ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೊಟ್ಟ ಮೊದಲ ಎಸೆತದಲ್ಲಿಯೇ ವಿಕೆಟ್‌ ಕಿತ್ತು ಕಪಿಲ್‌ ದೇವ್‌ ದಾಖಲೆ ಸರಿಗಟ್ಟಿದ ಓಲ್ಲಿ ರಾಬಿನ್ಸನ್‌!

ಹೆಡಿಂಗ್ಲಿಯಲ್ಲಿ ಪಾಕಿಸ್ತಾನ ವಿರುದ್ಧ ಆರಂಭವಾದ ಟೆಸ್ಟ್ ಪಂದ್ಯದಲ್ಲಿ ಓಲಿ ರಾಬಿನ್ಸನ್ ಮೊದಲ ಎಸೆತದಲ್ಲೇ ವಿಕೆಟ್ ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ಪಾಕಿಸ್ತಾನ ವಿರುದ್ಧದ ಟೆಸ್ಟ್‌ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ರಾಬಿನ್ಸನ್ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಭಾರತದ ದಿಗ್ಗಜ ಕಪಿಲ್ ದೇವ್ ಈ ಸಾಧನೆ ಮಾಡಿದ್ದರು.

ಕಪಿಲ್‌ ದೇವ್‌ರ 43 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ಓಲ್ಲಿ ರಾಬಿನ್ಸನ್‌!

ಪಂದ್ಯದ ಮೊದಲ ಎಸೆತದಲ್ಲಿಯೇ ವಿಕೆಟ್‌ ಕಿತ್ತ ಓಲ್ಲೀ ರಾಬಿನ್ಸನ್‌. -

Profile
Ramesh Kote Aug 19, 2026 9:10 PM

ನವದೆಹಲಿ: ಪಾಕಿಸ್ತಾನ ವಿರುದ್ಧ ಹೆಡಿಂಗ್ಲಿಯಲ್ಲಿ ಆರಂಭವಾದ ಮೊದಲ ಟೆಸ್ಟ್‌ ಪಂದ್ಯ (ENG vs PAK) ಮೊದಲ ದಿನವೇ ಓಲ್ಲಿ ರಾಬಿನ್ಸನ್ (Ollie Robinson) ಭರ್ಜರಿ ಆರಂಭ ನೀಡಿದರು. ಪಂದ್ಯದ ಮೊದಲ ಎಸೆತದಲ್ಲೇ ಅಜಾನ್ ಅವೈಸ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸುವ ಮೂಲಕ ರಾಬಿನ್ಸನ್ ಹೊಸ ದಾಖಲೆ ನಿರ್ಮಿಸಿದರು. ಅಂಪೈರ್ ಔಟ್ ತೀರ್ಪು ನೀಡಿದರೂ ಅವೈಸ್ ತೀರ್ಪನ್ನು ಪ್ರಶ್ನಿಸಿ ಡಿಆರ್‌ಎಸ್‌ ಮೊರೆ ಹೋದರು. ಆದರೆ ಮೂರನೇ ಅಂಪೈರ್‌ ತೀರ್ಪನ್ನೇ ದೃಢಪಡಿಸಿತು. ಆ ಮೂಲಕ ಫೀಲ್ಡ್‌ ಅಂಪೈರ್‌ ನಿರ್ಧಾರವನ್ನು ಮೂರನೇ ಅಂಪೈರ್‌ ಎತ್ತಿ ಹಿಡಿದರು. ಆ ಮೂಲಕ ಓಲ್ಲೀ ರಾಬಿನ್ಸನ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ನೂತನ ದಾಖಲೆಯನ್ನು ಬರೆದಿದ್ದಾರೆ.

ಈ ವಿಕೆಟ್‌ನೊಂದಿಗೆ ರಾಬಿನ್ಸನ್, ಪಾಕಿಸ್ತಾನ ವಿರುದ್ಧ ಟೆಸ್ಟ್ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು ಭಾರತದ ಮಾಜಿ ನಾಯಕ ಕಪಿಲ್ ದೇವ್ 1983ರಲ್ಲಿ ಈ ಸಾಧನೆ ಮಾಡಿದ್ದರು. ಪಾಕಿಸ್ತಾನದ ಮೊಹ್ಸಿನ್ ಖಾನ್ ಅವರನ್ನು ಔಟ್ ಮಾಡುವ ಮೂಲಕ ಕಪಿಲ್ ದೇವ್ ಈ ದಾಖಲೆ ನಿರ್ಮಿಸಿದ್ದರು.

ಇದಷ್ಟೇ ಅಲ್ಲದೆ, ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯ ಆರಂಭಿಕ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಮೊದಲ ಬೌಲರ್ ಎಂಬ ವಿಶೇಷ ದಾಖಲೆಯನ್ನೂ ರಾಬಿನ್ಸನ್ ತಮ್ಮದಾಗಿಸಿಕೊಂಡರು. ಟೆಸ್ಟ್ ಸರಣಿಯ ಮೊದಲ ಎಸೆತದಲ್ಲೇ ವಿಕೆಟ್ ಪಡೆಯುವ ಒಟ್ಟಾರೆ ಸಾಧನೆಯಲ್ಲಿ ಅವರು ಇಂಗ್ಲೆಂಡ್‌ನ ಎರಡನೇ ಬೌಲರ್ ಆಗಿದ್ದಾರೆ. ಇದಕ್ಕೂ ಮೊದಲು ಜೇಮ್ಸ್ ಆಂಡರ್ಸನ್ 2019ರಲ್ಲಿ ಸೆಂಚುರಿಯನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಈ ಸಾಧನೆ ಮಾಡಿದ್ದರು. ಆ ಪಂದ್ಯದಲ್ಲಿ ಅವರು ಡೀನ್ ಎಲ್ಗರ್ ಅವರನ್ನು ಮೊದಲ ಎಸೆತದಲ್ಲೇ ಔಟ್ ಮಾಡಿದ್ದರು.

IND vs SL: ಗಾಲೆ ಟೆಸ್ಟ್‌ ಗೆಲುವಿನ ಬಳಿಕ ದೊಡ್ಡ ಹೇಳಿಕೆ ನೀಡಿದ ಕನ್ನಡಿಗ ಕೆಎಲ್‌ ರಾಹುಲ್‌!

ಹೆಡಿಂಗ್ಲಿ ಟೆಸ್ಟ್‌ನಲ್ಲಿ ಓಲ್ಲಿ ರಾಬಿನ್ಸನ್ ತಮ್ಮ ಅದ್ಭುತ ಆರಂಭವನ್ನು ಮುಂದುವರಿಸಿ ಪಾಕಿಸ್ತಾನಕ್ಕೆ ಮತ್ತೊಂದು ಆಘಾತ ನೀಡಿದರು. ಪಂದ್ಯದ ಮೊದಲ ಎಸೆತದಲ್ಲೇ ಅಜಾನ್ ಅವೈಸ್ ಅವರನ್ನು ಔಟ್ ಮಾಡಿದ್ದ ರಾಬಿನ್ಸನ್, ತಮ್ಮ ಮೂರನೇ ಓವರ್‌ನಲ್ಲಿ ಶಾನ್ ಮಸೂದ್ ಅವರ ವಿಕೆಟ್‌ ಕೂಡ ಪಡೆದರು. ಪರಿಣಾಮ, ಲೀಡ್ಸ್‌ನಲ್ಲಿ ಪಾಕಿಸ್ತಾನ ತಂಡ ನೆಲೆ ಕಂಡುಕೊಳ್ಳುವ ಮುನ್ನವೇ 6 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತು.



ನಂತರ ಮಳೆ ಪಂದ್ಯಕ್ಕೆ ಅಡ್ಡಿಪಡಿಸಿತು. 10 ಓವರ್‌ಗಳ ಆಟದ ಬಳಿಕ ಪಾಕಿಸ್ತಾನ 19 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದಾಗ ಆಟಗಾರರು ಮೈದಾನದಿಂದ ಹೊರನಡೆದರು. ಮತ್ತೊಮ್ಮೆ ನಾಯಕತ್ವ ವಹಿಸಿಕೊಂಡಿರುವ ಜೋ ರೂಟ್ ಅವರಿಗೆ ಇದಕ್ಕಿಂತ ಉತ್ತಮ ಆರಂಭವನ್ನು ನಿರೀಕ್ಷಿಸಲು ಸಾಧ್ಯವಿರಲಿಲ್ಲ.

ENG vs PAK: ಇಂಗ್ಲೆಂಡ್‌ ವಿರುದ್ಧ ಮೊದಲನೇ ಟೆಸ್ಟ್‌ ಪಂದ್ಯದಿಂದ ಬಾಬರ್‌ ಆಝಮ್‌ ಔಟ್‌!

ರೂಟ್ ಅವರನ್ನು ಮತ್ತೆ ನಾಯಕನಾಗಿ ನೇಮಕ ಮಾಡಿದ ಬಳಿಕ ಹಲವು ಪ್ರಶ್ನೆಗಳು ಎದ್ದಿದ್ದವು. ಆದರೆ ಹೆಡಿಂಗ್ಲಿಯಲ್ಲಿ ಪಂದ್ಯದ ಆರಂಭಿಕ ಹಂತದಲ್ಲೇ ಇಂಗ್ಲೆಂಡ್ ಬೌಲರ್‌ಗಳು ನೀಡಿದ ಪ್ರದರ್ಶನದಿಂದ ರೂಟ್‌ಗೆ ಸದ್ಯಕ್ಕೆ ಎಲ್ಲವೂ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುವಂತೆ ಕಾಣುತ್ತಿದೆ.

ಟೆಸ್ಟ್‌ ಸರಣಿಯ ಮೊದಲ ಎಸೆತದಲ್ಲಿ ವಿಕೆಟ್‌ ಕಿತ್ತ ಬೌಲರ್‌ಗಳು

ವರ್ಷ ಬೌಲರ್ ದೇಶ ಔಟ್ ಆದ ಬ್ಯಾಟರ್ ಸ್ಥಳ
1933 ಟೆಸ್ಟ್ ಬ್ಯಾಡ್‌ಕಾಕ್ NZ ಹರ್ಬರ್ಟ್ ಸಟ್ಕ್ಲಿಫ್ ಕ್ರೈಸ್ಟ್‌ಚರ್ಚ್
1936 ಎರ್ನಿ ಮೆಕ್‌ಕಾರ್ಮಿಕ್ AUS ಸ್ಟಾನ್ ವರ್ತಿಂಗ್ಟನ್ ದಿ ಗಬ್ಬಾ
1992 ಕಪಿಲ್ ದೇವ್ IND ಜಿಮ್ಮಿ ಕೂಕ್ ಡರ್ಬನ್‌
2002 ಪೆಡ್ರೊ ಕಾಲಿನ್ಸ್ WI ಹನ್ನನ್ ಸರ್ಕಾರ್ ಢಾಕಾ
2004 ಪೆಡ್ರೊ ಕಾಲಿನ್ಸ್ WI ಹನ್ನನ್ ಸರ್ಕಾರ್ ಗ್ರಾಸ್ ಐಲೆಟ್
2007 ಮಶ್ರಾಫೆ ಮೊರ್ತಜಾ BAN ವಾಸಿಂ ಜಾಫರ್ ಚಟ್ಟೋಗ್ರಾಮ್
2009 ಮೊಹಮ್ಮದ್ ಆಮಿರ್ PAK ಟಿಮ್ ಮ್ಯಾಕಿಂಟೋಷ್ ಡ್ಯುನೆಡಿನ್
2017 ಸುರಂಗ ಲಕ್ಮಲ್ SL ಕೆ.ಎಲ್. ರಾಹುಲ್ ಈಡನ್ ಗಾರ್ಡನ್ಸ್
2019 ಜೇಮ್ಸ್ ಆಂಡರ್ಸನ್ ENG ಡೀನ್ ಎಲ್ಗರ್ ಸೆಂಚುರಿಯನ್
2021 ಬ್ಲೆಸಿಂಗ್ ಮುಜಾರಬಾನಿ ZIM ಅಬ್ದುಲ್ ಮಲಿಕ್ ಅಬುಧಾಬಿ
2021 ಮಿಚೆಲ್ ಸ್ಟಾರ್ಕ್ AUS ರೋರಿ ಬರ್ನ್ಸ್ ದಿ ಗಬ್ಬಾ
2026 ಓಲ್ಲಿ ರಾಬಿನ್ಸನ್ ENG ಆಝಾನ್ ಅವೈಸ್ ಹೆಡಿಂಗ್ಲಿ