ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

2021ರಿಂದ 88 ನೋಬಾಲ್‌ಗಳನ್ನು ಎಸೆದು ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ರವೀಂದ್ರ ಜಡೇಜಾ!

ಭಾರತ ಟೆಸ್ಟ್‌ ತಂಡದ ಆಲ್‌ರೌಂಡರ್‌ ರವೀಂದ್ರ ಜಡೇಜಾ ದೀರ್ಘಾವಧಿ ಸ್ವರೂಪದಲ್ಲಿ ಅನಗತ್ಯ ದಾಖಲೆಯೊಂದನ್ನು ಹೆಗಲೇರಿಸಿಕೊಂಡಿದ್ದಾರೆ. ಅವರು 2021ರಿಂದ ಇಲ್ಲಿಯವರೆಗೂ ಟೆಸ್ಟ್‌ ಕ್ರಿಕೆಟ್‌ನಲ್ಲಿ 88 ನೋ ಬಾಲ್‌ಗಳನ್ನು ಎಸೆದು, ಈ ಅನಗತ್ಯ ದಾಖಲೆ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದಿದ್ದಾರೆ.

88 ನೋ ಬಾಲ್‌ಗಳಿಂದ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ರವೀಂದ್ರ ಜಡೇಜಾ!

ಟೆಸ್ಟ್‌ ನೋ-ಬಾಲ್‌ಗಳಲ್ಲಿ ಅನಗತ್ಯ ದಾಖಲೆ ಬರೆದ ರವೀಂದ್ರ ಜಡೇಜಾ. -

Profile
Ramesh Kote Aug 26, 2026 8:40 PM

ಕೊಲಂಬೊ: ಭಾರತ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ರವೀಂದ್ರ ಜಡೇಜಾ (Ravindra Jadeja) 2021ರಿಂದ ಟೆಸ್ಟ್‌ ಕ್ರಿಕೆಟ್‌ನಲ್ಲಿ 88 ನೋ-ಬಾಲ್‌ಗಳನ್ನು ಎಸೆದಿದ್ದಾರೆ. ಈ ಅವಧಿಯಲ್ಲಿ ಅತಿ ಹೆಚ್ಚು ನೋ-ಬಾಲ್‌ಗಳನ್ನು ಎಸೆದ ಮೊದಲ ಸ್ಪಿನರ್‌ ಎಂಬ ಅನಗತ್ಯ ದಾಖಲೆಯನ್ನು ಜಡೇಜಾ ತನ್ನ ಹೆಗಲೇರಿಸಿಕೊಂಡಿದ್ದಾರೆ. ಶ್ರೀಲಂಕಾ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಟೆಸ್ಟ್‌ ಸರಣಿಯಲ್ಲೂ (IND vs SL) ಜಡೇಜಾ ಅವರ ನೋ-ಬಾಲ್‌ಗಳ ಸರಣಿ ಮುಂದುವರಿದಿದೆ. ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 3 ನೋ-ಬಾಲ್‌, ಎರಡನೇ ಇನಿಂಗ್ಸ್‌ನಲ್ಲಿ ಒಂದು ನೋ-ಬಾಲ್‌ ಎಸೆದಿದ್ದಾರೆ.

ಇದಕ್ಕೂ ಮುನ್ನ ಇದೇ ಸರಣಿಯ ಮೊದಲ ಟೆಸ್ಟ್‌ ಪಂದ್ಯದಲ್ಲಿ ಅವರು ಮೊದಲ ಇನಿಂಗ್ಸ್‌ನಲ್ಲಿ 2 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 2 ನೋ-ಬಾಲ್‌ಗಳನ್ನು ಎಸೆದಿದ್ದರು. ಹೀಗಾಗಿ ಎರಡು ಟೆಸ್ಟ್‌ಗಳ ನಾಲ್ಕು ಇನಿಂಗ್ಸ್‌ಗಳಲ್ಲಿ ಜಡೇಜಾ ಒಟ್ಟು 8 ನೋ-ಬಾಲ್‌ಗಳನ್ನು ಎಸೆದಿದ್ದಾರೆ.

ಮೊದಲ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಜಡೇಜಾ ಎಸೆದ ನೋ-ಬಾಲ್‌ಗಳಲ್ಲಿ ಒಂದು ಧನಂಜಯ ಡಿ ಸಿಲ್ವಾ ಅವರಿಗೆ ಜೀವದಾನ ನೀಡಿತ್ತು. ರೋಚಕ ಪಂದ್ಯಗಳಲ್ಲಿ ಇಂತಹ ತಪ್ಪುಗಳು ಎದುರಾಳಿ ತಂಡಕ್ಕೆ ದೊಡ್ಡ ಲಾಭವನ್ನು ನೀಡಬಹುದು ಎಂಬುದಕ್ಕೆ ಇದು ಉದಾಹರಣೆಯಾಗಿದೆ.

IND vs SL: ಕೊಲಂಬೊದಲ್ಲಿ ಶತಕದ ಯಶಸ್ಸಿಗೆ ಕಾರಣರಾದ ಆಟಗಾರನನ್ನು ಹೆಸರಿಸಿದ ಧ್ರುವ್‌ ಜುರೆಲ್‌!

350 ಟೆಸ್ಟ್‌ ವಿಕೆಟ್‌ಗಳ ಮೈಲುಗಲ್ಲು

ಇದೇ ಶ್ರೀಲಂಕಾ ಸರಣಿಯಲ್ಲಿ ಜಡೇಜಾ 350 ಟೆಸ್ಟ್‌ ವಿಕೆಟ್‌ಗಳ ಮಹತ್ವದ ಮೈಲುಗಲ್ಲನ್ನೂ ತಲುಪಿದ್ದಾರೆ. ಒಂದೆಡೆ ವೈಯಕ್ತಿಕವಾಗಿ ದೊಡ್ಡ ಸಾಧನೆ ಮಾಡಿರುವ ಜಡೇಜಾ, ಮತ್ತೊಂದೆಡೆ ನೋ-ಬಾಲ್‌ಗಳ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲಿರುವುದು ಗಮನಾರ್ಹವಾಗಿದೆ. ನಿರಂತರವಾಗಿ ನೋ-ಬಾಲ್‌ಗಳನ್ನು ಎಸೆಯುತ್ತಿರುವುದು ಅವರ ಬೌಲಿಂಗ್‌ನಲ್ಲಿ ಇನ್ನೂ ಸುಧಾರಿಸಬೇಕಾದ ಸಮಸ್ಯೆಯಾಗಿದೆ.

2021ರ ಬಳಿಕ ಇಲ್ಲಿಯವರೆಗೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ನೋ ಬಾಲ್‌ಗಳನ್ನು ಎಸೆದ ಸ್ಪಿನ್ನರ್‌ಗಳ ಸಾಲಿನಲ್ಲಿ ರವೀಂದ್ರ ಜಡೇಜಾ ಅಗ್ರ ಸ್ಥಾನದಲ್ಲಿದ್ದು, ಪಾಕಿಸ್ತಾನದ ನೊಮಾನ್‌ ಅಲಿ ಎರಡನೇ ಸ್ಥಾನದಲ್ಲಿದ್ದಾರೆ. ಪಾಕ್‌ ಸ್ಪಿನ್ನರ್‌ 40 ನೋ ಬಾಲ್‌ಗಳನ್ನು ಹಾಕಿದ್ದಾರೆ. ಜಡೇಜಾ ಅವರ ಅರ್ಧದಷ್ಟು ನೋ ಬಾಲ್‌ಗಳನ್ನು ಅಲಿ 2021ರಿಂದ ಎಸೆದಿದ್ದಾರೆ. ಶ್ರೀಲಂಕಾದ ಲಸಿತ್‌ ಎಂಬುಲ್ಡೇನಿಯಾ ಅವರು ಇದೇ ಅವಧಿಯಲ್ಲಿ 33 ನೋ ಬಾಲ್‌ಗಳನ್ನು ಎಸೆದಿದ್ದಾರೆ.

IND vs SL: ಸಿಂಹಳೀಯರ ಎದುರು ಟೆಸ್ಟ್‌ ಸರಣಿ ಕ್ಲೀನ್‌ ಸ್ವೀಪ್‌ ಮಾಡಿಕೊಳ್ಳುವ ಸನಿಹದಲ್ಲಿ ಭಾರತ!

ಇಂಗ್ಲೆಂಡ್‌ ಜ್ಯಾಕ್‌ ಲೀಚ್‌ ಅವರು 2021ರಿಂದ ಇಲ್ಲಿಯವರೆಗೂ 11 ನೋ ಬಾಲ್‌ಗಳನ್ನು ಹಾಕಿದ್ದಾರೆ. ವೆಸ್ಟ್‌ ಇಂಡೀಸ್‌ ಸ್ಪಿನ್ನರ್‌ ಜೊಮೆಲ್‌ ವಾರಿಕನ್‌ ಹಾಗೂ ಅಫ್ಘಾನಿಸ್ತಾನದ ಜಹೀರ್‌ ಖಾನ್‌ ತಲಾ 17 ನೋ ಬಾಲ್‌ಗಳನ್ನು ಎಸೆದಿದ್ದಾರೆ. ರವೀಂದ್ರ ಜಡೇಜಾ ಸೇರಿ ಅಗ್ರ ಐವರು ಬೌಲರ್‌ಗಳು ಒಟ್ಟು 126 ನೋ ಬಾಲ್‌ಗಳನ್ನು ಎಸೆದಿದ್ದಾರೆ. ಜಡೇಜಾ ಒಬ್ಬರೇ 88 ನೋ ಬಾಲ್‌ ಹಾಕಿದ್ದರೆ, ಇನ್ನಳಿದವರು ಸೇರಿ 38 ನೋ ಬಾಲ್‌ಗಳನ್ನು ಹಾಕಿದ್ದಾರೆ.

2021ರಿಂದ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ನೋ-ಬಾಲ್‌ ಎಸೆದ ಬೌಲರ್‌ಗಳು

2021ರಿಂದ ಇದುವರೆಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ನೋ-ಬಾಲ್‌ಗಳನ್ನು ಎಸೆದ ಬೌಲರ್‌ಗಳ ಪಟ್ಟಿಯಲ್ಲಿ ಭಾರತದ ಆಲ್‌ರೌಂಡರ್‌ ರವೀಂದ್ರ ಜಡೇಜಾ ಅಗ್ರಸ್ಥಾನದಲ್ಲಿದ್ದಾರೆ.

1.ರವೀಂದ್ರ ಜಡೇಜಾ (ಭಾರತ) : 88*

2.ನೊಮಾನ್‌ ಅಲಿ (ಪಾಕಿಸ್ತಾನ): 40

3.ಲಸಿತ್‌ ಎಂಬುಲ್ಡೆನಿಯಾ (ಶ್ರೀಲಂಕಾ): 33

4.ಜ್ಯಾಕ್‌ (ಇಂಗ್ಲೆಂಡ್‌) 19

5.ಜೋಮೆಲ್‌ ವಾರಿಕನ್‌ (ವೆಸ್ಟ್‌ ಇಂಡೀಸ್‌): 17

5.ಜಹೀರ್‌ ಖಾನ್‌ (ಅಫ್ಘಾನಿಸ್ತಾನ) 17