ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs WI 3rd ODI: 7 ವರ್ಷಗಳ ಗೋಲ್ಡನ್‌ ಡಕ್‌ಔಟ್‌ ಆದ ಕಿಂಗ್‌ ವಿರಾಟ್‌ ಕೊಹ್ಲಿ!

ನವ ಚಂಡೀಗಢದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು ಹಾಗೂ ಅನ್ಶುಲ್ ಕಂಬೋಜ್ ಅವರಿಗೆ ಪದಾರ್ಪಣೆಯ ಅವಕಾಶ ನೀಡಿತು. ಜೇಡನ್ ಸೀಲ್ಸ್ ಅವರ ಬೌಲಿಂಗ್‌ನಲ್ಲಿ ವಿರಾಟ್ ಕೊಹ್ಲಿ 'ಗೋಲ್ಡನ್‌ ಡಕ್'ಗೆ (ಎದುರಿಸಿದ ಮೊದಲ ಎಸೆತದಲ್ಲೇ) ಔಟ್ ಆದರು; 2025ರ ಆಸ್ಟ್ರೇಲಿಯಾ ಪ್ರವಾಸದ ನಂತರ ವಿರಾಟ್ ಶೂನ್ಯಕ್ಕೆ ಔಟ್ ಆಗಿದ್ದು ಇದೇ ಮೊದಲು.

IND vs WI: 7 ವರ್ಷಗಳ ಬಳಿಕ ಗೋಲ್ಡನ್‌ ಡಕ್‌ಔಟ್‌ ಆದ ವಿರಾಟ್‌ ಕೊಹ್ಲಿ!

7 ವರ್ಷಗಳ ಗೋಲ್ಡನ್‌ ಡಕ್‌ಔಟ್‌ ಆದ ವಿರಾಟ್‌ ಕೊಹ್ಲಿ. -

Profile
Ramesh Kote Oct 3, 2026 4:16 PM

ಮುಲ್ಲಾನ್‌ಪುರ: ನವ ಚಂಡೀಗಢದ ಪಿಸಿಎ (PCA) ಕ್ರೀಡಾಂಗಣದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ (IND vs WI) ನಡುವೆ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆಧುನಿಕ ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿ ನಿರಾಶೆ ಮೂಡಿಸಿದರು. ಅವರು ಆಡಿದ ಮೊಟ್ಟ ಮೊದಲ ಎಸೆತದಲ್ಲಿಯೇ ಕ್ಲೀನ್‌ ಬೌಲ್ಡ್‌ ಆದರು. ಇದರ ಶ್ರೇಯ ವಿಂಡೀಸ್‌ ಯುವ ವೇಗಿ ಜೇಡನ್‌ ಸೀಲ್ಸ್‌ಗೆ ಸಲ್ಲಬೇಕು. ಸೀಲ್ಸ್ ತಮ್ಮ ಅದ್ಭುತ ಎಸೆತವೊಂದರ ಮೂಲಕ ಭಾರತದ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಅವರನ್ನು 'ಗೋಲ್ಡನ್ ಡಕ್' ಔಟ್ ಮಾಡಿದರು. ಅತ್ಯುತ್ತಮ ಫಾರ್ಮ್‌ನಲ್ಲಿದ್ದ ವಿರಾಟ್ ಕೊಹ್ಲಿ ಮೊದಲ ಎಸೆತದಲ್ಲೇ ಔಟ್ ಆಗಿದ್ದು ಭಾರತೀಯ ಅಭಿಮಾನಿಗಳಿಗೆ ದೊಡ್ಡ ಆಘಾತವನ್ನು ನೀಡಿತು.

ವಿರಾಟ್‌ ಕೊಹ್ಲಿ ಉತ್ತಮ ಲಯದಲ್ಲಿದ್ದರೂ, ಅವರ ಇನಿಂಗ್ಸ್ ಈ ರೀತಿ ಕೊನೆಗೊಳ್ಳುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಗಮನಾರ್ಹ ಸಂಗತಿ ಏನೆಂದರೆ ವಿರಾಟ್ ಕೊಹ್ಲಿ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 'ಡಕ್' ಔಟ್ ಆಗಿರುವುದು ಇದು 41ನೇ ಬಾರಿ. ಅಂದ ಹಾಗೆ 7 ವರ್ಷಗಳ ಬಳಿಕ ವಿರಾಟ್‌ ಕೊಹ್ಲಿ ಗೋಲ್ಡನ್‌ ಡಕ್‌ಔಟ್‌ ಆಗಿದ್ದು ಇದೇ ಮೊದಲು. ನಾಯಕ ಶುಭಮನ್ ಗಿಲ್ ಔಟ್ ಆದ ಸ್ವಲ್ಪ ಸಮಯದ ನಂತರ ವಿರಾಟ್ ಕೊಹ್ಲಿ ಕ್ರೀಸ್‌ಗೆ ಬಂದರು.

22 ವರ್ಷಗಳ ಸಚಿನ್‌ ತೆಂಡೂಲ್ಕರ್‌ ವಿಶ್ವ ದಾಖಲೆ ಮುರಿದ ರೋಹಿತ್‌ ಶರ್ಮ

ಜೇಡನ್ ಸೀಲ್ಸ್ ಮೂರನೇ ಓವರ್‌ ನಾಲ್ಕನೇ ಎಸೆದಲ್ಲಿ ಚೆಂಡನ್ನು ಮಿಡಲ್ ಸ್ಟಂಪ್ ಗುರಿಯಾಗಿಸಿ 'ಫುಲ್-ಲೆನ್ತ್‌' ಎಸೆತವನ್ನು ಎಸೆದರು; ಪಿಚ್ ಆದ ನಂತರವೂ ಆ ಚೆಂಡು ತನ್ನ ನೇರ ಹಾದಿಯನ್ನು ಕಾಯ್ದುಕೊಂಡಿತು. ಕೊಹ್ಲಿ ಚೆಂಡನ್ನು 'ಫ್ಲಿಕ್' ಮಾಡಲು ಪ್ರಯತ್ನಿಸಿದರಾದರೂ ಸಂಪೂರ್ಣವಾಗಿ ವಿಫಲರಾದರು ಮತ್ತು ಆ ಚೆಂಡು ನೇರವಾಗಿ ಅವರ ಮಿಡಲ್ ಸ್ಟಂಪ್‌ಗೆ ಬಡಿದು ವಿಕೆಟ್ ಉರುಳಿಸಿತು. 2025ರ ಆಸ್ಟ್ರೇಲಿಯಾ ಪ್ರವಾಸದ ನಂತರ ವಿರಾಟ್ ಕೊಹ್ಲಿ ಏಕದಿನ ಪಂದ್ಯವೊಂದರಲ್ಲಿ ಶೂನ್ಯಕ್ಕೆ ಔಟ್ ಆಗಿರುವುದು ಇದೇ ಮೊದಲು; ಆ ಆಸ್ಟ್ರೇಲಿಯಾ ಪ್ರವಾಸದ ವೇಳೆ ಅವರು ಸತತ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟ್ ಆಗಿದ್ದರು.



ಅನ್ಶುಲ್ ಕಾಂಬೋಜ್ ಒಡಿಐಗೆ ಪದಾರ್ಪಣೆ

ಸರಣಿಯ ಈ ಅಂತಿಮ ಪಂದ್ಯದಲ್ಲಿ ಭಾರತ ತಂಡದ ನಾಯಕ ಶುಭಮನ್ ಗಿಲ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಮೊದಲ ಎರಡು ಏಕದಿನ ಪಂದ್ಯಗಳನ್ನು ತಲಾ ಎಂಟು ವಿಕೆಟ್‌ಗಳ ಅಂತರದಿಂದ ಗೆದ್ದು ಸರಣಿಯನ್ನು ಈಗಾಗಲೇ 2-0 ಅಂತರದಲ್ಲಿ ವಶಪಡಿಸಿಕೊಂಡಿರುವ ಭಾರತ, ಮೂರನೇ ಪಂದ್ಯಕ್ಕಾಗಿ ತಮ್ಮ ಆಡುವ ಬಳಗದಲ್ಲಿ ಮೂರು ಪ್ರಮುಖ ಬದಲಾವಣೆಗಳನ್ನು ಮಾಡಿಕೊಂಡಿದೆ.

ಯುವರಾಜ್‌ ಸಿಂಗ್‌ ಸಿಕ್ಸರ್‌ ದಾಖಲೆ ಸರಿಗಟ್ಟಿ ಕೊಹ್ಲಿಯನ್ನು ಹಿಂದಿಕ್ಕಿದ ಅಭಿಷೇಕ್‌ ಶರ್ಮಾ

ಯುವ ವೇಗದ ಬೌಲರ್‌ ಅನ್ಶುಲ್ ಕಾಂಬೋಜ್ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡುತ್ತಿದ್ದರೆ, ನಿತೀಶ್ ಕುಮಾರ್ ರೆಡ್ಡಿ ಆಡುವ ಬಳಗಕ್ಕೆ ಮರಳಿದರು. ಇನ್ನು ಹಿರಿಯ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಅರಂಭಿಕ ಎರಡು ಪಂದ್ಯಗಳನ್ನು ಆಡಿದ್ದ ಪ್ರಸಿಧ್‌ ಕೃಷ್ಣ ಮೂರನೇ ಪಂದ್ಯದಿಂದ ಹೊರ ಬಿದ್ದರೆ, ಜಮ್ಮು ಮತ್ತು ಕಾಶ್ಮೀರ ವೇಗಿ ಆಕಿಬ್‌ ನಬಿಯನ್ನು ಕೈ ಬಿಡಲಾಯಿತು.

ಒಡಿಐ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿಕೊಳ್ಳಲು ಭಾರತ ಪ್ರಯತ್ನ

ಆರಂಭಿಕ ಎರಡೂ ಪಂದ್ಯಗಳನ್ನು ಗೆದ್ದಿರುವ ಭಾರತ ತಂಡ, ಇದೀಗ ಮುಲ್ಲಾನ್‌ಪುರದಲ್ಲಿ ನಡೆದಿದ್ದ ಮೂರನೇ ಏಕದಿನ ಪಂದ್ಯವನ್ನೂ ಗೆದದು ಸರಣಿಯನ್ನು 3-0 ಅಂತರದಲ್ಲಿ ವಶಪಡಿಸಿಕೊಳ್ಳಲು ಎದುರು ನೋಡುತ್ತಿದೆ. ಆದರೆ, ಪ್ರವಾಸಿ ವೆಸ್ಟ್‌ ಇಂಡೀಸ್‌ ತಂಡ, ಕನಿಷ್ಠ ಕೊನೆಯ ಪಂದ್ಯವನ್ನು ಗೆದ್ದು ಏಕದಿನ ಸರಣಿಯಲ್ಲಿ ವೈಟ್‌ವಾಷ್‌ ಆಘಾತದಿಂದ ತಪ್ಪಿಕೊಳ್ಳಲು ಪ್ರಯತ್ನಿಸುತ್ತಿದೆ.



ಮೂರನೇ ಒಡಿಐಗೆ ಭಾರತದ ಪ್ಲೇಯಿಂಗ್‌ XI

ರೋಹಿತ್‌ ಶರ್ಮಾ, ಶುಭಮನ್‌ ಗಿಲ್‌ (ನಾಯಕ), ವಿರಾಟ್‌ ಕೊಹ್ಲಿ, ಋತುರಾಜ್‌ ಗಾಯಕ್ವಾಡ್‌, ಕೆಎಲ್‌ ರಾಹುಲ್‌ (ವಿಕೆಟ್‌ ಕೀಪರ್‌), ನಿತೀಶ್‌ ಕುಮಾರ್‌ ರೆಡ್ಡಿ, ನಮನ್‌ ಧೀರ್‌, ಅನ್ಷುಲ್‌ ಕಾಂಬೋಜ್‌, ಕುಲ್ದೀಪ್‌ ಯಾದವ್‌, ಮೊಹಮ್ಮದ್‌ ಸಿರಾಜ್‌, ಗುರ್ನೂರ್‌ ಬ್ರಾರ್‌