ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಟೀಂ ಇಂಡಿಯಾ ನಾಯಕತ್ವಕ್ಕೆ ಹರ್ಮನ್‌ಪ್ರೀತ್‌ ಕೌರ್‌ ದಿಢೀರ್‌ ರಾಜೀನಾಮೆ; ಯಾರಾಗ್ತಾರೆ ಮುಂದಿನ ಕ್ಯಾಪ್ಟನ್‌?

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ನ ನಾಯಕತ್ವ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಘೋಷಿಸಿದ್ದಾರೆ. ದೀರ್ಘಕಾಲದ ಉಪನಾಯಕಿ ಸ್ಮೃತಿ ಮಂದಾನಾ ಅವರಿಗೆ ನಾಯಕತ್ವ ಜವಾಬ್ದಾರಿ ನೀಡಲು ಬಿಸಿಸಿಐ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಟೀಂ ಇಂಡಿಯಾ ನಾಯಕತ್ವಕ್ಕೆ ಹರ್ಮನ್‌ಪ್ರೀತ್‌ ಕೌರ್‌ ದಿಢೀರ್‌ ರಾಜೀನಾಮೆ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Oct 6, 2026 1:30 PM

ನವದೆಹಲಿ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಅವರು ಎಲ್ಲಾ ಮಾದರಿಯ ಕ್ರಿಕೆಟ್‌ನ ನಾಯಕತ್ವ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಘೋಷಿಸಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಏಷ್ಯನ್ ಗೇಮ್ಸ್ 2026 ರಲ್ಲಿ ಭಾರತ ತಂಡಕ್ಕೆ ಐತಿಹಾಸಿಕ ಚಿನ್ನದ ಪದಕ ಗೆದ್ದುಕೊಟ್ಟ ಬೆನ್ನಲ್ಲೇ ಅವರು ಈ ಹಠಾತ್ ನಿರ್ಧಾರ ಕೈಗೊಂಡಿರುವುದು ಅಭಿಮಾನಿಗಳಿಗೆ ಶಾಕ್‌ ನೀಡಿದೆ.

ಗುವಾಹಟಿಯಲ್ಲಿ ಬಿಸಿಸಿಐ (BCCI) ಕಾರ್ಯದರ್ಶಿ ದೇವಜಿತ್ ಸೈಕಿಯಾ ನೇತೃತ್ವದಲ್ಲಿ ನಡೆದ ಪರಿಶೀಲನಾ ಸಭೆಯ ನಂತರ ಹರ್ಮನ್‌ಪ್ರೀತ್ ಕೌರ್ ರಾಜೀನಾಮೆ ಘೋಷಿಸಿದರು. ತಮ್ಮ ನಿರ್ಧಾರದ ಕುರಿತು ಭಾವುಕ ಪೋಸ್ಟ್‌ ಹಂಚಿಕೊಂಡ ಅವರು, "ಇದು ನನ್ನ ಜೀವನದ ಅತ್ಯಂತ ಕಠಿಣ ನಿರ್ಧಾರ. ನನ್ನ ರಕ್ತ, ಬೆವರು, ಸಮಯ ಮತ್ತು ಅನೇಕ ಬಾರಿ ನನ್ನ ವೈಯಕ್ತಿಕ ಆಕಾಂಕ್ಷೆಗಳನ್ನೂ ತಂಡಕ್ಕಾಗಿ ತ್ಯಾಗ ಮಾಡಿದ್ದೇನೆ. ಈಗ ನಾಯಕತ್ವದಿಂದ ಕೆಳಗಿಳಿಯಲು ಸರಿಯಾದ ಸಮಯ ಬಂದಿದೆ. ವರ್ಷಗಳ ನೆನಪುಗಳು, ಭಾವನೆಗಳು, ತ್ಯಾಗಗಳು ಮತ್ತು ನನ್ನ ಜೀವನದುದ್ದಕ್ಕೂ ನನ್ನೊಂದಿಗೆ ಉಳಿಯುವಂತಹ ಕ್ಷಣಗಳು ಬೆಸೆದುಕೊಂಡಿವೆ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಸಾಧನೆಗಳ ಸರದಾರ್ತಿ

2016 ರಲ್ಲಿ ಮೊದಲ ಬಾರಿಗೆ ಭಾರತ ಟಿ20 ತಂಡದ ನಾಯಕತ್ವ ವಹಿಸಿಕೊಂಡಿದ್ದ ಹರ್ಮನ್‌ಪ್ರೀತ್, 2023 ರಲ್ಲಿ ಮೂರೂ ಮಾದರಿಗಳ ಪೂರ್ಣ ಪ್ರಮಾಣದ ನಾಯಕಿಯಾಗಿ ಆಯ್ಕೆಯಾಗಿದ್ದರು. ಅವರ ನೇತೃತ್ವದಲ್ಲಿ ಭಾರತ ತಂಡವು 2025 ರಲ್ಲಿ ತನ್ನ ಚೊಚ್ಚಲ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟ್ರೋಫಿ ಗೆದ್ದು ಇತಿಹಾಸ ಸೃಷ್ಟಿಸಿತ್ತು. ಇದರೊಂದಿಗೆ ಕಪಿಲ್ ದೇವ್ ಮತ್ತು ಎಂ.ಎಸ್. ಧೋನಿ ನಂತರ ಭಾರತಕ್ಕೆ 50 ಓವರ್‌ಗಳ ವಿಶ್ವಕಪ್ ಗೆದ್ದುಕೊಟ್ಟ ಮೂರನೇ ನಾಯಕಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಮಹಿಳಾ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ಯಶಸ್ವಿ ನಾಯಕಿ ಎಂಬ ವಿಶ್ವ ದಾಖಲೆ ಹರ್ಮನ್‌ಪ್ರೀತ್ ಹೆಸರಲ್ಲಿದೆ. ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ಒಂದು ತಂಡವನ್ನು 150 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಮುನ್ನಡೆಸಿದ ವಿಶ್ವದ ಮೊದಲ ನಾಯಕಿ ಎಂಬ ಇತಿಹಾಸವನ್ನು ಇವರು ನಿರ್ಮಿಸಿದ್ದಾರೆ. ಅಷ್ಟೇ ಅಲ್ಲದೇ ಟಿ20 ಮಾದರಿಯಲ್ಲಿ ಭಾರತದ ನಾಯಕಿಯಾಗಿ ಅವರು ಕಲೆಹಾಕಿರುವ 3,300 ಕ್ಕೂ ಅಧಿಕ ರನ್‌ ಕಲೆ ಹಾಕಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಸ್ಮೃತಿ ಮಂಧನಾ

ಮುಂದಿನ ಕ್ಯಾಪ್ಟ್‌ನ ಯಾರು?

ಹರ್ಮನ್‌ಪ್ರೀತ್ ಅವರ ರಾಜೀನಾಮೆಯಿಂದ ತೆರವಾಗಿರುವ ನಾಯಕತ್ವದ ಜವಾಬ್ದಾರಿಯನ್ನು ತಂಡದ ದೀರ್ಘಕಾಲದ ಉಪನಾಯಕಿ ಸ್ಮೃತಿ ಮಂದಾನಾ ಅವರಿಗೆ ಹಸ್ತಾಂತರಿಸಲು ಬಿಸಿಸಿಐ ನಿರ್ಧರಿಸಿದೆ ಎಂದು ಹೇಳಲಾಗಿದ್ದು, ಅಧಿಕೃತವಾಗಿ ಯಾವುದೇ ಹೇಳಿಕೆ ಹೊರ ಬಿದ್ದಿಲ್ಲ. ಮಂದಾನಾ ಹೆಸರನ್ನು ಬಿಸಿಸಿಐ ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆಯಿದೆ.