GT vs RR: ಯಶಸ್ವಿ ಜೈಸ್ವಾಲ್ ನಾಯಕತ್ವವನ್ನು ಟೀಕಿಸಿದ ಇರ್ಫಾನ್ ಪಠಾಣ್!
IPL 2026: ಜೈಪುರದಲ್ಲಿ ನಡೆದಿದ್ದ ಗುಜರಾತ್ ಟೈಟನ್ಸ್ ವಿರುದ್ಧದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಸೋಲು ಅನುಭವಿಸಿತು. ಈ ಪಂದ್ಯದ ಬಳಿಕ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ಯಶಸ್ವಿ ಜೈಸ್ವಾಲ್ ಅವರ ನಾಯಕತ್ವವನ್ನು ಟೀಕಿಸಿದ್ದಾರೆ. ರಿಯಾನ್ ಪರಾಗ್ ಗಾಯದ ಕಾರಣ ಜೈಸ್ವಾಲ್ ತಂಡವನ್ನು ಮುನ್ನಡೆಸಿದ್ದಾರೆ.
ಯಶಸ್ವಿ ಜೈಸ್ವಾಲ್ ನಾಯಕತ್ವವನ್ನು ಟೀಕಿಸಿದ ಇರ್ಫಾನ್ ಪಠಾಣ್. -
ಜೈಪುರ: ಗುಜರಾತ್ ಟೈಟನ್ಸ್ ಎದುರು ಬ್ಯಾಟಿಂಗ್ ವೈಫಲ್ಯದಿಂದಾಗಿ ರಾಜಸ್ಥಾನ್ ರಾಯಲ್ಸ್ ತಂಡ ಶನಿವಾರದ ಪಂದ್ಯದಲ್ಲಿ GT vs RR) ಸೋಲು ಅನುಭವಿಸಿತ್ತು. ನಿಯಮಿತ ನಾಯಕ ರಿಯಾನ್ ಪರಾಗ್ (Riyan Parag) ಅವರು ಸ್ನಾಯು ಸೆಳೆತದ ಗಾಯಕ್ಕೆ ತುತ್ತಾದ ಕಾರಣ ಅವರ ಬದಲು ತಂಡವನ್ನು ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ (Yashasvi Jaiswal) ಮುನ್ನಡೆಸಿದ್ದರು. ಇವರ ನಾಯಕತ್ವದಲ್ಲಿ ಆರ್‌ಆರ್ ತಂಡ ಎಂದಿನಂತೆ ಉತ್ತಮ ಪ್ರದರ್ಶನವನ್ನು ತೋರುವಲ್ಲಿ ವಿಫಲವಾಯಿತು. ಈ ಪಂದ್ಯದಲ್ಲಿ ಆರ್‌ಆರ್ ಹೀನಾಯ ಸೋಲು ಅನುಭವಿಸಿದ ಬಳಿಕ ಹಂಗಾಮಿ ನಾಯಕ ಯಶಸ್ವಿ ಜೈಸ್ವಾಲ್ ಅವರನ್ನು ಭಾರತ ತಂಡದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಟೀಕಿಸಿದ್ದಾರೆ.
ಇದೇ ಮೊದಲ ಬಾರಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮುನ್ನಡೆಸಿದ ಯಶಸ್ವಿ ಜೈಸ್ವಾಲ್ ವಿಫಲರಾದರು. ಕೇವಲ ಬ್ಯಾಟ್ಸ್‌ಮನ್ ಆಗಿ ಮಾತ್ರವಲ್ಲ, ಒಬ್ಬ ನಾಯಕನಾಗಿಯೂ ವಿಫಲರಾದರು. ಅವರು ನಾಯಕನಾಗಿ ತಂಡದಲ್ಲಿ ಸಮಯಕ್ಕೆ ತಕ್ಕಂತೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ವಿಫಲರಾದರು. ಇದನ್ನು ಗಮನಿಸಿದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಟೀಕಿಸಿದ್ದಾರೆ.
ರಾಜಸ್ಥಾನದಿಂದ ಚೆನ್ನೈ ಸೂಪರ್ ಕಿಂಗ್ಸ್‌ಗೆ ಬಂದಿದ್ದು ನಾಯಕತ್ವಕ್ಕಾಗಿ? ಅಸಲಿ ಸತ್ಯ ಬಾಯ್ಬಿಟ್ಟ ಸಂಜು ಸ್ಯಾಮ್ಸನ್!
ಯಶಸ್ವಿ ಜೈಸ್ವಾಲ್ ನಾಯಕತ್ವವವನ್ನು ಟೀಕಿಸಿದ ಪಠಾಣ್
“ಇನ್ನೊಂದು ವಿಷಯ ನನಗೆ ಅರ್ಥವಾಗಲಿಲ್ಲ. ಯಶಸ್ವಿ ಜೈಸ್ವಾಲ್ ಟಾಸ್‌ಗೆ ನಾಯಕನಾಗಿ ಬಂದಾಗಲೇ ಮೈದಾನದಲ್ಲಿನ ಹೊಂದಾಣಿಕೆ ಸಂಪೂರ್ಣವಾಗಿ ಕಾಣಿಸಲಿಲ್ಲ. ಪುಂಜಾ ಎಸೆದ ಒಂದು ಡೆಲಿವರಿ ಇತ್ತು. ಅದು ಓವರ್‌ನ ಆರನೇ ಎಸೆತವಾಗಿತ್ತು. ಆದರೂ ಅಂಪೈರ್ ಅದನ್ನು ವೈಡ್ ಎಂದು ಘೋಷಿಸಿದರು. ವಿಕೆಟ್‌ಕೀಪರ್ ಧ್ರುವ್ ಜುರೆಲ್ ಚೆಂಡನ್ನು ಸಂಗ್ರಹಿಸಿದರು. ಸಾಮಾನ್ಯವಾಗಿ ವಿಕೆಟ್‌ಕೀಪರ್‌ಗೆ ಚೆಂಡು ವೈಡ್ ಲೈನ್ ಹತ್ತಿರ ಹೋಯಿತೇ ಅಥವಾ ಅದರ ಹೊರಗೆ ಹೋಯಿತೇ ಎಂಬುದು ಗೊತ್ತಿರಬೇಕು. ಕಾಮೆಂಟೇಟರ್‌ಗಳಾಗಿ ನಮ್ಮ ದೃಷ್ಟಿಯಲ್ಲಿ ಅದು ವೈಡ್ ಆಗಿ ಕಾಣಿಸಲಿಲ್ಲ. ಆದರೆ ಜುರೆಲ್ ಯಾವುದೇ ಚರ್ಚೆ ಮಾಡದೇ ನೇರವಾಗಿ ಚೆಂಡನ್ನು ಬೌಲರ್‌ಗೆ ಹಿಂತಿರುಗಿಸಿದರು. ನಾಯಕನೊಂದಿಗೆ ಯಾವುದೇ ಮಾತುಕತೆ ನಡೆಯಲಿಲ್ಲ. ನಾಯಕನೂ ಅವರೊಂದಿಗೆ ಸಂವಹನ ನಡೆಸಲಿಲ್ಲ. ಅದು ಗೊಂದಲಕಾರಿಯಾಗಿ ಕಂಡಿತು,” ಎಂದು ಇರ್ಫಾನ್ ಪಠಾಣ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
GT vs RR: ರಶೀದ್ ಖಾನ್ ಸ್ಪಿನ್ ಮೋಡಿಗೆ ರಾಯಲ್ಸ್ ತತ್ತರ, ಭರ್ಜರಿ ಜಯದೊಂದಿಗೆ ಎರಡನೇ ಸ್ಥಾನಕ್ಕೆ ಟೈಟನ್ಸ್!
ರಾಜಸ್ಥಾನ್ ರಾಯಲ್ಸ್‌ಗೆ ಮುಂದಿನ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್
ರಾಜಸ್ಥಾನ್ ರಾಯಲ್ಸ್ ತಂಡ, ತನ್ನ ಮುಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಗುಜರಾತ್ ವಿರುದ್ಧದ ಸೋಲಿನ ಬಳಿಕ ರಾಜಸ್ಥಾನ್ ತಂಡವು ಅಂಕಪಟ್ಟಿಯ ಅಗ್ರ ನಾಲ್ಕರ ಸ್ಥಾನದಿಂದ ಹೊರಬಿದ್ದಿದ್ದು, ಇದೀಗ ಐದನೇ ಸ್ಥಾನದಲ್ಲಿದೆ.
ಮೇ 17ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಸೆಣಸಲಿದೆ. ಈ ಸೀಸನ್‌ನಲ್ಲಿ ಇನ್ನೂ ಮೂರು ಪಂದ್ಯಗಳು ಬಾಕಿ ಇರುವ ಹಿನ್ನೆಲೆಯಲ್ಲಿ, ತಂಡವು ಉತ್ತಮ ಪ್ರದರ್ಶನ ನೀಡುವತ್ತ ಗಮನ ಹರಿಸಿದೆ.