ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

SMAT 2026: ಮನ್ವಂತ್‌ ಕುಮಾರ್‌ ದಾಳಿಗೆ ಮಿಜೋರಾಂ ತತ್ತರ, ಕರ್ನಾಟಕಕ್ಕೆ ಎರಡನೇ ಜಯ!

ಮನ್ವಂತ್‌ ಕುಮಾರ್‌ ಬೌಲಿಂಗ್‌ ದಾಳಿ ಹಾಗೂ ಕರುಣ್‌ ನಾಯರ್‌ ಅವರ ಅರ್ಧಶತಕದ ಬಲದಿಂದ ಕರ್ನಾಟಕ ತಂಡ, 2026ರ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯ ತನ್ನ ಮೂರನೇ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಗೆದ್ದು ಬೀಗಿದು. ಕಳೆದ ಪಂದ್ಯದಲ್ಲಿ ಸೋತಿದ್ದ ಕರ್ನಾಟಕ ಇದೀಗ ಜಯದ ಲಯಕ್ಕೆ ಮರಳಿದೆ.

ಮಿಜೋರಾಂ ಎದುರು ಕರ್ನಾಟಕ ತಂಡಕ್ಕೆ ಭರ್ಜರಿ ಜಯ!

ಮಿಜೋರಾಂ ಎದುರು ಕರ್ನಾಟಕ ತಂಡಕ್ಕೆ ಭರ್ಜರಿ ಜಯ. -

Profile
Ramesh Kote Nov 18, 2026 9:12 PM

ಮುಂಬೈ: ಮನ್ವಂತ್‌ ಕುಮಾರ್‌ (Manvanth Kumar L) ಮಾರಕ ಬೌಲಿಂಗ್‌ ದಾಳಿಯ ಸಹಾಯದಿಂದ ಕರ್ನಾಟಕ ತಂಡ, 2026ರ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟಿ20 ಟೂರ್ನಿಯ (Syed Mushtaq Ali Trophy 2026) ತನ್ನ ಮೂರನೇ ಪಂದ್ಯದಲ್ಲಿ (KAR vs MIZ) ಮಿಜೋರಾಂ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಈ ಟೂರ್ನಿಯಲ್ಲಿ ಎರಡನೇ ಗೆಲುವನ್ನು ಪಡೆದ ಕನ್ನಡಿಗರು, ಎಲೈಟ್‌ ಎ ಗುಂಪಿನಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಈ ಪಂದ್ಯದಲ್ಲಿ ಪರಿಣಾಮಕಾರಿಯಾಗಿ ಬೌಲ್‌ ಮಾಡಿ 5 ವಿಕೆಟ್‌ ಸಾಧನೆ ಮಾಡಿದ ಮನ್ವಂತ್‌ ಕುಮಾರ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಬುಧವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಎಲೈಟ್‌ ಎ ಗುಂಪಿನ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಮಿಜೋರಾಂ ತಂಡ, ಮನ್ವಂತ್‌ ಕುಮಾರ್‌ ಮಾರಕ ಬೌಲಿಂಗ್‌ ದಾಳಿಗೆ ಕುಸಿಯಿತು. ಆ ಮೂಲಕ ತಮ್ಮ ಪಾಲಿನ 20 ಓವರ್‌ಗಳನ್ನು ಪೂರ್ಣಗೊಳಿಸಿದರೂ 8 ವಿಕೆಟ್‌ಗಳ ನಷ್ಟಕ್ಕೆ 129 ರನ್‌ಗಳಿಗೆ ಸೀಮಿತವಾಯಿತು ಹಾಗೂ ಕರ್ನಾಟಕ ತಂಡಕ್ಕೆ 130 ರನ್‌ಗಳ ಸಾಧಾರಣ ಗುರಿಯನ್ನು ನೀಡಿತು.

IND vs NZ: ಜಸ್‌ಪ್ರೀತ್‌ ಬುಮ್ರಾಗೆ ಸೂಕ್ತ ಯೋಜನೆ ರೂಪಿಸಿದ್ದೇವೆಂದ ಟಾಮ್‌ ಲೇಥಮ್‌!

ಬಳಿಕ ಗುರಿಯನ್ನು ಹಿಂಬಾಲಿಸಿದ ಕರ್ನಾಟಕ ತಂಡ, ಲವನೀತ್‌ ಸಿಸೋಡಿಯಾ ಅವರನ್ನು ಬಹುಬೇಗ ಕಳೆದುಕೊಂಡರೂ ಕರುಣ್‌ ನಾಯರ್‌ ಅವರ ಆಕರ್ಷಕ ಅರ್ಧಶತಕದ ಬಲದಿಂದ 13.5 ಓವರ್‌ಗಳಿಗೆ ಮೂರು ವಿಕೆಟ್‌ಗಳ ನಷ್ಟಕ್ಕೆ ಗೆಲುವಿನ ಗಡಿ ದಾಟಿತು. ಆ ಮೂಲಕ ಟೂರ್ನಿಯಲ್ಲಿ ತನ್ನ ಎರಡನೇ ಗೆಲುವನ್ನು ದಾಖಲಿಸಿತು.

ಮನ್ವಂತ್‌ ಕುಮಾರ್‌ 5 ವಿಕೆಟ್‌ ಸಾಧನೆ

ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡ ಕರ್ನಾಟಕ ನಾಯಕ ಸ್ಮರಣ್‌ ರವಿಚಂದ್ರನ್‌ ಅವರ ನಿರ್ಧಾರವನ್ನು ಮನ್ವಂತ್‌ ಕುಮಾರ್‌ ಸೇರಿದಂತೆ ಬೌಲರ್‌ಗಳು ಬೆಂಬಲಿಸಿದರು. ವಿಶೇಷವಾಗಿ ಮನ್ವಂತ್‌ ಅದ್ಭುತವಾಗಿ ಬೌಲ್‌ ಮಾಡಿ 5 ವಿಕೆಟ್‌ ಸಾಧನೆ ಮಾಡಿದರು. ಇವರು ತಮ್ಮ ನಾಲ್ಕು ಓವರ್‌ಗಳ ಸ್ಪೆಲ್‌ನಲ್ಲಿ ಕೇವಲ 25 ರನ್‌ ನೀಡಿ 5 ವಿಕೆಟ್‌ಗಳನ್ನು ಕಬಳಿಸಿದರು. ಇವರಿಗೆ ಸಾಥ್‌ ನೀಡಿದ ಅಭಿಲಾಷ್‌ ಶೆಟ್ಟಿ ಎರಡು ವಿಕೆಟ್‌ ಕಿತ್ತರೆ, ವೈಶಾಕ್‌ ವಿಜಯ್‌ಕುಮಾರ್‌ ಅವರು ಒಂದು ವಿಕೆಟ್‌ ಕಿತ್ತರು.

ದೆಹಲಿ ವಿರುದ್ಧ 20 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಕನ್ನಡತಿ ಶ್ರೇಯಾಂಕ ಪಾಟೀಲ್!

ಚಿನ್ವಯ್‌ ಸುತಾರ್‌ ಅರ್ಧಶತಕ

ಮಿಜೋರಾಂ ತಂಡದ ಪರ ಚಿನ್ಮಯ್‌ ಸುತಾರ್‌ ಹಾಗೂ ಮಣೀಂದರ್‌ ನರೇಂದರ್‌ ಸಿಂಗ್‌ ಹೊರತುಪಡಿಸಿ ಇನ್ನುಳಿದ ಎಲ್ಲಾ ಬ್ಯಾಟ್ಸ್‌ಮನ್‌ಗಳು ಎರಡಂಕಿ ವೈಯಕ್ತಿಕ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾದರು. ಆದರೆ, ಚಿನ್ಮಯ್‌ ಒಂದು ತುದಿಯಲ್ಲಿ ನಿಂತು ದೀರ್ಘಾವಧಿ ಬ್ಯಾಟ್‌ ಮಾಡಿದರು. ಅವರು ಆಡಿದ 51 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ 71 ರನ್‌ಗಳನ್ನು ಕಲೆ ಹಾಕಿದರು. ಇವರ ಜೊತೆಗೆ 70 ರನ್‌ಗಳ ಜೊತೆಯಾಟವನ್ನು ಆಡಿದ ಮಣೀಂದರ್‌ 28 ರನ್‌ಗಳನ್ನು ಗಳಿಸಿದರು. ಈ ಇಬ್ಬರ ಬ್ಯಾಟಿಂಗ್‌ನಿಂದ ಮಿಜೋರಾಂ ಗೌರವ ಮೊತ್ತವನ್ನು ಕಲೆ ಹಾಕಲು ಸಾಧ್ಯವಾಯಿತು.

ʻನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇನೆʼ: ಎಂಎಸ್‌ ಧೋನಿಗೆ ಗೌರವ ಸಲ್ಲಿಸಿದ ಸುರೇಶ್‌ ರೈನಾ!

ಕರುಣ್‌ ನಾಯರ್‌ ಅರ್ಧಶತಕ

ಗುರಿಯನ್ನು ಹಿಂಬಾಲಿಸಿದ ಕರ್ನಾಟಕ ತಂಡ ಬಹುಬೇಗ ಓಪನರ್‌ ಲವನೀತ್‌ ಸಿಸೋಡಿಯಾ ಅವರ ವಿಕೆಟ್‌ ಅನ್ನು ಕಳೆದುಕೊಂಡಿತು. ಆದರೆ, ಮತ್ತೊರ್ವ ಓಪನರ್‌ ರೋಹನ್‌ ಪಾಟೀಲ್‌ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದರು. ಅವರು ಆಡಿದ 31 ಎಸೆತಗಳಲ್ಲಿ 35 ರನ್‌ಗಳನ್ನು ಗಳಿಸಿದರು ಹಾಗೂ ಕರುಣ್‌ ನಾಯರ್‌ ಅವರ ಜೊತೆಗೆ ಎರಡನೇ ವಿಕೆಟ್‌ಗೆ 78 ರನ್‌ಗಳ ಜೊತೆಯಾಟವನ್ನು ಆಡಿ ವಿಕೆಟ್‌ ಒಪ್ಪಿಸಿದರು. ಅದ್ಭುತವಾಗಿ ಬ್ಯಾಟ್‌ ಮಾಡಿ ಕರುಣ್‌, 35 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ ಆರು ಬೌಂಡರಿಗಳೊಂದಿಗೆ ಅಜೇಯ 61 ರನ್‌ಗಳನ್ನು ಗಳಿಸಿ ಕರ್ನಾಟಕ ತಂಡವನ್ನು ಗೆಲ್ಲಿಸಿದರು.