IPL 2025: ʻಪವರ್‌ಪ್ಲೇನಲ್ಲಿ ಅಶ್ವಿನ್‌ಗೆ ಬೌಲಿಂಗ್ ಕೊಡಬೇಡಿʼ-ಸಿಎಸ್‌ಕೆಗೆ ಶ್ರೀಕಾಂತ್ ಸಲಹೆ!
Kris Srikkanth on R Ashwin: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಪಂದ್ಯಗಳ ಪವರ್‌ಪ್ಲೇನಲ್ಲಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ಗೆ ಬೌಲಿಂಗ್ ಕೊಡಬೇಡಿ ಎಂದು ಭಾರತದ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಚೆನ್ನೈ ಸೂಪರ್ ಕಿಂಗ್ಸ್ ಟೀಮ್ ಮ್ಯಾನೇಜ್‌ಮೆಂಟ್‌ಗೆ ಸಲಹೆ ನೀಡಿದ್ದಾರೆ.

ಸಿಎಸ್‌ಕೆಗೆ ಅಗತ್ಯ ಬದಲಾವನೆ ಸೂಚಿಸಿದ ಶ್ರೀಕಾಂತ್.

ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಪಂದ್ಯಗಳ ಪವರ್‌ಪ್ಲೇನಲ್ಲಿ ರವಿಚಂದ್ರನ್ ಅಶ್ವಿನ್‌ಗೆ (R Ashwin) ಬೌಲಿಂಗ್ ಕೊಡಬೇಡಿ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಭಾರತದ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ (K Srikkanth) ಸಲಹೆ ನೀಡಿದ್ದಾರೆ. ಇಲ್ಲಿಯವರೆಗೂ ಆಡಿದ ಮೂರೂ ಪಂದ್ಯಗಳ ಪೈಕಿ ಒಂದರಲ್ಲಿ ಗೆಲುವು ಪಡೆದರೆ, ಇನ್ನುಳಿದ ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಆ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಏಳನೇ ಸ್ಥಾನಕ್ಕೆ ಕುಸಿದಿದೆ.
ತನ್ನ ಮೊದಲನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಾಲ್ಕು ವಿಕೆಟ್‌ಗಳಿಂದ ಗೆದ್ದ ಹದಿನೆಂಟನೇ ಆವೃತ್ತಿಯ ಟೂರ್ನಿಯಲ್ಲಿ ಶುಭಾರಂಭ ಕಂಡಿದ್ದ ಋತುರಾಜ್ ಗಾಯಕ್ವಾಡ್ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ನಂತರ ಎರಡನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ದೊಡ್ಡ ಅಂತರದಲ್ಲಿ ಸೋಲು ಅನುಭವಿಸಿತ್ತು. ನಂತರ ತನ್ನ ಮೂರನೇ ಪಂದ್ಯದಲ್ಲಿಯೂ ರಾಜಸ್ಥಾನ್ ರಾಯಲ್ಸ್ ವಿರುದ್ದ ಸೋಲು ಅನುಭವಿಸಿತ್ತು.
IPL 2025: ʻನಾನು ಓಪನಿಂಗ್ ಮಾಡ್ಲಾ?ʼ- ಕೆಕೆಆರ್‌ಗೆ ರಮಣ್‌ದೀಪ್ ಸಿಂಗ್ ಮನವಿ!
ಚೆನ್ನೈ ಫ್ರಾಂಚೈಸಿಯ ಸತತ ಎರಡು ಸೋಲುಗಳ ಬಳಿಕ ಮಾತನಾಡಿದ ಕ್ರಿಸ್ ಶ್ರೀಕಾಂತ್, ಸಿಎಸ್‌ಕೆ ತಂಡ ತನ್ನ ಪ್ಲೇಯಿಂಗ್ xiನಲ್ಲಿ ಕೆಲ ಬದಲಾವಣೆಗಳನ್ನು ಸೂಚಿಸಿದ್ದಾರೆ. ಡೆವೋನ್ ಕಾನ್ವೇ ಹಾಗೂ ಅನ್ಷುಲ್ ಕಾಂಬೋಜ್‌ಗೆ ಪ್ಲೇಯಿಂಗ್ XIನಲ್ಲಿ ಅವಕಾಶ ನೀಡಿ ಎಂದು ಆಗ್ರಹಿಸಿದ್ದಾರೆ ಹಾಗೂ ಆರ್ ಅಶ್ವಿನ್‌ಗೆ ಪವರ್‌ಪ್ಲೇನಲ್ಲಿ ಬೌಲಿಂಗ್ ನೀಡಬೇಡಿ ಎಂದು ಸಲಹೆ ನೀಡಿದ್ದಾರೆ.
ಸಿಎಸ್‌ಕೆಗೆ ಮೂರು ಬದಲಾವಣೆ ಸೂಚಿಸಿದ ಶ್ರೀಕಾಂತ್
"ಡೆವೋನ್ ಕಾನ್ವೆ ಅವರು ಜೇಮಿ ಓವರರ್ಟನ್ ಸ್ಥಾನದಲ್ಲಿ ಆಡಲಿ ಹಾಗೂ ಅನ್ಷುಲ್ ಕಾಂಬೋಜ್ ಅವರು ಸಿಎಸ್‌ಕೆ ಪ್ಲೇಯಿಂಗ್ XIನಲ್ಲಿ ಆಡಲಿ. ಆರ್ ಅಶ್ವಿನ್ ಅವರ ಬಗ್ಗೆ ಹೇಳುವುದಾದರೆ, ಪವರ್‌ಪ್ಲೇನಲ್ಲಿ ಸ್ಪಿನ್ನರ್ ಬೌಲ್ ಮಾಡಬಾರದು. 7 ರಿಂದ 18 ಓವರ್‌ಗಳಲ್ಲಿ ಆರ್ ಅಶ್ವಿನ್ ತುಂಬಾ ಪರಿಣಾಮಕಾರಿಯಾಗಲಿದ್ದಾರೆ. ಆ ಮೂಲಕ ನೂರ್ ಅಹ್ಮದ್ ಹಾಗೂ ರವೀಂದ್ರ ಜಡೇಜಾಗೆ ಸಾಥ್ ನೀಡಲಿ. ರಾಹುಲ್ ತ್ರಿಪಾಠಿ ಸ್ಥಾನಕ್ಕೆ ಅನ್ಷುಲ್ ಕಾಂಬೋಜ್ ಆಡಲಿ ಹಾಗೂ ಓವರ್ಟನ್ ಅವರ ಸ್ಥಾನದಲ್ಲಿ ಡೆವೋನ್ ಕಾನ್ವೆ ಆಡಬೇಕೆಂದು," ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಶ್ರೀಕಾಂತ್ ತಿಳಿಸಿದ್ದಾರೆ.
RR vs CSK: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಕೊನೆಯ ಓವರ್ ಥ್ರಿಲ್ಲರ್ ಗೆದ್ದ ರಾಜಸ್ಥಾನ್ ರಾಯಲ್ಸ್!
ಶಿವಂ ದುಬೆ ಪ್ಲೇಯಿಂಗ್ XIನಲ್ಲಿ ಆಡಲಿ
ಆರ್ ಅಶ್ವಿನ್ ಅವರು ಇಲ್ಲಿಯ ತನಕ ಆಡಿದ ಹಲವು ಪಂದ್ಯಗಳಿಂದ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ 33ರ ಸರಾಸರಿಯಲ್ಲಿ ರನ್ ನೀಡಿದ್ದಾರೆ. ಅಂದ ಹಾಗೆ 1983ರ ವಿಶ್ವಕಪ್ ವಿಜೇತ ಆಟಗಾರ, ಶಿವಂ ದುಬೆಗೆ ಪ್ಲೇಯಿಂಗ್ XIನಲ್ಲಿ ಆಡಿಸಿ, ಆಂಡ್ರೆ ಸಿದ್ದಾರ್ಥ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿಸಿ ಎಂದು ಸಲಹೆ ನೀಡಿದ್ದಾರೆ.
"ನಾನು ಶಿವಂ ದುಬೆ ಅವರನ್ನು ಪ್ಲೇಯಿಂಗ್ XIನಲ್ಲಿ ಆಡಿಸಲು ಬಯಸುತ್ತೇನೆ ಹಾಗೂ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಂಡ್ರೆ ರಸೆಲ್ ಅವರನ್ನು ಆಯ್ಕೆ ಮಾಡುತ್ತೇನೆ. ಮುಖೇಶ್ ಚೌಧರಿ ಕೂಡ ಒಳ್ಳೆಯ ಆಯ್ಕೆ. ಏಕೆಂದರೆ ಅವರು ಈ ಹಿಂದೆ ಸಿಎಸ್‌ಕೆ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ್ದಾರೆ," ಎಂದು ಕ್ರಿಸ್ ಶ್ರೀಕಾಂತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.