ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ʻಸ್ಪಿನ್ನರ್‌ಗಳಿಗೆ ನೆರವು ಸಿಕ್ಕಿಲ್ಲʼ-ಪಿಚ್‌ ಕ್ಯುರೇಟರ್‌ಗಳನ್ನು ದೂರಿದ ಅಜಿಂಕ್ಯ ರಹಾನೆ!

Ajinkya Rahane on Eden Gardens Pitch:ತವರು ಅಂಗಣದಲ್ಲಿ ಎರಡನೇ ಸೋಲಿನ ಬಳಿಕ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಅಜಿಂಕ್ಯ ರಹಾನೆ ತುಂಬಾ ನಿರಾಶೆಗೊಂಡಿದ್ದಾರೆ. ತವರು ತಂಡದ ಸ್ಪಿನ್ನರ್‌ಗಳಿಗೆ ಸಹಾಯ ಮಾಡದ ಪಿಚ್ ಅನ್ನು ಸಿದ್ಧಪಡಿಸಿದ್ದ ಪಿಚ್ ಕ್ಯುರೇಟರ್ ಸುಜನ್ ಮುಖರ್ಜಿ ಅವರ ವಿರುದ್ಧ ರಹಾನೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲಖನೌ ವಿರುದ್ಧ ಸೋಲಿನ ಬೆನ್ನಲ್ಲೆ ಪಿಚ್‌ ಕ್ಯುರೇಟರ್‌ಗಳನ್ನು ದೂರಿದ ರಹಾನೆ!

ಈಡನ್‌ ಗಾರ್ಡನ್ಸ್‌ ಪಿಚ್‌ ಬಗ್ಗೆ ಅಜಿಂಕ್ಯ ರಹಾನೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

Profile Ramesh Kote Apr 9, 2025 8:59 AM

ಕೋಲ್ಕತಾ: ಲಖನೌ ಸೂಪರ್‌ ಜಯಂಟ್ಸ್‌ ( Lucknow Super Giants) ವಿರುದ್ದದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ 21ನೇ ಪಂದ್ಯದಲ್ಲಿ ಕೇವಲ 4 ರನ್‌ ಸೋಲಿನ ಬಳಿಕ ಕೋಲ್ಕತಾ ನೈಟ್‌ ರೈಡರ್ಸ್‌ (Kolkata Knight Riders) ತಂಡದ ನಾಯಕ ಅಜಿಂಕ್ಯ ರಹಾನೆ (Ajinkta Rahane) ತಮ್ಮ ತವರು ಅಂಗಣ ಈಡನ್‌ ಗಾರ್ಡನ್ಸ್‌ ಪಿಚ್‌ ಕ್ಯುರೇಟರ್‌ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಇಲ್ಲಿನ ಪಿಚ್‌ ಸ್ಪಿನ್ನರ್‌ಗಳಿಗೆ ಯಾವುದೇ ರೀತಿಯಲ್ಲಿ ನೆರವು ನೀಡಿಲ್ಲ ಎಂದು ಅವರು ದೂರಿದ್ದಾರೆ. ಆತಿಥೇಯ ಕೆಕೆಆರ್‌ಗೆ ತವರು ಅಂಗಣದ ಲಾಭ ಸಿಗುತ್ತಿಲ್ಲ ಎಂದು ಕೆಕೆಆರ್‌ ಕ್ಯಾಪ್ಟನ್‌ ಒತ್ತಿ ಹೇಳಿದ್ದಾರೆ. ಅಂದ ಹಾಗೆ ಅಜಿಂಕ್ಯ ರಹಾನೆ ನಾಯಕತ್ವದ ಕೆಕೆಆರ್‌ಗೆ ತವರು ಅಂಗಣದಲ್ಲಿ ಎರಡನೇ ಸೋಲು ಇದಾಯಿತು. ಇದಕ್ಕೂ ಮುನ್ನ ಟೂರ್ನಿಯ ಮೊದಲನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ದವೂ ಸೋತಿತ್ತು.

ಪಂದ್ಯ ಸೋಲಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಅಜಿಂಕ್ಯ ರಹಾನೆಗೆ ತವರು ಅಂಗಣದ ಲಾಭದ ಬಗ್ಗೆ ಸುದ್ದಿಗಾರರು ಪ್ರಶ್ನೆಯನ್ನು ಕೇಳಿದರು.ಇದಕ್ಕೆ ಉತ್ತರವನ್ನು ನೀಡಲು ರಹಾನೆ ಬಹಳಾ ಎಚ್ಚರಿಕೆಯನ್ನು ವಹಿಸಿದರು. ಇದರ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಿದರೂ ವಿವಾದ ಉಂಟಾಗಬಹುದು ಎಂದರು. ಈ ಪಂದ್ಯದಲ್ಲಿ ಸ್ಪಿನ್ನರ್‌ಗಳು ನಿರ್ಣಾಯಕ ಪಾತ್ರವನ್ನು ವಹಿಸಬಹುದೆಂದು ಭಾವಿಸಿದ್ದೆವು. ಆದರೆ, ಇದು ಸಂಭವಿಸಲಿಲ್ಲ. "ಮೊದಲನೇಯದಾಗಿ, ಇಲ್ಲಿನ ಪಿಚ್‌ ಸ್ಪಿನ್ನರ್‌ಗಳಿಗೆ ನೆರವು ನೀಡುತ್ತಿರಲಿಲ್ಲ. ಇದು ಸ್ಪಷ್ಟ," ಎಂದು ಅಜಿಂಕ್ಯ ರಹಾನೆ ದೂರಿದ್ದಾರೆ.

IPL 2025: ವೇಗದ ಶತಕ ಸಿಡಿಸಿದ ಬಳಿಕ ತಮ್ಮ ಬ್ಯಾಟಿಂಗ್‌ ಗೇಮ್‌ ಪ್ಲ್ಯಾನ್‌ ತಿಳಿಸಿದ ಪ್ರಿಯಾಂಶ್‌ ಆರ್ಯ!

ಮಂಗಳವಾರ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಲಖನೌ ಸೂಪರ್‌ ಜಯಂಟ್ಸ್‌ ತಂಡ, ಮಿಚೆಲ್‌ ಮಾರ್ಷ್‌ (81 ರನ್‌) ಹಾಗೂ ನಿಕೋಲಸ್‌ ಪೂರನ್‌ (87) ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ ನಷ್ಟಕ್ಕೆ 234 ರನ್‌ಗಳನ್ನು ಕಲೆ ಹಾಕಿತ್ತು.

"ಅವರು ಬೌಂಡರಿಗಳನ್ನು ಚೆನ್ನಾಗಿ ಬಳಸಿಕೊಂಡರು, ನಮ್ಮ ಬೌಲರ್‌ಗಳು ಸಹ ಪ್ರಯತ್ನಿಸಿದರು ಆದರೆ ನಿಕೋಲಸ್ ಪೂರನ್ ಮತ್ತು ಮಿಚೆಲ್ ಮಾರ್ಷ್ ಮಧ್ಯದಲ್ಲಿ ಚೆನ್ನಾಗಿ ಬ್ಯಾಟ್‌ ಮಾಡಿದರು. ಅವರು ತನ್ನ ಅವಕಾಶಗಳನ್ನು ಬಳಸಿಕೊಂಡರು, ಅದು ಅವರು ತುಂಬಾ ಒಳ್ಳೆಯದಾಯಿತು. ಇದು ಒಂದು ಉತ್ತಮ ವಿಕೆಟ್, ನಾವೆಲ್ಲರೂ ನೋಡಿದ್ದೇವೆ. ಈ ವಿಕೆಟ್‌ನಲ್ಲಿ ಸುಮಾರು 500 ರನ್ ಗಳಿಸಲಾಯಿತು, ಬೌಲರ್‌ಗಳಿಗೆ ಇದು ಕಷ್ಟಕರವಾಗಿತ್ತು, ಆದರೆ ಅವರು ಸಂದರ್ಭಗಳ ಲಾಭವನ್ನು ಪಡೆದುಕೊಂಡರು ಮತ್ತು ಬೌಂಡರಿಗಳನ್ನು ಚೆನ್ನಾಗಿ ಬಳಸಿದರು," ಎಂದು ಹೇಳಿದ್ದಾರೆ.

LSG vs KKR: ಕೋಲ್ಕತಾದ ರನ್‌ ಹೊಳೆಯಲ್ಲಿ ಈಜಿ ಗೆದ್ದ ಲಖನೌ ಸೂಪರ್‌ ಜಯಂಟ್ಸ್‌!

ಸೂಪರ್ ಜಯಂಟ್ಸ್‌ ತಂಡದ ಸ್ಪಿನ್ ಜೋಡಿ ದಿಗ್ವೇಶ್ ರಾಥಿ ಮತ್ತು ರವಿ ಬಿಷ್ಣೋಯ್ ತಮ್ಮ ಎಂಟು ಓವರ್‌ಗಳಲ್ಲಿ ಒಟ್ಟು 80 ರನ್‌ಗಳನ್ನು ಬಿಟ್ಟುಕೊಟ್ಟರು ಆದರೆ ಎರಡು ನಿರ್ಣಾಯಕ ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಆದಾಗ್ಯೂ, ಕೆಕೆಆರ್‌ನ ಸ್ಪಿನ್‌ ಜೋಡಿ ಸುನೀಲ್‌ ನರೇನ್ ಮತ್ತು ವರುಣ್ ಚಕ್ರವರ್ತಿ ಯಾವುದೇ ವಿಕೆಟ್ ಪಡೆಯಲಿಲ್ಲ ಮತ್ತು ಪ್ರತಿ ಓವರ್‌ಗೆ ಒಂಬತ್ತು ರನ್‌ಗಳಿಗಿಂತ ಹೆಚ್ಚು ರನ್‌ಗಳನ್ನು ನೀಡಿದರು.

ಮನೆಯಂಗಳದ ಅನುಕೂಲದ ಬಗ್ಗೆ ಪ್ರಶ್ನೆ ಕೇಳಿದಾಗ ರಹಾನೆ, "ನೋಡಿ, ವಿಕೆಟ್ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಹಾಗಾಗಿ ನಾನು ಈಗ ಏನಾದರೂ ಹೇಳಿದರೆ, ವಿವಾದ ಉಂಟಾಗುತ್ತದೆ," ಎಂದು ಹೇಳಿದರು.



ಪಿಚ್‌ ಕ್ಯುರೇಟರ್‌ ಬಗ್ಗೆ ರಹಾನೆ ಅಸಮಾಧಾನ

ಕ್ಯುರೇಟರ್ ಸುಜನ್ ಮುಖರ್ಜಿ ಮೇಲೆ ಪರೋಕ್ಷ ದಾಳಿ ನಡೆಸುತ್ತಾ ರಹಾನೆ, "ನಮ್ಮ ಕ್ಯುರೇಟರ್‌ಗೆ ಸಾಕಷ್ಟು ಪ್ರಚಾರ ಸಿಕ್ಕಿದೆ. ಈ ಪ್ರಚಾರದಿಂದ ಅವರು ಸಂತೋಷಪಟ್ಟಿದ್ದಾರೆಂದು ನಾನು ಭಾವಿಸುತ್ತೇನೆ. ತವರು ಅಂಗಣದ ಪ್ರಯೋಜನಗಳ ಬಗ್ಗೆ ನೀವು ಏನು ಬೇಕಾದರೂ ಬರೆಯಬಹುದು, ನಿಮಗೆ ಏನು ಅನಿಸಿತು ಅದನ್ನು ಬರೆಯಬಹುದು. ನನಗೆ ಏನಾದರೂ ಕಳವಳಗಳಿದ್ದರೆ ಇಲ್ಲಿ ಮಾತನಾಡುವ ಬದಲು ಐಪಿಎಲ್‌ಗೆ ಹೇಳುತ್ತೇನೆ," ಎಂದು ಅಜಿಂಕ್ಯ ರಹಾನೆ ತಿಳಿಸಿದ್ದಾರೆ.

IPL 2025: 39 ಎಸೆತಗಳಲ್ಲಿ ಶತಕ ಸಿಡಿಸಿ ವಿಶೇಷ ದಾಖಲೆ ಬರೆದ ಪ್ರಿಯಾಂಶ್‌ ಆರ್ಯ!

ಅಜಿಂಕ್ಯ ರಹಾನೆ ಅರ್ಧಶತಕ ವ್ಯರ್ಥ

235 ರನ್‌ಗಳ ಗುರಿಯನ್ನು ಹಿಂಬಾಲಸಿದ್ದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಕೊನೆಯ ಎಸೆತದವರೆಗೂ ಕಠಿಣ ಹೋರಾಟ ನಡಸಿತ್ತು. ಆದರೂ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಚೇಸಿಂಗ್‌ ವೇಳೆ ಅಜಿಂಕ್ಯ ರಹಾನೆ ಸ್ಪೋಟಕ ಅರ್ಧಶತಕ ಸಿಡಿಸಿದ ತಂಡವನ್ನು ಗೆಲುವಿನ ಹಾದಿಯಲ್ಲಿ ಇರಿಸಿ ವಿಕೆಟ್‌ ಒಪ್ಪಿಸಿದ್ದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ರಮಣ್‌ದೀಪ್‌ ಸಿಂಗ್‌, ಅಂಡ್ರೆ ರಸೆಲ್‌, ಅಂಗ್‌ಕೃಷ್‌ ರಘುವಂಶಿ ವಿಫಲರಾಗಿದ್ದರು. ಆದರೆ, ಕೊನೆಯಲ್ಲಿ ರಿಂಕು ಸಿಂಗ್‌ ಏಕಾಂಗಿ ಹೋರಾಟ ನಡೆಸಿದ್ದರೂ ಕೇವಲ 4 ರನ್‌ನಿಂದ ಕೆಕೆಆರ್‌ ಸೋಲು ಒಪ್ಪಿಕೊಳ್ಳಬೇಕಾಯಿತು.