ವಿಶ್ವಕಪ್ ವಿಜೇತೆ ರಿಚಾ ಘೋಷ್‌ಗೆ ಡಿಎಸ್‌ಪಿ ಹುದ್ದೆ ನೀಡಿದ ಮಮತಾ ಬ್ಯಾನರ್ಜಿ!
2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟರೆ ರಿಚಾ ಘೋಷ್ ಅವರಿಗೆ ಪಶ್ಚಿಮ ಬಂಗಾಳ ಸರ್ಕಾರ ಪೊಲೀಸ್ ಉಪ ವರಿಷ್ಠಾಧಿಕಾರಿ (DSP) ಹುದ್ದೆಯನ್ನು ನೀಡಿದೆ. ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ಅವರೇ ಸ್ವತಃ ನೇಮಕ ಪತ್ರವನ್ನು ರಿಚಾ ಘೋಷ್‌ಗೆ ನೀಡಿ ಗೌರವಿಸಿದ್ದಾರೆ.
ವಿಶ್ವಕಪ್ ವಿಜೇತೆ ರಿಚಾ ಘೋಷ್‌ಗೆ ಡಿಎಸ್‌ಪಿ ಹುದ್ದೆ ನೀಡಿದ ಪಶ್ಚಿಮ ಬಂಗಾಳ ಸರ್ಕಾರ. -
ನವದೆಹಲಿ: ಕಳೆದ 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ (Women's World Cup 2025) ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಭಾರತ ಮಹಿಳಾ ತಂಡದ ವಿಕೆಟ್ ಕೀಪರ್ ರಿಚಾ ಘೋಷ್‌ಗೆ (Richa Ghosh) ಪಶ್ಚಿಮ ಬಂಗಾಳ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ದೊಡ್ಡ ಹುದ್ದೆಯನ್ನು ನೀಡಿದೆ. ವಿಶ್ವಕಪ್ ವಿಜೇತೆ ರಿಚಾ ಘೋಷ್‌ಗೆ ಪೊಲೀಸ್ ಉಪ ವರಿಷ್ಠಾಧಿಕಾರಿ (DSP) ಹುದ್ದೆಯನ್ನು ನೀಡಲಾಗಿದೆ. ಶನಿವಾರ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಕ್ರಿಕೆಟ್ ಅಸೋಸಿಯೇಷನ್ ಬಂಗಾಳ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಶ್ಚಿಮ ಬಂಗಾಳ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರೇ ವೈಯಕ್ತಿಕವಾಗಿ ಭಾರತ ತಂಡದ ಆಟಗಾರ್ತಿಯನ್ನು ಗೌರವಿಸಿ, ಡಿಎಸ್‌ಪಿ ಹುದ್ದೆಯ ನೇಮಕ ಪತ್ರವನ್ನು ನೀಡಿದ್ದಾರೆ.
22ನೇ ವಯಸ್ಸಿನ ರಿಚಾ ಅವರಿಗೆ ಇದೇ ವೇಳೆ ರಾಜ್ಯ ಸರ್ಕಾರದಿಂದ ಪ್ರತಿಷ್ಠಿತ ಬಂಗ ಭೂಷಣ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ನವ ಮುಂಬೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಫೈನಲ್ ಪಂದ್ಯದಲ್ಲಿ ಅವರು ಗಳಿಸಿದ 34 ರನ್ ಗಳಿಗಾಗಿ ಗೌರವಯುತವಾಗಿ ಸಿಎಬಿ ಅವರಿಗೆ ಚಿನ್ನದ ಬ್ಯಾಟ್ ಮತ್ತು ಚೆಂಡನ್ನು ಹಾಗೂ 34 ಲಕ್ಷ ರೂ. ನಗದು ಬಹುಮಾನವನ್ನು ನೀಡಿತು. ಹೆಚ್ಚುವರಿಯಾಗಿ, ಪಶ್ಚಿಮ ಬಂಗಾಳ ಸರ್ಕಾರವು ಅವರಿಗೆ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿತು, ಅದನ್ನು ಮುಖ್ಯಮಂತ್ರಿ ಹಸ್ತಾಂತರಿಸಿದರು.
ಚೊಚ್ಚಲ ಮಹಿಳಾ ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಸಿಕ್ಕ ನಗದು ಬಹುಮಾನದ ವಿವರ!
ಜೂಲನ್ ಗೋಸ್ವಾಮಿಯಂತಹ ಪ್ರವರ್ತಕರು ಭಾರತೀಯ ಮಹಿಳಾ ಕ್ರಿಕೆಟ್‌ಗೆ ಅಡಿಪಾಯ ಹಾಕಿದರು ಮತ್ತು ಭಾರತ ತಂಡ ಐಸಿಸಿ ಪ್ರಶಸ್ತಿಗಾಗಿ ಹೊಂದಿದ್ದ ದೀರ್ಘ ಕಾಯುವಿಕೆಯನ್ನು ರಿಚಾ ಘೋಷ್ ಕೊನೆಗೊಳಿಸಿದರು ಎಂದು ಮಮತಾ ಬ್ಯಾನರ್ಜಿ ಉಲ್ಲೇಖಿಸಿದರು. ರಿಚಾ ಎಲ್ಲಾ ಪ್ರಶಂಸೆಗೆ ಅರ್ಹರಾಗಿದ್ದರೂ, ಅವರ ಮೇಲೆ ಹೆಚ್ಚುವರಿ ಒತ್ತಡ ಹೇರದಿರುವುದು ಅಷ್ಟೇ ಮುಖ್ಯ ಎಂದು ಮುಖ್ಯಮಂತ್ರಿ ತಿಳಿಸಿದರು.
“ಜೂಲನ್ ಗೋಸ್ವಾಮಿ ಮತ್ತು ಎಲ್ಲರೂ ಅದ್ಭುತ ಕೆಲಸ ಮಾಡಿದ್ದಾರೆ. ವಿಶ್ವಕಪ್ ಗೆಲ್ಲುವ ಭಾರತ ಮಹಿಳಾ ತಂಡದ ಕನಸನ್ನು ರಿಚಾ ಘೋಷ್ ಮತ್ತು ತಂಡ ಪೂರ್ಣಗೊಳಿಸಿದೆ. ಕೋಚ್, ತಂಡದ ಸದಸ್ಯರು, ಸಹಾಯಕ ಸಿಬ್ಬಂದಿ ಮತ್ತು ಎಲ್ಲಾ ಆಟಗಾರ್ತಿಯರ ಪೋಷಕರು ಸೇರಿದಂತೆ ಎಲ್ಲರಿಗೂ ನನ್ನ ಅಭಿನಂದನೆಗಳು," ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
At the heart of Bengal’s ethos lies the celebration of excellence, and Smt. @MamataOfficial has always led by example.
— All India Trinamool Congress (@AITCofficial) November 8, 2025
At the iconic Eden Gardens today, she felicitated Richa Ghosh, whose triumph on the world stage stands as a testament to grit, grace, and glory.
In her, Bengal… pic.twitter.com/GPOOZ7RYUr
"ರಿಚಾ ಘೋಷ್ ಅವರು ಇದೀಗ ತನ್ನ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ. ನಮ್ಮ ಹುಡುಗಿಯರು ಯಾವಾಗಲೂ ಉನ್ನತ ಸ್ಥಾನದಲ್ಲಿರಬೇಕೆಂದು ನಾನು ಬಯಸುತ್ತೇನೆ. ನಮ್ಮ ಬಂಗಾಳ ಹುಡುಗಿಯರು ಫುಟ್‌ಬಾಲ್, ಈಜು ಮತ್ತು ಬಿಲ್ಲುಗಾರಿಕೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ನಮ್ಮ ಬಿಲ್ಲುಗಾರರು ಒಲಿಂಪಿಕ್ ಪದಕವನ್ನು ತರುತ್ತಾರೆ ಎಂದು ನಾನು ನಂಬುತ್ತೇನೆ. ರಿಚಾ ಘೋಷ್ ಅವರಿಂದ ನಾನು ಉತ್ತಮವಾದದ್ದನ್ನು ನಿರೀಕ್ಷಿಸುತ್ತೇನೆ, ಆದರೆ ನಾವು ಅವರ ಮೇಲೆ ಯಾವುದೇ ಒತ್ತಡ ಹೇರುವುದಿಲ್ಲ," ಎಂದು ಸಿಎಂ ತಿಳಿಸಿದ್ದಾರೆ.
ಭಾರತದ ವಿಶ್ವಕಪ್ ಅಭಿಯಾನದುದ್ದಕ್ಕೂ ರಿಚಾ ಘೋಷ್ ಅತ್ಯುತ್ತಮ ಪ್ರದರ್ಶನ ನೀಡಿದರು, ಎಂಟು ಪಂದ್ಯಗಳಲ್ಲಿ 39.16ರ ಸರಾಸರಿ ಮತ್ತು 133.52ರ ಸ್ಟ್ರೈಕ್ ರೇಟ್‌ನಲ್ಲಿ 235 ರನ್ ಗಳಿಸಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ 94 ರನ್ ಗಳಿಸುವ ಮೂಲಕ ವೈಜಾಗ್ ಪ್ರೇಕ್ಷಕರನ್ನು ರಂಜಿಸಿದರು ಮತ್ತು ನಂತರ ಇದೇ ತಂಡದ ವಿರುದ್ಧ ಗ್ರ್ಯಾಂಡ್ ಫೈನಲ್‌ನಲ್ಲಿ ಅದ್ಭುತ ಇನಿಂಗ್ಸ್ ಆಡಿದರು.