ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: ʻನ್ಯೂ ಸಿಕ್ಸ್‌ ಮಷಿನ್‌ʼ-ವೈಭವ್‌ ಸೂರ್ಯವಂಶಿಗೆ ಹೊಸ ಹೆಸರು ನಾಮಕರಣ ಮಾಡಿದ ಕ್ರಿಸ್‌ ಗೇಲ್‌!

Chris Gayle on Vaibhav Sooryavanshi: ಸನ್‌ರೈಸರ್ಸ್‌ ಹೈದರಾಬಾದ್‌ ಎದುರು ತಮ್ಮ ಸಿಡಿಲಬ್ಬರದ ಬ್ಯಾಟಿಂಗ್‌ ಮೂಲಕ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಗೆಲ್ಲಿಸಿದ ವೈಭವ್‌ ಸೂರ್ಯವಂಶಿಗೆ ಯೂನಿವರ್ಸ್‌ ಬಾಸ್‌ ಕ್ರಿಸ್‌ ಗೇಲ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ವೈಭವ್‌ಗೆ ಆರ್‌ಸಿಬಿ ದಿಗ್ಗಜ ಹೊಸ ಹೆಸರನ್ನು ನೀಡಿದ್ದಾರೆ.

ವೈಭವ್‌ ಸೂರ್ಯವಂಶಿಗೆ ಹೊಸ ಹೆಸರು ನಾಮಕರಣ ಮಾಡಿದ ಕ್ರಿಸ್‌ ಗೇಲ್‌!

ವೈಭವ್‌ ಸೂರ್ಯವಂಶಿಗೆ ಹೊಸ ಹೆಸರು ನೀಡಿದ ಯೂನಿವರ್ಸ್‌ ಬಾಸ್‌. -

Profile
Ramesh Kote May 28, 2026 4:45 PM

ನವದೆಹಲಿ: ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಎಲಿಮಿನೇಟರ್‌ ಪಂದ್ಯದಲ್ಲಿ ಸ್ಪೋಟಕ ಬ್ಯಾಟ್‌ ಮಾಡಿ ಕೇವಲ 29 ಎಸೆತಗಳಲ್ಲಿ 97 ರನ್‌ ಸಿಡಿಸಿದ ರಾಜಸ್ಥಾನ್‌ ರಾಯಲ್ಸ್‌ ತಂಡದ ಯುವ ಆರಂಭಿಕ ವೈಭವ್‌ ಸೂರ್ಯವಂಶಿಯನ್ನು (Vaibhav Sooryavanshi) ಯೂನಿವರ್ಸ್‌ ಬಾಸ್‌ ಕ್ರಿಸ್‌ ಗೇಲ್‌ (Chris Gayle) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ವೈಭವ್‌ ಅಬ್ಬರದ ಬ್ಯಾಟಿಂಗ್‌ ಬಲದಿಂದ ರಾಜಸ್ಥಾನ್‌ ರಾಯಲ್‌ ತಂಡ, ಎದುರಾಳಿ ಎಸ್‌ಆರ್‌ಎಚ್‌ ಎದುರು ಗೆಲುವು ಪಡೆಯುವ ಮೂಲಕ ಟೂರ್ನಿಯ ಎರಡನೇ ಕ್ವಾಲಿಫೈಯರ್‌ಗೆ ಪ್ರವೇಶ ಮಾಡಿದೆ. ಮಾರ್ಚ್‌ 29 ರಂದು ಗುಜರಾತ್‌ ಟೈಟನ್ಸ್‌ ಎದುರು ಕಾದಾಟ ನಡೆಸಲಿದೆ.

ನವಚಂಡೀಗಢದ ಮುಲ್ಲಾನ್‌ಪುರದ ಮಹಾರಾಜ ಯದವೀಂದ್ರ ಸಿಂಗ್‌ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದಿದ್ದ ಎಲಿಮಿನೇಟರ್‌ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಆರ್‌ಆರ್‌ ಪರ ಇನಿಂಗ್ಸ್‌ ಆರಂಭಿಸಿದ ವೈಭವ್‌ ಸೂರ್ಯವಂಶಿ, 334.58ರ ಸ್ಟ್ರೈಕ್‌ ರೇಟ್‌ನಲ್ಲಿ ಬರೋಬ್ಬರಿ 12 ಸಿಕ್ಸರ್‌ ಹಾಗೂ 5 ಬೌಂಡರಿಗಳ ಮೂಲಕ ಶತಕದ ಸನಿಹ ಬಂದಿದ್ದರು. 28 ಎಸೆತಗಳಲ್ಲಿ 97 ರನ್‌ ಗಳಿಸಿದ್ದ ವೈಭವ್‌ಗೆ ಕ್ರಿಸ್‌ ಗೇಲ್‌ ಅವರ ವೇಗದ ಶತಕದ ದಾಖಲೆ ಮುರಿಯಲು ಇನ್ನು ಕೇವಲ ಒಂದು ಎಸೆತದಲ್ಲಿ ಬೌಂಡರಿ ಬೇಕಿತ್ತು. ಆದರೆ, ಅವರು ಬಲವಾದ ಹೊಡೆತಕ್ಕೆ ಕೈಹಾಕಿ ಪ್ರಫುಲ್‌ ಹಿಂಗೆಗೆ ವಿಕೆಟ್‌ ಒಪ್ಪಿಸಿದರು.

IPL 2026: 65 ಸಿಕ್ಸರ್‌ಗಳ ಮೂಲಕ ಕ್ರಿಸ್‌ ಗೇಲ್‌ರ ವಿಶ್ವ ದಾಖಲೆ ಮುರಿದ ವೈಭವ್‌ ಸೂರ್ಯವಂಶಿ!

ಕ್ರಿಸ್‌ ಗೇಲ್‌ ಅವರ ವೇಗದ ಐಪಿಎಲ್‌ ಶತಕದ ದಾಖಲೆಯನ್ನು ಮುರಿಯುವ ಅವಕಾಶವನ್ನು ಕಳೆದುಕೊಂಡರೂ 15ರ ಪ್ರಾಯದ ವೈಭವ್‌, ಐಪಿಎಲ್‌ ಟೂರ್ನಿಯಲ್ಲಿ ಸಿಕ್ಸರ್‌ಗಳನ್ನು ದಾಖಲೆಯನ್ನು ಮುರಿದಿದ್ದಾರೆ. ಏಕೈಕ ಐಪಿಎಲ್‌ ಸೀಸನ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಬರೆದಿದ್ದಾರೆ. ಇದೀಗ ವೈಭವ್‌ 65 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಆ ಮೂಲಕ 2012ರ ಟೂರ್ನಿಯಲ್ಲಿ 59 ಸಿಕ್ಸರ್‌ ಬಾರಿಸಿದ್ದ ಕ್ರಿಸ್‌ ಗೇಲ್‌ ದಾಖಲೆಯನ್ನು ಮುರಿದಿದ್ದಾರೆ.

ವೈಭವ್‌ ಸೂರ್ಯವಂಶಿ ತಮ್ಮ ಸಿಕ್ಸರ್‌ಗಳ ದಾಖಲೆಯನ್ನು ಮುರಿದ ಬಳಿಕ ವೆಸ್ಟ್‌ ಇಂಡೀಸ್‌ ದಿಗ್ಗಜ ಕ್ರಿಸ್‌ ಗೇಲ್‌, ಆರ್‌ಆರ್‌ ಆರಂಭಿಕ ಬ್ಯಾಟ್ಸ್‌ಮನ್‌ಗೆ ಹೊಸ ಹಸರು ನಾಮಕರಣ ಮಾಡಿದ್ದಾರೆ. ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ನಲ್ಲಿ ವೈಭವ್‌ ಸೂರ್ಯವಂಶಿಯನ್ನು ʻನ್ಯೂ ಸಿಕ್ಸ್‌ ಮಷಿನ್‌ʼಎಂದು ಕರೆದಿದ್ದಾರೆ. ವೈಭವ್‌ ಸೂರ್ಯವಂಶಿ ಅದ್ಭುತ ಆಟಗಾರ ಎಂದು ಮುಕ್ತಕಠದಿಂದ ಗುಣಗಾನ ಮಾಡಿದ್ದಾರೆ.



“ವೈಭವ್ ಎಂಥಾ ಅದ್ಭುತ ಆಟಗಾರ. ಯಂಗ್‌ ಮ್ಯಾನ್‌ ನೀವು ನೀಡಿದ ಮನರಂಜನೆ ಅತ್ಯುತ್ತಮ! ಹೊಸ ಸಿಕ್ಸ್ ಮಷಿನ್,” ಎಂದು ಕ್ರಿಸ್‌ ಗೇಲ್‌ ಕರೆದಿದ್ದಾರೆ.

ಟಿ20 ಟೂರ್ನಿಯ ಏಕೈಕ ಸೀಸನ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಬ್ಯಾಟರ್ಸ್‌

ವೈಭವ್‌ ಸೂರ್ಯವಂಶಿ (ರಾಜಸ್ಥಾನ್‌ ರಾಯಲ್ಸ್‌) : 65 ಸಿಕ್ಸರ್‌, ಐಪಿಎಲ್‌ 2026

ಕ್ರಿಸ್‌ ಗೇಲ್‌ (ರಾಯಲ್‌ ಚಾಲೆಂಜರ್ಸ್‌ ಬೆಂಗಳುರು: 59 ಸಿಕ್ಸರ್‌, ಐಪಿಎಲ್‌ 2012

ಕ್ರಿಸ್‌ ಗೇಲ್‌ (ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು): 51 ಸಿಕ್ಸರ್‌, ಐಪಿಎಲ್‌ 2013

ಕ್ರಿಸ್‌ ಗೇಲ್‌ (ರಂಗ್ಪುರ್‌ ರೈಡರ್ಸ್):‌ 47 ಸಿಕ್ಸರ್‌, ಬಿಪಿಎಲ್‌ 2017

SRH vs RR: ಕೇವಲ 16 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಸುರೇಶ್‌ ರೈನಾ ದಾಖಲೆ ಸರಿಗಟ್ಟಿದ ವೈಭವ್‌ ಸೂರ್ಯವಂಶಿ!

ಆರೆಂಜ್‌ ಕ್ಯಾಪ್‌ ರೇಸ್‌ನಲ್ಲಿ ವೈಭವ್‌ ಸೂರ್ಯವಂಶಿ

ಅಂದ ಹಾಗೆ ಪ್ರಸ್ತುತ ನಡೆಯುತ್ತಿರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ವೈಭವ್‌ ಸೂರ್ಯವಂಶಿ ಆರೆಂಜ್‌ ಕ್ಯಾಪ್‌ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರು ಸದ್ಯ ಆಡಿದ 15 ಇನಿಂಗ್ಸ್‌ಗಳಿಂದ 45.33ರ ಸರಾಸರಿ ಮತ್ತು 242.86ರ ಸ್ಟ್ರೈಕ್‌ ರೇಟ್‌ನಲ್ಲಿ 680 ರನ್‌ಗಳನ್ನು ಸಿಡಿಸಿದ್ದಾರೆ. ಆ ಮೂಲಕ ಪ್ರಸ್ತುತ ಆರೆಂಜ್‌ ಕ್ಯಾಪ್‌ ಅನ್ನು ತನ್ನಲ್ಲಿಯೇ ಉಳಿಸಿಕೊಂಡಿದ್ದಾರೆ. ಎರಡನೇ ಕ್ವಾಲಿಫೈಯರ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಫೈನಲ್‌ನಲ್ಲಿ 15ರ ವಯಸ್ಸಿನ ಆಟಗಾರ ಬ್ಯಾಟ್‌ ಮಾಡಿದರೆ ಖಂಡಿತಾ ಆರೆಂಜ್‌ ಕ್ಯಾಪ್‌ ಅನ್ನು ತನ್ನದಾಗಿಸಿಕೊಳ್ಳಲಿದ್ದಾರೆ.