GT vs LSG: ಪ್ರಸಿಧ್ ಕೃಷ್ಣ ಮಾರಕ ದಾಳಿಗೆ ಎಲ್‌ಎಸ್‌ಜಿ ತತ್ತರ, ಗುಜರಾತ್ ಟೈಟನ್ಸ್‌ಗೆ ಎರಡನೇ ಜಯ!
GT vs LSG Match Highlights: ಪ್ರಸಿಧ್ ಕೃಷ್ಣ ಮಾರಕ ಬೌಲಿಂಗ್ ದಾಳಿ ಹಾಗೂ ಶುಭಮನ್ ಗಿಲ್ ಮತ್ತು ಜೋಸ್ ಬಟ್ಲರ್ ಅವರ ಅರ್ಧಶತಕಗಳ ಬಲದಿಂದ ಗುಜರಾತ್ ಟೈಟನ್ಸ್ ತಂಡ, ಎದುರಾಳಿ ಲಖನೌ ಸೂಪರ್ ಜಯಂಟ್ಸ್ ವಿರುದ್ಧ 7 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲಿಸಿತು.
ಲಖನೌ ಸೂಪರ್ ಜಯಂಟ್ಸ್ ಎದುರು ಗುಜರಾತ್ ಟೈಟನ್ಸ್‌ಗೆ ಜಯ. -
ಲಖನೌ: ಪ್ರಸಿಧ್ ಕೃಷ್ಣ (Prasidh Krishna) ಮಾರಕ ಬೌಲಿಂಗ್ ಹಾಗೂ ಶುಭಮನ್ ಗಿಲ್ ಮತ್ತು ಜೋಸ್ ಬಟ್ಲರ್ ಅವರ ಅರ್ಧಶತಕಗಳ ಬಲದಿಂದ ಗುಜರಾತ್ ಟೈಟನ್ಸ್ (Gujarat Titans) ತಂಡ, ಎದುರಾಳಿ ಲಖನೌ ಸೂಪರ್ ಜಯಂಟ್ಸ್ ವಿರುದ್ಧ 7 ವಿಕೆಟ್‌ಗಳ ಅರಾಮದಾಯಕ ಗಲುವು ದಾಖಲಿಸಿತು. ಆ ಮೂಲಕ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ಗಿಲ್ ಸಾರಥ್ಯದ ಜಿಟಿ ಎರಡನೇ ಗೆಲುವು ಪಡೆದು ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು. ಇನ್ನು ರಿಷಭ್ ಪಂತ್ ನಾಯಕತ್ವದ ಲಖನೌ ತಂಡ, ಎರಡನೇ ಸೋಲು ಅನುಭವಿಸಿತು.
ಭಾನುವಾರ ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ಲಖನೌ ಸೂಪರ್ ಜಯಂಟ್ಸ್ ನೀಡಿದ್ದ 165 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಗುಜರಾತ್ ಟೈಟನ್ಸ್ ತಂಡ, ಸಾಯಿ ಸುದರ್ಶನ್ ವಿಕೆಟ್ ಬೇಗ ಕಳೆದುಕೊಂಡರೂ ನಾಯಕ ಶುಭಮನ್ ಗಿಲ್ (56) ಹಾಗೂ ಜೋಸ್ ಬಟ್ಲರ್ (60) ಅವರ ಅರ್ಧಶತಕಗಳ ಬಲದಿಂದ 18.4 ಓವರ್‌ಗಳಿಗೆ ಮೂರು ವಿಕೆಟ್ ನಷ್ಡಕ್ಕೆ 165 ರನ್ ಗಳಿಸಿ ಗೆಲುವಿನ ದಡ ಸೇರಿತು.
LSG vs GT: ʻವೈಟ್‌ಬಾಲ್ ಕ್ರಿಕೆಟ್‌ನ ಕೆಟ್ಟ ಬ್ಯಾಟ್ಸ್‌ಮನ್ʼ-ರಿಷಭ್ ಪಂತ್ ವಿರುದ್ಧ ಫ್ಯಾನ್ಸ್ ಆಕ್ರೋಶ!
ಶುಭಮನ್ ಗಿಲ್-ಜೋಸ್ ಬಟ್ಲರ್ ಜುಗಲ್‌ಬಂದಿ
ಚೇಸಿಂಗ್ ಆರಂಭಿಸಿದ ಟೈಟನ್ಸ್ ಪರ ಓಪನಿಂಗ್ ಬಂದ ಸಾಯಿ ಸುದರ್ಶನ್ 15 ರನ್ ಗಳಿಸಿದ ಬಳಿಕ ದಿಗ್ವೇಶ್ ರಾಥಿಗೆ ವಿಕೆಟ್ ಒಪ್ಪಿಸಿದರು. ಆದರೆ, ಎರಡನೇ ವಿಕೆಟ್‌ಗೆ ಜೊತೆಯಾದ ಶುಭಮನ್ ಗಿಲ್ ಹಾಗೂ ಜೋಸ್ ಬಟ್ಲರ್ ಅತ್ಯುತ್ತಮ ಜೊತೆಯಾಟವನ್ನು ಆಡಿ 58 ಎಸೆತಗಳಲ್ಲಿ 84 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಗುಜರಾತ್ ತಂಡಕ್ಕೆ ಭದ್ರ ಅಡಿಪಾಯವನ್ನು ಹಾಕಿತು.
A clinical performance by #GT to make it 2️⃣ wins in 2️⃣ games
— IndianPremierLeague (@IPL) April 12, 2026
The @gujarat_titans reach 5th spot on the points table with this away win ✌️
SCORECARD ▶️ https://t.co/kIuuJYbiNx#TATAIPL | #KhelBindaas | #LSGvGT pic.twitter.com/d0BghVD5kY
ಗುಜರಾತ್ ಟೈಟನ್ಸ್‌ಗೆ 7 ವಿಕೆಟ್ ಜಯ
ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ನಾಯಕ ಶುಭಮನ್ ಗಿಲ್, 40 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ 56 ರನ್‌ಗಳನ್ನು ಸಿಡಿಸಿದರು. ಇನ್ನೇನು ತಮ್ಮ ತಂಡವನ್ನು ಗೆಲ್ಲಿಸುವ ಹಾದಿಯಲ್ಲಿದ್ದ ಇವರನ್ನು ಪ್ರಿನ್ಸ್ ಯಾದವ್ ಔಟ್ ಮಾಡಿದರು. ನಂತರ ಅತ್ಯುತ್ತಮ ಬ್ಯಾಟಿಂಗ್ ಮುಂದುವರಿಸಿದ್ದ ಜೋಸ್ ಬಟ್ಲರ್ 37 ಎಸೆತಗಳಲ್ಲಿ 11 ಬೌಂಡರಿಯೊಂದಿಗೆ 60 ರನ್‌ಗಳನ್ನು ಗಳಿಸಿ ಟೈಟನ್ಸ್ ಚೇಸಿಂಗ್‌ನಲ್ಲಿ ಮಹತ್ವದ ಕೊಡುಗೆಯನ್ನು ನೀಡಿದರು. ಅಂತಿಮವಾಗಿ ಇವರು ಶಮಿಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ರಾಹುಲ್ ತೇವಾಟಿಯಾ ಹಾಗೂ ವಾಷಿಂಗ್ಟನ್ ಸುಂದರ್ ಗುಜರಾತ್ ಟೈಟನ್ಸ್ ತಂಡವನ್ನು ಗೆಲುವಿನ ಗೆರೆ ದಾಟಿಸಿದರು.
IPL 2026: ಆರ್‌ಸಿಬಿ ಪಂದ್ಯದ ವೇಳೆ ಡಗೌಟ್‌ನಲ್ಲಿ ಫೋನ್ ಬಳಸಿದ ರಾಜಸ್ಥಾನ್ ರಾಯಲ್ಸ್ ಮ್ಯಾನೇಜರ್!
ಲಖನೌ ಸೂಪರ್ ಜಯಂಟ್ಸ್ ಬ್ಯಾಟಿಂಗ್ ವೈಫಲ್ಯ
ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಲಖನೌ ಸೂಪರ್ ಜಯಂಟ್ಸ್ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಏಡೆನ್ ಮಾರ್ಕ್ರಮ್ 30 ರನ್ ಗಳಿಸಿದ್ದು ಬಿಟ್ಟರೆ, ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್ ವೈಯಕ್ತಿಕ 20 ರನ್ ಗಳಿಸಲು ಸಾಧ್ಯವಾಗಲಿಲ್ಲ. ರಿಷಭ್ ಪಂತ್ (18), ಮಿಚೆಲ್ ಮಾರ್ಷ್ (11), ಆಯುಷ್ ಬದೋನಿ (9), ನಿಕೋಲಸ್ ಪೂರನ್ (19), ಅಬ್ದುಲ್ ಸಮದ್ (18), ಮುಕುಲ್ ಚೌಧರಿ (18) ಅವರು ಅವರು ಪ್ರಸಿಧ್ ಕೃಷ್ಣ ಹಾಗೂ ಅಶೋಕ್ ಶರ್ಮಾ ಅವರ ಬೌಲಿಂಗ್‌ನಲ್ಲಿ ಎಡವಿದರು.
...and Purple Prasidh is back with a POTM 🧢 😉 pic.twitter.com/ppx8d9us64
— Gujarat Titans (@gujarat_titans) April 12, 2026
ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ ಕನ್ನಡಿಗ ಪ್ರಸಿಧ್ ಕೃಷ್ಣ ತಮ್ಮ ನಾಲ್ಕು ಓವರ್‌ಗಳ ಸ್ಪೆಲ್‌ನಲ್ಲಿ 28 ರನ್ ನೀಡಿ 4 ವಿಕೆಟ್ ಸಾಧನೆ ಮಾಡಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇನ್ನು ಅಶೋಕ್ ಶರ್ಮಾ ಅವರು 32 ರನ್ ನೀಡಿ ಎರಡು ವಿಕೆಟ್ ಕಬಳಿಸಿದರು. ಅಂತಿಮವಾಗಿ ಲಖನೌ ಸೂಪರ್ ಜಯಂಟ್ಸ್ ತನ್ನ ಪಾಲಿನ 20 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 164 ರನ್‌ಗಳನ್ನು ಕಲೆ ಹಾಕಿತ್ತು.