ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಐಪಿಎಲ್‌ ಹರಾಜಿಗೂ ಮುನ್ನ ಭಾರತೀಯ ಆಲ್‌ರೌಂಡರನ್ನು ಅನುಮಾನಾಸ್ಪದ ಬೌಲಿಂಗ್‌ ಪಟ್ಟಿಗೆ ಸೇರಿಸಿದ ಬಿಸಿಸಿಐ

Deepak Hooda: ದೀಪಕ್ ಹೂಡಾ ಮಾತ್ರವಲ್ಲದೆ ಅನುಮಾನಾಸ್ಪದ ಬೌಲರ್‌ಗಳ ಪಟ್ಟಿಯಲ್ಲಿ 30 ಲಕ್ಷ ರೂ. ಮೂಲ ಬೆಲೆ ಹೊಂದಿರುವ 29 ವರ್ಷದ ಎಡಗೈ ಸ್ಪಿನ್ನರ್ ಜಮ್ಮು ಮತ್ತು ಕಾಶ್ಮೀರದ ಅಬಿದ್ ಮುಷ್ತಾಕ್ ಮತ್ತು ಕರ್ನಾಟಕದ 29 ವರ್ಷದ ಆಫ್-ಸ್ಪಿನ್ನರ್ ಕೆ.ಎಲ್. ಶ್ರೀಜಿತ್ ಕೂಡ ಕಾಣಿಸಿಕೊಂಡಿದ್ದಾರೆ. ಅವರನ್ನು ಐಪಿಎಲ್‌ನಲ್ಲಿ ಬೌಲಿಂಗ್ ಮಾಡದಂತೆ ನಿಷೇಧಿಸಲಾಗಿದೆ.

ದೀಪಕ್‌ ಹೂಡಾರನ್ನು ಅನುಮಾನಾಸ್ಪದ ಬೌಲಿಂಗ್‌ ಪಟ್ಟಿಗೆ ಸೇರಿಸಿದ ಬಿಸಿಸಿಐ

deepak hooda -

Abhilash BC
Abhilash BC Dec 14, 2025 5:34 PM

ನವದೆಹಲಿ, ಡಿ.14: ಬಹುನಿರೀಕ್ಷಿತ ಐಪಿಎಲ್ (IPL 2026) 2026 ರ ಮಿನಿ ಹರಾಜಿ(IPL Auction)ಗೆ ಇನ್ನೊಂದು ದಿನ ಮಾತ್ರ ಬಾಕಿ ಉಳಿದಿದೆ. ಡಿಸೆಂಬರ್ 16 ರಂದು ದುಬೈನಲ್ಲಿ ಹರಾಜು ನಡೆಯಲಿದೆ. 19ನೇ ಆವೃತ್ತಿಯ ಟೂರ್ನಮೆಂಟ್‌ಗೆ ಮುನ್ನ ತಮ್ಮ ಅತ್ಯುತ್ತಮ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು 10 ಫ್ರಾಂಚೈಸಿಗಳು ಸರ್ವ ಪ್ರಯತ್ನಗಳನ್ನು ಮಾಡಲು ಪ್ರಯತ್ನಿಸುತ್ತಿವೆ. ಆದಾಗ್ಯೂ, ಹರಾಜಿನ ಮುನ್ನ ದೀಪಕ್ ಹೂಡಾ(Deepak Hooda)ಗೆ ಭಾರೀ ಹಿನ್ನಡೆಯಾಗಿದೆ.

ಹೌದು, ಹೂಡಾ ಅವರನ್ನು ಬಿಸಿಸಿಐ ಅನುಮಾನಾಸ್ಪದ ಬೌಲರ್‌ಗಳ ಪಟ್ಟಿಯಲ್ಲಿ ಸೇರಿಸಿದೆ. ಅವರ ಬೌಲಿಂಗ್‌ ಶೈಲಿಯ ಕುರಿತು ಬಿಸಿಸಿಐ, ಎಲ್ಲಾ ಫ್ರಾಂಚೈಸಿಗಳಿಗೂ ಮಾಹಿತಿ ಕೂಡ ನೀಡಿದೆ. ಸ್ಪಿನ್‌ ಆಲ್‌ರೌಂಡರ್‌ ಆಗಿರುವ ಅವರು ಒಂದೊಮ್ಮೆ ಹರಾಜಿನಲ್ಲಿ ಯಾವುದೇ ಫ್ರಾಂಚೈಸಿ ಪಾಲಾದರೂ ಕೇವಲ ಬ್ಯಾಟರ್‌ ಆಗಿ ಮಾತ್ರ ಆಡಬೇಕಿದೆ.

ಕುತೂಹಲಕಾರಿಯಾಗಿ, ಹೂಡಾ ಹಿಂದಿನ ಋತುವಿನಲ್ಲಿ ಐಪಿಎಲ್‌ನಲ್ಲಿ 7 ಪಂದ್ಯಗಳಲ್ಲಿ ಆಡಿದ್ದರು. ಅವರು ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಪ್ರತಿನಿಧಿಸಿದ್ದರು. ಆದಾಗ್ಯೂ, ಅವರು ಆಡಿದ ಯಾವುದೇ ಪಂದ್ಯಗಳಲ್ಲಿ ಬೌಲಿಂಗ್ ಮಾಡಲಿಲ್ಲ.

ಐಪಿಎಲ್ ಹರಾಜಿನಲ್ಲಿ ವ್ಯವಸ್ಥಾಪಕರ ತಪ್ಪಿಗೆ ಕ್ಯಾಮೆರಾನ್ ಗ್ರೀನ್ ಸ್ಪಷ್ಟನೆ

ದೀಪಕ್ ಹೂಡಾ ಮುಂಬರುವ ಐಪಿಎಲ್ ಹರಾಜಿನಲ್ಲಿ ಭಾಗವಹಿಸಲಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ. ಅವರು ಆಲ್-ರೌಂಡರ್ ವಿಭಾಗದ (ಎಎಲ್-1) ಭಾಗವಾಗಿದ್ದಾರೆ. ಅವರ ಮೂಲ ಬೆಲೆ 75 ಲಕ್ಷ ರೂ. ಎಎಲ್-1 ವಿಭಾಗದಲ್ಲಿ ವೆಂಕಟೇಶ್ ಅಯ್ಯರ್, ವನಿಂದು ಹಸರಂಗ ಮತ್ತು ರಚಿನ್ ರವೀಂದ್ರ ಸೇರಿದಂತೆ 7 ಆಟಗಾರರಿದ್ದಾರೆ.



ದೀಪಕ್ ಹೂಡಾ ಮಾತ್ರವಲ್ಲದೆ ಅನುಮಾನಾಸ್ಪದ ಬೌಲರ್‌ಗಳ ಪಟ್ಟಿಯಲ್ಲಿ 30 ಲಕ್ಷ ರೂ. ಮೂಲ ಬೆಲೆ ಹೊಂದಿರುವ 29 ವರ್ಷದ ಎಡಗೈ ಸ್ಪಿನ್ನರ್ ಜಮ್ಮು ಮತ್ತು ಕಾಶ್ಮೀರದ ಅಬಿದ್ ಮುಷ್ತಾಕ್ ಮತ್ತು ಕರ್ನಾಟಕದ 29 ವರ್ಷದ ಆಫ್-ಸ್ಪಿನ್ನರ್ ಕೆ.ಎಲ್. ಶ್ರೀಜಿತ್ ಕೂಡ ಕಾಣಿಸಿಕೊಂಡಿದ್ದಾರೆ. ಅವರನ್ನು ಐಪಿಎಲ್‌ನಲ್ಲಿ ಬೌಲಿಂಗ್ ಮಾಡದಂತೆ ನಿಷೇಧಿಸಲಾಗಿದೆ.

ಐಪಿಎಲ್‌ ಸಾಧನೆ

2015ರಲ್ಲಿ ಐಪಿಎಲ್‌ ಟೂರ್ನಿಗೆ ಪದಾರ್ಪಣೆ ಮಾಡಿದ ದೀಪಕ್ ಹೂಡಾ, ಇದುವರೆಗೂ 125 ಪಂದ್ಯಗಳಲ್ಲಿ ವಿವಿಧ ಫ್ರಾಂಚೈಸಿಗಳ ಪರ ಆಡಿದ್ದಾರೆ. 16 ಇನಿಂಗ್ಸ್‌ನಲ್ಲಿ 1496 ರನ್‌ ಮತ್ತು 10 ವಿಕೆಟ್‌ ಪಡೆದಿದ್ದಾರೆ. 2022ರ ಆವೃತ್ತಿಯಲ್ಲಿ 451 ರನ್‌ ಬಾರಿಸಿದ್ದು ಅವರ ಶ್ರೇಷ್ಠ ಸಾಧನೆಯಾಗಿದೆ. ಕಳೆದ ಆವೃತ್ತಿಯಲ್ಲಿ ಆಡಿದ 7 ಪಂದ್ಯಗಳಿಂದ ಕೇವಲ 31ರನ್‌ ಗಳಿಸಲಷ್ಟೇ ಶಕ್ತವಾಗಿದ್ದರು. ಹೀಗಾಗಿ ಅವರನ್ನು ಈ ಬಾರಿ ಫ್ರಾಂಚೈಸಿಗಳು ಖರೀದಿ ಮಾಡಬಹುದೇ ಎಂದು ಕಾದು ನೋಡಬೇಕು.