ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ind vs sa 2nd test: 2ನೇ ಟೆಸ್ಟ್‌ನಲ್ಲಿ ಗಿಲ್ ಸ್ಥಾನ ತುಂಬಲು ಕರುಣ್‌, ಪಡಿಕ್ಕಲ್‌ ಸೇರಿ 5 ಆಟಗಾರರ ಮಧ್ಯೆ ಪೈಪೋಟಿ

Shubman Gill: ಗಿಲ್ ಅವರು ಇನ್ನೂ ವೈದ್ಯಕೀಯ ನಿಗಾದಲ್ಲಿದ್ದು, ವೈದ್ಯರ ತಂಡ ಶೀಘ್ರದಲ್ಲೇ ಮತ್ತೊಂದು ಸುತ್ತಿನ ತಪಾಸಣೆ ನಡೆಸಲಿದೆ ಎಂದು ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಮೊದಲ ಪಂದ್ಯದ ಬಳಿಕ ತಿಳಿಸಿದ್ದರು. ಮೊದಲ ಪಂದ್ಯದ ಎರಡನೇ ದಿನದಾಟದಲ್ಲಿ (ಶನಿವಾರ) ಗಿಲ್ ಅವರು ಬ್ಯಾಟಿಂಗ್ ಮಾಡುವಾಗ ಕುತ್ತಿಗೆಯ ಸ್ನಾಯುಸೆಳೆತದ ನೋವು ಅನುಭವಿಸಿದ್ದರು.

2ನೇ ಟೆಸ್ಟ್‌ನಲ್ಲಿ ಗಿಲ್ ಸ್ಥಾನಕ್ಕೆ 5 ಆಟಗಾರರ ಮಧ್ಯೆ ಪೈಪೋಟಿ

2ನೇ ಟೆಸ್ಟ್‌ನಲ್ಲಿ ಗಿಲ್ ಸ್ಥಾನಕ್ಕೆ 5 ಆಟಗಾರರ ಮಧ್ಯೆ ಪೈಪೋಟಿ -

Abhilash BC
Abhilash BC Nov 17, 2025 3:39 PM

ಗುವಾಹಟಿ: ದಕ್ಷಿಣ ಆಫ್ರಿಕಾ ವಿರುದ್ಧದ(India vs South Africa) ಮೊದಲ ಟೆಸ್ಟ್ ಪಂದ್ಯದ ವೇಳೆ ಕುತ್ತಿಗೆ ಗಾಯದ ಚಿಕಿತ್ಸೆಗೆ ಒಳಗಾಗಿದ್ದ ಭಾರತ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್(Shubman Gill) ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೂ, ಇನ್ನೂ ಸಂಪೂರ್ಣವಾಗಿ ಗುಣಮುಖರಾಗಿಲ್ಲ. ಹೀಗಾಗಿ ನವೆಂಬರ್ 22ರಿಂದ (ಶನಿವಾರ) ಗುವಾಹಟಿಯಲ್ಲಿ ಪ್ರಾರಂಭವಾಗಲಿರುವ ಎರಡನೇ ಟೆಸ್ಟ್(IND vs SA 2nd Test) ಪಂದ್ಯಕ್ಕೆ ಅವರ ಲಭ್ಯತೆ ಅನಿಶ್ಚಿತವಾಗಿದೆ. ಗಿಲ್‌ ಸ್ಥಾನಕ್ಕೆ ಬದಲಿ ಆಟಗಾರನಾಗಿ ಆಯ್ಕೆಯಾಗಲು 5 ಮಂದಿ ಆಟಗಾರರ ಮಧ್ಯೆ ತೀವ್ರ ಪೈಪೋಟಿ ಕಾಣಿಸಿಕೊಂಡಿದೆ.

ಭಾರತ ತಂಡವು ಬುಧವಾರ ಗುವಾಹಟಿಗೆ ಪ್ರಯಾಣ ಬೆಳೆಸಲಿದೆ. ಆದರೆ, ಕುತ್ತಿಗೆ ನೋವಿನಿಂದ ಚೇತರಿಸಿಕೊಳ್ಳುತ್ತಿರುವುದರಿಂದ ವಿಮಾನದಲ್ಲಿ ಪ್ರಯಾಣಿಸುವುದು ಬೇಡವೆಂದು ವೈದ್ಯರು ಸಲಹೆ ನೀಡಿರುವ ಕಾರಣಕ್ಕೆ ಗಿಲ್ ತಂಡದೊಂದಿಗೆ ಪ್ರಯಾಣಿಸುವ ಸಾಧ್ಯತೆ ಇಲ್ ಎಂದು ಮೂಲಗಳು ತಿಳಿಸಿವೆ.

ಗಿಲ್ ಅವರು ಇನ್ನೂ ವೈದ್ಯಕೀಯ ನಿಗಾದಲ್ಲಿದ್ದು, ವೈದ್ಯರ ತಂಡ ಶೀಘ್ರದಲ್ಲೇ ಮತ್ತೊಂದು ಸುತ್ತಿನ ತಪಾಸಣೆ ನಡೆಸಲಿದೆ ಎಂದು ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಮೊದಲ ಪಂದ್ಯದ ಬಳಿಕ ತಿಳಿಸಿದ್ದರು. ಮೊದಲ ಪಂದ್ಯದ ಎರಡನೇ ದಿನದಾಟದಲ್ಲಿ (ಶನಿವಾರ) ಗಿಲ್ ಅವರು ಬ್ಯಾಟಿಂಗ್ ಮಾಡುವಾಗ ಕುತ್ತಿಗೆಯ ಸ್ನಾಯುಸೆಳೆತದ ನೋವು ಅನುಭವಿಸಿದ್ದರು. ಅದರಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ಇದನ್ನೂ ಓದಿ IPL 2026: ರಾಜಸ್ಥಾನ್‌ ರಾಯಲ್ಸ್‌ಗೆ ಮತ್ತೆ ಹೆಡ್‌ ಕೋಚ್‌ ಆಗಿ ಕುಮಾರ ಸಂಗಕ್ಕಾರ ನೇಮಕ!

ಗಿಲ್‌ ಸ್ಥಾನಕ್ಕೆ ಬದಲಿ ಆಟಗಾರರ ರೇಸ್‌ನಲ್ಲಿ ಕನ್ನಡಿಗರಾದ ಕರುಣ್‌ ನಾಯರ್‌, ದೇವದತ್ತ ಪಡಿಕ್ಕಲ್‌, ಸರ್ಫರಾಜ್‌ ಖಾನ್‌, ಸಾಯಿ ಸುದರ್ಶನ್‌ ಮತ್ತು ನಾರಾಯಣ್ ಜಗದೀಶನ್ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯದ ಪ್ರದರ್ಶನ ನಿಟ್ಟಿನಲ್ಲಿ ಸಾಯಿ ಸುದರ್ಶನ್‌ಗೆ ಅವಕಾಶ ಸಿಗುವ ಸಾಧ್ಯತೆ ಅಧಿಕ. ಅವರು ಭಾರತ ಪರ ತಮ್ಮ ಕೊನೆಯ ಟೆಸ್ಟ್ ಪಂದ್ಯದಲ್ಲಿ 87 ಮತ್ತು 39 ರನ್ ಗಳಿಸಿದ್ದರು. ಹೀಗಿದ್ದರೂ ಅವರನ್ನು ತಂಡದಿಂದ ಕೈಬಿಟ್ಟ ವಿಚಾರಕ್ಕೆ ಹಲವು ಮಾಜಿ ಆಟಗಾರರು ಆಯ್ಕೆ ಸಮಿತಿ ಮತ್ತು ಕೋಚ್‌ ಗಂಭೀರ್‌ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ IND vs SA: ವಾಷಿಂಗ್ಟನ್‌ ಸುಂದರ್‌ ಬಗ್ಗೆ ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ ದಿನೇಶ್‌ ಕಾರ್ತಿಕ್!

ಮೊದಲ ಪಂದ್ಯದಲ್ಲಿ 30 ರನ್‌ ಸೋಲು

ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ನಡೆದಿದ್ದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ 30ರನ್‌ಗಳ ಸೋಲು ಕಂಡಿತ್ತು. ಪಂದ್ಯದಲ್ಲಿ ಭಾರತ ಗೆಲ್ಲಲು ಕೇವಲ 124 ರನ್‌ ಗಳಿಸಬೇಕಿತ್ತು. ಆದರೆ ನಾಟಕೀಯ ಕುಸಿತ ಕಂಡ ಭಾರತ 93 ರನ್‌ ಗಳಿಸಲಷ್ಟೇ ಶಕ್ತವಾಗ ಸೋಲೊಪ್ಪಿಕೊಂಡಿತು. ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ ತಂಡ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಕುತ್ತಿಗೆ ನೋವಿನಿಂದ ನಾಯಕ ಶುಭಮನ್‌ ಗಿಲ್‌ ಪಂದ್ಯದಿಂದ ಹೊರಬಿದ್ದಿದ್ದರಿಂದ ಇದು ಕೂಡ ಭಾರತಕ್ಕೆ ಹಿನ್ನಡೆಯಾಯಿತು.