IND vs ZIM: ಕಿಶನ್, ತಿಲಕ್ ಅಬ್ಬರಕ್ಕೆ ನಡುಗಿದ ಜಿಂಬಾಬ್ವೆ, ಟಿ20ಐ ಸರಣಿ ವಶಪಡಿಸಿಕೊಂಡ ಭಾರತ!
IND vs ZIM 2nd T20I Highlights: ಇಶಾನ್ ಕಿಶನ್ ಹಾಗೂ ತಿಲಕ್ ವರ್ಮಾ ಅವರ ಅಬ್ಬರದ ಬ್ಯಾಟಿಂಗ್ ಬಲದಿಂದ ಭಾರತ ತಂಡ, ಎರಡನೇ ಪಂದ್ಯದಲ್ಲಿಯೂ ಜಿಂಬಾಬ್ವೆ ಎದುರು 90 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಆ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಟೀಮ್ ಇಂಡಿಯಾ 2-0 ಅಂತರದಲ್ಲಿ ಟಿ20ಐ ಸರಣಿಯನ್ನು ವಶಪಡಿಸಿಕೊಂಡಿತು. 44 ಎಸೆತಗಳಲ್ಲಿ 81 ರನ್ ಸಿಡಿಸಿದ ಇಶಾನ್ ಕಿಶನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಜಿಂಬಾಬ್ವೆ ಎದುರು ಸ್ಪೋಟಕ ಅರ್ಧಶತಕ ಸಿಡಿಸಿದ ಇಶಾನ್ ಕಿಶನ್, ತಿಲಕ್ ವರ್ಮಾ. -
ಹರಾರೆ: ಇಶಾನ್ ಕಿಶನ್ (Ishan Kishan) ಹಾಗೂ ತಿಲಕ್ ವರ್ಮಾ (Tilak Verma) ಅವರ ಸ್ಪೋಟಕ ಬ್ಯಾಟಿಂಗ್ ಬಲದಿಂದ ಭಾರತ ತಂಡ, ಎರಡನೇ ಪಂದ್ಯದಲ್ಲಿಯೂ (IND vs ZIM) ಜಿಂಬಾಬ್ವೆ ಎದುರು 90 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಶ್ರೇಯಸ್ ಅಯ್ಯರ್ ನಾಯಕತ್ವದ ಟೀಮ್ ಇಂಡಿಯಾ ಟಿ20ಐ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿತು. ಅಂದ ಹಾಗೆ ಕಳೆದ ಎರಡು ಸರಣಿಗಳಲ್ಲಿ ಸೋಲು ಅನುಭವಿಸಿದ್ದ ಭಾರತ ತಂಡಕ್ಕೆ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಮೊದಲ ಟಿ20ಐ ಸರಣಿ ಜಯ ಇದಾಗಿದೆ. 44 ಎಸೆತಗಳಲ್ಲಿ 81 ರನ್ಹಗ್ಳನ
ಶನಿವಾರ ಇಲ್ಲಿನ ಹರಾರೆ ಸ್ಪೋರ್ಟ್ಸ್ ಕ್ಲಬ್ ಅಂಗಣದಲ್ಲಿ ನಡೆದಿದ್ದ ಎರಡನೇ ಪಂದ್ಯದಲ್ಲಿ ಭಾರತ ತಂಡ, ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಪ್ರಾಬಲ್ಯ ಸಾಧಿಸಿತು. ಮೊದಲಿಗೆ ಇಶಾನ್ ಕಿಶನ್ (81 ರನ್) ಹಾಗೂ ತಿಲಕ್ ವರ್ಮಾ (60 ರನ್) ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ಟೀಮ್ ಇಂಡಿಯಾ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 219 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಜಿಂಬಾಬ್ವೆ ತಂಡಕ್ಕೆ 220 ರನ್‌ಗಳ ಸವಾಲಿನ ಗುರಿಯನ್ನು ನೀಡಿತು.
IND vs ZIM: ಭಾರತದ ಪರ ಎರಡನೇ ಪಂದ್ಯದಲ್ಲಿ ಟಿ20ಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಯಶ್ ಠಾಕೂರ್ ಯಾರು?
ಬಳಿಕ ಗುರಿಯನ್ನು ಹಿಂಬಾಲಿಸಿದ ಸಿಕಂದರ್ ರಾಝಾ ನಾಯಕತ್ವದ ಭಾರತ ತಂಡ ಈ ಬಾರಿಯೂ ಕಠಿಣ ಪೈಪೋಟಿ ನೀಡುವಲ್ಲಿ ವಿಫಲವಾಯಿತು. ಅಭಿಷೇಕ್ ಶರ್ಮಾ, ಯಶ್ ಠಾಕೂರ್ ಹಾಗೂ ಪ್ರಿನ್ಸ್ ಯಾದವ್ ಸೇರಿದಂತೆ ಭಾರತದ ಬೌಲಿಂಗ್ ವಿಭಾಗದ ಸವಾಲನ್ನು ಮೆಟ್ಟಿ ನಿಲ್ಲುವಲ್ಲಿ ಆತಿಥೇಯರು ವಿಫಲರಾದರು. ಇದರ ಪರಿಣಾಮ ಜಿಂಬಾಬ್ವೆ ಅಂತಿಮವಾಗಿ 17.5 ಓವರ್‌ಗಳಿಗೆ ಕೇವಲ 129 ರನ್‌ಗಳಿಗೆ ಕುಸಿಯಿತು. ಆ ಮೂಲಕ ಈ ಸೋಲಿನೊಂದಿಗೆ ಜಿಂಬಾಬೆ ಟಿ20ಐ ಸರಣಿಯನ್ನು ಟೀಮ್ ಇಂಡಿಯಾಗೆ ಬಿಟ್ಟುಕೊಟ್ಟಿತು.
For his swashbuckling and effective knock, Ishan Kishan bags the Player of the Match award 🏅
— BCCI (@BCCI) July 25, 2026
Scorecard ▶️ https://t.co/Z8UUziVx8d#TeamIndia | #ZIMvIND | @ishankishan51 pic.twitter.com/mFeoVem0yi
ಇಶಾನ್ ಕಿಶನ್ ಅಬ್ಬರದ ಬ್ಯಾಟಿಂಗ್
ಭಾರತ ತಂಡದ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದಿದ್ದು ಇಶಾನ್ ಕಿಶನ್ ಹಾಗೂ ತಿಲಕ್ ವರ್ಮಾ. ಈ ಜೋಡಿ 43 ಎಸೆತಗಳಲ್ಲಿ 94 ರನ್‌ಗಳ ಜೊತೆಯಾಟವನ್ನು ಆಡಿತ್ತು. ಒಂದು ಕಡೆ ವೈಭವ್ ಸೂರ್ಯವಂಶಿ ಹಾಗೂ ಅಭಿಷೇಕ್ ಶರ್ಮಾ ಜೋಡಿ ವಿಫಲರಾದರು. ಶ್ರೇಯಸ್ ಅಯ್ಯರ್ (25 ರನ್) ಅವರು ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾದರು. ಆದರೆ, ಒಂದು ತುದಿಯಲ್ಲಿ ದೀರ್ಘಾವಧಿ ಬ್ಯಾಟ್ ಮಾಡಿದ ಇಶಾನ್, ಕೇವಲ 44 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 9 ಬೌಂಡರಿಗಳೊಂದಿಗೆ 81 ರನ್‌ಗಳನ್ನು ಸಿಡಿಸಿ, ಶತಕದಂಚಿನಲ್ಲಿ ವಿಕೆಟ್ ಒಪ್ಪಿಸಿದರು. ಇವರ ಸ್ಪೋಟಕ ಬ್ಯಾಟಿಂಗ್ ಬಲದಿಂದ ಭಾರತ 200ರ ಸನಿಹ ತಲುಪಲು ಸಾಧ್ಯವಾಯಿತು.
Game set and match ✅
— BCCI (@BCCI) July 25, 2026
A comprehensive and dominant 9⃣0⃣-run victory for #TeamIndia 🥳👏
With that they clinch the #ZIMvIND T20I series by 2⃣-0⃣ with one game to play 🏆
Scorecard ▶️ https://t.co/Z8UUziVx8d pic.twitter.com/0hfpuJ6aCx
ತಿಲಕ್ ವರ್ಮಾ ಸ್ಪೋಟಕ ಅರ್ಧಶತಕ
ಡೆತ್ ಓವರ್‌ಗಳಲ್ಲಿ ತಿಲಕ್ ವರ್ಮಾ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನವನ್ನು ಸೆಳೆದರು. ಅವರು 29 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ ಅಜೇಯ 60 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಭಾರತ ತಂಡದ ಮೊತ್ತವನ್ನು 220ರ ಗಡಿ ದಾಟಿಸಲು ನೆರವು ನೀಡಿದರು.
Innings Break!
— BCCI (@BCCI) July 25, 2026
Solid fifties from Ishan Kishan and Tilak Varma propel #TeamIndia to a strong total 🎯
Over to our bowlers to defend this 🙌
Scorecard ▶️ https://t.co/Z8UUziVx8d#ZIMvIND pic.twitter.com/1LM7Yv4qyF
ಜಿಂಬಾಬ್ವೆ ಬ್ಯಾಟಿಂಗ್ ವೈಫಲ್ಯ
220 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಜಿಂಬಾಬ್ವೆ ತಂಡದ ಪರ ಯಾವೊಬ್ಬ ಬ್ಯಾಟ್ಸ್‌ಮನ್ ದೊಡ್ಡ ಇನಿಂಗ್ಸ್ ಆಡಲಿಲ್ಲ. ಆರಂಭಿಕ ಬ್ರಿಯಾನ್ ಬೆನೆಟ್ (32ರನ್) ಅವರು ಆತಿಥೇಯರ ಪರ ವೈಯಕ್ತಿಕ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ರಯಾನ್ ಬರ್ಲ್ 20 ರನ್ ಹಾಗೂ ಮಾರುಮನಿ 24 ರನ್ ಗಳಿಸಿದರು. ಇವರನ್ನು ಹೊರತುಪಡಿಸಿ ಇನ್ನುಳಿದ ಬ್ಯಾಟರ್ಸ್ ವಿಫಲರಾದರು. ಭಾರತದ ಪರ ಅಭಿಷೇಕ್ ಶರ್ಮಾ 3 ವಿಕೆಟ್, ಯಶ್ ಠಾಕೂರ್ ಹಾಗೂ ಪ್ರಿನ್ಸ್ ಯಾದವ್ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು.