ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: ಡೆಲ್ಲಿ ಕ್ಯಾಪಿಟಲ್ಸ್‌ಗೆ ಆಘಾತ, ಮತ್ತಷ್ಟು ಪಂದ್ಯಗಳಿಗೆ ಮಿಚೆಲ್‌ ಸ್ಟಾರ್ಕ್‌ ಅಲಭ್ಯ!

Mitchell Starc: ಆರಂಭಿಕ ಎರಡೂ ಪಂದ್ಯಗಳನ್ನು ಗೆದ್ದು 2026ರ ಸಾಲಿನ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಶುಭಾರಂಭ ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್‌ ಕ್ಯಾಂಪ್‌ಗೆ ಕಹಿ ಸುದ್ದಿ ತಲುಪಿದೆ. ಆಸ್ಟ್ರೇಲಿಯಾದ ಮಾರಕ ವೇಗದ ಬೌಲರ್ ಮಿಚೆಲ್‌ ಸ್ಟಾರ್‌, ಭಾರತಕ್ಕೆ ಆಗಮಿಸುವುದು ಇನ್ನಷ್ಟು ದಿನಗಳು ಬೇಕಾಗಬಹುದು ಎಂದು ವರದಿಯಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್‌ನ ಮತ್ತಷ್ಟು ಪಂದ್ಯಗಳಿಗೆ ಮಿಚೆಲ್‌ ಸ್ಟಾರ್ಕ್‌ ಅಲಭ್ಯ!

ಇನ್ನೂ ಮೂರು ಪಂದ್ಯಗಳಿಗೆ ಮಿಚೆಲ್‌ ಸ್ಟಾರ್ಕ್‌ ಅಲಭ್ಯ? -

Profile
Ramesh Kote Apr 7, 2026 10:27 PM

ನವದೆಹಲಿ: ಸತತ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ ಭರ್ಜರಿ ಆರಂಭವನ್ನು ಪಡೆದಿರುವ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡಕ್ಕೆ ಕಹಿ ಸುದ್ದಿ ಬಂದದೆ. ಡೆಲ್ಲಿ ತಂಡದ ಮಾರಕ ವೇಗಿ ಮಿಚೆಲ್‌ ಸ್ಟಾರ್ಕ್‌ (Mitchell Starc) ಅವರ ಅಲಭ್ಯತೆಯ ಅವಧಿ ಇನ್ನಷ್ಟು ವಿಸ್ತರವಾಗಿದೆ. ಇದರಿಂದಾಗಿ ಅಕ್ಷರ್‌ ಪಟೇಲ್‌ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಅಂದ ಹಾಗೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡ, ತನ್ನ ಆರಂಭಿಕ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಲಖನೌ ಸೂಪರ್‌ ಜಯಂಟ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ವಿರುದ್ಧ ಗೆಲುವು ಪಡೆದಿತ್ತು.

ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ವೇಗದ ಬೌಲಿಂಗ್‌ ವಿಭಾಗದಲ್ಲಿ ಮುಖೇಶ ಕುಮಾರ್‌ ಹಾಗೂ ಟಿ ನಟರಾಜನ್‌ ಪ್ರಮುಖ ವೇಗಿಗಳಾಗಿ ಆಡುತ್ತಿದ್ದಾರೆ. ಟೈಮ್ಸ್‌ ಆಫ್‌ ಇಂಡಿಯಾ ವರದಿ ಪ್ರಕಾರ, ಮಿಚೆಲ್‌ ಸ್ಟಾರ್ಕ್‌ ಅವರು ಇನ್ನೂ ಕನಿಷ್ಠ ಮೂರು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆಂದು ತಿಳಿದುಬಂದಿದೆ. ಆಸೀಸ್‌ ವೇಗಿ ಸದ್ಯ ಭುಜ ಹಾಗೂ ಮೊಣಕೈ ಗಾಯಗಳಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಏಪ್ರಿಲ್‌ 20ರ ನಂತರ ಅವರು ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆಂದು ಹೇಳಲಾಗುತ್ತಿದೆ. ಅಲ್ಲಿಯ ತನಕ ಡೆಲ್ಲಿ, ಏಪ್ರಿಲ್‌ 8 ರಂದು ಗುಜರಾತ್‌ ಟೈಟನ್ಸ್‌, ಏಪ್ರಿಲ್‌ 11 ರಂದು ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಏಪ್ರಿಲ್‌ 18 ರಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿರುದ್ಧ ಕಾದಾಟ ನಡೆಸಲಿವೆ.

IPL 2026: ʻಸಂಯಮದಿಂದ ವರ್ತಿಸಿʼ-ಅಜಿಂಕ್ಯ ರಹಾನೆಗೆ ಪಾಠ ಮಾಡಿದ ವೀರೇಂದ್ರ ಸೆಹ್ವಾಗ್!

ಮುಖೇಶ್‌ ಕುಮಾರ್‌, ಟಿ ನಟರಾಜನ್‌, ಅಕ್ಷರ್‌ ಪಟೇಲ್‌, ಕುಲ್ದೀಪ್‌ ಯಾದವ್‌ ಒಳಗೊಂಡ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಈಗಾಗಲೇ ಉತ್ತಮ ಸಂಯೋಜನೆಯನ್ನು ಹೊಂದಿದೆ. ಇದರ ಜೊತೆಗೆ ಮಿಚೆಲ್‌ ಸ್ಟಾರ್ಕ್‌ ಅವರು ಡೆಲ್ಲಿಗೆ ಮರಳಿದರೆ, ಯಾವುದೇ ಅನುಮಾನವಿಲ್ಲದ ಡಿಸಿ ತಂಡದ ವೇಗದ ಬೌಲಿಂಗ್‌ ಸಂಯೋಜನೆ ಮತ್ತಷ್ಟು ಶಕ್ತಿಯುತವಾಗಲಿದೆ.

ಈ ಹಿಂದೆ ಮಿಚೆಲ್‌ ಸ್ಟಾರ್ಕ್‌ ಅವರು ಐಪಿಎಲ್‌ 2026ರ ಸಾಲಿನ ಟೂರ್ನಿಗೆ ತಡವಾಗಿ ಸೇರಿದ್ದ ಬಗ್ಗೆ ಬಂದ ಟೀಕೆಗಳಿಗೆ ತಿರುಗೇಟು ನೀಡಿದ್ದರು. ಸೀಸನ್ ಆರಂಭದಲ್ಲಿ ತಮ್ಮ ಗೈರುಹಾಜರಿ ಬದ್ಧತೆಯ ಕೊರತೆಯಿಂದಲ್ಲ ಗಾಯ ನಿರ್ವಹಣೆಯ ಕಾರಣದಿಂದಾಗಿಯೇ ಆಗಿದೆ ಎಂದು ಅವರು ಸ್ಪಷ್ಟಪಡಿಸಿದ್ದರು.

IPL 2026: ʻಆರ್‌ಸಿಬಿಗೆ ಮರಳಿದ್ದು ನನ್ನ ಪಾಲಿಗೆ ಟರ್ನಿಂಗ್‌ ಪಾಯಿಂಟ್‌ʼ-ದೇವದತ್‌ ಪಡಿಕ್ಕಲ್‌!

ಟೀಕೆಗಳಿಗೆ ತಿರುಗೇಟು ನೀಡಿದ್ದ ಮಿಚೆಲ್‌ ಸ್ಟಾರ್ಕ್‌

“ಭಾರತೀಯ ಮಾಧ್ಯಮಗಳಲ್ಲಿ ಕೆಲವು ವ್ಯಕ್ತಿಗಳು ವ್ಯಕ್ತಪಡಿಸಿರುವ ಅಭಿಪ್ರಾಯಗಳ ನಡುವೆಯೂ, ನಾನು ಪ್ರಸ್ತುತ ನನ್ನ ಭುಜ ಮತ್ತು ಮೊಣಕೈ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು ಹಾಗೂ ಅವುಗಳನ್ನು ನಿರ್ವಹಿಸುತ್ತಿದ್ದೇನೆ. ಆಸ್ಟ್ರೇಲಿಯಾದ ಬೇಸಿಗೆ ಕಾಲದಲ್ಲಿ ಈ ಗಾಯದ ಗಂಭೀರತೆ ಎಷ್ಟಿದೆ ಎಂಬುದು ನನಗೆ ತಿಳಿದಿರಲಿಲ್ಲ,” ಎಂದು ಹೇಳಿದ್ದರು.

“ಈ ವ್ಯಕ್ತಿಗಳು ಐಪಿಎಲ್‌ ಟೂರ್ನಿಯಲ್ಲಿ ಭಾಗವಹಿಸುವಿಕೆ ಕುರಿತು ತೀವ್ರ ಹೇಳಿಕೆಗಳನ್ನು ನೀಡಿದ್ದಾರೆ ಮತ್ತು ಆಟಗಾರರ ಬಗ್ಗೆ ತಪ್ಪುಮಾಹಿತಿಯ ಆಧಾರದ ಮೇಲೆ ಅಭಿಪ್ರಾಯಗಳನ್ನು ನೀಡಿದ್ದು, ಅವನ್ನು ನಿಜಾಂಶಗಳಂತೆ ಪ್ರಚಾರ ಮಾಡಿದ್ದಾರೆ. ನನ್ನ ದೇಹದ ಬಗ್ಗೆ ನನಗಿಂತ ಹೆಚ್ಚು ಅವರಿಗೇ ತಿಳಿದಿರುವಂತೆ ಹೇಳಿಕೊಳ್ಳುತ್ತಿದ್ದಾರೆ,” ಎಂದು ಮಿಚೆಲ್‌ ಸ್ಟಾರ್ಕ್‌ ಟೀಕಿಸಿದ್ದರು.