ಮನ್ವಂತ್ ಕುಮಾರ್ ಶತಕ: ಎರಡನೇ ದಿನ ಕರ್ನಾಟಕ- ಸೌರಾಷ್ಟ್ರ ತಂಡಗಳಿಂದ ಸಮಬಲದ ಹೋರಾಟ!
KAR vs SAU: ಮನ್ವಂತ್ ಕುಮಾರ್ ಅವರ ಭರ್ಜರಿ ಶತಕದ ಬಲದಿಂದ ಕರ್ನಾಟಕ ತಂಡ 2026-27ರ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಎಲೈಟ್ ಬಿ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಉತ್ತಮ ಮೊತ್ತವನ್ನು ಕಲೆ ಹಾಕಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಉಭಯ ತಂಡಗಳು ಸಮಬಲ ಸಾಧಿಸಿವೆ.
ಸೌರಾಷ್ಟ್ರ ಎದುರು ಶತಕ ಬಾರಿಸಿದ ಮನ್ವಂತ್ ಕುಮಾರ್ ಬ್ಯಾಟಿಂಗ್ ವೈಖರಿ. -
Ramesh Kote
Oct 19, 2026 8:39 PM
ಬೆಂಗಳೂರು: ಮನ್ವಂತ್ ಕುಮಾರ್ (Manvanth Kumar) ಅವರ ಹೋರಾಟದ ಶತಕದ ಬಲದಿಂದ ಕರ್ನಾಟಕ ತಂಡ, 2026-27ರ ಸಾಲಿನ ರಣಜಿ ಟ್ರೋಫಿ (Ranji Trophy 2026-27) ಎಲೈಟ್ ಬಿ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಉತ್ತಮ ಮೊತ್ತವನ್ನು ಕಲೆ ಹಾಕಲು ಸಾಧ್ಯವಾಯಿತು. ಒಂದು ಹಂತದಲ್ಲಿ ಕರ್ನಾಟಕ ತಂಡ 200 ರನ್‌ಗಳ ಗಡಿ ದಾಟುವುದಕ್ಕೂ ಮುನ್ನ 8 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತಾದರೂ ಮನ್ವಂತ್ ಅವರ ಶತಕದ ಬಲದಿಂದ ಕರ್ನಾಟಕ ತಂಡ 300ಕ್ಕೂ ಅಧಿಕ ರನ್‌ಗಳನ್ನು ಗಳಿಸಿತು. ಆದರೂ ಎರಡನೇ ದಿನ ಸೌರಾಷ್ಟ್ರ ತಂಡ ಪ್ರಥಮ ಇನಿಂಗ್ಸ್ ಆರಂಭಿಸಿದೆ. ಅಂತಿಮವಾಗಿ ಉಭಯ ತಂಡಗಳು ದಿನದಾಂತ್ಯಕ್ಕೆ ಸಮಬಲನ್ನು ಕಾಯ್ದುಕೊಂಡಿವೆ.