MLC 2025: 91 ರನ್ ಬಾರಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಫಾಫ್ ಡು ಪ್ಲೆಸಿಸ್!
Faf Du Plessis Creates World Record: ಪ್ರಸಕ್ತ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಸಿಯಾಟಲ್ ಓಕರ್ಸ್ ವಿರುದ್ಧದ ಪಂದ್ಯದಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡದ ನಾಯಕ ಫಾಪ್ ಡುಪ್ಲೆಸಿಸ್ ರಿಟೈರ್ ಔಟ್ ಆಗುವ ಮೂಲಕ ಶತಕ ವಂಚಿತರಾದರು. ಆದರೆ ಟಿ20 ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಯ ಮಹತ್ವದ ದಾಖಲೆಯೊಂದನ್ನು ಮುರಿದಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಯ ನಾಯಕತ್ವದ ದಾಖಲೆ ಮುರಿದ ಫಾಫ್ ಡು ಪ್ಲೆಸಿಸ್.

ನವದೆಹಲಿ: ಸಿಯಾಟಲ್ ಓಕರ್ಸ್ ವಿರುದ್ದ ಮೇಜರ್ ಲೀಗ್ ಕ್ರಿಕೆಟ್ (MLC) ಟೂರ್ನಿಯ 28ನೇ ಪಂದ್ಯದಲ್ಲಿ ಟೆಕ್ಸಸ್ ಸೂಪರ್ ಕಿಂಗ್ಸ್ ತಂಡದ ನಾಯಕ ಫಾಪ್ ಡುಪ್ಲೆಸಿಸ್ (Faf Du Plessis) 91 ರನ್ ಸಿಡಿಸಿ ರಿಟೈರ್ ಔಟ್ ಆಗಿ ವಿಕೆಟ್ ಒಪ್ಪಿಸಿದ್ದಾರೆ. ಶತಕ ವಂಚಿತರಾದರೂ ಕೂಡ ತಂಡ 51 ರನ್ ಗೆಲುವಿಗೆ ನೆರವು ನೀಡಿದರು. ಆ ಮೂಲಕ ಟಿ20 ಕ್ರಿಕೆಟ್‌ನಲ್ಲಿ ನೂತನ ದಾಖಲೆಯನ್ನು ಬರೆದಿದ್ದಾರೆ. ಅಲ್ಲದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಸಹ ಆಟಗಾರ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಟೆಕ್ಸಸ್ ಸೂಪರ್ ಸ್ಟಾರ್ ಪರ ಫಾಪ್ ಡುಪ್ಲೆಸಿಸ್ ಸ್ಫೋಟಕ ಬ್ಯಾಟಿಂಗ್ ನಡೆಸಿ 52 ಎಸೆತಗಳಲ್ಲಿ 91 ರನ್ ಸಿಡಿಸಿದರು. ಆ ಮೂಲಕ ತಮ್ಮ ತಂಡ 20 ಓವರ್‌ಗಳ ಅಂತ್ಯಕ್ಕೆ 188 ಬೃಹತ್ ಮೊತ್ತ ಕಲೆಹಾಕಲು ನೆರವು ನೀಡಿದ್ದರು. ನಂತರ ಈ ಗುರಿ ಹಿಂಬಾಲಿಸಿದ ಸಿಯಾಟಲ್ ಓಕರ್ಸ್ ತಂಡದ ಆಟಗಾರರನ್ನು ಕಟ್ಟಿ ಹಾಕಿದ ಆಡಂ ಮಿಲ್ನೆ 5 ವಿಕೆಟ್ ಸಾಧನೆ ಮಾಡಿದರು. ಆ ಮೂಲಕ ಎದುರಾಳಿ ತಂಡವನ್ನು 136 ರನ್‌ಗಳಿಗೆ ನಿಯಂತ್ರಿಸಿ ತಮ್ಮ ತಂಡದ 52 ರನ್‌ಗಳ ಗೆಲುವಿಗೆ ನೆರವು ನೀಡಿದರು.
MLC 2025: ಟಿ20 ಕ್ರಿಕೆಟ್‌ನಲ್ಲಿ ನೂತನ ಮೈಲುಗಲ್ಲು ತಲುಪಿದ ಡೇವಿಡ್ ವಾರ್ನರ್!
ವಿರಾಟ್ ಕೊಹ್ಲಿ ದಾಖಲೆ ಮುರಿದ ಡುಪ್ಲೆಸಿಸ್
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 2022 ರಿಂದ 2024ರವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸಿದ್ದ ಫಾಫ್ ಡು ಪ್ಲೆಸಿಸ್ 91 ರನ್ ಸಿಡಿಸುವ ಮೂಲಕ ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿಯ ನಾಯಕತ್ವದ ದಾಖಲೆಯನ್ನು ಮುರಿದಿದ್ದಾರೆ. ದಕ್ಷಿಣ ಆಫ್ರಿಕಾ ಹಾಗೂ ವಿವಿಧ ಫ್ರಾಂಚೈಸಿ ಲೀಗ್‌ನಲ್ಲಿ 202 ಟಿ28 ಪಂದ್ಯಗಳಲ್ಲಿ ತಂಡಗಳನ್ನು ಮುನ್ನಡೆಸಿರುವ ಡುಪ್ಲೆಸಿಸ್, 8 ಶತಕ ಹಾಗೂ 45 ಅರ್ಧಶತಕಗಳ ನೆರವಿನಿಂದ 6575 ರನ್ ಗಳಿಸಿದ್ದರೆ, ಒಟ್ಟಾರೆ ಟಿ20 ಪಂದ್ಯಗಳಲ್ಲಿ 11847 ರನ್ ಬಾರಿಸಿದ್ದಾರೆ. ವಿರಾಟ್ ಕೊಹ್ಲಿ ನಾಯಕರಾಗಿ 6564 ರನ್ ಹಾಗೂ ಒಟ್ಟಾರೆ 13543 ರನ್ ಗಳಿಸಿದ್ದಾರೆ. ಆ ಮೂಲಕ ಡುಪ್ಲೆಸಿಸ್ ಟಿ20 ಸ್ವರೂಪದಲ್ಲಿ ನಾಯಕರಾಗಿ ಅತಿ ಹೆಚ್ಚು ರನ್ ಗಳಿಸಿದ ನಾಯಕ ಎಂಬ ದಾಖಲೆಯನ್ನು ಬರೆದಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
MLC 2025: ಟಿ20 ಕ್ರಿಕೆಟ್‌ನಲ್ಲಿ ಮಹತ್ವದ ದಾಖಲೆ ಬರೆದ ಕೈರೊನ್ ಪೊಲಾರ್ಡ್!
ನಾಯಕರಾಗಿ ಅತಿ ಹೆಚ್ಚು ಟಿ20 ರನ್ ಗಳಿಸಿದ ನಾಯಕರು
* 6575 ರನ್- ಫಾಪ್ ಡು ಪ್ಲೆಸಿಸ್ - ದಕ್ಷಿಣ ಆಫ್ರಿಕಾ
* 6564 ರನ್ - ವಿರಾಟ್ ಕೊಹ್ಲಿ - ಭಾರತ
* 6358- ಜೇಮ್ಸ್ ವಿನ್ಸ್- ಇಂಗ್ಲೆಂಡ್
* 6283 ರನ್-ಎಂಎಸ್ ಧೋನಿ - ಭಾರತ
* 6064 ರನ್- ರೋಹಿತ್ ಶರ್ಮಾ- ಭಾರತ
ಅಗ್ರಸ್ಥಾನಕ್ಕೇರಿದ ಟೆಕ್ಸಸ್
2025ರ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಟೆಕ್ಸಸ್ ಸೂಪರ್ ಕಿಂಗ್ಸ್ ತಂಡವು ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿ 14 ಅಂಕ (+1.603 ನೆಟ್ ರನ್ ರೇಟ್) ಗಳಿಸಿ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ. ಸ್ಯಾನ್ ಫ್ರಾನ್ಸಿಸ್ಕೋ ಯೂನಿಕರ್ಸ್ 9 ಪಂದ್ಯಗಳಿಂದ 7 ರಲ್ಲಿ ಗೆಲುವು ಸಾಧಿಸಿ 14 ಅಂಕ ಹೊಂದಿದ್ದರೂ ನೆಟ್ ರನ್‌ರೇಟ್ (+1.527) ಕಾರಣದಿಂದ ಎರಡನೇ ಸ್ಥಾನದಲ್ಲಿದೆ. ಜುಲೈ 13 ರಂದು ಫೈನಲ್ ಪಂದ್ಯ ನಡೆಯಲಿದೆ.