ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs SL ಟೆಸ್ಟ್‌ ಸರಣಿಯಲ್ಲಿ ಭಾರತ ತಂಡದ ಪರ ಕುಲ್ದೀಪ್‌ ಯಾದವ್‌ ಆಡಬೇಕೆಂದ ದೀಪ್‌ ದಾಸ್‌ಗುಪ್ತಾ!

ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡದ ಪ್ಲೇಯಿಂಗ್‌ Xiನಲ್ಲಿ ಚೈನಾಮನ್‌ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ಗೆ ಅವಕಾಶ ನೀಡಬೇಕೆಂದು ಮಾಜಿ ವಿಕೆಟ್‌ ಕೀಪರ್‌ ದೀಪ್‌ ದಾಸ್‌ಗುಪ್ತಾ ಆಗ್ರಹಿಸಿದ್ದಾರೆ. ಏಕೆಂದರೆ ಶ್ರೀಲಂಕಾದಲ್ಲಿನ ಕಂಡೀಷನ್ಸ್‌ಗೆ ಕುಲ್ದೀಪ್‌ ಅವರ ಬೌಲಿಂಗ್‌ಗೆ ಹೊಂದಾಣಿಕೆಯಾಗಲಿದೆ ಎಂದಿದ್ದಾರೆ.

ಶ್ರೀಲಂಕಾ ಟೆಸ್ಟ್‌ ಸರಣಿಯಲ್ಲಿ ಕುಲ್ದೀಪ್‌ ಆಡಬೇಕೆಂದ ದೀಪ್‌ ದಾಸ್‌ಗುಪ್ತಾ!

ಕುಲ್ದೀಪ್‌ ಯಾದವ್‌ಗೆ ಪ್ಲೇಯಿಂಗ್‌ Xiನಲ್ಲಿ ಚಾನ್ಸ್‌ ನೀಡಬೇಕೆಂದ ದೀಪ್‌ ದಾಸ್‌ಗುಪ್ತಾ. -

Profile
Ramesh Kote Aug 2, 2026 9:02 PM

ನವದೆಹಲಿ: ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ (IND vs SL) ಕುಲ್‌ದೀಪ್ ಯಾದವ್ (Kuldeep Yadav) ಅವರನ್ನು ಭಾರತದ ಪ್ಲೇಯಿಂಗ್‌ XIನಲ್ಲಿ ಆಡಿಸಬೇಕೆಂದು ಭಾರತದ ಮಾಜಿ ವಿಕೆಟ್‌ಕೀಪರ್-ಬ್ಯಾಟರ್ ದೀಪ್ ದಾಸ್‌ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ. ಸ್ಪಿನ್‌ಗೆ ಹೆಚ್ಚು ನೆರವಾಗುವ ಪಿಚ್‌ಗಳಲ್ಲಿ ಕುಲ್ದೀಪ್ ಅವರಂತಹ ರಿಸ್ಟ್ ಸ್ಪಿನ್ನರ್ ತಂಡಕ್ಕೆ ಅತ್ಯಂತ ಪ್ರಮುಖ ಅಸ್ತ್ರ ಎಂದು ಅವರು ಹೇಳಿದ್ದಾರೆ.‌ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅವಕಾಶ ಸಿಗದಿದ್ದ ಕುಲ್ದೀಪ್ ಯಾದವ್, ಪ್ರಸ್ತುತ ಇಂಗ್ಲೆಂಡ್‌ನಲ್ಲಿ ಯಾರ್ಕ್‌ಶೈರ್ ತಂಡದ ಪರ ಏಕದಿನ ಕ್ರಿಕೆಟ್‌ ಅಭ್ಯಾಸ ಪಂದ್ಯಗಳಲ್ಲಿ ಆಡುತ್ತಿದ್ದಾರೆ.

ಕುಲ್ದೀಪ್ ಯಾದವ್‌ ಇದುವರೆಗೆ 18 ಟೆಸ್ಟ್ ಪಂದ್ಯಗಳಲ್ಲಿ 79 ವಿಕೆಟ್‌ಗಳನ್ನು ಪಡೆದಿದ್ದು, ಆಗಸ್ಟ್ 15ರಿಂದ 29ರವರೆಗೆ ನಡೆಯಲಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರವೀಂದ್ರ ಜಡೇಜಾ, ಮಾನವ್ ಸುತಾರ್ ಹಾಗೂ ಸಾರಾಂಶ್ ಜೈನ್ ಅವರೊಂದಿಗೆ ಭಾರತದ ಸ್ಪಿನ್ ಬೌಲಿಂಗ್ ದಾಳಿಯ ಪ್ರಮುಖ ಸದಸ್ಯರಾಗಲಿದ್ದಾರೆ.

ಭಾರತದ ಮಾಜಿ ವಿಕೆಟ್‌ಕೀಪರ್-ಬ್ಯಾಟರ್ ದೀಪ್ ದಾಸ್‌ಗುಪ್ತಾ, ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕುಲ್ದೀಪ್ ಯಾದವ್‌ಗೆ ಭಾರತ ತಂಡದಲ್ಲಿ ಕಡ್ಡಾಯವಾಗಿ ಸ್ಥಾನ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಶ್ರೀಲಂಕಾದ ಪರಿಸ್ಥಿತಿಯಲ್ಲಿ ಭಾರತ ಮೂರು ಅಥವಾ ನಾಲ್ವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಅಜಿಂಕ್ಯ ರಹಾನೆಗೆ ತಿಂಗಳಿಗೆ ಸಿಗುವ ಪೆನ್ಷನ್‌ ಹಣವೆಷ್ಟು?

"ಕುಲ್ದೀಪ್‌ ಯಾದವ್‌ ತಂಡದಲ್ಲಿರಲೇಬೇಕು. ನಾನು ನಾಲ್ವರು ಸ್ಪಿನ್ನರ್‌ಗಳ ಬಗ್ಗೆ ಮಾತನಾಡುತ್ತಿದ್ದೇನೆ. ಕನಿಷ್ಠ ಮೂರು ಸ್ಪಿನ್ನರ್‌ಗಳೊಂದಿಗೆ ಭಾರತ ಖಂಡಿತವಾಗಿಯೂ ಆಡಲಿದೆ. ನಾನು ಅವರನ್ನು ಇಂಗ್ಲೆಂಡ್‌ನಲ್ಲಿ ನೋಡಿದ್ದೇನೆ. ಹಲವರು ಕೂಡ ನೋಡಿದ್ದಾರೆ. ದುರದೃಷ್ಟವಶಾತ್, ತಂಡವನ್ನು ಆಯ್ಕೆ ಮಾಡುವವರು ಮಾತ್ರ ಅವರನ್ನು ಗಮನಿಸಲಿಲ್ಲ. ಅದು ಬೇರೆ ವಿಷಯ," ಎಂದು ದೀಪ್‌ ದಾಸ್‌ಗುಪ್ತಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಿಳಿಸಿದ್ದಾರೆ.

ತಂಡದ ಆಯ್ಕೆ ನಿರೀಕ್ಷೆಯಂತೆಯೇ ನಡೆದಿದೆ ಎಂದು ಅವರು ಅಭಿಪ್ರಾಯಪಟ್ಟರು. ಹ್ಯಾಮ್‌ಸ್ಟ್ರಿಂಗ್ ಗಾಯದ ಕಾರಣ ವಾಷಿಂಗ್ಟನ್ ಸುಂದರ್ ಮೊದಲ ಟೆಸ್ಟ್‌ನಿಂದ ಹೊರಗುಳಿದಿರುವುದನ್ನು ಉಲ್ಲೇಖಿಸಿದ ಅವರು, "ಇದು ಉತ್ತಮ ತಂಡವಾಗಿದೆ. ಶ್ರೀಲಂಕಾದ ಪರಿಸ್ಥಿತಿಗೆ ಅನುಗುಣವಾಗಿ ವೇಗದ ಬೌಲರ್‌ಗಳಿಗಿಂತ ಸ್ಪಿನ್ನರ್‌ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ನಾಲ್ವರು ಸ್ಪಿನ್ನರ್‌ಗಳೊಂದಿಗೆ ಆಡುವ ಅವಕಾಶವೂ ಇರಬಹುದು. ಈ ಹಿಂದೆ ಶ್ರೀಲಂಕಾದಲ್ಲಿ ನಡೆದ ಟೆಸ್ಟ್‌ ಪಂದ್ಯಗಳಲ್ಲೂ ಇಂತಹ ಉದಾಹರಣೆಗಳಿವೆ. ಆದ್ದರಿಂದ ಹೆಚ್ಚುವರಿ ಸ್ಪಿನ್ನರ್ ತಂಡದಲ್ಲಿರುವುದು ಅಗತ್ಯವಾಗಿತ್ತು," ಎಂದು ಅವರು ಸಲಹೆ ನೀಡಿದ್ದಾರೆ.

Duleep Trophy 2026: ದಕ್ಷಿಣ ವಲಯ ತಂಡದಲ್ಲಿ ನಾಲ್ವರು ಕನ್ನಡಿಗರು, ತಿಲಕ್‌ ವರ್ಮಾ ನಾಯಕ!

"ವಾಷಿಂಗ್ಟನ್ ಸುಂದರ್ ಗಾಯಗೊಂಡಿರದಿದ್ದರೆ ಅವರು ಪ್ರವಾಸದ ಮೊದಲ ಆಯ್ಕೆಯ ಸ್ಪಿನ್ನರ್ ಆಗಿರುತ್ತಿದ್ದರು. ಆದರೆ ಅವರ ಅನುಪಸ್ಥಿತಿಯಲ್ಲಿ ಆಯ್ಕೆಯಾದ ತಂಡ ನಿರೀಕ್ಷೆಯಂತೆಯೇ ಇದೆ. ಈ ತಂಡದಲ್ಲಿ ಇರಬೇಕಾಗಿದ್ದರೂ ಅವಕಾಶ ತಪ್ಪಿದ ಯಾವುದೇ ಆಟಗಾರನ ಹೆಸರು ನನಗೆ ನೆನಪಿಗೆ ಬರುತ್ತಿಲ್ಲ," ಎಂದು ದಾಸ್‌ಗುಪ್ತಾ ಹೇಳಿದ್ದಾರೆ.

ದೀರ್ಘಾವಧಿ ಯೋಜನೆಗಳ ಕಡೆಗೆ ಗಮನ ನೀಡಿ: ದೀಪ್‌ ದಾಸ್‌ಗುಪ್ತಾ

ಭಾರತ ಟೆಸ್ಟ್ ತಂಡದಲ್ಲಿ ನಡೆಯುತ್ತಿರುವ ಬದಲಾವಣೆಯ ಕುರಿತು ಮಾತನಾಡಿದ ಮಾಜಿ ವಿಕೆಟ್‌ಕೀಪರ್-ಬ್ಯಾಟರ್ ದೀಪ್ ದಾಸ್‌ಗುಪ್ತಾ, ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಫೈನಲ್‌ಗೆ ಅರ್ಹತೆ ಪಡೆಯುವ ತಕ್ಷಣದ ಒತ್ತಡಕ್ಕಿಂತ ತಂಡದ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದ್ದಾರೆ. ಪ್ರಸ್ತುತ ಭಾರತ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ 48.15 ಅಂಕಗಳ ಶೇಕಡಾವಾರು (PCT) ಮೂಲಕ ಐದನೇ ಸ್ಥಾನದಲ್ಲಿದೆ.

"ಸಾಯಿ ಸುದರ್ಶನ್‌ಗೆ ನೀವು ಅವಕಾಶ ನೀಡಿದ್ದೀರಿ. ಅವರಿಗೆ ಸಾಕಷ್ಟು ಸಮಯವೂ ಕೊಟ್ಟಿದ್ದೀರಿ, ಅದು ಸರಿಯಾದ ನಿರ್ಧಾರ. ಆದರೆ ಈಗ ಅವರ ಆಟದಲ್ಲಿ ಅಭಿವೃದ್ಧಿ ಕಾಣಬೇಕು. ಅವರು ಉತ್ತಮವಾಗುತ್ತಿದ್ದಾರೆಯೇ ಎಂಬುದನ್ನು ನೋಡಬೇಕು. ಅನುಭವದ ಕೊರತೆ ಇದೆ, ತಂಡ ಪರಿವರ್ತನೆಯ ಹಂತದಲ್ಲಿದೆ ಎಂಬುದನ್ನು ಒಪ್ಪಿಕೊಳ್ಳಬಹುದು. ಆದರೆ ಸುಧಾರಣೆ ಕಾಣುವುದು ಅತ್ಯಂತ ಮುಖ್ಯ. ಇಂದು ನಾನು ಹೇಳಲಿರುವ ಮಾತು ಕೆಲವರಿಗೆ ಇಷ್ಟವಾಗದೇ ಇರಬಹುದು," ಎಂದು ದಾಸ್‌ಗುಪ್ತಾ ಹೇಳಿದ್ದಾರೆ.

ಭಾರತದ ಟಾಪ್‌ 5 ಬೌಲರ್‌ಗಳನ್ನು ಆರಿಸಿ ಅಶ್ವಿನ್‌ ಬಳಿ ಕ್ಷಮೆ ಕೇಳಿದ ಅರ್ಷದೀಪ್‌ ಸಿಂಗ್!

"ನನ್ನ ಅನಿಸಿಕೆಯಲ್ಲಿ ಸದ್ಯಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಫೈನಲ್‌ಗೆ ಅರ್ಹತೆ ಪಡೆಯುವ ವಿಚಾರವನ್ನು ಸ್ವಲ್ಪ ಸಮಯದವರೆಗೆ ಬದಿಗಿಡಬೇಕು. ಈಗ ಅದರ ಬಗ್ಗೆ ಹೆಚ್ಚು ಮಾತನಾಡದೇ ಇರುವುದು ಉತ್ತಮ. ನನ್ನ ಪ್ರಕಾರ ಈಗ ಪ್ರಮುಖವಾಗಿ ಗಮನಹರಿಸಬೇಕಿರುವುದು, 2020-21ರ ಅವಧಿಯಷ್ಟು ಬಲಿಷ್ಠವಾಗಿದ್ದ ಭಾರತ ಟೆಸ್ಟ್ ತಂಡವನ್ನು ಮತ್ತೆ ಹೇಗೆ ಕಟ್ಟಬಹುದು ಎಂಬುದರ ಮೇಲೆ," ಎಂದು ಭಾರತದ ಮಾಜಿ ವಿಕೆಟ್‌ಕೀಪರ್-ಬ್ಯಾಟರ್ ತಿಳಿಸಿದ್ದಾರೆ.