ಕೊಹ್ಲಿ, ಧೋನಿ ಅಲ್ಲವೇ ಅಲ್ಲ! ಸಚಿನ್ ತೆಂಡೂಲ್ಕರ್ ನನ್ನ ಕ್ರಿಕೆಟ್ ಐಡಲ್ ಎಂದ ಕೇನ್ ವಿಲಿಯಮ್ಸನ್!
Kane Williamson on his Cricket idol: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಾಮೆಂಟರಿ ನಾಡುತ್ತಿರುವ ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಕೇನ್ ವಿಲಿಯಮ್ಸನ್ ತಮ್ಮ ಕ್ರಿಕೆಟ್ ಐಡಲ್ ಯಾರೆಂದು ಬಹಿರಂಗಪಡಿಸಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಎಂಎಸ್ ಧೋನಿಯನ್ನು ಕಡೆಗಣಿಸಿದ ಅವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಆರಿಸಿದ್ದಾರೆ.

ಕೇನ್ ವಿಲಿಯಮ್ಸನ್

ನವದೆಹಲಿ: ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಕೇನ್ ವಿಲಿಯಮ್ಸನ್ (Kane Williamson) ಅವರು ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ಕಾಮೆಂಟರಿ ಮಾಡುತ್ತಿದ್ದಾರೆ. ತಮ್ಮ ಕಾಮೆಂಟರಿ ವೇಳೆ ಹಲವು ಪ್ರಮುಖ ಅಂಶಗಳ ಬಗ್ಗೆ ಅವರು ಚರ್ಚೆ ನಡೆಸುತ್ತಿದ್ದಾರೆ. ಅಲ್ಲದೆ ತಮ್ಮ ಸ್ನೃಹಿತ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಶ್ಲಾಘಿಸಿದ್ದಾರೆ. ಅಲ್ಲದೆ ತಮ್ಮ ಕ್ರಿಕೆಟ್ ಐಡಲ್ ಯಾರೆಂದು ಅವರು ಬಹಿರಂಗಪಡಿಸಿದ್ದಾರೆ. ಅಚ್ಚರಿ ಎಂಬಂತೆ ಅವರು ವಿರಾಟ್ ಕೊಹ್ಲಿ, ಎಂಎಸ್ ಧೋನಿ ಸೇರಿದಂತೆ ಘಟಾನುಘಟಿ ದಿಗ್ಗಜರನ್ನು ಕಡೆಗಣಿಸಿ ಭಾರತೀಯ ಕ್ರಿಕೆಟ್‌ನ ದಂತಕತೆ ಸಚಿನ್ ತೆಂಡೂಲ್ಕರ್ (Sachin Tendulkar) ಅವರನ್ನು ಆರಿಸಿದ್ದಾರೆ.
ಪ್ರಸ್ತುತ ನಡೆಯುತ್ತಿರುವ 2025ರ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದ್ದಾರೆ. ಅವರು ಇಲ್ಲಿಯವರೆಗೂ ಆಡಿದ ಆರು ಪಂದ್ಯಗಳಿಂದ 62ರ ಸರಾಸರಿಯಲ್ಲಿ 248 ರನ್‌ಗಳನ್ನು ಸಿಡಿಸಿದ್ದಾರೆ. ಅದರಂತೆ ಆರ್‌ಸಿಬಿ ತಂಡ ಆಡಿದ 6 ಪಂದ್ಯಗಳಲ್ಲಿ ಎರಡರಲ್ಲಿ ಸೋತು, ಇನ್ನುಳಿದ ನಾಲ್ಕೂ ಪಂದ್ಯಗಳನ್ನು ಗೆದ್ದುಕೊಂಡಿದೆ. ಆ ಮೂಲಕ ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿದೆ.
IPL 2025: ಫಿಟ್ ಆದ ವೇಗಿ ಮಾಯಾಂಕ್; ರಾಜಸ್ಥಾನ್ ವಿರುದ್ಧ ಕಣಕ್ಕೆ
ಜಿಯೋ ಸಿನಿಮಾದ ʻಸ್ಟಾರ್ ನಹಿ ಫಾರ್ʼ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇನ್ ವಿಲಿಯಮ್ಸನ್, ಮಕ್ಕಳೊಂದಿಗೆ ಸಂಭಾಷಣೆಯನ್ನು ನಡೆಸಿದ್ದರು. ಈ ವೇಳೆ ಮಕ್ಕಳಿಗಾಗಿ ಪ್ರಶ್ನೋತ್ತರ ಅವಧಿಯನ್ನು ಏರ್ಪಡಿಸಲಾಗಿತ್ತು. ಈ ವೇಳೆ ಮಕ್ಕಳು ಕೇಳಿದ ಹಲವು ಪ್ರಶ್ನೆಗಳಿಗೆ ಕಿವೀಸ್ ಸ್ಟಾರ್ ಬ್ಯಾಟ್ಸ್‌ಮನ್ ಉತ್ತರ ನೀಡಿದ್ದಾರೆ. ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಯುವ ಕ್ರಿಕೆಟಿಗರನ್ನು ಪ್ರೋತ್ಸಾಹಿಸುವುದಾಗಿದೆ.
"ಯಾರಾದರೂ ಒಬ್ಬರಿಂದ ಒಂದು ಶಾಟ್ ಅನ್ನು ನೀವು ಪಡೆಯುವುದಾದರೆ, ಯಾವ ಶಾಟ್ ಅನ್ನು ಪಡೆಯುತ್ತೀರಿ? ಎಂದು ಅಭಿಮಾನಿಯೊಬ್ಬರು ಪ್ರಶ್ನೆಯನ್ನು ಕೇಳಿದರು. ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಈ ಪ್ರಶ್ನೆಗೆ ಉತ್ತರ ನೀಡುವ ಹಿಂಜರಿಯಲಿಲ್ಲ. ಅವರು "ವಿರಾಟ್ ಕೊಹ್ಲಿ ಆಡುವ ಲೆಗ್ ಫ್ಲಿಕ್ ಶಾಟ್ ಎಂದು ನಾನು ಭಾವಿಸುತ್ತೇನೆ," ಎಂದು ಉತ್ತರ ನೀಡಿದ್ದಾರೆ.
IPL 2025: ಓವರ್ ಪೂರ್ತಿಗೊಳಿಸಲು 11 ಎಸೆತ ಎಸೆದು ಅನಗತ್ಯ ದಾಖಲೆ ಬರೆದ ಸಂದೀಪ್ ಶರ್ಮ
ಇದಾದ ಬಳಿಕ ಇದೇ ಸಂಭಾಷಣೆಯನ್ನು ತಮ್ಮ ಕ್ರಿಕೆಟ್ ಐಡಲ್ ಸಚಿನ್ ತೆಂಡೂಲ್ಕರ್ ಎಂದು ಅವರು ಕರೆದಿದ್ದಾರೆ. "ನನ್ನ ಕ್ರಿಕೆಟ್ ಆರಾಧ್ಯ ದೈವ ನಾವು ಇದ್ದ ಮೈದಾನದಲ್ಲಿ ಆಡುತ್ತಿದ್ದ ವ್ಯಕ್ತಿ. ಸಚಿನ್ ತೆಂಡೂಲ್ಕರ್ ಆ ದಂತಕತೆ. ಈಗಲೂ ಕೂಡ ಅವರು ಆಡುವುದನ್ನು ನಾನು ನೋಡುತ್ತಿದ್ದೇನೆ," ಎಂದು ಕೇನ್ ವಿಲಿಯಮ್ಸನ್ ತಿಳಿಸಿದ್ದಾರೆ.
ಇತ್ತೀಚೆಗೆ ಅಂತ್ಯವಾಗಿದ್ದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ಕೇನ್ ವಿಲಿಯಮ್ಸನ್ ಆಡಿದ್ದರು. ಈ ಟೂರ್ನಿಯಲ್ಲಿ ಎರಡು ಬಾರಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಿದ್ದವು. ಈ ಎರಡೂ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆಲುವು ಪಡೆದಿತ್ತು. ಅಂತಿಮವಾಗಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಚಾಂಪಿಯನ್ ಆಗಿತ್ತು.