ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: ʻಮುಂಬೈ ಇಂಡಿಯನ್ಸ್‌ ಸತತ ವೈಫಲ್ಯಕ್ಕೆ ನೀವೇ ಕಾರಣʼ-ಹಾರ್ದಿಕ್‌ ಪಾಂಡ್ಯಗೆ ಜಾಡಿಸಿದ ಅಶ್ವಿನ್‌!

IPL 2026: ಹಾರ್ದಿಕ್‌ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್‌ ತಂಡ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸತತ ವೈಫಲ್ಯ ಅನುಭವಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ ಹಾರ್ದಿಕ್‌ ಪಾಂಡ್ಯ ಕಾರಣ ಎಂದು ಸ್ಪಿನ್‌ ದಿಗ್ಗಜ ಆರ್‌ ಅಶ್ವಿನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‌ʻಮುಂಬೈ ಇಂಡಿಯನ್ಸ್‌ ವೈಫಲ್ಯಕ್ಕೆ ಹಾರ್ದಿಕ್‌ ಕಾರಣʼ: ಅಶ್ವಿನ್‌ ಕಿಡಿ!

ಹಾರ್ದಿಕ್‌ ಪಾಂಡ್ಯ ವಿರುದ್ಧ ಅಶ್ವಿನ್‌ ಕಿಡಿ. -

Profile
Ramesh Kote Apr 24, 2026 6:14 PM

ಮುಂಬೈ: ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ವಿರುದ್ಧ ಮುಂಬೈ ಇಂಡಿಯನ್ಸ್‌ (MI) ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೆ ಭಾರತೀಯ ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ (R Ashwin), ನಾಯಕ ಹಾರ್ದಿಕ್‌ ಪಾಂಡ್ಯ (Hardik Pandya) ಅವರ ನಾಯಕತ್ವದ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಸಿಎಸ್‌ಕೆ ಎದುರು ಅವರ ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡ ನಿರ್ಧಾರವನ್ನು ಸಿಎಸ್‌ಕೆ ಮಾಜಿ ಸ್ಪಿನ್ನರ್‌ ವಿರೋಧಿಸಿದ್ದಾರೆ. ಆರ್‌ಸಿಬಿ ವಿರುದ್ಧ ಮಾಡಿದ್ದ ತಪ್ಪನ್ನು ತಿದ್ದಿಕೊಳ್ಳುವಲ್ಲಿ ಅವರು ಮತ್ತೊಮ್ಮೆ ವಿಫಲರಾಗಿದ್ದಾರೆಂದು ಅವರು ದೂರಿದ್ದಾರೆ.

ಮುಂಬೈ ಇಂಡಿಯನ್ಸ್‌ ತಂಡ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಇಲ್ಲಿಯವರೆಗೂ ಆಡಿದ 7 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ ಎರಡು ಪಂದ್ಯಗಳನ್ನು ಮಾತ್ರ. ಹಾರ್ದಿಕ್‌ ಪಾಂಡ್ಯ ಬ್ಯಾಟ್ಸ್‌ಮನ್‌ ಹಾಗೂ ಬೌಲರ್‌ ಆಗಿ ಮಾತ್ರವಲ್ಲದೆ ನಾಯಕತ್ವದಲ್ಲಿಯೂ ವಿಫಲರಾಗುತ್ತಿದ್ದಾರೆ. ಇದರಿಂದಾಗಿ ಅವರು ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಆರ್‌ಸಿಬಿ ಎದುರು ಟಾಸ್‌ ವಿಚಾರದಲ್ಲಿ ಮಾಡಿದ್ದ ತಪ್ಪನ್ನು ಮತ್ತೊಮ್ಮೆ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಮಾಡಿದ್ದಾರೆಂದು ಅಶ್ವಿನ್‌ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಪೋಡ್‌ ಮಾಡಿರುವ ವಿಡಿಯೊದಲ್ಲಿ ಹೇಳಿದ್ದಾರೆ.

CSK vs MI: ಸಂಜು ಸ್ಯಾಮ್ಸನ್‌ ಶತಕದ ಬಲದಿಂದ ಮುಂಬೈಗೆ ಸೋಲಿನ ಬರೆ ಎಳೆದ ಚೆನ್ನೈ ಸೂಪರ್‌ ಕಿಂಗ್ಸ್!

"ನಾನು ಸ್ವಲ್ಪ ನಿರಾಶನಾಗಿದ್ದೇನೆ. ಈ ಟೂರ್ನಿಯಲ್ಲಿ ಹಾರ್ದಿಕ್‌ ಪಾಂಡ್ಯ ಟಾಸ್‌ ಗೆದ್ದು, ಎದುರಾಳಿ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸುವ ಮೂಲಕ ಅದರ ಲಾಭವನ್ನು ಬೇರೆ ತಂಡಕ್ಕೆ ನೀಡುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ಆಡಿದ್ದ ಮೊದಲ ಪಂದ್ಯ ನಿಮಗೆ ನೆನಪಿದೆಯೇ? ಅದೇ ರೀತಿಯಲ್ಲಿ ಅವರು ಆರ್‌ಸಿಬಿ ವಿರುದ್ಧ ಸೋತಿದ್ದರು. ಆ ಪಂದ್ಯದಲ್ಲಿ ಆರ್‌ಸಿಬಿ ಮೊದಲು ಬ್ಯಾಟ್‌ ಮಾಡಿತ್ತು. ಅದೇ ರೀತಿ ಇಂದು (ಗುರುವಾರ) ಸಿಎಸ್‌ಕೆ ಮಾಡಲು ಸಾಧ್ಯವಾಗದದ್ದನ್ನು ಸಾಧಿಸಿತು. ಇದಕ್ಕೆ ಕಾರಣ ಬ್ಯಾಟಿಂಗ್ ಡೆಪ್ತ್‌ನಲ್ಲಿನ ವ್ಯತ್ಯಾಸ,” ಎಂದು ಅಶ್ವಿನ್ ಹೇಳಿದ್ದಾರೆ.

"ಆರ್‌ಸಿಬಿ ತಂಡದ ಕೆಳ ಮಧ್ಯಮ ಕ್ರಮಾಂಕದಲ್ಲಿ ಹಿಟ್ಟರ್‌ಗಳಿದ್ದಾರೆ, ಈ ಕಾರಣದಿಂದಲೇ ಅವರು ಅಂದು ದೊಡ್ಡ ಮೊತ್ತವನ್ನು ಕಲೆ ಹಾಕಿದ್ದರು. ಆದರೆ, ಸಿಎಸ್‌ಕೆ ತಂಡದಲ್ಲಿ ಅದೇ ರೀತಿಯ ಬ್ಯಾಟಿಂಗ್‌ ಡೆಪ್ತ್‌ ಇಲ್ಲ ಹಾಗೂ ಗುರುವಾರ ಮುಂಬೈ ಬೌಲರ್‌ಗಳು ಸ್ವಲ್ಪ ಉತ್ತಮವಾಗಿ ಕಂಡು ಬಂದಿದ್ದಾರೆ; ಅಲ್ಹಾ ಘಜನ್‌ಫರ್‌ ಹಾಗೂ ಅಶ್ವಿನಿ ಕುಮಾರ್‌ ಅತ್ಯುತ್ತಮ ಪ್ರದರ್ಶನವನ್ನು ತೋರಿದ್ದಾರೆ ಹಾಗೂ ಜಸ್‌ಪ್ರೀತ್‌ ಬುಮ್ರಾ ಅವರನ್ನು ನಾವು ಮರೆಯುವಂತಿಲ್ಲ. ಈ ಕಾರಣದಿಂದಲೇ 207 ರನ್‌ಗಳನ್ನು ನೀಡಲಾಗಿತ್ತು ಆದರೆ, ಈಗಲೂ ಮುಂಬೈ ಈ ಗುರಿಯನ್ನು ತಲುಪಲಿಲ್ಲ," ಎಂದು ಸ್ಪಿನ್‌ ದಿಗ್ಗಜ ಕಳವಳ ವ್ಯಕ್ತಪಡಿಸಿದ್ದಾರೆ.

IPL 2026: ಆಯುಷ್‌ ಮ್ಹಾತ್ರೆ ಸ್ಥಾನಕ್ಕೆ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಸೇರಿದ ಆಕಾಶ ಮಧ್ವಾಲ್‌!

ಹಾರ್ದಿಕ್‌ ಪಾಂಡ್ಯ ಅವರಿಂದ ತಂತ್ರಗಾರಿಕೆಯ ಕೊರತೆ

ಆರ್‌ಸಿಬಿ ಪಂದ್ಯದ ರೀತಿ ಸಿಎಸ್‌ಕೆ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿದ್ದು, ಮುಂಬೈ ಇಂಡಿಯನ್ಸ್‌ ತಂಡದ ತಂತ್ರಗಾರಿಕೆಯಲ್ಲಿನ ಪ್ರಮಾದ ಎಂದು ಅಶ್ವಿನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಆ ಪಂದ್ಯಕ್ಕೂ ಈ ಪಂದ್ಯಕ್ಕೂ ಪಿಚ್ ಸಂಪೂರ್ಣವಾಗಿ ಒಂದೇ ರೀತಿಯದ್ದಾಗಿತ್ತು. ಆದರೂ ಮುಂಬೈ ಇಂಡಿಯನ್ಸ್ ಯಾವುದೇ ಲಯವನ್ನು ಕಂಡುಕೊಳ್ಳಲು ವಿಫಲವಾಯಿತು; ಎರಡನೇ ಇನಿಂಗ್ಸ್‌ನಲ್ಲಿ ಪಿಚ್ ಇನ್ನಷ್ಟು ನಿಧಾನಗತಿ ಹಾಗೂ ಅಂಟಿಕೊಳ್ಳುವಂತೆಯೂ ವರ್ತಿಸುತ್ತಿತ್ತು. ಪರಿಸ್ಥಿತಿಗಳಿಂದ ಪಾಠ ಕಲಿತರೆ, ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡುವ ಮೂಲಕ ನೀವು ಸಿಎಸ್‌ಕೆ ಲೈನ್‌ಅಪ್‌ಗೆ ಲಾಭವನ್ನು ಹಿಂದಿರುಗಿಸಿದ್ದೀರಿ ಎಂಬುದು ಗೊತ್ತಾಗುತ್ತದೆ. ನಾನು ಹೇಳಿದಂತೆ, ಎಸ್‌ಆರ್‌ಎಚ್ ಅಥವಾ ಸಿಎಸ್‌ಕೆ ವಿರುದ್ಧ ಟಾಸ್ ಗೆದ್ದಾಗ ಡ್ಯೂ ಇಲ್ಲದಿದ್ದರೆ, ಅವರನ್ನು ದ್ವಿತೀಯ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಆಹ್ವಾನಿಸಬೇಕು," ಎಂದು ಅಶ್ವಿನ್‌ ಸಲಹೆ ನೀಡಿದ್ದಾರೆ.

CSK vs MI: ಮುಖೇಶ್‌ ಚೌಧರಿಯ ದಿವಂಗತ ತಾಯಿಗೆ ವಿಶೇಷ ಗೌರವ ಸಲ್ಲಿಸಿದ ಸಿಎಸ್‌ಕೆ!

"ನೋಡಿ, ನನಗೂ ಹಾಗೂ ಹಾರ್ದಿಕ್‌ ನಡುವೆ ಯಾವುದೇ ರೀತಿಯ ವೈಯಕ್ತಿಕ ಸಂಬಂಧವಿಲ್ಲ ಆದರೆ ನಾನು ಅವರನ್ನು ಯಾವಾಗಲೂ ಬಾಕ್ಸ್‌ ಆಫೀಸ್‌ ಆಟಗಾರನ ರೀತಿ ನೋಡುತ್ತೇನೆ. ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ ಅವರ ಪ್ರಮಾದವನ್ನು ಗುರುತಿಸಬಹುದು. ಅವರು ಡೆತ್‌ ಓವರ್‌ಗಳಲ್ಲಿ ಬೌಲ್‌ ಮಾಡುವ ಬದಲು ಯುವ ವೇಗಿ ಕ್ರಿಷ್‌ ಭಗತ್‌ಗೆ ಬೌಲಿಂಗ್‌ ಕೊಟ್ಟಿದ್ದರು. ಅಂದ ಹಾಗೆ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಹೆನ್ರಿಕ್‌ ಕ್ಲಾಸೆನ್‌ ಹಾಗೂ ಡೇವಿಡ್‌ ಮಿಲ್ಲರ್‌ಗೆ ಬೌಲ್‌ ಮಾಡಿದ್ದರು. ಕ್ರಿಷ್‌ ಭಗತ್‌ ಅವರಲ್ಲಿ ಅನುಭವದ ಕೊರತೆ ಇದೆ. ಯುವ ವೇಗಿಯನ್ನು ನಾನು ಇಷ್ಟಪಡುತ್ತೇನೆ, ಅವರು ಯೋಗ್ಯ ಪ್ರದರ್ಶನವನ್ನು ತೋರಿದ್ದಾರೆ. ಆದರೆ, ನಾಯಕನಾಗಿ ನೀವು ಒತ್ತಡವನ್ನು ನಿಮ್ಮ ಹೆಗಲೇರಿಸಿಕೊಳ್ಳಬೇಕು. ಇದರಲ್ಲಿ ಕೆಟ್ಟ ಸಂಗತಿ ಏನೆಂದರೆ ನೀವು ರನ್‌ಗಳನ್ನು ನೀಡಬಹುದಷ್ಟೆ," ಎಂದು ಅಶ್ವಿನ್‌ ತಿಳಿಸಿದ್ದಾರೆ.