KKR vs PBKS: ತಮ್ಮ ಮಾಜಿ ತಂಡ ಕೋಲ್ಕತಾ ನೈಟ್ ರೈಡರ್ಸ್ ಎದುರು ಶ್ರೇಯಸ್ ಅಯ್ಯರ್ ಡಕ್‌ಔಟ್!
Shreyas Iyer duck out vv KKR: ತಮ್ಮ ಮಾಜಿ ತಂಡ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು. ಅವರು ಆಡಿದ ಕೇವಲ ಎರಡು ಎಸೆತಗಳಲ್ಲಿ ರನ್ ಗಳಿಸದ, ಹರ್ಷಿತ್ ರಾಣಾಗೆ ದೊಡ್ಡ ಹೊಡೆತಕ್ಕೆ ಕೈ ಹಾಕಿ ಡೀಪ್ ಪಾಯಿಂಟ್‌ನಲ್ಲಿ ರಮಣದೀಪ್ ಸಿಂಗ್‌ಗೆ ಕಾಚಿತ್ತರು.

ಕೆಕೆಆರ್ ವಿರುದ್ಧ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ಶ್ರೇಯಸ್ ಅಯ್ಯರ್.

ಚಂಡೀಗಢ: ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ತಮ್ಮ ಮಾಜಿ ತಂಡ ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ವಿರುದ್ಧದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ 31ನೇ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಆ ಮೂಲಕ ತವರು ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದಾರೆ. ಪಂದ್ಯದ ನಾಲ್ಕನೇ ಓವರ್‌ನಲ್ಲಿ ಆರಂಭಿಕ ಪ್ರಿಯಾಂಶ್ ಆರ್ಯ ವಿಕೆಟ್ ಒಪ್ಪಿಸಿದ ಬಳಿಕ ಕ್ರೀಸ್‌ಗೆ ಬಂದಿದ್ದ ಶ್ರೇಯಸ್ ಅಯ್ಯರ್ ತಾನು ಆಡಿದ ಎರಡನೇ ಎಸೆತದಲ್ಲಿ ಹರ್ಷಿತ್ ರಾಣಾಗೆ ಸ್ಕೈರ್ ಕಟ್ ಹೊಡೆದರು. ಆದರೆ, ಚೆಂಡು ನಿರೀಕ್ಷೆ ಮಾಡಿದಂತೆ ಬ್ಯಾಟ್‌ಗೆ ಸಿಗಲಿಲ್ಲ. ಚೆಂಡು ಬ್ಯಾಟ್‌ನ ತುದಿಗೆ ತಾಗಿ ಡೀಪ್ ಪಾಯಿಂಟ್‌ನಲ್ಲಿ ನಿಂತಿದ್ದ ರಮಣ್‌ದೀಪ್ ಸಿಂಗ್‌ಗೆ ಕ್ಯಾಚ್ ಕೊಟ್ಟರು.
2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸಿದ್ದರು. ಅದರಂತೆ ಇವರ ನಾಯಕತ್ವದಲ್ಲಿ ಕೆಕೆಆರ್ ತಂಡ ಚಾಂಪಿಯನ್ ಆಗಿತ್ತು. ಇದರ ಹೊರತಾಗಿಯೂ 2025ರ ಐಪಿಎಲ್ ಟೂರ್ನಿಯ ಮೆಗಾ ಹರಾಜಿಗೆ ಶ್ರೇಯಸ್ ಅಯ್ಯರ್ ಅವರನ್ನು ಕೋಲ್ಕತಾ ಫ್ರಾಂಚೈಸಿ ರಿಲೀಸ್ ಮಾಡಿತ್ತು. ಪಂಜಾಬ್ ಕಿಂಗ್ಸ್ ತಂಡ ಮೆಗಾ ಹರಾಜಿನಲ್ಲಿ ಎರಡನೇ ಗರಿಷ್ಠ ಮೊತ್ತಕ್ಕೆ ಶ್ರೇಯಸ್ ಅಯ್ಯರ್ ಅವರನ್ನು ಖರೀದಿಸಿತ್ತು ಹಾಗೂ ನಾಯಕತ್ವವನ್ನು ನೀಡಿತ್ತು. ಅದರಂತೆ ಇಲ್ಲಿಯ ತನಕ ಆಡಿದ್ದ 5 ಪಂದ್ಯಗಳಲ್ಲಿ 3ರಲ್ಲಿ ಗೆದ್ದಿದ್ದ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್, ಎರಡರಲ್ಲಿ ಸೋಲು ಅನುಭವಿಸಿತ್ತು.
IPL 2025: 5 ಪಂದ್ಯಗಳನ್ನು ಸೋತಿರುವ ಸಿಎಸ್‌ಕೆಗೆ ಪ್ಲೇಆಫ್ಸ್‌ಗೆ ಚಾನ್ಸ್ ಇದೆಯಾ? ಇಲ್ಲಿದೆ ಲೆಕ್ಕಾಚಾರ!
ಅಂದ ಹಾಗೆ ಏಪ್ರಿಲ್ 15 ರಂದು ತಮ್ಮ ಮಾಜಿ ತಂಡ ಕೆಕೆಆರ್ ವಿರುದ್ದ ದೊಡ್ಡ ಇನಿಂಗ್ಸ್ ಆಡಿ ಕೋಲ್ಕತಾ ಫ್ರಾಂಚೈಸಿಗೆ ತಿರುಗೇಟು ನೀಡಬೇಕೆಂಬ ಉದ್ದೇಶದಿಂದ ಕ್ರೀಸ್‌ಗೆ ಬಂದಿದ್ದ ಶ್ರೇಯಸ್ ಅಯ್ಯರ್ ಶೂನ್ಯಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಶೆ ಮೂಡಿಸಿದರು. ಶ್ರೇಯಸ್ ಅಯ್ಯರ್ ಜೊತೆಗೆ ಪಂಜಾಬ್ ತಂಡದ ಯಾವೊಬ್ಬ ಬ್ಯಾಟ್ಸ್‌ಮನ್ ದೀರ್ಘಾವಧಿ ಬ್ಯಾಟ್ ಮಾಡಲಿಲ್ಲ. ಆರಂಭಿಕ ಪ್ರಭ್‌ಸಿಮ್ರಾನ್ ಸಿಂಗ್ 30 ರನ್ ಹಾಗೂ ಪ್ರಿಯಾಂಶ್ ಆರ್ಯ 22 ರನ್ ಗಳಿಸಿದ್ದು ಬಿಟ್ಟರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಕನಿಷ್ಠ 20 ರನ್ ಕೂಡ ಗಳಿಸದೆ ಪೆವಿಲಿಯನ್‌ಗೆ ಮರಳಿದರು. ಅಂತಿಮವಾಗಿ ಪಂಜಾಬ್ ಕಿಂಗ್ಸ್ ತಂಡ 15.3 ಓವರ್‌ಗಳಿಗೆ 111 ರನ್‌ಗಳಿಗೆ ಆಲ್‌ಔಟ್ ಆಯಿತು.
Massive moment!
— Star Sports (@StarSportsIndia) April 15, 2025
Harshit Rana strikes again and sends the PBKS captain, Shreyas Iyer, back!
Watch the LIVE action ➡ https://t.co/nrMztYaJQ8#IPLonJioStar 👉 #PBKSvKKR | LIVE NOW on Star Sports 1, Star Sports 1 Hindi & JioHotstar! pic.twitter.com/Cx3XIBw6XA
ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಹೊಸ ಚೆಂಡಿನಲ್ಲಿ ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿದ್ದ ಹರ್ಷಿತ್ ರಾಣಾ 3 ಓವರ್‌ಗಳಿಗೆ ಕೇವಲ 25 ರನ್ ನೀಡಿ ಅಗ್ರ ಕ್ರಮಾಂಕದ ಪ್ರಮುಖ ಮೂವರು ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದರು. ಕೆಕೆಆರ್ ಪರ ಸ್ಪಿನ್ ಮೋಡಿ ಮಾಡಿದ ವರುಣ್ ಚಕ್ರವರ್ತಿ ಹಾಗೂ ಸುನೀಲ್ ನರೇನ್ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು. ಇನ್ನು ವೈಭವ್ ಅರೋರಾ ಹಾಗೂ ಎನ್ರಿಕ್ ನೊರ್ಕಿಯಾ ತಲಾ ಒಂದೊಂದು ವಿಕೆಟ್ ಕಿತ್ತರು.
IPL 2025: ಕರುಣ್ ನಾಯರ್‌ಗೆ ಮೆಚ್ಚುಗೆ ವ್ಯಕ್ತಪಡಿಸಿ, ವಿರಾಟ್ ಕೊಹ್ಲಿಯನ್ನು ಟೀಕಿಸಿದ ಇರ್ಫಾನ್ ಪಠಾಣ್!
ಇತ್ತಂಡಗಳ ಪ್ಲೇಯಿಂಗ್ XI
ಪಂಜಾಬ್ ಕಿಂಗ್ಸ್: ಪ್ರಿಯಾಂಶ್ ಆರ್ಯ, ಪ್ರಭ್‌ಸಿಮ್ರಾನ್ ಸಿಂಗ್, ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಜಾಶ್ ಇಂಗ್ಲಿಸ್ (ವಿ.ಕೀ), ಶಶಾಂಕ್ ಸಿಂಗ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕೊ ಯೆನ್ಸನ್, ಕ್ಸೇವಿಯರ್ ಬಾರ್ಟ್ಲೆಟ್, ಅರ್ಷ್‌ದೀಪ್ ಸಿಂಗ್, ಯುಜ್ವೇಂದ್ರ ಚಹಲ್
ಇಂಪ್ಯಾಕ್ಟ್ ಪ್ಲೇಯರ್: ಸೂರ್ಯಾಂಶ್ ಶೆಡ್ಗೆ
ಕೋಲ್ಕತಾ ನೈಟ್ ರೈಡರ್ಸ್: ಕ್ವಿಂಟನ್ ಡಿ ಕಾಕ್ (ವಿ.ಕೀ), ಸುನೀಲ್ ನರೇನ್, ಅಜಿಂಕ್ಯ ರಹಾನೆ (ನಾಯಕ), ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಹರ್ಷಿತ್ ರಾಣಾ, ವೈಭವ್ ಅರೋರಾ, ಎನ್ರಿಕ್ ನೊರ್ಕಿಯಾ, ವರುಣ್ ಚಕ್ರವರ್ತಿ, ಅಂಗಕ್ರಿಶ್ ರಘುವಂಶಿ