IND vs ENG: ಅರ್ಧಶತಕ ಬಾರಿಸಿದ ಬಳಿಕ ಸರ್ಫರಾಝ್ ಖಾನ್ ದಾಖಲೆ ಮುರಿದ ಜೇಮಿ ಸ್ಮಿತ್!
ಭಾರತ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದ ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಜೇಮಿ ಸ್ಮಿತ್ ಟೆಸ್ಟ್ ಕ್ರಿಕೆಟ್‌ನಲ್ಲಿ 1000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ದೀರ್ಘಾವಧಿ ಸ್ವರೂಪದಲ್ಲಿ ವೇಗವಾಗಿ 1000 ರನ್ ಗಳಿಸಿದ ಮೊದಲ ವಿಕೆಟ್ ಕೀಪರ್ ಎಂಬ ದಾಖಲೆಯನ್ನು ಬರೆದಿದ್ದಾರೆ.

1000 ಟೆಸ್ಟ್ ರನ್‌ಗಳನ್ನು ಪೂರ್ಣಗೊಳಿಸಿದ ಜೇಮಿ ಸ್ಮಿತ್.

ಲಂಡನ್: ಪ್ರಸ್ತುತ ಭಾರತದ ವಿರುದ್ಧ ನಡೆಯುತ್ತಿರುವ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ (IND vs ENG) ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಜೇಮಿ ಸ್ಮಿತ್ (Jamie Smith) ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರುತ್ತಿದ್ದಾರೆ. ಈ ಸರಣಿಯಲ್ಲಿ ಅವರು ಈಗಾಗಲೇ 400ಕ್ಕೂ ಅಧಿಕ ರನ್‌ಗಳನ್ನು ದಾಖಲಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ ಎರಡು ಅರ್ಧಶತಕಗಳನ್ನು ಬಾರಿಸಿದ್ದಾರೆ. ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿಯೂ ಅವರು ತಮ್ಮ ಬ್ಯಾಟಿಂಗ್ ಮೂಲಕ ಪ್ರಭಾವ ಬೀರಿದ್ದಾರೆ. ಅವರು ಪ್ರಥಮ ಇನಿಂಗ್ಸ್‌ನಲ್ಲಿ ಅರ್ಧಶತಕವನ್ನು ಬಾರಿಸಿದ್ದಾರೆ.
ಪಂದ್ಯದ ಎರಡನೇ ದಿನ ಮೊದಲನೇ ಸೆಷನ್‌ನಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿದ ಜಸ್‌ಪ್ರೀತ್ ಬುಮ್ರಾ, ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್, ಜೋ ರೂಟ್ ಹಾಗೂ ಕ್ರಿಸ್ ವೋಕ್ಸ್ ಅವರನ್ನು ಬಹುಬೇಗ ಔಟ್ ಮಾಡಿದರು. ಈ ವೇಳೆ ಇಂಗ್ಲೆಂಡ್ ತಂಡ 300 ರನ್‌ಗೆ ಆಲ್‌ಔಟ್ ಆಗಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಜೇಮಿ ಸ್ಮಿತ್ ಅದ್ಭುತವಾಗಿ ಹೋರಾಟ ನಡೆಸಿದರು. ಅವರು ಕೆಲ ಕಾಲ ಭಾರತದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ, 56 ಎಸೆತಗಳಲ್ಲಿ 51 ರನ್‌ಗಳನ್ನು ಕಲೆ ಹಾಕಿದರು ಹಾಗೂ ಬ್ರೈಡೆನ್ ಕಾರ್ಸ್ ಅವರ ಜೊತೆ 84 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ಇಂಗ್ಲೆಂಡ್ ಮೊತ್ತವನ್ನು 350ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು.
IND vs ENG: ಚೆಂಡು ಬದಲಾಯಿಸಿದ ಅಂಪೈರ್ ಜೊತೆ ಶುಭಮನ್ ಗಿಲ್ ವಾಗ್ವಾದ! ವಿಡಿಯೊ
ಟೆಸ್ಟ್ ಕ್ರಿಕೆಟ್‌ನಲ್ಲಿ ದೊಡ್ಡ ದಾಖಲೆ ಬರೆದ ಜೇಮಿ ಸ್ಮಿತ್
ಲಾರ್ಡ್ಸ್ ಟೆಸ್ಟ್ ಪಂದ್ಯದ ಎರಡನೇ ದಿನ ತಮ್ಮ ಅರ್ಧಶತಕದ ಇನಿಂಗ್ಸ್ ಮೂಲಕ ಜೇಮಿ ಸ್ಮಿತ್ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ (ಕಡಿಮೆ ಎಸೆತಗಳಲ್ಲಿ) 1000 ಟೆಸ್ಟ್ ರನ್‌ಗಳನ್ನು ಗಳಿಸಿದ ವಿಶ್ವದ ಮೊದಲ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ. ಜೇಮಿ ಸ್ಮಿತ್ 1000 ರನ್‌ಗಳನ್ನು ಪೂರ್ಣಗೊಳಿಸಲು 1303 ಎಸೆತಗಳನ್ನು ತೆಗೆದುಕೊಂಡಿದ್ದಾರೆ. ಆ ಮೂಲಕ 1311 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದ ಭಾರತದ ಸರ್ಫರಾಝ್ ಖಾನ್ ಅವರ ದಾಖಲೆಯನ್ನು ಜೇಮಿ ಸ್ಮಿತ್ ಮುರಿದಿದ್ದಾರೆ. ಜೇಮಿ ಸ್ಮಿತ್ 21 ಇನಿಂಗ್ಸ್‌ಗಳಿಂದ 1000 ರನ್‌ಗಳನ್ನು ಗಳಿಸಿದ್ದಾರೆ. ಆ ಮೂಲಕ ವೇಗವಾಗಿ ಈ ಸಾಧನೆ ಮಾಡಿದವರ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ದಿಗ್ಗಜ ಕ್ವಿಂಟನ್ ಡಿ ಕಾಕ್ ಅವರ ಜೊತೆ ಜಂಟಿ ಸ್ಥಾನವನ್ನು ಅಲಂಕರಿಸಿದ್ದಾರೆ.
🚨 400+ RUNS IN ANDERSON-TENDULKAR TROPHY 🚨
— Johns. (@CricCrazyJohns) July 11, 2025
- 40 & 44* in 1st Test.
- 184* & 88 in 2nd Test.
- 50* in 3rd Test.
JAMIE SMITH, Just 24 years old, Unreal Impact. pic.twitter.com/ffE808t8Yz
ವೇಗವಾಗಿ 1000 ರನ್ ಗಳಿಸಿದ ವಿಕೆಟ್ ಕೀಪರ್‌ಗಳು (ಎಸೆತಗಳಲ್ಲಿ)
ಜೇಮೀ ಸ್ಮಿತ್ - 1303
ಸರ್ಫರಾಝ್ ಖಾನ್ - 1311
ಆಡಮ್ ಗಿಲ್‌ಕ್ರಿಸ್ಟ್ - 1330
ನಿರೋಶನ್ ಡಿಕ್ವೆಲ್ಲಾ -1367
ಕ್ವಿಂಟನ್ ಡಿ ಕಾಕ್ - 1375
IND vs ENG: ಚೆಂಡು ಬದಲಾಯಿಸಿದ ಅಂಪೈರ್ ಜೊತೆ ಶುಭಮನ್ ಗಿಲ್ ವಾಗ್ವಾದ! ವಿಡಿಯೊ
387 ರನ್ ಗಳಿಸಿದ ಇಂಗ್ಲೆಂಡ್
ಜಸ್‌ಪ್ರೀತ್ ಬುಮ್ರಾ ಮಾರಕ ಬೌಲಿಂಗ್ ದಾಳಿಯ ಹೊರತಾಗಿಯೂ ಇಂಗ್ಲೆಂಡ್ ತಂಡ, ಜೋ ರೂಟ್ (104 ರನ್) ಶತಕ ಹಾಗೂ ಜೇಮಿ ಸ್ಮಿತ್ (51 ರನ್) ಮತ್ತು ಬ್ರೈಡೆನ್ ಕಾರ್ಸ್ (56 ರನ್) ಅವರ ಅರ್ಧಶತಕಗಳ ಬಲದಿಂದ 112.3 387 ರನ್‌ಗಳಿಗೆ ಆಲ್‌ಔಟ್ ಆಯಿತು. ಭಾರತ ತಂಡದ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಜಸ್‌ಪ್ರೀತ್ ಬುಮ್ರಾ 5 ವಿಕೆಟ್ ಕಿತ್ತರೆ, ನಿತೀಶ್ ರೆಡ್ಡಿ ಹಾಗೂ ಮೊಹಮ್ಮದ್ ಸಿರಾಜ್ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು.