IPL 2026: ಹೈದರಾಬಾದ್‌ನಿಂದ ಲಖನೌ ಸೂಪರ್ ಜಯಂಟ್ಸ್‌ಗೆ ಮೊಹಮ್ಮದ್ ಶಮಿ ಟ್ರೇಡ್ ಡೀಲ್?
ಸನ್‌ರೈಸರ್ಸ್ ಹೈದರಾಬಾದ್ ತಂಡ ಮೊಹಮ್ಮದ್ ಶಮಿಯನ್ನು ಬಿಡುಗಡೆ ಮಾಡುತ್ತಿದೆ. ಈ ಬಗ್ಗೆ ಊಹಾಪೋಹಗಳು ಕೇಳಿಬರುತ್ತಿವೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಂಚೂಣಿಯಲ್ಲಿದ್ದವು, ಆದರೆ ಇದೀಗ ಲಖನೌ ಫ್ರಾಂಚೈಸಿ ತಂಡದ ಜೊತೆ ಶಮಿಯನ್ನು ಟ್ರೇಡ್ ಡೀಲ್ ಮಾಡಿಕೊಳ್ಳಲು ಎಸ್‌ಆರ್‌ಎಚ್ ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.
ಲಖನೌ ಸೂಪರ್ ಜಯಂಟ್ಸ್‌ಗೆ ಮೊಹಮ್ಮದ್ ಶಮಿ ಸೇರ್ಪಡೆಯಾಗುವ ಸಾಧ್ಯತೆ ಇದೆ. -
ನವದೆಹಲಿ: ಮೊಹಮ್ಮದ್ ಶಮಿ (Mohammed shami) ಭಾರತ ಕ್ರಿಕೆಟ್ ತಂಡಕ್ಕೆ ಸದ್ಯಕ್ಕೆ ಮರಳುವ ಸಾಧ್ಯತೆ ಇಲ್ಲ. ಆದರೆ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡವನ್ನು ತೊರೆಯುವುದು ಬಹುತೇಕ ಖಚಿತವಾಗಿದೆ. ಕಾವ್ಯ ಮಾರನ್ ಮಾಲೀಕತ್ವದ ಸನ್‌ರೈಸರ್ಸ್ ಹೈದರಾಬಾದ್, ವೇಗದ ಬೌಲರ್ ಅನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ ಎಂಬ ವದಂತಿಗಳು ಇವೆ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಖನೌ ಸೂಪರ್ ಜಯಂಟ್ಸ್ ನಡುವೆ ಶಮಿಗಾಗಿ ಪೈಪೋಟಿ ನಡೆಯುತ್ತಿದೆ ಎಂಬ ವರದಿಗಳು ಕೂಡ ತೇಲಾಡುತ್ತಿವೆ. ಆದರೆ, ಇದೀಗ ಟ್ರೇಡ್ ಡೀಲ್ ಸಂಬಂಧ ಹೊಸ ಮಾಹಿತಿಯೊಂದು ಹೊರ ಬಿದ್ದಿದೆ.
ಲಖನೌ ಸೂಪರ್ ಜಯಂಟ್ಸ್ ತಂಡ, ಮೊಹಮ್ಮದ್ ಶಮಿ ಸೇರ್ಪಡೆಯ ಘೋಷಣೆಯನ್ನು ತನ್ನದೇ ಆದ ಶೈಲಿಯಲ್ಲಿ ತಿಳಿಸಿದೆ. ಎಲ್‌ಎಸ್‌ಜಿ ಅಥವಾ ಎಸ್‌ಆರ್‌ಎಚ್ ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲವಾದರೂ, ಒಪ್ಪಂದವನ್ನು ಅಂತಿಮವೆಂದು ಪರಿಗಣಿಸಲಾಗುತ್ತಿದೆ. ಮೊಹಮ್ಮದ್ ಶಮಿ ಅವರನ್ನು ಲಖನೌ ಸೂಪರ್ ಜಯಂಟ್ಸ್ ತಂಡಕ್ಕೆ ನೀಡಲು ಸನ್‌ರೈಸರ್ಸ್ ಹೈದರಾಬಾದ್ ತಂಡ ಕೂಡ ಒಪ್ಪಿಗೆ ನೀಡಿದೆ ಎಂದು ಕೂಡ ವರದಿಯಾಗಿದೆ. ಆದರೆ, ಹಣವನ್ನು ನೀಡುವ ಮೂಲಕ ಟ್ರೇಡ್ ಡೀಲ್ ಮಾಡಿಕೊಳ್ಳಲು ಈ ಎರಡೂ ಫಾಂಚೈಸಿಗಳು ಒಪ್ಪಿಕೊಂಡಿವೆ ಎಂದು ಹೇಳಲಾಗುತ್ತಿದೆ.
ಕಳೆದ ಐಪಿಎಲ್ ಮೆಗಾ ಹರಾಜಿನಲ್ಲಿ ಮೊಹಮ್ಮದ್ ಶಮಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡ 10 ಕೋಟಿ ರು. ಗಳನ್ನು ನೀಡಿತ್ತು. ಆದರೆ, ಎಸ್‌ಆರ್‌ಎಚ್ ಇಟ್ಟಿದ್ದ ನಿರೀಕ್ಷೆಯನ್ನು ಮೊಹಮ್ಮದ್ ಶಮಿ ಮಣ್ಣ ಪಾಲು ಮಾಡಿದ್ದರು. ಈ ಕಾರಣದಿಂದಲೇ ಹೈದರಾಬಾದ್ ಫ್ರಾಂಚೈಸಿ, ಶಮಿಯನ್ನು ಬಿಟ್ಟುಕೊಡಲು ಎದುರು ನೋಡುತ್ತಿದೆ. ಇದರ ನಡುವೆ ಬೇರೆ ತಂಡಗಳು ಟ್ರೇಡ್ ಡೀಲ್ ಮಾಡಿಕೊಳ್ಳಲು ಕಾಯುತ್ತಿವೆ.
IPL 2026: ಕೆಕೆಆರ್ ಬೌಲಿಂಗ್ ಕೋಚ್ ಆಗಿ ಟಿಮ್ ಸೌಥಿ ನೇಮಕ
ಲಖನೌ ಸೂಪರ್ ಜಯಂಟ್ಸ್‌ಗೆ ಮೊಹಮ್ಮದ್ ಶಮಿ
ಮೊಹಮ್ಮದ್ ಶಮಿ ಸುತ್ತ ಸುತ್ತುವರಿದಿರುವ ಎಲ್ಲಾ ಗದ್ದಲದ ನಡುವೆ ಲಖನೌ ಸೂಪರ್ ಜಯಂಟ್ಸ್ ಸಾಮಾಜಿಕ ಮಾಧ್ಯಮದಲ್ಲಿ ಒಂದು ಸಂದೇಶವನ್ನು ಪೋಸ್ಟ್ ಮಾಡಿದೆ, ಅದು ವ್ಯಾಪಾರ ಒಪ್ಪಂದದಲ್ಲಿ ಅವರು ಎಲ್ಲರನ್ನೂ ಹಿಂದಿಕ್ಕಿದ್ದಾರೆ ಎಂದು ಸೂಚಿಸುತ್ತದೆ. ಶಮಿ ಉತ್ತರ ಪ್ರದೇಶದ ಅಮ್ರೋಹಾ ಮೂಲದವರು, ಲಖನೌ ಸೂಪರ್ ಜಯಂಟ್ಸ್ ಅನ್ನು ಮೂಲತಃ ತಮ್ಮ ತವರು ರಾಜ್ಯದ ತಂಡವನ್ನಾಗಿ ಮಾಡಿಕೊಂಡಿದ್ದಾರೆ. ಶಮಿ, ಬೆನ್ ಸ್ಟೋಕ್ಸ್ ಅವರನ್ನು ಬೌಲಿಂಗ್ ಮಾಡಿದ ಐಕಾನಿಕ್ ಫೋಟೋವನ್ನು ಒಳಗೊಂಡ ಪೋಸ್ಟ್ ಅನ್ನು ಎಲ್‌ಎಸ್‌ಜಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಅಪ್‌ಲೋಡ್ ಮಾಡಿದೆ.
Just thinking about this Ekana moment for no reason 🤭 pic.twitter.com/qxn8XNl2Ei
— Lucknow Super Giants (@LucknowIPL) November 14, 2025
ಈ ಫೋಟೋ 2023ರ ಏಕದಿನ ವಿಶ್ವಕಪ್‌ನ ಗುಂಪು ಹಂತದಲ್ಲಿ ಭಾರತ-ಇಂಗ್ಲೆಂಡ್ ಪಂದ್ಯದದ್ದಾಗಿದೆ. ಈ ಪಂದ್ಯವು ಎಲ್‌ಎಸ್‌ಜಿಯ ತವರು ಅಂಗಣ ಲಖನೌದ ಏಕಾನಾ ಗ್ರೌಂಡ್‌ನಲ್ಲಿ ನಡೆಯಿತು. ಪೋಸ್ಟ್‌ನಲ್ಲಿ ಅಪ್‌ಲೋಡ್ ಮಾಡಲಾದ ಫೋಟೋದಲ್ಲಿ ಶಮಿ ಕಾಣಿಸುವುದಿಲ್ಲ, ಆದರೆ ಶೀರ್ಷಿಕೆಯು ಶಮಿ ಮುಂದಿನ ಋತುವಿನಲ್ಲಿ ಲಖನೌ ಪರ ಆಡಲಿದ್ದಾರೆ ಎಂದು ದೃಢಪಡಿಸುತ್ತದೆ. ಶೀರ್ಷಿಕೆಯಲ್ಲಿ, "ಸ್ಪಷ್ಟ ಕಾರಣವಿಲ್ಲದೆ ಈ ಏಕಾನಾ ಕ್ಷಣದ ಬಗ್ಗೆ ಯೋಚಿಸುತ್ತಿದ್ದೇವೆ." ಬರೆಯಲಾಗಿದೆ.
IPL 2026: ʻಈ ಆಟಗಾರನಿಗೋಸ್ಕರ ಎಸ್‌ಆರ್‌ಎಚ್ ಬಳಿ ಪರಿಪರಿಯಾಗಿ ಬೇಡಿಕೊಂಡಿದ್ದೆʼ-ಡೇಲ್ ಸ್ಟೇನ್!
100 ಐಪಿಎಲ್ ವಿಕೆಟ್ ಕಿತ್ತಿರುವ ಶಮಿ
ಮೊಹಮ್ಮದ್ ಶಮಿ 2013ರಲ್ಲಿ ಇಂಡಿಯನ್ ಪೀಮಿಯರ್ ಲೀಗ್ ವೃತ್ತಿ ಜೀವನಕ್ಕೆ ಪದಾರ್ಪಣೆ ಮಾಡಿದ್ದರು. ಅಂದಿನಿಂದ, ಅವರು ವಿವಿಧ ತಂಡಗಳ ಪರ 119 ಪಂದ್ಯಗಳನ್ನು ಆಡಿದ್ದಾರೆ ಹಾಗೂ 133 ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ, 2025ರ ಐಪಿಎಲ್ ಟೂರ್ನಿಯಲ್ಲಿ ಶಮಿ ಅವರ ಪ್ರದರ್ಶನ ಅತ್ಯಂತ ಕಳಪೆಯಾಗಿತ್ತು. ಅವರು 9 ಪಂದ್ಯಗಳನ್ನು ಆಡಿ 11.23ರ ದುಬಾರಿ ಎಕಾನಮಿ ದರದೊಂದಿಗೆ ಕೇವಲ 6 ವಿಕೆಟ್‌ಗಳನ್ನು ಪಡೆದಿದ್ದರು.