ರೊನಾಲ್ಡೊ ಸಂಭ್ರಮಾಚರಣೆ ಪೋಸ್ಟ್ ಮಾಡಿ ಭಾರತೀಯರನ್ನು ಕೆಣಕಿದ ಮೊಹ್ಸಿನ್ ನಖ್ವಿ
ಸೂಪರ್ 4 ಪಂದ್ಯದ ವೇಳೆ ಪಾಕ್ ವೇಗಿ ಹ್ಯಾರಿಸ್ ರೌಫ್ ಫೀಲ್ಡ್ ಮಾಡುವಾಗ ಭಾರತೀಯ ಅಭಿಮಾನಿಗಳತ್ತ ಕೈ ತೋರಿಸಿ ಜೆಟ್‌ಗಳು ಕೆಳಕ್ಕೆ ಬೀಳುವಂತೆ ಕೈಸನ್ನೆ ಮಾಡಿ, ಭಾರತದ 6 ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎನ್ನುವ ರೀತಿ ಸಂಭ್ರಮಿಸಿದ್ದರು. ಬ್ಯಾಟರ್ ಸಾಹಿಬ್‌ಝಾದ ಫರ್ಹಾನ್ ತನ್ನ ಬ್ಯಾಟ್ ಮೂಲಕ ಗನ್ ಶಾಟ್ ಮಾಡುವ ರೀತಿ ಸಂಭ್ರಮಿಸಿದ್ದರು.

-

ದುಬೈ: ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ(2025 Asia Cup) ಭಾರತ ಮತ್ತು ಪಾಕಿಸ್ತಾನ( IND vs PAK) ನಡುವಿನ ಸಂಘರ್ಷ ಸದ್ಯಕ್ಕೆ ನಿಲ್ಲುವಂತೆ ಕಂಡುಬರುತ್ತಿಲ್ಲ. ಒಂದೆಡೆ ಭಾರತೀಯ ಆಟಗಾರರು ‘ನೋ ಶೇಕ್‌ಹ್ಯಾಂಡ್’ ಜತೆಗೆ ಸೋಲಿನ ರುಚಿ ತೋರಿಸುತ್ತಿದ್ದಾರೆ. ಇದನ್ನು ಸಹಿಸಿಕೊಳ್ಳಲಾಗದ ಪಾಕ್ ತನ್ನ ಕುತಂತ್ರಿ ಬುದ್ಧಿ ಮೂಲಕ ಆಪರೇಷನ್ ಸಿಂಧೂರ್ ವೇಳೆ ಭಾರತದ 6-0 ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎನ್ನುವ ರೀತಿಯಲ್ಲಿ ಕೈಸನ್ನೆ ಸಂಭ್ರಮಾಚರಣೆ ನಡೆಸುತ್ತಿದ್ದಾರೆ.
ಈ ಬಗ್ಗೆ ಬಿಸಿಸಿಐ ಈಗಾಗಲೇ ಐಸಿಸಿಗೆ ದೂರು ನೀಡಿದೆ. ಈ ನಡುವೆಯೂ ಪಿಸಿಬಿ ಅಧ್ಯಕ್ಷ, ಏಷ್ಯಾಕಪ್ ಆಯೋಜಿಸುತ್ತಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ) ಮುಖ್ಯಸ್ಥರೂ ಆಗಿರುವ ಮೊಹ್ಸಿನ್ ನಖ್ವಿ(mohsin naqvi) ಅವರು ಕ್ರಿಸ್ಟಿಯಾನೊ ರೊನಾಲ್ಡೊ ಅವರ ಸಂಭ್ರಮಾಚರಣೆಯ ವಿಡಿಯೊವೊಂದನ್ನು ಟ್ವೀಟ್ ಮಾಡುವ ಮೂಲಕ ವಿವಾದವೊಂದನ್ನು ಸೃಷ್ಟಿಸಿದ್ದಾರೆ.
ಮೊಹ್ಸಿನ್ ನಖ್ವಿ ಅವರು ಹಂಚಿಕೊಂಡಿರುವ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಸಂಭ್ರಮಾಚರಣೆಐ ವಿಡಿಯೊದಲ್ಲಿ ರೊನಾಲ್ಡೊ ವಿಮಾನ ಹಾರುವಂತೆ ಸನ್ನೆ ಮಾಡುತ್ತಿರುದು ಕಾಣಬಹುದು. ಇದು ಭಾರತೀಯರನ್ನು ಅಣಕಿಸುವ ನಿಟ್ಟಿನಲ್ಲೇ ಈ ರೀತಿ ಮಾಡಿದ್ದಾರೆ ಎಂದು ಭಾರತೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ ಪಾಕ್ ವಿರುದ್ಧ ಇನ್ನು ಮುಂದೆ ಪಂದ್ಯ ಆಡದಂತೆಯೂ ಭಾರತ ತಂಡದ ವಿರುದ್ದ ಕಿಡಿಕಾರಿದ್ದಾರೆ.
If ICC has any shame left, they should ban Pakistan cricket for 2 years.
— Space Recorder (@1spacerecorder) September 24, 2025
ACC Chairman Mohsin Naqvi openly mocked India by putting this pic intentionally, this is unacceptable
🚨🚨 pic.twitter.com/6ensE59cbr
ಸೂಪರ್ 4 ಪಂದ್ಯದ ವೇಳೆ ಪಾಕ್ ವೇಗಿ ಹ್ಯಾರಿಸ್ ರೌಫ್ ಫೀಲ್ಡ್ ಮಾಡುವಾಗ ಭಾರತೀಯ ಅಭಿಮಾನಿಗಳತ್ತ ಕೈ ತೋರಿಸಿ ಜೆಟ್‌ಗಳು ಕೆಳಕ್ಕೆ ಬೀಳುವಂತೆ ಕೈಸನ್ನೆ ಮಾಡಿ, ಭಾರತದ 6 ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎನ್ನುವ ರೀತಿ ಸಂಭ್ರಮಿಸಿದ್ದರು. ಬ್ಯಾಟರ್ ಸಾಹಿಬ್‌ಝಾದ ಫರ್ಹಾನ್ ತನ್ನ ಬ್ಯಾಟ್ ಮೂಲಕ ಗನ್ ಶಾಟ್ ಮಾಡುವ ರೀತಿ ಸಂಭ್ರಮಿಸಿದ್ದರು. ಮಹಿಳಾ ತಂಡದ ಆಟಗಾರ್ತಿಯರೂ ಕೂಡ ಇದೇ ರೀತಿ ಉದ್ಧಟತನ ಮೆರೆದಿದ್ದರು.
ಇದನ್ನೂ ಓದಿ IND vs PAK: 'ಎಲ್' ಕೈ ಸನ್ನೆಯಿಂದ ಸಂಭ್ರಮಿಸಲು ಕಾರಣ ಬಹಿರಂಗಪಡಿಸಿದ ಅಭಿಷೇಕ್ ಶರ್ಮಾ!