ʻಸಿಕ್ಸ್ ಹೊಡಿಯಿರಿʼ: ಐಪಿಎಲ್ ಆಫರ್ ನೀಡಿ ನಿರೋಶನ್ ಡಿಕ್ವೆಲ್ಲಾರನ್ನು ಔಟ್ ಮಾಡಿದ ಯಶಸ್ವಿ ಜೈಸ್ವಾಲ್!
ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಣ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಅವರು, ಎದುರಾಳಿ ಬ್ಯಾಟರ್ ನಿರೋಶನ್ ಡಿಕ್ವೆಲ್ಲಾ ಅವರನ್ನು ಔಟ್ ಮಾಡಲು ಸ್ಲೆಡ್ಜ್ ಮಾಡಿದರು. ಸಿಕ್ಸರ್ ಸಿಡಿಸಿದರೆ, ನಿಮ್ಮನ್ನು ಐಪಿಎಲ್ ಟೂರ್ನಿಯಲ್ಲಿ ಆಡಿಸುತ್ತೇನೆಂದು ಕಾಲೆಳೆದರು. ಇದರ ಬೆನ್ನಲ್ಲೆ ಡಿಕ್ವೆಲ್ಲಾ ಔಟ್ ಆದರು.
ನಿರೋಶನ್ ಡಿಕ್ವೆಲ್‌ಗೆ ಐಪಿಎಲ್ ಆಫರ್ ನೀಡಿದ ಯಶಸ್ವಿ ಜೈಸ್ವಾಲ್. -
ಗಾಲೆ: ಭಾರತ ಹಾಗೂ ಶ್ರೀಲಂಕಾ (IND vs SL) ನಡುವಣ ಮೊದಲನೇ ಟೆಸ್ಟ್ ಪಂದ್ಯ ಐದನೇ ದಿನವಾದ ಬುಧವಾರ ಅಂತ್ಯವಾಯಿತು. ಮಾನವ್ ಸುತಾರ್ (Manav Suthar) ಸ್ಪಿನ್ ಮೋಡಿ ಹಾಗೂ ದೇವದತ್ ಪಡಿಕ್ಕಲ್ ಅವರ ಶತಕದ ಬಲದಿಂದ ಭಾರತ ತಂಡ 165 ರನ್‌ಗಳಿಂದ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶುಭಮನ್ ಗಿಲ್ ನಾಯಕತ್ವದ ಟೀಮ್ ಇಂಡಿಯಾ 1-0 ಮುನ್ನಡೆ ಪಡೆಯಿತು. ಅಂದ ಹಾಗೆ ಪಂದ್ಯವನ್ನು ಗೆಲ್ಲಲು ಭಾರತ ತಂಡಕ್ಕೆ ಐದನೇ ದಿನ 6 ವಿಕೆಟ್ ಕಬಳಿಸಬೇಕಾಗಿತ್ತು. ಅದರಂತೆ ಮಾನವ್ ಸುತಾರ್ 6 ವಿಕೆಟ್ ಕಿತ್ತು ಭಾರತ ತಂಡಕ್ಕೆ ಗೆಲುವಿನ ಮುದ್ರೆ ಒತ್ತಿದರು.
ಬುಧವಾರ ಬೆಳಿಗ್ಗೆ 84 ರನ್‌ಗಳೊಂದಿಗೆ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಶ್ರೀಲಂಕಾ ಪರ ಧನಂಜಯ್ ಡಿ ಸಿಲ್ವಾ ಹಾಗೂ ಸೋನಲ್ ದಿನುಷಾ ಅವರು 95 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ತಮ್ಮ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದ್ದರು. ಅರ್ಧಶತಕ ಸಿಡಿಸಿದ ಬಳಿಕ ಧನಂಜಯ್ ಡಿ ಸಿಲ್ವಾ ವಿಕೆಟ್ ಒಪ್ಪಿಸಿದರು. ಇದರ ನಂತರ ಕ್ರೀಸ್‌ಗೆ ಬಂದ ನಿರೋಶನ್ ಡಿಕ್ವೆಲ್ಲಾ ಅವರ ಮೇಲೆ ಆತಿಥೇಯರು ಭರವಸೆ ಇಟ್ಟಿದ್ದರು. ಏಕೆಂದರೆ ಇವರು ಪ್ರಥಮ ಇನಿಂಗ್ಸ್‌ನಲ್ಲಿ ದೊಡ್ಡ ಇನಿಂಗ್ಸ್ ಆಡಿದ್ದರು.
IND vs SL: ಮಾನವ್ ಸುತಾರ್ ಸ್ಪಿನ್ ಮೋಡಿಗೆ ತತ್ತರಿಸಿದ ಶ್ರೀಲಂಕಾ, ಭಾರತ ತಂಡಕ್ಕೆ ಭರ್ಜರಿ ಜಯ!
ಡಿಕ್ವೆಲ್ಲಾ ಅವರನ್ನು ಆರಂಭದಲ್ಲಿಯೇ ಔಟ್ ಮಾಡಬೇಕೆಂದು ಭಾರತ ತಂಡ ಪ್ರಯತ್ನ ನಡೆಸಿತು. ಅದರಂತೆ ಬ್ಯಾಟ್ ಮಾಡುತ್ತಿದ್ದ ವೇಳೆ ಡಿಕ್ವೆಲ್ಲಾ ಅವರನ್ನು ಯಶಸ್ವಿ ಜೈಸ್ವಾಲ್ ಸ್ಟಂಪ್ಸ್ ಹಿಂದೆ ನಿಂತುಕೊಂಡು ಕಾಲೆಳೆಯುತ್ತಿದ್ದರು. ನೀವು ಇಲ್ಲಿ ಸಿಕ್ಸರ್ ಬಾರಿಸಿದರೆ, ನಿಮ್ಮನ್ನು ಐಪಿಎಲ್ ಟೂರ್ನಿಯಲ್ಲಿ ಆಡಿಸುತ್ತೇನೆಂದು ಅವರು ಆಮಿಷ ನೀಡಿದ್ದರು.
ಜೈಸ್ವಾಲ್ ಹಾಗೂ ಡಿಕ್ವೆಲ್ಲಾ ಅವರ ನಡುವಣ ಸಂಭಾಷಣೆಯ ವಿವರ
ಜೈಸ್ವಾಲ್: ಬನ್ನಿ ಗೆಳೆಯ, ಮೊದಲ ಇನಿಂಗ್ಸ್‌ನಲ್ಲಿ ಬಹಳಷ್ಟು ಹೊಡೆತಗಳು ಇದ್ದವು. ನಾವು ಏನನ್ನಾದರೂ ನೋಡಬೇಕು, ಬನ್ನಿ.
ಡಿಕ್ವೆಲ್ಲಾ: ಹೌದಾ?
ಜೈಸ್ವಾಲ್: ಹೌದು, ನಾನು ನೋಡಬೇಕು. ಬನ್ನಿ ತೋರಿಸಿ. ಅವರಿಗೆ ಪಾಯಿಂಟ್ಸ್‌ನ ಡೀಪ್ ಸ್ಕೈರ್ ಲೆಗ್‌ನಲ್ಲಿ ಸಿಕ್ಸರ್ ಬಾರಿಸಿ, ಬನ್ನಿ ಯಾಕೆ ಆಗುವುದಿಲ್ಲ?
ಡಿಕ್ವೆಲ್ಲಾ: ಈಗ ಅದು ಅಗತ್ಯವಿಲ್ಲ. ನನ್ನನ್ನು ಐಪಿಎಲ್‌ಗೆ ಕರೆದುಕೊಂಡು ಹೋಗಿ, ಅಲ್ಲಿ ಹೊಡೆಯುತ್ತೇನೆ.
ಜೈಸ್ವಾಲ್: ನಾವು ಕರೆದುಕೊಂಡು ಹೋಗುತ್ತೇವೆ, 100%. ಬನ್ನಿ ಸಿಕ್ಸ್ ಹೊಡೆಯಿರಿ. ನಾನು ನಿಮ್ಮನ್ನು ಐಪಿಎಲ್ ಟೂರ್ನಿಗೆ ಕರೆದುಕೊಂಡು ಹೋಗುತ್ತೇನೆ.
ಡಿಕ್ವೆಲ್ಲಾ: ಧನ್ಯವಾದ
THE BANTER BETWEEN YASHASHVI JAISWAL × NIROSHAN DICKWELLA 🤯 pic.twitter.com/PL1NljcOtE
— Maina Singh (@Maina_Singhx77) August 19, 2026
ವಿಕೆಟ್ ಕೈಚೆಲ್ಲಿದ ನಿರೋಶನ್ ಡಿಕ್ವೆಲ್ಲಾ
ಯಶಸ್ವಿ ಜೈಸ್ವಾಲ್ ಅವರೊಂದಿಗಿನ ಸಂಭಾಷಣೆಯ ಮುಂದಿನ ಓವರ್‌ನಲ್ಲಿ ನಿರೋಶನ್ ಡಿಕ್ವೆಲ್ಲಾ ವಿಕೆಟ್ ಒಪ್ಪಿಸಿದರು. ಪ್ರಸಿಧ್ ಕೃಷ್ಣ ಅವರ ಎಸೆತದಲ್ಲಿ ಆಕ್ರಮಣಕಾರಿ ಹೊಡೆತಕ್ಕೆ ಕೈಹಾಕಿದ ಡಿಕ್ವೆಲ್ಲಾ ಎಡ್ಜ್ ಮಾಡಿಕೊಂಡು ವಿಕೆಟ್ ಕೀಪರ್ ರಿಷಭ್ ಪಂತ್‌ಗೆ ಕ್ಯಾಚ್ ಕೊಟ್ಟರು. ನಿರೋಶನ್ 10 ರನ್‌ಗೆ ವಿಕೆಟ್ ಒಪ್ಪಿಸಿದ ಬಳಿಕ ಟೇಲ್ ಎಂಡರ್‌ಗಳು ಬಾಲಂಗೋಚಿಗಳ ರೀತಿ ಪೆವಿಲಿಯನ್‌ಗೆ ಮರಳಿದರು. ಅಂತಿಮವಾಗಿ ಶ್ರೀಲಂಕಾ 206 ರನ್‌ಗಳಿಗೆ ಆಲ್‌ಔಟ್ ಆಯಿತು.