IND vs ZIM: ಭಾರತ ತಂಡದಲ್ಲಿ ರಿಂಕು ಸಿಂಗ್ ಸ್ಥಾನಕ್ಕೆ ಸೂಕ್ತ ಆಟಗಾರರನ್ನು ಹೆಸರಿಸಿದ ರವಿಶಾಸ್ತ್ರಿ!
ರಿಂಕು ಸಿಂಗ್ ಅವರು ಕುಟುಂಬದ ತುರ್ತು ಪರಿಸ್ಥಿತಿಯ ಕಾರಣದಿಂದ ಭಾರತ-ಜಿಂಬಾಬ್ವೆ ಪಂದ್ಯಕ್ಕೂ ಮುನ್ನ ತಂಡದಿಂದ ಹೊರನಡೆದಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ತಂಡದ ಪ್ಲೇಯಿಂಗ್ ಇಲೆವನ್‌ನಲ್ಲಿ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಬೇಕೆಂಬ ಸಲಹೆಗಳು ಕೇಳಿಬರುತ್ತಿವೆ. ಇತ್ತ ಮಾಜಿ ಕೋಚ್ ರವಿ ಶಾಸ್ತ್ರಿ, ಅಕ್ಷರ್ ಪಟೇಲ್ ಹಾಗೂ ವಾಷಿಂಗ್ಟನ್ ಸುಂದರ್ ಮತ್ತೆ ತಂಡಕ್ಕೆ ಮರಳಬೇಕೆಂದು ಒತ್ತಾಯಿಸಿದ್ದಾರೆ.
ಅಕ್ಷರ್ ಪಟೇಲ್‌ಗೆ ರವಿ ಶಾಸ್ತ್ರಿ ಬೆಂಬಲ. -
ಚೆನ್ನೈ: ಭಾರತ ತಂಡ 2026ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯ ಸೂಪರ್-8ರ ತನ್ನ ಎರಡನೇ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಎದುರಿಸಲು ಸಜ್ಜಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ 76 ರನ್‌ಗಳ ಸೋಲಿನ ನಂತರ ಭಾರತಕ್ಕೆ ಈಗ ಸೆಮಿಫೈನಲ್ ಪ್ರವೇಶದ ಆಸೆಯನ್ನು ಜೀವಂತವಾಗಿ ಉಳಿಸಿಕೊಳ್ಳಲು ಮುಂದಿನ ಎರಡೂ ಪಂದ್ಯಗಳನ್ನು ಗೆಲ್ಲುವುದು ಅನಿವಾರ್ಯವಾಗಿದೆ. ಹೀಗಾಗಿ, ಈ ಪಂದ್ಯ ಭಾರತಕ್ಕೆ ಮಾಡು ಇಲ್ಲವೆ ಮಡಿ ಹೋರಾಟವಾಗಿದೆ. ಕುಟುಂಬದ ತುರ್ತು ಪರಿಸ್ಥಿತಿಯ ಕಾರಣದಿಂದ ರಿಂಕು ಸಿಂಗ್ (Rinku Singh) ತಂಡವನ್ನು ತೊರೆದಿರುವುದರಿಂದ, ಮುಂದಿನ ಪಂದ್ಯದಲ್ಲಿ ಅವರ ಬದಲಿಗೆ ಹೊಸ ಆಟಗಾರನನ್ನು ಪ್ಲೇಯಿಂಗ್ ಇಲೆವನ್‌ನಲ್ಲಿ ಸೇರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬ್ಯಾಟಿಂಗ್ ಬಲವರ್ಧನೆಗಾಗಿ ಸಂಜು ಸ್ಯಾಮ್ಸನ್ ಅವರನ್ನು ಸೇರಿಸುವ ಬಗ್ಗೆ ವದಂತಿಗಳು ಕೇಳಿಬರುತ್ತಿದ್ದರೂ, ಮಾಜಿ ಕೋಚ್ ರವಿ ಶಾಸ್ತ್ರಿ (Ravi Shastri) ತಮ್ಮ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಐಸಿಸಿ ರಿವ್ಯೂ ಶೋನಲ್ಲಿ ಮಾತನಾಡಿದ ರವಿ ಶಾಸ್ತ್ರಿ, ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಬೆಂಚ್ ಕಾದಿದ್ದ ಅಕ್ಷರ್ ಪಟೇಲ್ ಅವರನ್ನು ಮತ್ತೆ ಪ್ಲೇಯಿಂಗ್ ಇಲೆವನ್‌ಗೆ ಕರೆತರಬೇಕು ಎಂದು ಸಲಹೆ ನೀಡಿದ್ದಾರೆ. ಜೊತೆಗೆ, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಇಬ್ಬರನ್ನೂ ಆಡಿಸುವಂತೆ ಸಲಹೆ ನೀಡಿದ್ದಾರೆ. ಯಾವುದೇ ಬೌಲರ್‌ಗೆ ಕೆಟ್ಟ ದಿನ ಎದುರಾದರೆ, ಈ ಇಬ್ಬರಲ್ಲಿ ಒಬ್ಬರು ತಂಡಕ್ಕೆ ಹೆಚ್ಚುವರಿ ಆಯ್ಕೆಯಾಗಿ ನೆರವಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
T20 World Cup: ಕೌಟುಂಬಿಕ ತುರ್ತು ಪರಿಸ್ಥಿತಿಯಿಂದಾಗಿ ಭಾರತ ತಂಡವನ್ನು ತೊರೆದ ರಿಂಕು ಸಿಂಗ್!
ಅಕ್ಷರ್ ಪಟೇಲ್‌ಗೆ ರವಿ ಶಾಸ್ತ್ರಿ ಬೆಂಬಲ
“ನನ್ನ ಅನಿಸಿಕೆಯಲ್ಲಿ ಅಕ್ಷರ್ ಪಟೇಲ್ ಅವರನ್ನು ಮತ್ತೆ ತಂಡಕ್ಕೆ ತರಲೇಬೇಕು. ಅನುಭವ ಅತ್ಯಂತ ಮುಖ್ಯ. ನಾನು ಹೇಳುವುದೇನಂದರೆ, ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಇಬ್ಬರನ್ನೂ ಆಡಿಸಿ. ತಂಡಕ್ಕೆ ಹೆಚ್ಚುವರಿ ಆಯ್ಕೆಯನ್ನು ನೀಡಿ. ಟಿ20 ಕ್ರಿಕೆಟ್‌ನಲ್ಲಿ ಯಾವ ದಿನವಾದರೂ ಒಬ್ಬ ಬೌಲರ್‌ಗೆ ಕೆಟ್ಟ ದಿನ ಎದುರಾಗಬಹುದು. ಉದಾಹರಣೆಗೆ, ಭಾನುವಾರ ವರುಣ್ ಚಕ್ರವರ್ತಿ ತಮ್ಮ ಶ್ರೇಷ್ಠ ಪ್ರದರ್ಶನ ನೀಡಲಿಲ್ಲ ಮತ್ತು ಅವರು ದುಬಾರಿಯಾಗಿದ್ದರು,” ಎಂದು ರವಿ ಶಾಸ್ತ್ರಿ ಹೇಳಿದರು.
'ಹಾರ್ದಿಕ್ ಪಾಂಡ್ಯರನ್ನು ನಂಬಿರಿ'; ಭಾರತ ತಂಡಕ್ಕೆ ಕುಂಬ್ಳೆ ಸಲಹೆ
“ಟಿ20 ಕ್ರಿಕೆಟ್‌ನಲ್ಲಿ ಎಂಟು ಬ್ಯಾಟರ್‌ಗಳು ಇದ್ದರೂ ಕೆಲಸ ಮಾಡಲಿಲ್ಲ ಅಂದರೆ, ಅಲ್ಲಿ ಏನೋ ತಪ್ಪಾಗಿದೆ, ವಿಶೇಷವಾಗಿ ಇಷ್ಟು ಬಲಿಷ್ಠ ಬ್ಯಾಟಿಂಗ್ ಶಕ್ತಿ ಇರುವಾಗ. ನೀವು ತಪ್ಪಿಸುತ್ತಿರುವುದು ಹೆಚ್ಚುವರಿ ಬೌಲಿಂಗ್ ಆಯ್ಕೆ. ಅದು ಅತ್ಯಂತ ಮುಖ್ಯ. ರಿಂಕು ಸಿಂಗ್ ತಂಡಕ್ಕೆ ಮರಳಬೇಕೆಂಬ ಪರಿಸ್ಥಿತಿ ಬಂದರೂ, ಅವರು ವಿಶೇಷ ಬ್ಯಾಟರ್‌ನ ಸ್ಥಾನದಲ್ಲಿ ಬರಬೇಕು,” ಎಂದು ಮಾಜಿ ಭಾರತದ ಮಾಜಿ ಮುಖ್ಯ ಕೋಚ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟಿ20 ಶ್ರೇಯಾಂಕದಲ್ಲಿ 7 ಸ್ಥಾನಗಳ ಜಿಗಿತದೊಂದಿಗೆ ಅಗ್ರ10 ರಲ್ಲಿ ಸ್ಥಾನ ಪಡೆದ ಬುಮ್ರಾ
ಜಿಂಬಾಬ್ವೆ ಪಂದ್ಯಕ್ಕೆ ರಿಂಕು ಸಿಂಗ್ ಏಕೆ ಆಡಲ್ಲ?
ಎನ್‌ಡಿಟಿವಿ ವರದಿ ಪ್ರಕಾರ, ರಿಂಕು ಸಿಂಗ್ ಅವರ ತಂದೆಗೆ ನಾಲ್ಕನೇ ಹಂತದ ಲಿವರ್ ಕ್ಯಾನ್ಸರ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ, ಟಿ20 ವಿಶ್ವಕಪ್ ಮಧ್ಯದಲ್ಲೇ ಅವರು ತಂಡವನ್ನು ತೊರೆಯಬೇಕಾಯಿತು. ಅವರ ತಂದೆ ಪ್ರಸ್ತುತ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಹಾಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಕಷ್ಟದ ಸಂದರ್ಭದಲ್ಲಿ ಕುಟುಂಬದೊಂದಿಗೆ ಇರುವುದಕ್ಕಾಗಿ ರಿಂಕು ಭಾರತ ತಂಡದಿಂದ ದೂರ ಉಳಿದಿದ್ದಾರೆ. ಆದರೆ, ರಿಂಕು ಸಿಂಗ್ ಅವರು ಯಾವಾಗ ಮತ್ತೆ ತಂಡಕ್ಕೆ ಸೇರುತ್ತಾರೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಹೀಗಾಗಿ, ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಅವರು ಆಡಲಿದೆಯೇ? ಅಥವಾ ಇಲ್ಲವೇ? ಎಂಬುದೂ ಇನ್ನೂ ಮಾಹಿತಿ ಇಲ್ಲ.