IND vs SL: 211 ರನ್ ಕಲೆ ಹಾಕಿದ ತಮ್ಮ ಬ್ಯಾಟಿಂಗ್ ಸಕ್ಸಸ್‌ಗೆ ಕಾರಣ ತಿಳಿಸಿದ ದೇವದತ್ ಪಡಿಕ್ಕಲ್!
ಶ್ರೀಲಂಕಾ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದಲ್ಲಿ 211 ರನ್‌ಗಳನ್ನು ಕಲೆ ಹಾಕುವ ಮೂಲಕ ಕನ್ನಡಿಗ ದೇವದತ್ ಪಡಿಕ್ಕಲ್ ಅವರು, ಭಾರತ ತಂಡದ 165 ರನ್‌ಗಳ ಗೆಲುವಿಗೆ ನೆರವು ನೀಡಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯದ ಬಲಿಕ ಮಾತನಾಡಿದ ಪಡಿಕ್ಕಲ್, ತಮ್ಮ ಬ್ಯಾಟಿಂಗ್ ಸಕ್ಸಸ್‌ಗೆ ಕಾರಣ ತಿಳಿಸಿದ್ದಾರೆ.
ತಮ್ಮ ಬ್ಯಾಟಿಂಗ್ ಸಕ್ಸಸ್‌ಗೆ ಕಾರಣ ತಿಳಿಸಿದ ದೇವದತ್ ಪಡಿಕ್ಕಲ್. -
ಗಾಲೆ: ಇಲ್ಲಿನ ಗಾಲೆ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಬುಧವಾರ ಅಂತ್ಯವಾದ ಮೊದಲನೇ ಟೆಸ್ಟ್ ಪಂದ್ಯದಲ್ಲಿ (IND vs SL) ಭಾರತ ತಂಡ 165 ರನ್‌ಗಳ ದೊಡ್ಡ ಅಂತರದಲ್ಲಿ ಗೆಲುವು ದಾಖಲಿಸಿತು. ಆ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಮುನ್ನಡೆಯನ್ನು ಪಡೆದಿದೆ. ಭಾರತ ತಂಡದ ಗೆಲುವಿನ ಹೀರೋ ಕನ್ನಡಿಗ ದೇವದತ್ ಪಡಿಕ್ಕಲ್ (Devdutt Padikkal) ಎಂದರೆ ತಪ್ಪಾಗಲಾರದು. ಏಕೆಂದರೆ ಬ್ಯಾಟಿಂಗ್‌ಗೆ ಕಠಿಣವಾಗಿದ್ದ ಟರ್ನಿಂಗ್ ವಿಕೆಟ್‌ನಲ್ಲಿ ಪಡಿಕ್ಕಲ್ ಎರಡೂ ಇನಿಂಗ್ಸ್‌ಗಳಿಂದ 211 ರನ್‌ಗಳನ್ನು ಕಲೆ ಹಾಕಿದರು, ಆ ಮೂಲಕ ಭಾರತ ತಂಡದ ಗೆಲುವಿಗೆ ನೆರವು ನೀಡಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಪ್ರಥಮ ಇನಿಂಗ್ಸ್‌ನಲ್ಲಿ 167 ರನ್‌ಗಳನ್ನು ಕಲೆ ಹಾಕಿದ್ದರೆ, ದ್ವಿತೀಯ ಇನಿಂಗ್ಸ್‌ನಲ್ಲಿ 44 ರನ್‌ಗಳನ್ನು ಗಳಿಸಿದ್ದರು. ಈ ಪಂದ್ಯದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ದೇವದತ್ ಪಡಿಕ್ಕಲ್, ತಮ್ಮ ವೃತ್ತಿ ಜೀವನದಲ್ಲಿ ಇಲ್ಲಿಯವರೆಗೂ ಆಡಿದ ಮೂರೂ ಟೆಸ್ಟ್‌ಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಧರ್ಮಶಾಲಾದಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದ ಪಡಿಕ್ಕಲ್, ಪರ್ತ್‌ನಲ್ಲಿ ಎರಡನೇ ಟೆಸ್ಟ್ ಹಾಗೂ ಗಾಲೆಯಲ್ಲಿ ಮೂರನೇ ಟೆಸ್ಟ್ ಅನ್ನು ಆಡಿದ್ದಾರೆ.
IND vs SL: ಮಾನವ್ ಸುತಾರ್ ಸ್ಪಿನ್ ಮೋಡಿಗೆ ತತ್ತರಿಸಿದ ಶ್ರೀಲಂಕಾ, ಭಾರತ ತಂಡಕ್ಕೆ ಭರ್ಜರಿ ಜಯ!
"ಹೌದು, ಇದು ನನ್ನ ವೃತ್ತಿ ಜೀವನದ ಸಂಗತಿಗಳಲ್ಲಿ ಒಂದಾಗಿದೆ. ಧರ್ಮಶಾಲಾದಲ್ಲಿ ಟೆಸ್ಟ್ ವೃತ್ತಿ ಜೀವನ ಆರಂಭಿಸಿದ್ದೆ, ನಂತರ ಪರ್ತ್‌ನಲ್ಲಿ ಎರಡನೇ ಪಂದ್ಯನ್ನು ಆಡಿದ್ದೆ ಹಾಗೂ ಇದೀಗ ಗಾಲೆಯಲ್ಲಿ ಆಡಿದ್ದೇನೆ. ನಾನು ಇದಕ್ಕಿಂತ ಉತ್ತಮವಾಗಿರುವುದನ್ನು ಕೇಳಲು ಸಾಧ್ಯವಾಗಿರುವುದಿಲ್ಲ. ಪಂದ್ಯ ನಿಜಕ್ಕೂ ಅದ್ಭುತವಾಗಿತ್ತು. ನಾನು ನಿಜಕ್ಕೂ ಉತ್ತಮ ಕ್ರಿಕೆಟ್ ಆಡಿದ್ದೇವೆ ಹಾಗೂ ಈ ಗೆಲುವಿನಿಂದ ತುಂಬಾ ಖುಷಿಯಾಗುತ್ತಿದೆ," ಎಂದು ದೇವದತ್ ಪಡಿಕ್ಕಲ್ ತಿಳಿಸಿದ್ದಾರೆ.
ಗಾಲೆ ಪಿಚ್ ಬಗ್ಗೆ ಮಾತನಾಡಿದ ಅವರು, “ಖಂಡಿತವಾಗಿಯೂ ಪಿಚ್‌ನಲ್ಲಿ ಸಹಜವಾದ ಸವೆತ ಮತ್ತು ಬದಲಾವಣೆ ಕಂಡುಬಂದಿತ್ತು. ಆದರೆ ಒಟ್ಟಾರೆಯಾಗಿ ಇದು ಅತ್ಯುತ್ತಮ ಟೆಸ್ಟ್ ಪಿಚ್ ಆಗಿತ್ತು. ಐದು ದಿನಗಳ ಕಾಲವೂ ಪಿಚ್ ಉತ್ತಮವಾಗಿ ಆಡಲು ನೆರವಾಯಿತು. ಮೂರನೇ ದಿನದಿಂದ ಪಿಚ್‌ನಲ್ಲಿ ಚೆಂಡು ಹೆಚ್ಚು ತಿರುಗಲು ಆರಂಭಿಸಿತು. ಆದರೆ ಅಂತಿಮವಾಗಿ, ಯಾರು ತಮ್ಮ ಕೌಶಲವನ್ನು ಉತ್ತಮವಾಗಿ ಪ್ರದರ್ಶಿಸಿದರು ಎಂಬುದೇ ಮುಖ್ಯವಾಗಿತ್ತು ಮತ್ತು ನಾವು ಅದನ್ನು ಚೆನ್ನಾಗಿ ಮಾಡಿದ್ದೇವೆ.
For his maiden Test ton that laid the foundation and an equally important knock in the second innings, @devdpd07 receives the Player of the Match award 👏👏#SLvIND #TeamIndia pic.twitter.com/EY7bbMT92f
— BCCI (@BCCI) August 19, 2026
ಎಡಗೈ ಬ್ಯಾಟರ್‌ಗಳಿಗೆ ಈ ಪಿಚ್ ಹೆಚ್ಚು ಅನುಕೂಲಕರವಾಗಿತ್ತೇ? ಎಂದು ಕೇಳಿದ ಪ್ರಶ್ನೆಗೆ ಪಡಿಕ್ಕಲ್, "ಅಷ್ಟೇನೂ ಅಲ್ಲ. ಆದರೆ ಎಡಗೈ ಸ್ಪಿನ್ನರ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಬೌಲ್ ಮಾಡುತ್ತಿದ್ದುದರಿಂದ ಅದು ಕೂಡ ಒಂದು ಕಾರಣವಾಗಿರಬಹುದು. ಪಿಚ್ ಸ್ವಲ್ಪ ನಿಧಾನವಾಗಿತ್ತು. ಚೆಂಡು ಪಿಚ್‌ನಿಂದ ಹೆಚ್ಚಿನ ಪ್ರಮಾಣದಲ್ಲಿ ‘ಬೈಟ್’ ಪಡೆಯುತ್ತಿರಲಿಲ್ಲ. ಹೀಗಾಗಿ ಎಡಗೈ ಬ್ಯಾಟರ್‌ಗಳಿಗೆ ಎಡಗೈ ಸ್ಪಿನ್ನರ್‌ಗಳನ್ನು ಎದುರಿಸುವುದು ತುಸು ಸುಲಭವಾಯಿತು. ಅದೇ ಪ್ರಮುಖ ಕಾರಣವಾಗಿತ್ತು,” ಎಂದು ಅವರು ಹೇಳಿದ್ದಾರೆ.
ʻಸಿಕ್ಸ್ ಹೊಡಿಯಿರಿʼ: ಐಪಿಎಲ್ ಆಫರ್ ನೀಡಿ ನಿರೋಶನ್ ಡಿಕ್ವೆಲ್ಲಾರನ್ನು ಔಟ್ ಮಾಡಿದ ಯಶಸ್ವಿ ಜೈಸ್ವಾಲ್!
ಭಾರತ ತಂಡಕ್ಕೆ 1-0 ಮುನ್ನಡೆ
ಭಾರತ ತಂಡ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಿಸಿಕೊಂಡಿತ್ತು. ದೇವದತ್ ಪಡಿಕ್ಕಲ್ (167 ರನ್) ಹಾಗೂ ಕೆಎಲ್ ರಾಹುಲ್ (82 ರನ್) ಅವರ ಬ್ಯಾಟಿಂಗ್ ಬಲದಿಂದ ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 462 ರನ್‌ಗಳನ್ನು ಕಲೆ ಹಾಕಿತ್ತು. ನಂತರ ಮಾನವ್ ಸುತಾರ್ ಅವರ ಸ್ಪಿನ್ ಮೋಡಿಯ ಬಲದಿಂದ ಶ್ರೀಲಂಕಾವನ್ನು ಪ್ರಥಮ ಇನಿಂಗ್ಸ್‌ನಲ್ಲಿ 284 ರನ್‌ಗಳಿಗೆ ಕಟ್ಟಿ ಹಾಕಲಾಗಿತ್ತು. ನಂತರ ಭಾರತ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 193 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ನಂತರ 362 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಸಿಂಹಳೀಯರು 206 ರನ್‌ಗಳಿಗೆ ಆಲ್‌ಔಟ್ ಆದರು.