ಕೊನೆಯ ಎರಡು ಪಂದ್ಯಗಳಿಂದ ಅಕ್ಷರ್ ಪಟೇಲ್ ಔಟ್, ಆರ್‌ಸಿಬಿ ಮಾಜಿ ಆಟಗಾರನಿಗೆ ಸ್ಥಾನ!
Axar Patel Injury: ಭಾರತ ತಂಡದ ಸ್ಪಿನ್ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರು ಅನಾರೋಗ್ಯಕ್ಕೆ ತುತ್ತಾಗಿರುವ ಕಾರಣ ಪ್ರಸ್ತುತ ನಡೆಯುತ್ತಿರುವ ಟಿ20ಐ ಸರಣಿಯ ಕೊನೆಯ ಎರಡು ಪಂದ್ಯಗಳಿಂದ ಹೊರ ನಡೆದಿದ್ದಾರೆ. ಆ ಮೂಲಕ ಭಾರತ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ.
ಟಿ20ಐ ಸರಣಿಯ ಕೊನೆಯ ಎರಡು ಪಂದ್ಯಗಳಿಂದ ಅಕ್ಷರ್ ಔಟ್. -
ನವದೆಹಲಿ: ಅನಾರೋಗ್ಯಕ್ಕೆ ತುತ್ತಾಗಿರುವ ಕಾರಣ ಭಾರತ ತಂಡದ ಸ್ಪಿನ್ ಆಲ್‌ರೌಂಡರ್ ಅಕ್ಷರ್ ಪಟೇಲ್ (Axar Patel) ಅವರು ದಕ್ಷಿಣ ಆಫ್ರಿಕಾ ವಿರುದ್ಧ ಟಿ20ಐ ಸರಣಿಯ ಕೊನೆಯ ಎರಡು ಪಂದ್ಯಗಳಿಂದ (IND vs SA) ಹೊರ ನಡೆದಿದ್ದಾರೆ. ಧರ್ಮಶಾಲಾದಲ್ಲಿ ನಡೆದಿದ್ದ ಮೂರನೇ ಪಂದ್ಯದಲ್ಲಿ ಅಕ್ಷರ್ ಪಟೇಲ್ ಕಣಕ್ಕೆ ಇಳಿದಿರಲಿಲ್ಲ ಹಾಗೂ ಸೋಮವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈ ಬಗ್ಗೆ ತಿಳಿಸಿದೆ. ಅವರು ಮುಂದಿನ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆಂದು ಹೇಳಿದೆ.
ಸ್ಪಿನ್ ಆಲ್‌ರೌಂಡರ್ ಎರಡನೇ ಟಿ20ಐ ಪಂದ್ಯದಲ್ಲಿ ಭಾರೆತದ ಪರ ಕೊನೆಯ ಬಾರಿ ಆಡಿದ್ದರು ಹಾಗೂ ಈ ಪಂದ್ಯದಲ್ಲಿ ಅವರು ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬ್ಯಾಟ್ ಮಾಡಿದ್ದರು. ಅವರು ಭಾರತ ತಂಡವನ್ನು ಸೋಲಿನಿಂದ ತಪ್ಪಿಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಮುಲ್ಲಾನ್‌ಪುರದಲ್ಲಿ ಟೀಮ್ ಇಂಡಿಯಾ 51 ರನ್‌ಗಳಿಂದ ಸೋಲು ಅನುಭವಿಸಿತ್ತು.
ಮುಂದಿನ ವರ್ಷ ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯುವ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ಭಾರತ ತಂಡಕ್ಕೆ ಅಕ್ಷರ್ ಪಟೇಲ್ ಕೀ ಆಟಗಾರರಾಗಿದ್ದಾರೆ. ಹಾಗಾಗಿ ಅವರು ಇದೀಗ ಅನಾರೋಗ್ಯಕ್ಕೆ ತುತ್ತಾಗಿದ್ದು, ಅವರನ್ನು ಆಡಿಸಿ ಅಪಾಯ ಮೈಮೇಲೆ ಎಳೆದುಕೊಳ್ಳಲು ಸಿದ್ದಲಿಲ್ಲ. ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಇನ್ನು ಪ್ರಕಟಿಸಿಲ್ಲ. ಅಂದ ಹಾಗೆ ಪ್ರಸ್ತುತ ಟಿ20ಐ ತಂಡದಲ್ಲಿ ವಾಷಿಂಗ್ಟನ್ ಸಂದರ್ ಇದ್ದಾರೆ, ಹಾಗಾಗಿ ಅವರನ್ನೇ ಮುಂದಿನ ಪಂದ್ಯಗಳಲ್ಲಿ ಆಡಿಸಬಹುದು.
IND vs SA: ವಿರಾಟ್ ಕೊಹ್ಲಿಯ ಎರಡು ವಿಶೇಷ ದಾಖಲೆಗಳನ್ನು ಮುರಿದ ತಿಲಕ್ ವರ್ಮಾ!
ಅಕ್ಷರ್ ಪಟೇಲ್ ಸ್ಥಾನಕ್ಕೆ ಶಹಬಾಝ್ ಅಹ್ಮದ್
ಬಂಗಾಳ ತಂಡದ ಶಹಬಾಜ್ ಅಹ್ಮದ್ ಅವರನ್ನು ಅಕ್ಷರ್ ಪಟೇಲ್ ಸ್ಥಾನಕ್ಕೆ ಭಾರತ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಇಷ್ಟು ದಿನಗಳ ಕಾಲ ಶಹಬಾಜ್ ಅಹ್ಮದ್ ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಆಡುತ್ತಿದ್ದಾರೆ. ಸದ್ಯ ಬಂಗಾಳ ಸ್ಪಿನ್ನರ್ ಅತ್ಯುತ್ತಮ ದೇಶಿ ಕ್ರಿಕೆಟ್‌ನ ಅಂಕಿಅಂಶಗಳನ್ನು ಹೊಂದಿದ್ದಾರೆ.
ಅಕ್ಷರ್ ಪಟೇಲ್ ಸ್ಥಾನಕ್ಕೆ ಕುಲ್ದೀಪ್ ಯಾದವ್ ಆಡುತ್ತಾರಾ?
ಅಕ್ಷರ್ ಪಟೇಲ್ ಅವರ ಬದಲು ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರು ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಆಡಬಹುದು. ಕಳೆದ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಆಡಿದ್ದರು ಹಾಗೂ ಎರಡು ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ಎದುರಾಳಿ ದಕ್ಷಿಣ ಆಫ್ರಿಕಾ ತಂಡವನ್ನು 20 ಓವರ್‌ಗಳಿಗೆ 117 ರನ್‌ಗಳಿಗೆ ಕಟ್ಟಿ ಹಾಕಲು ಭಾರತಕ್ಕೆ ನೆರವು ನೀಡಿದ್ದರು.
IND vs SA: ಮೂರನೇ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್ ಆಡಿದ್ದೇಕೆ? ತಿಲಕ್ ವರ್ಮಾ ಪ್ರತಿಕ್ರಿಯೆ!
ಭಾರತ ತಂಡದ ಸಾಧಾರಣ ಮೊತ್ತದ ಚೇಸಿಂಗ್‌ನಲ್ಲಿ ಅಭಿಷೇಕ್ ಶರ್ಮಾ ಕೇವಲ 18 ಎಸೆತಗಳಲ್ಲಿ 35 ರನ್‌ಗಳನ್ನು ಬಾರಿಸಿದ್ದರು. ಆ ಮೂಲಕ ಟೀಮ್ ಇಂಡಿಯಾ 15.5 ಓವರ್‌ಗಳಿಗೆ ಈ ಮೊತ್ತವನ್ನು ಚೇಸ್ ಮಾಡಿ ಸುಲಭವಾಗಿ ಗೆಲುವು ಪಡೆದಿತ್ತು.
ಅಂದ ಹಾಗೆ ಕೊನೆಯ ಎರಡು ಪಂದ್ಯಗಳನ್ನು ಕ್ರಮವಾಗಿ ಲಖನೌ ಮತ್ತು ಅಹಮದಾಬಾದ್‌ನಲ್ಲಿ ನಡೆಸಲಾಗುತ್ತದೆ. ಸದ್ಯ ಭಾರತ ತಂಡ ಐದು ಪಂದ್ಯಗಳ ಟಿ20ಐ ಸರಣಿಯನ್ನು 2-1 ಅಂತರದಲ್ಲಿ ಮುನ್ನಡೆ ಪಡೆದಿದೆ. ಆರಂಭಿಕ ಮೂರೂ ಪಂದ್ಯಗಳು ಒಂದು ಬದಿಯ ಪಂದ್ಯಗಳಾಗಿದ್ದವು. ಮೊದಲನೇ ಪಂದ್ಯದಲ್ಲಿ ಭಾರತ ಪ್ರಾಬಲ್ಯ ಸಾಧಿಸಿದ್ದರೆ, ಎರಡನೇ ಪಂದ್ಯದಲ್ಲಿ ಹರಿಣ ಪಡೆ ಪ್ರಾಬಲ್ಯ ಸಾಧಿಸಿತ್ತು. ಇನ್ನುಳಿದ ಎರಡು ಪಂದ್ಯಗಳಲ್ಲಿ ಒಂದನ್ನು ಗೆದ್ದರೆ ಟೀಮ್ ಇಂಡಿಯಾ ಟಿ20ಐ ಸರಣಿಯನ್ನು ವಶಪಡಿಸಿಕೊಳ್ಳಲಿದೆ.