ದಕ್ಷಿಣ ಆಫ್ರಿಕಾ ವಿರುದ್ಧ 63 ಎಸೆತಗಳಲ್ಲಿ ಶತಕ ಬಾರಿಸಿದ ವೈಭವ್ ಸೂರ್ಯವಂಶಿ!
Vaibhav Suryavanshi Century: ದಕ್ಷಿಣ ಆಫ್ರಿಕಾದಲ್ಲಿ ಭಾರತ ಅಂಡರ್-19 ತಂಡದ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಶತಕವನ್ನು ಬಾರಿಸಿದ್ದಾರೆ. ಅವರು 63 ಎಸೆತಗಳಲ್ಲಿ ಶತಕವನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಫಾರ್ಮ್ ಅನ್ನು 2026ರಲ್ಲಿಯೂ ಮುಂದುವರಿಸುವ ಭರವಸೆಯನ್ನು ನೀಡಿದ್ದಾರೆ.
ಮೂರನೇ ಯೂಥ್ ಒಡಿಐನಲ್ಲಿ ಶತಕ ಬಾರಿಸಿದ ವೈಭವ್ ಸೂರ್ಯವಂಶಿ. -
ನವದೆಹಲಿ: ಭಾರತದ (India U-19) ಅಂಡರ್-19 ತಂಡ ಮತ್ತು ದಕ್ಷಿಣ ಆಫ್ರಿಕಾದ (South Africa U-19) ಅಂಡರ್-19 ತಂಡದ ನಡುವೆ ಬೆನೋನಿಯಲ್ಲಿ ಮೂರನೇ ಯುವ ಏಕದಿನ ಪಂದ್ಯದಲ್ಲಿ 14ರ ವಯಸ್ಸಿನ ವೈಭವ್ ಸೂರ್ಯವಂಶಿ (Vaibhav Suryavanshi) ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದಾರೆ. ಭಾರತದ ನಾಯಕ ಈ ಪಂದ್ಯದಲ್ಲಿ ಮೊದಲು ಕೇವಲ 24 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು, ನಂತರ ತಮ್ಮ ಸ್ಫೋಟಕ ಬ್ಯಾಟಿಂಗ್ ಅನ್ನು ಮುಂದುವರಿಸಿ 63 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ವೈಭವ್ ಸೂರ್ಯವಂಶಿ ತಮ್ಮ ಇನಿಂಗ್ಸ್‌ನಲ್ಲಿ ಆರು ಬೌಂಡರಿ ಮತ್ತು ಎಂಟು ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.
ಇದು ಭಾರತಕ್ಕೆ ಶುಭ ಸಂಕೇತ ಎಂದೇ ಹೇಳಬಹುದು. 14ರ ವಯಸ್ಸಿನ ಸೂರ್ಯವಂಶಿ ನಿರಂತರವಾಗಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಭಾರತೀಯ ಕ್ರಿಕೆಟ್‌ನಲ್ಲಿ ಎಲ್ಲರ ಗಮನವನ್ನು ಸೆಳೆಯುತ್ತಿದ್ದಾರೆ. ಅವರ ಬ್ಯಟಿಂಗ್ ಪ್ರದರ್ಶನವನ್ನು ನೋಡಿದರೆ ಅವರು ನಾಯಕತ್ವವನ್ನು ಸಹ ಆನಂದಿಸುತ್ತಿದ್ದಾರೆ ಎಂದು ಹೇಳಬಹುದು. ಶತಕ ಸಿಡಿಸುವ ಜೊತೆಗೆ ಅವರು ತಮ್ಮ ಆರಂಭಿಕ ಜೊತೆಗಾರ ಆರೋನ್ ಜಾರ್ಜ್ ಅವರ ಜೊತೆಗೆ 200ಕ್ಕೂ ಅಧಿಕ ರನ್‌ಗಳ ಜೊತೆಯಾಟವನ್ನು ಆಡಿದರು. ಈ ಇನಿಂಗ್ಸ್‌ನಲ್ಲಿ ಅವರು ಆಡಿದ 74 ಎಸೆತಗಳಲ್ಲಿ 127 ರನ್‌ಗಳನ್ನು ಬಾರಿಸಿದರು.
ಐಪಿಎಲ್ ತೊರೆದ ಬೆನ್ನಲ್ಲೆ ಪಾಕಿಸ್ತಾನ ಸೂಪರ್ ಲೀಗ್‌ಗೆ ಸೇರ್ಪಡೆಯಾದ ಮುಸ್ತಾಫಿಝುರ್ ರೆಹಮಾನ್!
ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್‌ಮನ್ ದ್ವಿಶತಕವನ್ನು ಸಿಡಿಸಲು ಎದುರು ನೋಡುತ್ತಿದ್ದರು. ಆದರೆ, ಎನ್‌ತಂಡೊ ಸೋನಿ ಅವರ ಎಸೆತದಲ್ಲಿ ಪುಲ್ ಶಾಟ್ ಹೊಡೆಯುವ ಪ್ರಯತ್ನದಲ್ಲಿ ವಿಫಲರಾಗಿ ಡೀಪ್ ಮಿಡ್ ವಿಕೆಟ್‌ನಲ್ಲಿ ಕ್ಯಾಚ್ ಕೊಟ್ಟರು. ಆ ಮೂಲಕ ತಮ್ಮ ಸ್ಪೋಟಕ ಇನಿಂಗ್ಸ್ ಅನ್ನು ಮುಗಿಸಿದರು. ಅಂದ ಹಾಗೆ ತಮ್ಮ ಬ್ಯಾಟಿಂಗ್ ಅಬ್ಬರದ ಮೂಲಕ ದಿನದಿಂದ ದಿನಕ್ಕೆ ವೈಭವ್ ವಿಭಿನ್ನವಾಗಿ ಕಾಣುತ್ತಿದ್ದಾರೆ. ಇದರ ಆಧಾರದ ಮೇಲೆ ಅವರಿಗೆ ಭಾರತ ಹಿರಿಯರ ತಂಡದಲ್ಲಿ ಅವಕಾಶ ನೀಡಿದರೂ ಅಚ್ಚರಿ ಇಲ್ಲ.
ಎರಡನೇ ಪಂದ್ಯದಲ್ಲಿಯೂ ಅರ್ಧಶತಕ
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಏಕದಿನ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೂಡ ಸ್ಫೋಟಕ ಇನಿಂಗ್ಸ್ ಆಡಿದರು. ಅವರು ಕೇವಲ 19 ಎಸೆತಗಳಲ್ಲಿ ಅರ್ಧಶತಕ ತಲುಪಿದರು. ಸೂರ್ಯವಂಶಿ 24 ಎಸೆತಗಳಲ್ಲಿ 68 ರನ್ ಗಳಿಸಿದರು, 250 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ನಡೆಸಿದ್ದರು. ಅವರು 10 ಸಿಕ್ಸರ್‌ಗಳು ಮತ್ತು 1 ಬೌಂಡರಿಗಳನ್ನು ಚಚ್ಚಿದ್ದರು.
🚨 VAIBHAV SURYAVANSHI HAMMERED A 63 BALL HUNDRED IN THE YOUTH ODI. 🚨
— Mufaddal Vohra (@mufaddal_vohra) January 7, 2026
- This is scary consistency at the age of 14. 🥶 pic.twitter.com/fCtoW3i6Ki
ತಮ್ಮದೇ ಆದ ಛಾಪು ಮೂಡಿಸಿರುವ ವೈಭವ್
ವೈಭವ್ ಸೂರ್ಯವಂಶಿ ಅವರು ಆಡುವ ಪ್ರತಿಯೊಂದು ಟೂರ್ನಿಯಲ್ಲಿಯೂ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಅವರು ಭಾರತದ ದೇಶೀ ಟಿ20 ಲೀಗ್, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಭಾಗವಹಿಸಿ ಶತಕಗಳನ್ನು ಬಾರಿಸಿದ್ದಾರೆ. ನಂತರ, ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿಯೂ ಅರುಣಾಚಲ ಪ್ರದೇಶ ವಿರುದ್ಧ 36 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ವೈಭವ್ ಎಮರ್ಜಿಂಗ್ ಏಷ್ಯಾ ಕಪ್ ಮತ್ತು ಅಂಡರ್-19 ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತದ ಪರ ಶತಕ ಬಾರಿಸಿದ್ದರು. ಅದಕ್ಕೂ ಮುನ್ನ ಅವರು 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಬಿರುಗಾಳಿಯ ಶತಕ ಚಚ್ಚಿದ್ದರು. 14ನೇ ವಯಸ್ಸಿನಲ್ಲಿ ವೈಭವ್ ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇ ಆದ ಸ್ಥಾನವನ್ನು ಗಳಿಸಿದ್ದಾರೆ.