ್‌ ಕೈಫ್‌ಗೆ ಜಸ್‌ಪ್ರೀತ್‌ ತಿರುಗೇಟು!

"ನೀವು ಅತ್ಯುತ್ತಮ ತಂಡ ಎಂದು ಭಾವಿಸಬೇಡಿ, ಆದರೆ ನೀವು ಅತ್ಯುತ್ತಮ ಸಂಯೋಜನೆ ಮತ್ತು ಮೈದಾನದಲ್ಲಿ ಅತ್ಯುತ್ತಮ ಆಟಗಾರರು ಎಂಬುದನ್ನು ನೆನಪಿಡಿ. ಭಾರತ ನಂಬರ್ ಒನ್ ತಂಡವಾಗುವುದರ ಮೇಲೆ ಕೇಂದ್ರೀಕರಿಸಬೇಡಿ. ಮೈದಾನಕ್ಕೆ ಹೋಗಿ ನಿಮ್ಮ ಅತ್ಯುತ್ತಮ ಪ್ರದರ್ಶನ ನೀಡಿ. ನಿಮ್ಮನ್ನು ಕೇಳಿಕೊಳ್ಳಿ, ನಮ್ಮಲ್ಲಿ ಅತ್ಯುತ್ತಮವಾದದ್ದು ಯಾವುದು? ಅದು ಏನೇ ಇರಲಿ, ಅದನ್ನು ಹೊರಗೆ ನೀಡಿ. ದಯವಿಟ್ಟು ಸಂವೇದನಾಶೀಲ ಕ್ರಿಕೆಟ್ ಆಡಲು ಪ್ರಯತ್ನಿಸಿ,"ಎಂದು ಪಾಕಿಸ್ತಾನ ತಂಡಕ್ಕೆ ಸಲಹೆ ನೀಡಿದ್ದಾರೆ.

ಪಾಕಿಸ್ತಾನವು ಎದುರಾಳಿಗಳನ್ನು ಆಲೌಟ್ ಮಾಡುವ ಮತ್ತು ಹೆಚ್ಚಿನ ಮೊತ್ತವನ್ನು ಗಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಖ್ತರ್ ಭರವಸೆ ವ್ಯಕ್ತಪಡಿಸಿದ್ದು, ಪಾಕಿಸ್ತಾನ, ಭಾರತವನ್ನು ಮೂರನೇ ಬಾರಿ ಟೂರ್ನಿಯಲ್ಲಿ ಸೋಲಿಸಬಹುದು ಎಂದು ಅಖ್ತರ್ ನಂಬಿದ್ದಾರೆ.

IND vs PAK: 'ಎಲ್' ಕೈ ಸನ್ನೆಯಿಂದ ಸಂಭ್ರಮಿಸಲು ಕಾರಣ ಬಹಿರಂಗಪಡಿಸಿದ ಅಭಿಷೇಕ್ ಶರ್ಮಾ!

"ಪಾಕಿಸ್ತಾನ ದೊಡ್ಡ ಸ್ಕೋರ್‌ಗಳನ್ನು ಗಳಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಎದುರಾಳಿಗಳನ್ನು ಆಲೌಟ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ನನ್ನ ಮಾತನ್ನು ನಂಬಿರಿ. ಈಗ ನೀವು ಮೂರನೇ ಬಾರಿ ಭೇಟಿಯಾಗುತ್ತಿದ್ದೀರಿ ಮತ್ತು ಅದರ ಹಿಂದೆ ಖಂಡಿತವಾಗಿಯೂ ಒಂದು ಕಾರಣವಿದೆ. ಆ ಕಾರಣವನ್ನು ನಾವು ಭಾನುವಾರ ತಿಳಿಯುತ್ತೇವೆ. ಪಾಕಿಸ್ತಾನ ಗೆಲ್ಲುವುದನ್ನು ನಾನು ನೋಡಲು ಬಯಸುತ್ತೇನೆ ಮತ್ತು ಪಾಕಿಸ್ತಾನ ಅದನ್ನು ಸಾಧಿಸುತ್ತದೆ ಎಂದು ನನಗೆ 100% ಖಚಿತವಾಗಿದೆ," ಎಂದು ಮಾಜಿ ಕ್ರಿಕೆಟಿಗ ವಿಶ್ವಾಸ ವ್ಯಕ್ತಪಡಿಸಿದ್ದಾರೆ.