IND vs ZIM: ಅಭಿಷೇಕ್ ಶರ್ಮಾಗೆ ಒಂದು ನ್ಯಾಯ, ಸಂಜುಗ ಒಂದ್ಯ ನ್ಯಾಯವೇ? ಹನುಮ ವಿಹಾರಿ ಪ್ರಶ್ನೆ!
ಜಿಂಬಾಬ್ವೆ ವಿರುದ್ಧದ ಟಿ20ಐ ಸರಣಿಯಲ್ಲಿ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರ. ಅವರು ಒಂದೇ ಒಂದು ಅರ್ಧಶತಕವನ್ನು ಈ ಸರಣಿಯಲ್ಲಿ ಗಳಿಸಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಮಾಜಿ ಕ್ರಿಕೆಟಿಗ ಹನುಮ ವಿಹಾರಿ ಪ್ರತಿಕ್ರಿಯೆ ನೀಡಿದ್ದಾರೆ.
ಸಂಜು ಸ್ಯಾಮ್ಸನ್ ಪರ ಬ್ಯಾಟ್ ಬೀಸಿದ ಹನುಮ ವಿಹಾರಿ. -
ನವದೆಹಲಿ: ಭಾರತ ಕ್ರಿಕೆಟ್ ತಂಡದಲ್ಲಿ ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಟೆಸ್ಟ್ ತಂಡದ ಮಾಜಿ ಬ್ಯಾಟ್ಸ್‌ಮನ್ ಹನುಮ ವಿಹಾರಿ (Hanuma Vihari) ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಜಿಂಬಾಬ್ವೆ ಟಿ20ಐ ಸರಣಿಯಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ (Abhishek Sharma) ಅವರ ಫಾರ್ಮ್ ಬಗ್ಗೆ ಆಂಧ್ರ ಮಾಜಿ ಬ್ಯಾಟ್ಸ್‌ಮನ್ ಪ್ರಶ್ನೆ ಮಾಡಿದ್ದಾರೆ. ಆದರೆ, ಸಂಜು ಸ್ಯಾಮ್ಸನ್ ಅವರನ್ನು ತಂಡದಲ್ಲಿ ನಡೆಸಿಕೊಳ್ಳುವ ಹಾದಿ ಸರಿ ಇಲ್ಲ ಎಂದು ಅವರು ಹೇಳಿದ್ದಾರೆ. ಮೂರನೇ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರು ಕೇವಲ ಎರಡು ರನ್ ಗಳಿಸಿದ ಬಳಿಕ ವಿಹಾರಿ ಈ ರೀತಿಯ ಹೇಳಿಕೆಯನ್ನು ನೀಡಿದ್ದಾರೆ.
ಅಭಿಷೇಕ್ ಶರ್ಮಾ ಅವರು ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದರೂ ಭಾರತ ತಂಡದಲ್ಲಿ ಸತತವಾಗಿ ಅವಕಾಶಗಳನ್ನು ನೀಡಲಾಗುತ್ತಿದೆ. ಆದರೆ, 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಾಕ್‌ಔಟ್ ಪಂದ್ಯಗಳಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನವನ್ನು ತೋರಿದರೂ ಅವರನ್ನು ತಂಡದಲ್ಲಿ ಬೆಂಬಲಿಸುತ್ತಿಲ್ಲ ಎಂಬುದ ಹನುಮ ವಿಹಾರಿ ಅವರ ವಾದ. ತಂಡದಲ್ಲಿ ನಿಯಮಗಳು ಎಲ್ಲರಿಗೂ ಒಂದೇ ರೀತಿ ಇರಬೇಕು ಎಂದು ಅವರು ಹೇಳಿದ್ದಾರೆ.
ಶುಭಮನ್ ಗಿಲ್ ಬೇಡ, ರೋಹಿತ್ ಶರ್ಮಾ ಜೊತೆ ವೈಭವ್ ಸೂರ್ಯವಂಶಿ ಇನಿಂಗ್ಸ್ ಆರಂಭಿಸಬೇಕೆಂದ ಫಾರೂಖ್ ಇಂಜಿನಿಯರ್!
ಅಭಿಷೇಕ್ ಶರ್ಮಾ ಪ್ರದರ್ಶನ ಆತಂಕಕಾರಿ
"ಟಿ20 ವಿಶ್ವಕಪ್‌ಗೂ ಮುನ್ನ ಸಂಜು ಸ್ಯಾಮ್ಸನ್ ಸತತ ಐದು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದರು. ಇದರ ಪರಿಣಾಮ ಅವರು ಆರಂಭಿಕ 11ರ ಬಳಗದಿಂದ ಸ್ಥಾನ ಕಳೆದುಕೊಂಡರು. ಆದರೆ ನಂತರ ತಂಡಕ್ಕೆ ಮರಳಿದ ಅವರು ಅದೇ ಟೂರ್ನಿಯಲ್ಲಿ 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಪ್ರಶಸ್ತಿ ಗೆದ್ದರು. ಅದೇ ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ ಎಷ್ಟು ರನ್ ಗಳಿಸಿದ್ದರು?" ಎಂದು ಹನುಮ ವಿಹಾರಿ ಪ್ರಶ್ನೆ ಮಾಡಿದ್ದಾರೆ.
"ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲೂ ಒಂದು ಅರ್ಧಶತಕವನ್ನು ಹೊರತುಪಡಿಸಿದರೆ ಅಭಿಷೇಕ್ ಶರ್ಮಾ ಅವರಿಂದ ಗಮನಾರ್ಹ ಪ್ರದರ್ಶನ ಮೂಡಿ ಬಂದಿಲ್ಲ. 20 ಅಥವಾ 30 ರನ್‌ಗಳ ಇನಿಂಗ್ಸ್ ಕೂಡ ಮೂಡಿ ಬರಲಿಲ್ಲ. ಕಳೆದ ಎಂಟು ಪಂದ್ಯಗಳಲ್ಲಿ ಕೇವಲ ಒಂದು ಅರ್ಧಶತಕ ಮಾತ್ರ ದಾಖಲಿಸಿದ್ದಾರೆ. ವಿಶ್ವಕಪ್ ಪಂದ್ಯಗಳನ್ನೂ ಸೇರಿಸಿದರೆ, ಕಳೆದ 18 ಪಂದ್ಯಗಳಲ್ಲಿ ಅವರ ಖಾತೆಯಲ್ಲಿ ಕೇವಲ ಮೂರು ಅರ್ಧಶತಕಗಳಷ್ಟೇ ಇವೆ," ಎಂದು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೊದಲ್ಲಿ ಮಾಜಿ ಕ್ರಿಕೆಟಿಗ ಬೇಸರ ವ್ಯಕ್ತಪಡಿಸಿದ್ದಾರೆ.
IND vs ZIM: ವೈಭವ್ ಸೂರ್ಯವಂಶಿಯಿಂದ ಔಟ್ ಆಫ್ ಫಾರ್ಮ್ ಅಭಿಷೇಕ್ ಶರ್ಮಾ ಸ್ಥಾನಕ್ಕೆ ಕುತ್ತು?
ಟಿ20 ವಿಶ್ವಕಪ್ ಗೆದ್ದುಕೊಟ್ಟ ಸಂಜು ನಿಮಗೆ ಮುಖ್ಯವಲ್ಲ, ವೈಭವ್ ನಿಮಗೆ ದೊಡ್ಡ ಆಯ್ಕೆ
ಸತತ ಮೂರು ಅರ್ಧಶತಕಗಳನ್ನು ಸಿಡಿಸಿ ಭಾರತ ತಂಡ ಈ ವರ್ಷದ ಆರಂಭದಲ್ಲಿ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಸಂಜು ಸ್ಯಾಮ್ಸನ್ ಅವರು ನಿಮಗೆ ಮುಖ್ಯವಾಗುವುದಿಲ್ಲ, ಅವರು ಪ್ಲೇಯಿಂಗ್ XIನಲ್ಲಿ ಸ್ಥಾನವನ್ನು ಕಳೆದುಕೊಂಡರು. ಆದರೆ, ವೈಭವ್ ಸೂರ್ಯವಂಶಿ ನಿಮಗೆ ಪ್ಲೇಯಿಂಗ್ XIನಲ್ಲಿ ದೊಡ್ಡ ಆಯ್ಕೆಯಾಗುತ್ತಾರೆ ಎಂದು ಹನುಮ ವಿಹಾರಿ ಟೀಕಿಸಿದ್ದಾರೆ.
"ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್ ಎಷ್ಟು ಪಂದ್ಯಗಳನ್ನು ಆಡಿದ್ದಾರೆ? ಮೂರು. ಆ ಮೂರೂ ಪಂದ್ಯಗಳಲ್ಲಿ ಅರ್ಧಶತಕಗಳನ್ನು ಸಿಡಿಸಿದ್ದಾರೆ. ಐದು ಪಂದ್ಯಗಳಲ್ಲಿ ಅಭಿಷೇಕ್ ಶರ್ಮಾ ಅವರ ವೈಯಕ್ತಿಕ ಗರಿಷ್ಠ ಮೊತ್ತ 16 ರನ್‌ಗಳು. ಇದರ ಬಗ್ಗೆ ಏಕೆ ಯಾರೂ ಮಾತನಾಡುತ್ತಿಲ್ಲ. ಸಂಜು ಸ್ಯಾಮ್ಸನ್ ವಿಷಯ ಬಂದಾಗ, ಅವರು ಅಸ್ಥಿರ ಪ್ರದರ್ಶನವನ್ನು ತೋರುತ್ತಿದ್ದಾರೆಂದು ಹೇಳುತ್ತಾರೆ. ಅದು ಸರಿ. ಆದರೆ ಅವರು ಒತ್ತಡದ ಸಂದರ್ಭಗಳಲ್ಲಿ ಪಂದ್ಯಗಳನ್ನು ಗೆಲ್ಲಿಸುತ್ತಾರೆ," ಎಂದು ಹನುಮ ವಿಹಾರಿ ಹೇಳಿದ್ದಾರೆ.
"ಅಭಿಷೇಕ್ ಶರ್ಮಾ ಅವರಿಗೆ ಸಾಕಷ್ಟು ಬೆಂಬಲ ಸಿಗುತ್ತಿದೆ, ಆದರೆ ಸಂಜು ಸ್ಯಾಮ್ಸನ್‌ಗೂ ಅದೇ ಬೆಂಬಲ ಸಿಗಬೇಕು. ಅವರು ಕೂಡ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ತೋರಿದ್ದಾರೆ. ವಿಭಿನ್ನ ಆಟಗಾರರಿಗೆ, ವಿಭಿನ್ನ ನಿಯಮಗಳಾ?" ಎಂದು ವಿಹಾರಿ ಪ್ರಶ್ನೆ ಮಾಡಿದ್ದಾರೆ.