ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಚೆಂಡು ಬದಲಾಯಿಸಿದ ಅಂಪೈರ್‌ ಜೊತೆ ಶುಭಮನ್‌ ಗಿಲ್‌ ವಾಗ್ವಾದ! ವಿಡಿಯೊ

ಲಂಡನ್‌ನ ಲಾರ್ಡ್ಸ್‌ಅಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಪಂದ್ಯದ ಎರಡನೇ ದಿನವಾದ ಶುಕ್ರವಾರ ಜಸ್‌ಪ್ರೀತ್‌ ಬುಮ್ರಾ ಅದ್ಭುತವಾಗಿ ಬೌಲ್‌ ಮಾಡಿ ಮೂರು ವಿಕೆಟ್‌ಗಳನ್ನು ಕಿತ್ತರು. ಇದರ ನಡುವೆ ಚೆಂಡು ಬದಲಾವಣೆ ಸಂಬಂಧಿಸಿದಂತೆ ಶುಭಮನ್‌ ಗಿಲ್‌, ಫೀಲ್ಡ್‌ ಅಂಪೈರ್‌ ಜೊತೆ ವಾಗ್ವಾದ ನಡೆಸಿದರು. ಈ ವಿಡಿಯೊ ವೈರಲ್‌ ಆಗಿದೆ.

IND vs ENG: ಅಂಪೈರ್‌ ಜೊತೆ ವಾಗ್ವಾದ ನಡೆಸಿದ ಶುಭಮನ್‌ ಗಿಲ್‌!

ಚೆಂಡು ಬದಲಾವಣೆ ಸಂಬಂಧ ಅಂಪೈರ್‌ ಜೊತೆ ವಾಗ್ವಾದ ನಡೆಸಿದ ಶುಭಮನ್‌ ಗಿಲ್‌.

Profile Ramesh Kote Jul 11, 2025 7:29 PM

ಲಂಡನ್: ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್ ಪಂದ್ಯದ (IND vs ENG) ಎರಡನೇ ದಿನದಂದು ಭಾರತ ಕ್ರಿಕೆಟ್ ತಂಡ ಉತ್ತಮ ಆರಂಭವನ್ನು ಪಡೆಯಿತು. ವಿಶೇಷವಾಗಿ ಜಸ್‌ಪ್ರೀತ್‌ ಬುಮ್ರಾ (Jasprit Bumrah) ಸತತ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಇಂಗ್ಲೆಂಡ್ ತಂಡಕ್ಕೆ ಆಘಾತವನ್ನು ನೀಡಿದರು. ಇಂಗ್ಲೆಂಡ್ ತಂಡ ಮೊದಲ ದಿನದಾಟದಲ್ಲಿ 82 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 251 ರನ್ ಗಳಿಸಿತ್ತು. ಪಂದ್ಯದ ಎರಡನೇ ದಿನದ 10 ಓವರ್‌ಗಳ ನಂತರ, ಟೀಮ್ ಇಂಡಿಯಾ ನಾಯಕ ಶುಭ್‌ಮನ್ ಗಿಲ್ (Shubaman Gill) ಚೆಂಡನ್ನು ಬದಲಾಯಿಸಿದ ಅಂಪೈರ್ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದರು. ಚೆಂಡು ಬದಲಾಯಿಸಿದ ಬಳಿಕ ಭಾರತ ತಂಡಕ್ಕೆ ಹಿನ್ನಡೆಯಾಗಿತ್ತು.

ಎರಡನೇ ದಿನದಾಟವಾದ ಶುಕ್ರವಾರ 91ನೇ ಓವರ್‌ನಲ್ಲಿ ನಾಲ್ಕು ಎಸೆತಗಳು ಮುಗಿದಿದ್ದವು. ಅಂದರೆ ಎರಡನೇ ಚೆಂಡಿನಲ್ಲಿ ಕೇವಲ 10.4 ಓವರ್‌ಗಳನ್ನು ಮಾತ್ರ ಎಸೆಯಲಾಗಿತ್ತು. ಈ ವೇಳೆ ಚೆಂಡು ತನ್ನ ಸ್ವರೂಪವನ್ನು ಕಳೆದುಕೊಂಡಿದ್ದ ಬಗ್ಗೆ ಟೀಮ್‌ ಇಂಡಿಯಾ ನಾಯಕ ಶುಭಮನ್‌ ಗಿಲ್‌ ಅಂಪೈರ್‌ಗೆ ದೂರು ನೀಡಿದ್ದರು. ಅಂಪೈರ್‌ ಪಾಲ್‌ ರೀಫೆಲ್‌ ಅವರು ತಮ್ಮ ಜೇಬಿನಿಂದ ರಿಂಗ್‌ ತೆಗೆದು ಚೆಂಡಿನ ಪರೀಕ್ಷೆಯನ್ನು ನಡೆಸಿದರು, ಆದರೆ, ಚೆಂಡು ರಿಂಗ್‌ ಒಳಗೆ ಪ್ರವೇಶಿಸಲಿಲ್ಲ. ಈ ಹಿನ್ನೆಲೆಯಲ್ಲಿ ಅಂಪೈರ್‌ ಚೆಂಡನ್ನು ಬದಲಾಯಿಸಲು ಬಯಸಿದರು. ಈ ವೇಳೆ ನಾಲ್ಕನೇ ಅಂಪೈರ್‌ ಚೆಂಡಿನ ಪೆಟ್ಟಿಗೆಯೊಂದಿಗೆ ಅಂಗಣಕ್ಕೆ ಪ್ರವೇಶ ಮಾಡಿದರು. ಈ ವೇಳೆ ಫೀಲ್ಡ್‌ ಅಂಪೈರ್‌ ಚೆಂಡನ್ನು ಆಯ್ಕೆ ಮಾಡಿದರು, ಆದರೆ ಇದಕ್ಕೆ ಗಿಲ್‌ ತಕ್ಷಣ ಅಸಮಾಧಾನವನ್ನು ವ್ಯಕ್ತಪಡಿಸಿದರು.

IND vs ENG 3rd Test Day 2 Live: ಜಸ್‌ಪ್ರೀತ್‌ ಬುಮ್ರಾ ಮಾರಕ ದಾಳಿ, ಇಂಗ್ಲೆಂಡ್‌ 387ಕ್ಕೆ ಆಲ್‌ಔಟ್‌!

ಈ ವೇಳೆ ಗಿಲ್‌ ಅಂಪೈರ್ ಶರ್ಫುದ್ದೌಲಾ ಅವರೊಂದಿಗೆ ಉತ್ಸಾಹಭರಿತ ಸಂಭಾಷಣೆಯಲ್ಲಿ ತೊಡಗಿದರು. ಅಂಪೈರ್‌ ಭಾರತೀಯ ನಾಯಕನೊಂದಿಗೆ ವಾಗ್ವಾದ ನಡೆಸಿದರು. ಗಿಲ್ ಹಿಂದೆ ಸರಿಯಲಿಲ್ಲ ಮತ್ತು ಆಟವನ್ನು ಪುನರಾರಂಭಿಸಲು ತನ್ನ ಫೀಲ್ಡಿಂಗ್ ಸ್ಥಾನಕ್ಕೆ ಹಿಂತಿರುಗಲು ಹೇಳುವ ಮೊದಲು ಅವರು ದೂರು ನೀಡುತ್ತಲೇ ಇದ್ದರು. ಸಿರಾಜ್ ಅಂಪೈರ್ ಬಳಿ ಹೋಗಿ ಚೆಂಡನ್ನು ನೋಡಿದ ನಂತರ, "ಇದು 10 ಓವರ್‌ಗಳ ಹಳೆಯ ಚೆಂಡಾ? ನಿಜವಾಗಲೂ?," ಎಂದು ಸ್ಟಂಪ್ ಮೈಕ್‌ನಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿದರು.



ಡ್ಯೂಕ್‌ ಬಾಲ್‌ ವಿವಾದ

ಪ್ರಸ್ತುತ ನಡೆಯುತ್ತಿರುವ ಸರಣಿಯಲ್ಲಿ ಬಳಸುತ್ತಿರುವ ಡ್ಯೂಕ್‌ ಬಾಲ್‌ ಚೆಂಡಿನ ಬಗ್ಗೆ ಭಾರತ ತಂಡ ಅಸಮಾಧಾನವಿದೆ. ಈ ಚೆಂಡಿನ ಬಗ್ಗೆ ಟೀಮ್‌ ಇಂಡಿಯಾ ನಾಯಕ ಶುಭಮನ್‌ ಗಿಲ್‌ ಹಾಗೂ ರಿಷಭ್‌ ಪಂತ್‌ ಬೇಸರ ವ್ಯಕ್ತಪಡಿಸಿದ್ದರು. ರಿಷಭ್‌ ಪಂತ್‌ ಅವರು ಒಮ್ಮೆ ಚೆಂಡನ್ನು ಬದಲಾಯಿಸುವಂತೆ ಮನವಿ ಮಾಡಿದ್ದರು, ಆದರೆ ಅಂಪೈರ್‌ ಇದನ್ನು ನಿರಾಕರಿಸಿದ್ದರು. ಈ ವೇಳೆ ಭಿನ್ನಭಿಪ್ರಾಯದ ಕಾರಣ ಪಂತ್‌ಗೆ ದಂಡವನ್ನು ವಿಧಿಸಲಾಗಿತ್ತು.

IND vs ENG 3rd Test: ತವರಿನಲ್ಲಿ ಟೆಸ್ಟ್‌ ದಾಖಲೆ ಬರೆದ ಜೋ ರೂಟ್‌

ಅಸಮಾಧಾನ ವ್ಯಕ್ತಪಡಿಸಿದ್ದ ಗಿಲ್‌

ಎಜ್‌ಬಾಸ್ಟನ್‌ ಟೆಸ್ಟ್‌ ಪಂದ್ಯದ ಬಳಿಕ ಶುಭಮನ್‌ ಗಿಲ್‌ ಸಾರ್ವಜನಿಕವಾಗಿ ಡ್ಯೂಕ್‌ ಬಾಲ್‌ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.

"ಡ್ಯೂಕ್‌ ಚೆಂಡು ಬೌಲರ್‌ಗಳು ತುಂಬಾ ಕಠಿಣವಾಗಿದೆ. ವಿಕೆಟ್‌ಗಿಂತ ಚೆಂಡು ತುಂಬಾ ಕಠಿಣವಾಗಿದೆ ಎಂದು ನಾನು ಬಾವಿಸುತ್ತೇನೆ. ಏಕೆಂದರೆ ಚೆಂಡು ಬಹುಬೇಗ ತನ್ನ ಸ್ವರೂಪವನ್ನು ಕಳೆದುಕೊಳ್ಳುತ್ತಿದೆ. ಇಲ್ಲಿನ ಪಿಚ್‌ನಿಂದ ಈ ರೀತಿ ಆಗುತ್ತಿದೆಯಾ? ಅಥವಾ ಬೇರೆ ಯಾವ ಕಾರಣಕ್ಕೆ ಈ ರೀತಿ ಆಗುತ್ತಿದೆ ಎಂದು ನನಗೆ ಗೊತ್ತಿಲ್ಲ. ಇದು ನಿಜವಾಗಿಯೂ ಬೌಲರ್‌ಗಳಿಗೆ ಕಠಿಣವಾಗಿದೆ. ಇಂಥಾ ಕಂಡೀಷನ್ಸ್‌ನಲ್ಲಿ ಈ ಚೆಂಡಿನ ಮೂಲಕ ವಿಕೆಟ್‌ ಪಡೆಯುವುದು ಕಷ್ಟ," ಎಂದು ಶುಭಮನ್‌ ಗಿಲ್‌ ಬೇಸರ ವ್ಯಕ್ತಪಡಿಸಿದ್ದರು.