Nita Ambani: ರೋಹಿತ್ ಅವರನ್ನು ನಾಯಕನನ್ನಾಗಿ ಮಾಡಿ; ಶಿರಡಿ ದೇವಸ್ಥಾನದಲ್ಲಿ ನೀತಾ ಅಂಬಾನಿಗೆ ಕೈಮುಗಿದು ಬೇಡಿಕೊಂಡ ಅಭಿಮಾನಿ
ದೇಶದಾದ್ಯಂತ ಐಪಿಎಲ್ ಕಾವು ಜೋರಾಗಿದೆ. ಈ ಬಾರಿ ಮುಂಬೈ ಇಂಡಿಯನ್ಸ್ ತಂಡದ ಪ್ರದರ್ಶನ ಅಭಿಮಾನಿಗಳಲ್ಲಿ ಬೇಸರ ತಂದಿದೆ. ಹೀಗಿರುವಾಗ ರೋಹಿತ್ ಶರ್ಮಾ ಅವರ ಅಭಿಮಾನಿಯೊಬ್ಬರು ಮುಂಬೈ ಇಂಡಿಯನ್ಸ್ ಸಹ-ಮಾಲೀಕರಾದ ನೀತಾ ಅಂಬಾನಿ ಅವರನ್ನು ಮುಂಬೈ ತಂಡದ ನಾಯಕರನ್ನು ಬದಲಾವಣೆ ಮಾಡಿ, ಬದಲಿಗೆ ರೋಹಿತ್ ಶರ್ಮಾ ಅವರಿಗೆ ನಾಯಕತ್ವವನ್ನು ನೀಡಿ ಎಂದು ಕೇಳಿಕೊಂಡಿದ್ದಾರೆ.


ಮುಂಬೈ: ದೇಶದಾದ್ಯಂತ ಐಪಿಎಲ್ ಕಾವು ಜೋರಾಗಿದೆ. ಈ ಬಾರಿ ಮುಂಬೈ ಇಂಡಿಯನ್ಸ್ ತಂಡದ ಪ್ರದರ್ಶನ ಅಭಿಮಾನಿಗಳಲ್ಲಿ ಬೇಸರ ತಂದಿದೆ. ಹೀಗಿರುವಾಗ ರೋಹಿತ್ ಶರ್ಮಾ ಅವರ ಅಭಿಮಾನಿಯೊಬ್ಬರು ಮುಂಬೈ ಇಂಡಿಯನ್ಸ್ ಸಹ-ಮಾಲೀಕರಾದ ನೀತಾ ಅಂಬಾನಿ (Nita Ambani) ಅವರನ್ನು ಮುಂಬೈ ತಂಡದ ನಾಯಕರನ್ನು ಬದಲಾವಣೆ ಮಾಡಿ, ಬದಲಿಗೆ ರೋಹಿತ್ ಶರ್ಮಾ ಅವರಿಗೆ ನಾಯಕತ್ವವನ್ನು ನೀಡಿ ಎಂದು ಕೇಳಿಕೊಂಡಿದ್ದಾರೆ. ಶಿರಡಿ ಸಾಯಿಬಾಬಾ ದೇವಾಲಯಕ್ಕೆ ನೀತಾ ಅಂಬಾನಿ ಭೇಟಿ ನೀಡಿದ್ದ ಸಂದರ್ಭದಲ್ಲಿ ವ್ಯಕ್ತಿ ಕೈ ಮುಗಿದು ನೀತಾ ಅವರ ಬಳಿ ವಿನಂತಿಸಿಕೊಂಡಿದ್ದಾರೆ.
Man was directly telling Nita Ambani to appoint Rohit Sharma as Mumbai Indians captain. That's unbelievable craze.🥶🔥 pic.twitter.com/YBk9oQb2YZ
— 𝐇𝐲𝐝𝐫𝐨𝐠𝐞𝐧 𝕏 (@ImHydro45) April 13, 2025
ಸಾಯಿಬಾಬಾ ದೇವಾಲಯದ ಹೊರಗೆ ನೀತಾ ಅಂಬಾನಿಯನ್ನು ಭೇಟಿಯಾದ ಅಭಿಮಾನಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೇವಾಲಯದಿಂದ ಹೊರಕ್ಕೆ ಬರುತ್ತಿರುವ ನೀತಾ ಅಂಬಾನಿಯವರಿಗೆ ವ್ಯಕ್ತಿ ಕೈ ಮುಗಿದಿದ್ದಾನೆ. ನಂತರ ಆತ ದಯವಿಟ್ಟು ರೋಹಿತ್ ಶರ್ಮಾ ಅವರನ್ನು ಮುಂಬೈ ತಂಡದ ನಾಯಕನನ್ನಾಗಿ ಮಾಡಿ ಎಂದು ಕೇಳಿಕೊಂಡಿದ್ದಾನೆ. ಇದಕ್ಕೆ ನೀತಾ ಅವರು ಕೂಡ ಪ್ರತಿಕ್ರಿಯೆ ನೀಡಿದ್ದು, ನಗುತ್ತಾ, ಎಲ್ಲಾ ದೇವರ ಇಚ್ಛೆ ಎಂದು ಹೇಳಿದ್ದಾರೆ. ಕಳೆದ ವರ್ಷ, ಮುಂಬೈ ಇಂಡಿಯನ್ಸ್ ಹಾರ್ದಿಕ್ ಪಾಂಡ್ಯ ಅವರನ್ನು ತಂಡದ ನಾಯಕನನ್ನಾಗಿ ಘೋಷಿಸಿತ್ತು. ಇದಾದ ಬಳಿಕ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಐದು ಬಾರಿ ತಂಡಕ್ಕೆ ಟ್ರೋಫಿ ಗೆದ್ದು ಕೊಟ್ಟಿದ್ದ ನಾಯಕ ರೋಹಿತ್ ಅವರನ್ನು ಕಡೆಗಣಿಸಿದ್ದಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.
ಈ ಸುದ್ದಿಯನ್ನೂ ಓದಿ: MI vs DC: ಕರುಣ್ ನಾಯರ್ ಹೋರಾಟ ವ್ಯರ್ಥ, ಗೆಲುವಿನ ಸನಿಹ ಬಂದು ಮುಂಬೈಗೆ ಮಣಿದ ಡೆಲ್ಲಿ!
ಡ್ರೆಸ್ಸಿಂಗ್ ರೂಂನಲ್ಲಿನ ಬಿರುಕು ತಂಡದ ನಾಯಕತ್ವದ ಬದಲಾವಣೆಗೆ ಕಾರಣವಾಗಿದೆ ಎಂಬ ವರದಿಗಳು ಹೊರಬಿದ್ದವು. ಐಪಿಎಲ್ 2024 ರಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದರೂ, ಫ್ರಾಂಚೈಸಿ ಹಾರ್ದಿಕ್ ಪಾಂಡ್ಯ ಅವರನ್ನು ಮತ್ತೆ ನಾಯಕನನ್ನಾಗಿ ಘೋಷಿಸಿದ್ದಕ್ಕೆ ಕೆಲವರು ತಂಡ ತೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ವದಂತಿಗಳು ಹರಡಿದ್ದರೂ ಸಹ, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ತಿಲಕ್ ವರ್ಮಾ ಅವರನ್ನು ಹಾರ್ದಿಕ್ ಜೊತೆಗೆ ಉಳಿಸಿಕೊಳ್ಳಲಾಯಿತು. ಇದೀಗ 2025 ರ ಐಪಿಎಲ್‌ನಲ್ಲಿಯೂ ಮುಂಬೈ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ. ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡವು ತಮ್ಮ ಮೊದಲ ಆರು ಪಂದ್ಯಗಳಲ್ಲಿ ಎರಡನ್ನು ಮಾತ್ರ ಗೆದ್ದಿದೆ ಮತ್ತು ಪ್ರಸ್ತುತ 10 ತಂಡಗಳ ಪಾಯಿಂಟ್‌ಗಳ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಏಪ್ರಿಲ್ 13 ರ ಭಾನುವಾರದಂದು, ಮುಂಬೈ ಇಂಡಿಯನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ಎದುರು ಗೆಲುವು ಸಾಧಿಸಿದೆ.