IPL 2026: ಮುಂಬೈ ಇಂಡಿಯನ್ಸ್‌ಗೆ ನೂತನ ನಾಯಕನನ್ನು ಸೂಚಿಸಿದ ಸಂಜಯ್ ಮಾಂಜ್ರೇಕರ್!
2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಸತತ ವೈಫಲ್ಯ ಅನುಭವಿಸುವ ಮೂಲಕ ಪ್ಲೇಆಫ್ಸ್ ರೇಸ್‌ನಿಂದ ಹೊರಬಿದ್ದಿದೆ. ಈ ಹಿನ್ನೆಲೆಯಲಿ ಮುಂಬೈ ತಂಡದ ನಾಯಕತ್ವವನ್ನು ಜಸ್‌ಪ್ರೀತ್ ಬುಮ್ರಾಗೆ ನೀಡಬೇಕೆಂದು ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ ಸಲಹೆ ನೀಡಿದ್ದಾರೆ.
ಜಸ್‌ಪ್ರೀತ್ ಬುಮ್ರಾಗೆ ಮುಂಬೈ ಇಂಡಿಯನ್ಸ್ ನಾಯಕತ್ವ ನೀಡಬೇಕೆಂದ ಮಾಂಜ್ರೇಕರ್. -
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2026ರ (IPL 2026) ಸಾಲಿನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕಳಪೆ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗ ಸಂಜಯ್ ಮಾಂಜೇಕರ್ (Sanjay Manjrekar) ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮುಂಬೈಗೆ ನೂತನ ನಾಯಕನನ್ನು ಸೂಚಿಸುವ ಮೂಲಕ ಹಾರ್ದಿಕ್ ಪಾಂಡ್ಯ (Hardik Pandya0 ಅವರನ್ನು ನಾಯಕತ್ವದಿಂದ ಕೈ ಬಿಡಬೇಕೆಂದು ಆಗ್ರಹಿಸಿದ್ದಾರೆ. ಈ ಸೀಸನ್‌ನಲ್ಲಿ ಆಡಿದ 11 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡ 8 ರಲ್ಲಿ ಸೋಲು ಅನುಭವಿಸಿದೆ. ಆ ಮೂಲಕ ಪ್ಲೇಆಫ್ಸ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಹಾಗಾಗಿ ಮಾಂಜ್ರೇಕರ್ ಅವರು ಐದು ಬಾರಿ ಚಾಂಪಿಯನ್ಸ್ ತಂಡಕ್ಕೆ ನೂತನ ನಾಯಕನನ್ನಾಗಿ ಜಸ್‌ಪ್ರೀತ್ ಬುಮ್ರಾ ಅವರನ್ನು ಆಯ್ಕೆ ಮಾಡಿದ್ದಾರೆ.
ಕಳೆದ ಆವೃತ್ತಿಯಲ್ಲಿ ಪ್ಲೇಆಫ್ಸ್‌ಗೆ ಅರ್ಹತೆ ಪಡೆದಿದ್ದ ಮುಂಬೈ ಇಂಡಿಯನ್ಸ್ ತಂಡ, ಈ ಬಾರಿ ಗೆದ್ದಿರುವುದು ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ. ಹಾಗಾಗಿ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವ ಪರಿಶೀಲನೆಯಲ್ಲಿದೆ. ಹಾಗಾಗಿ ಮುಂದಿನ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಜಸ್‌ಪ್ರೀತ್ ಬುಮ್ರಾ ನಾಯಕನಾಗುವ ಮೂಲಕ ಹಾರ್ದಿಕ್ ಪಾಂಡ್ಯ ಅವರ ಸ್ಥಾನವನ್ನು ತುಂಬಬೇಕೆಂದು ಸಲಹೆ ನೀಡಿದ್ದಾರೆ.
IPL 2026: ಕ್ಯಾಮೆರಾಗಳ ಮುಂದೆ ವಿರಾಟ್ ಕೊಹ್ಲಿ ನಟನೆ? ಸಂಜಯ್ ಮಾಂಜ್ರೇಕರ್ ಅಚ್ಚರಿ ಹೇಳಿಕೆ!
ಸ್ಟಾರ್ ಸ್ಪೋರ್ಟ್ಸ್ ಜೊತೆ ಸಂಭಾಷಣೆಯಲ್ಲಿ ಮಾತನಾಡಿದ ಎಸ್ ಬದ್ರಿನಾಥ್, "ನಾನು ಜಸ್‌ಪ್ರೀತ್ ಬುಮ್ರಾ ಅವರನ್ನು ಭಾರತ ತಂಡದ ನಾಯಕನಾಗಿ ನೋಡಲು ಇಷ್ಟಪಡುತ್ತೇನೆ. ಏಕೆಂದರೆ, ಅವರಷ್ಟು ಆಟವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವವರು ಇನ್ನಾರೂ ಇಲ್ಲವೆಂದು ನಾನು ಭಾವಿಸುತ್ತೇನೆ. ಅವರು ಬೌಲಿಂಗ್‌ನಲ್ಲಿ ಮಾಡುವದ್ದು ಕೇವಲ ಆಕ್ಷನ್‌ಗೆ ಸೀಮಿತವಲ್ಲ; ಎದುರಾಳಿ ಬ್ಯಾಟರ್‌ನ್ನು ಅಂದಾಜಿಸುವುದು, ಪಂದ್ಯದ ಪರಿಸ್ಥಿತಿಯನ್ನು ತಿಳಿದುಕೊಳ್ಳುವುದು ಮತ್ತು ಪಿಚ್‌ಗಳನ್ನು ಅರ್ಥಮಾಡಿಕೊಳ್ಳುವುದು ಕೂಡ ಅದರಲ್ಲಿ ಸೇರಿದೆ," ಎಂದು ಹೇಳಿದ್ದಾರೆ.
"ಇಂಗ್ಲೆಂಡ್ ಪ್ರವಾಸದಲ್ಲಿ ಅವರು ನಾಯಕತ್ವದ ಬಗ್ಗೆ ಆಸಕ್ತಿ ತೋರಿಸದಿರುವುದು ನನಗೆ ಸ್ವಲ್ಪ ನಿರಾಶೆ ತಂದಿದೆ. ಶುಭಮನ್ ಗಿಲ್ ನಾಯಕನಾಗಿದ್ದಾಗಲೂ ಬುಮ್ರಾ ನಾಯಕತ್ವ ವಹಿಸಲಿಲ್ಲ. ಆದರೆ ಕನಿಷ್ಠ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಾದರೂ ಅವರಿಗೆ ನಾಯಕತ್ವದ ಅವಕಾಶ ಸಿಗಬೇಕೆಂದು ನಾನು ಆಶಿಸುತ್ತೇನೆ,” ಎಂದು ಅವರು ಸಲಹೆ ನೀಡಿದ್ದಾರೆ.
ಟೂರ್ನಿಯಿಂದ ಹೊರಬಿದ್ದ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ಅನ್ ಫಾಲೋ ಮಾಡಿದ ಹಾರ್ದಿಕ್ ಪಾಂಡ್ಯ!
ಸಂಜಯ್ ಮಾಂಜ್ರೇಕರ್ ಅವರು ಮುಂದುವರಿದು ಮಾತನಾಡುತ್ತಾ, ಮುಂಬೈ ಇಂಡಿಯನ್ಸ್ ತಂಡ ಹಾರ್ದಿಕ್ ಪಾಂಡ್ಯ ಅವರನ್ನು ಗುಜರಾತ್ ಟೈಟನ್ಸ್ ತಂಡದಿಂದ ಕರೆತಂದಾಗ, ಅವರ ಜೊತೆಗೆ ಆಶಿಸ್ ನೆಹ್ರಾ ಅವರನ್ನೂ ತರಲು ಪ್ರಯತ್ನಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಹಾರ್ದಿಕ್ ಮತ್ತು ನೆಹ್ರಾ ಜೋಡಿ ಗುಜರಾತ್ ಟೈಟನ್ಸ್‌ನಲ್ಲಿ ಅಪಾರ ಯಶಸ್ಸು ಕಂಡಿದ್ದು, ತಂಡಕ್ಕೆ ಐಪಿಎಲ್ ಪ್ರಶಸ್ತಿಯನ್ನೂ ಗೆದ್ದುಕೊಟ್ಟಿದ್ದರು.
“ನಾನು ಸೂಚಿಸಲು ಪ್ರಯತ್ನಿಸಿರುವುದನ್ನು ನೀವು ಸರಿಯಾಗಿ ಗಮನಿಸಿದ್ದೀರಿ. ಏಕೆಂದರೆ ಮುಂಬೈ ಇಂಡಿಯನ್ಸ್ ಹಾರ್ದಿಕ್ ಪಾಂಡ್ಯ ಅವರನ್ನು ಮೀರಿ ಯೋಚಿಸಬೇಕಾದ ಪರಿಸ್ಥಿತಿ ಬರಬಹುದು ಎಂದು ನನಗೆ ಅನಿಸುತ್ತದೆ. ಆ ನಿರ್ಧಾರ ನಿರೀಕ್ಷಿತ ಫಲಿತಾಂಶ ನೀಡಿಲ್ಲ. ಇದು ಹಾರ್ದಿಕ್‌ಗೂ ನ್ಯಾಯವಾಗಿಲ್ಲ. ಇದು ಒಂದು ಪ್ಯಾಕೇಜ್ ಡೀಲ್‌ನಂತಿತ್ತು. ಹಾರ್ದಿಕ್ ಮುಂಬೈಗೆ ಬರಬೇಕಾದರೆ, ಅವರ ಜೊತೆಗೆ ಆಶಿಷ್ ನೆಹ್ರಾವನ್ನೂ ತರಬೇಕಾಗಿತ್ತು. ಆದರೆ ಆಶಿಷ್ ಅವರ ಜೊತೆ ಇಲ್ಲ,” ಎಂದು ಸಂಜಯ್ ಮಾಂಜ್ರೇಕರ್ ತಿಳಿಸಿದ್ದಾರೆ.