ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: ಸೂರ್ಯಕುಮಾರ್‌ ಯಾದವ್‌-ದೇವಿಶಾ ಶೆಟ್ಟಿ ದಂಪತಿಗೆ ಹೆಣ್ಣು ಮಗು ಜನನ!

2026ರ ಇಂಡಿಯನ್‌ ಪ್ರೀಮಿಉರ್‌ ಲೀಗ್‌ ಟೂರ್ನಿ ನಡೆಯುತ್ತಿರುವ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್‌ ಬ್ಯಾಟ್ಸ್‌ಮನ್‌ ಹಾಗೂ ಅವರ ಪತ್ನಿ ದೇವಿಶಾ ಶೆಟ್ಟಿ ದಂಪತಿಗೆ ಹೆಣ್ಣು ಮಗು ಜನಿಸಿದೆ. ಈ ಸಿಹಿ ಸುದ್ದಿಯನ್ನು ಸೂರ್ಯಕುಮಾರ್‌ ಯಾದವ್‌ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್‌ ತಂಡ ಸೂರ್ಯ-ದೇವಿಸಾ ದಂಪತಿಗೆ ಶುಭ ಹಾರೈಸಿದೆ.

ಸೂರ್ಯಕುಮಾರ್‌ ಯಾದವ್‌-ದೇವಿಶಾ ಶೆಟ್ಟಿ ದಂಪತಿಗೆ ಹೆಣ್ಣು ಮಗು ಜನನ!

ಸೂರ್ಯಕುಮಾರ್‌-ದೇವಿಶಾ ಶೆಟ್ಟಿ ದಂಪತಿಗೆ ಹೆಣ್ಣು ಮಗು ಜನನ! -

Profile
Ramesh Kote May 7, 2026 9:36 PM

ನವದೆಹಲಿ: ಭಾರತದ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಅವರಿಗೆ ಮತ್ತು ಅವರ ಪತ್ನಿ ದೇವಿಶಾ ಶೆಟ್ಟಿ (Devisha Shetty) ದಂಪತಿಗೆ ಹೆಣ್ಣು ಮಗು ಜನಿಸಿದೆ. ಮೇ 7 ರಂದು ಸೂರ್ಯ-ದೇವಿಶಾ ಹೆಣ್ಣು ಮಗುವಿಗೆ ಪೋಷಕರಾಗಿದ್ದಾರೆ. ಆ ಮೂಲಕ ಇದೀಗ ಹೆಣ್ಣು ಮಗು ಜನಿಸಿರುವುದರಿಂದ 2026ರ ಐಪಿಎಲ್‌ (IPL 2026) ಟೂರ್ನಿಯಲ್ಲಿನ ತಮ್ಮ ಕಳಪೆ ಫಾರ್ಮ್‌ ಬಗೆಗಿನ ನೋವನ್ನು ಮರೆಸಿದೆ. ತಮ್ಮ ಮೊದಲ ಮಗುವಿಗೆ ತಂದೆಯಾಗಿರುವ ಕಾರಣ ಅವರು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧದ ಮುಂಬರುವ ಐಪಿಎಲ್ ಪಂದ್ಯಕ್ಕಾಗಿ ಮುಂಬೈ ಇಂಡಿಯನ್ಸ್ ತಂಡದೊಂದಿಗೆ ರಾಯ್‌ಪುರಕ್ಕೆ ಸೂರ್ಯಕುಮಾರ್‌ ಯಾದವ್‌ ಪ್ರಯಾಣಿಸಲಿಲ್ಲ.

ಸೂರ್ಯಕುಮಾರ್‌ ಯಾದವ್‌ ಹಾಗೂ ಅವರ ಪತ್ನಿ ಉಡುಪಿ ಮೂಲದ ದೇವಿಶಾ ಶೆಟ್ಟಿ ಅವರು ತಮ್ಮ ಮಗಳ ಮೊದಲ ಛಾಯಾಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್‌ ಸೇರಿದಂತೆ ಕ್ರಿಕೆಟಿಗರು ಹಾಗೂ ಕ್ರಿಕೆಟ್‌ ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿವೆ.

MI vs RCB: ಮೊದಲ ಮಗುವಿನ ನಿರೀಕ್ಷೆ; ಆರ್‌ಸಿಬಿ ಪಂದ್ಯಕ್ಕೆ ಸೂರ್ಯಕುಮಾರ್‌ ಅಲಭ್ಯ

ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಸೂರ್ಯಕುಮಾರ್ ಯಾದವ್ ತಮ್ಮ ಪತ್ನಿ ದೇವಿಶಾ ಶೆಟ್ಟಿ ಅವರೊಂದಿಗೆ ಸಹಯೋಗದ ಪೋಸ್ಟ್‌ನಲ್ಲಿ ತಮ್ಮ ಮಗಳ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ದೇವಿಶಾ ಶೆಟ್ಟಿ ಮತ್ತು ಸೂರ್ಯ ತಮ್ಮ ಮಗಳ ಬೆರಳುಗಳನ್ನು ಹಿಡಿದಿರುವುದನ್ನು ಕಾಣಬಹುದು. ಛಾಯಾಚಿತ್ರವನ್ನು ಹಂಚಿಕೊಳ್ಳುವಾಗ ದಂಪತಿಗಳು ಭಾವನಾತ್ಮಕ ಸಂದೇಶವನ್ನು ಸಹ ಬರೆದಿದ್ದಾರೆ. ಫೋಟೋ ಜೊತೆಗಿನ ಶೀರ್ಷಿಕೆಯಲ್ಲಿ, ದಂಪತಿಗಳು ಹೀಗೆ ಬರೆದಿದ್ದಾರೆ: "ನಗು, ಪ್ರೀತಿಯ ರಾಶಿ ಮತ್ತು ಚಿನ್ನದ ಕನಸುಗಳೊಂದಿಗೆ - ನಾವು ನಮ್ಮ ಹೆಣ್ಣು ಮಗುವನ್ನು ಸ್ವಾಗತಿಸುತ್ತೇವೆ."



ಸೂರ್ಯಕುಮಾರ್ ಯಾದವ್ ಮತ್ತು ದೇವಿಶಾ ಶೆಟ್ಟಿ 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಐಪಿಎಲ್ 2026ರ ಟೂರ್ನಿಯು ಸೂರ್ಯಕುಮಾರ್ ಯಾದವ್‌ಗೆ ಪಾಲಿಗೆ ಉತ್ತಮವಾಗಿಲ್ಲ. ಇಲ್ಲಿಯವರೆಗೆ ಅವರು ಆಡಿದ 10 ಪಂದ್ಯಗಳಲ್ಲಿ ಕೇವಲ 195 ರನ್‌ಗಳನ್ನು ಗಳಿಸಿದ್ದಾರೆ.

IPL 2026: ಯಾವುದೇ ವೇಗಿಯಿಂದ ಸಾಧ್ಯವಾಗದ ದಾಖಲೆ ಬರೆದ ಭುವನೇಶ್ವರ್‌ ಕುಮಾರ್‌!

ಸೂರ್ಯಕುಮಾರ್ ಯಾದವ್ ಅವರ ಐಪಿಎಲ್ ವೃತ್ತಿಜೀವನ

ಸೂರ್ಯಕುಮಾರ್ ಯಾದವ್ 2012 ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು. ಅಂದಿನಿಂದ, ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 176 ಪಂದ್ಯಗಳನ್ನು ಆಡಿದ್ದಾರೆ, 148.5ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡುವಾಗ 4,506 ರನ್ ಗಳಿಸಿದ್ದಾರೆ. ಸೂರ್ಯ ಐಪಿಎಲ್‌ನಲ್ಲಿ ಎರಡು ಶತಕಗಳು ಮತ್ತು 30 ಅರ್ಧಶತಕಗಳನ್ನು ಹೊಂದಿದ್ದಾರೆ.