ಅ 11 ರಂದು ರಣಜಿ ಟ್ರೋಫಿ ಆರಂಭ, 2026-27ರ ಸಾಲಿನ ದೇಶಿ ಕ್ರಿಕೆಟ್ ವೇಳಾಪಟ್ಟಿ ಪ್ರಕಟ!
2026-27ರ ಸಾಲಿನ ಭಾರತೀಯ ದೇಶಿ ಕ್ರಿಕಟ್ ಋತುವಿನ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಈ ಋತುವು ಆಗಸ್ಟ್ 23 ರಂದು ದುಲೀಪ್ ಟ್ರೋಫಿ ಟೂರ್ನಿಯ ಮೂಲಕ ಪ್ರಾರಂಭವಾಗಲಿದೆ. ಅಕ್ಟೋಬರ್ 11 ರಂದು ರಣಜಿ ಟ್ರೋಫಿ ಪಂದ್ಯಗಳು ನಡೆಯಲಿವೆ. 2027ರ ಮಾರ್ಚ್ ತಿಂಗಳಲ್ಲಿ ರಣಜಿ ಟ್ರೋಫಿ ಫೈನಲ್ ಮೂಲಕ ದೇಶಿ ಕ್ರಿಕೆಟ್ ಅಂತ್ಯವಾಗಲಿದೆ
2026-27ರ ಸಾಲಿನ ದೇಶಿ ಕ್ರಿಕೆಟ್ ವೇಳಾಪಟ್ಟಿ ಪ್ರಕಟ. -
ನವದೆಹಲಿ: ಭಾರತದ ದೇಶಿ ಕ್ರಿಕೆಟ್ ಋತುವಿನ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮೇ 20 ರಂದು ಬುಧವಾರ ಬಿಡುಗಡೆ ಮಾಡಿದ್ದು, ಆಗಸ್ಟ್ 23 ರಂದು ದುಲೀಪ್ ಟ್ರೋಫಿಯೊಂದಿಗೆ 2026-27ರ ಸಾಲಿನ ದೇಶಿ ಕ್ರಿಕೆಟ್ ಆರಂಭವಾಗಲಿದೆ. ಮಹತ್ವದ ರಣಜಿ ಟ್ರೋಫಿ (Ranji Trophy) ಟೂರ್ನಿಯು ಮತ್ತೊಮ್ಮೆ ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತ ಅಕ್ಟೋಬರ್ 11 ರಿಂದ ಆರಂಭವಾಗಲಿದೆ. ಇದರ ನಡುವೆ ವಲಯ ಸ್ವರೂಪಕ್ಕೆ ಮರಳಿರುವ ದುಲೀಪ್ ಟ್ರೋಫಿ ಆಗಸ್ಟ್ 23 ರಿಂದ ಸೆಪ್ಟೆಂಬರ್ 10ರವರೆಗೆ ನಡೆಯಲಿದೆ. ಇಡೀ ಟೂರ್ನಿಯನ್ನು ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಆಯೋಜಿಸಲಾಗುವುದು.
ಮುಂಬರುವ ಋತುವಿನಲ್ಲಿ ಬಿಸಿಸಿಐ ವಯೋಮಾನ ಮತ್ತು ಹಿರಿಯ ಮಟ್ಟದ ಕ್ರಿಕೆಟ್‌ನಲ್ಲಿ ಒಟ್ಟು 1,788 ಪಂದ್ಯಗಳನ್ನು ಆಯೋಜಿಸುತ್ತದೆ. ಇದರಲ್ಲಿ ಪುರುಷರಿಗಾಗಿ ಅಂಡರ್-16, ಅಂಡರ್-19 ಮತ್ತು 23 ವರ್ಷದೊಳಗಿನವರ ಟೂರ್ನಿಗಳು ಹಾಗೂ ಹಿರಿಯ ಮಟ್ಟದ ಟೂರ್ನಿಗಳೂ ಸೇರಿವೆ. ಅದೇ ರೀತಿ, ಮಹಿಳೆಯರಿಗೆ ಅಂಡರ್-15, ಅಂಡರ್-19 ಮತ್ತು 23 ವರ್ಷದೊಳಗಿನವರ ಪಂದ್ಯಗಳು, ಹಿರಿಯರ ಜೊತೆಗೆ ನಡೆಯಲಿವೆ. 23 ವರ್ಷದೊಳಗಿನವರ ವಿಭಾಗದ ಸೀಮಿತ ಓವರ್‌ಗಳ ಟೂರ್ನಿ ಹಾಗೂ ವಿಜ್ಜಿ ಟ್ರೋಫಿಗಾಗಿ ಅಂತರ-ವಲಯ ವಿಶ್ವವಿದ್ಯಾಲಯ ಸ್ಪರ್ಧೆಯನ್ನು T20 ಸ್ವರೂಪದಲ್ಲಿ ಆಡಿಸಲಾಗುತ್ತದೆ.
ಭಾರತ ಟಿ20 ತಂಡದ ನಾಯಕತ್ವಕ್ಕೆ ಶ್ರೇಯಸ್ ಅಯರ್ ಪ್ರಮುಖ ಸ್ಪರ್ಧಿ ಎಂದ ರಿಕಿ ಪಾಂಟಿಂಗ್!
"2026-27ರ ದೇಶಿ ಋತುವು ಬಲವಾದ ಮತ್ತು ಸ್ಪರ್ಧಾತ್ಮಕ ದೇಶಿ ರಚನೆಯನ್ನು ನಿರ್ಮಿಸುವ ಬಿಸಿಸಿಐನ ಬದ್ಧತೆಯನ್ನು ಒತ್ತಿ ಹೇಳುತ್ತದೆ. ಇದಲ್ಲದೆ, ಇದು ಎಲ್ಲಾ ಸ್ವರೂಪಗಳು ಮತ್ತು ವಯೋಮಾನದ ಗುಂಪುಗಳಲ್ಲಿ ಸಮತೋಲಿತ ಪ್ರಗತಿಯನ್ನು ಖಚಿತಪಡಿಸುತ್ತದೆ," ಎಂದು ಬಿಸಿಸಿಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ರಣಜಿ ಟ್ರೋಫಿ ಚಾಂಪಿಯನ್ಸ್ (ಜಮ್ಮು ಮತ್ತು ಕಾಶ್ಮೀರ) ಮತ್ತು ಭಾರತದ ಉಳಿದ ತಂಡಗಳ ನಡುವೆ ನಡೆಯುವ ಇರಾನಿ ಕಪ್ ಪಂದ್ಯ ಅಕ್ಟೋಬರ್ 1 ರಿಂದ ಅಕ್ಟೋಬರ್ 5 ರವರೆಗೆ ಶ್ರೀನಗರದಲ್ಲಿ ನಡೆಯಲಿದೆ. ಬಿಸಿಸಿಐನ ದೇಶಿ ಕ್ಯಾಲೆಂಡರ್‌ನಲ್ಲಿ ಮಹತ್ವದ ರಣಜಿ ಟ್ರೋಫಿ ಟೂರ್ನಿಯ ಮೊದಲ ಹಂತ ಅಕ್ಟೋಬರ್ 11 ರಿಂದ ನವೆಂಬರ್ 5ರ ವರೆಗೆ ನಡೆಯಲಿದ್ದು, ಇದರಲ್ಲಿ ನಾಲ್ಕು ಸುತ್ತಿನ ಪಂದ್ಯಗಳನ್ನು ಒಳಗೊಂಡಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ (ರಾಷ್ಟ್ರೀಯ ಟಿ20 ಟೂರ್ನಿ) ಮತ್ತು ವಿಜಯ್ ಹಝಾರೆ ಟ್ರೋಫಿ (ರಾಷ್ಟ್ರೀಯ 50 ಓವರ್‌ಗಳ ಟೂರ್ನಮಿ) ಮುಗಿದ ನಂತರ, ರಣಜಿ ಟ್ರೋಫಿ ಟೂರ್ನಿ ಎರಡನೇ ಹಂತ ಜನವರಿ 17 ರಿಂದ 2027ರ ಮಾರ್ಚ್ 3 ರವರೆಗೆ ನಡೆಯಲಿದೆ.
🚨 News 🚨
— BCCI Domestic (@BCCIdomestic) May 20, 2026
BCCI announces the schedule for the Indian Domestic Season 2026-27, which will feature 1,788 matches across age groups and formats in men’s and women’s cricket.
More Details 🔽 | @IDFCFIRSTBank https://t.co/eWfVBxBNkQ
ನವೆಂಬರ್ 14ರಂದು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಆರಂಭ
ಸೈಯದ್ ಮುಷ್ತಾಕ್ ಅಲಿ ಟ್ರೋಫಿ ನವೆಂಬರ್ 14 ರಿಂದ ಡಿಸೆಂಬರ್ 6 ರವರೆಗೆ ನಡೆಯಲಿದೆ. ಲೀಗ್ ಹಂತದ ಪಂದ್ಯಗಳು ಮುಂಬೈ, ಮೊಹಾಲಿ, ವಿಶಾಖಪಟ್ಟಣಂ ಮತ್ತು ಕೋಲ್ಕತ್ತಾದಲ್ಲಿ ನಡೆಯಲಿದ್ದು, ನಾಕೌಟ್ ಹಂತದ ಪಂದ್ಯಗಳು ನಾಗ್ಪುರದಲ್ಲಿ ನಡೆಯಲಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಡಿಸೆಂಬರ್‌ನಲ್ಲಿ ನಡೆಯಲಿರುವ ಹರಾಜಿಗೂ ಮುಂಚಿತವಾಗಿ ನಡೆಸಲಾಗುತ್ತದೆ. ಈ ಟೂರ್ನಿಯ ಬಳಿಕ ಐಪಿಎಲ್ ಫ್ರಾಂಚೈಸಿಗಳಿಗೆ ತಮ್ಮ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಲು ಅವಕಾಶವನ್ನು ಒದಗಿಸುತ್ತದೆ.
WTC 2025-26: ಪಾಕ್ ಎದುರು ಟೆಸ್ಟ್ ಸರಣಿ ಗೆದ್ದು ಅಂಕಪಟ್ಟಿಯಲ್ಲಿ ಭಾರತವನ್ನು ಹಿದಿಕ್ಕಿದ ಬಾಂಗ್ಲಾದೇಶ!
ಡಿಸೆಂಬರ್ 14 ರಂದು ವಿಜಯ್ ಹಝಾರೆ ಟ್ರೋಫಿ ಆರಂಭ
ವಿಜಯ್ ಹಝಾರೆ ಟ್ರೋಫಿ 2026ರ ಡಿಸೆಂಬರ್ 14 ರಿಂದ 2027ರ ಜನವರಿ 8ರವರೆಗೆ ನಡೆಯಲಿದೆ. ಅಹಮದಾಬಾದ್, ಬೆಂಗಳೂರು, ರಾಂಚಿ ಮತ್ತು ರಾಜ್‌ಕೋಟ್ ನಗರಗಳು ಲೀಗ್ ಹಂತದ ಪಂದ್ಯಗಳಿಗೆ ಆತಿಥ್ಯ ವಹಿಸಲಿದ್ದು, ನಾಕೌಟ್ ಹಂತದ ಪಂದ್ಯಗಳು ವಿಶಾಖಪಟ್ಟಣಂನಲ್ಲಿ ನಡೆಯಲಿವೆ.
ಎಲೈಟ್ ಗುಂಪು ‘ಎ’ಯಲ್ಲಿ ವಿದರ್ಭ, ಮಧ್ಯ ಪ್ರದೇಶ ಮತ್ತು ತಮಿಳುನಾಡು ತಂಡಗಳು ಸ್ಥಾನ ಪಡೆದಿವೆ. ಗುಂಪು ‘ಬಿ’ನಲ್ಲಿ ಸೌರಾಷ್ಟ್ರ, ಮುಂಬೈ ಮತ್ತು ಗುಜರಾತ್ ಪ್ರಮುಖ ತಂಡಗಳಾಗಿವೆ. ಎಲೈಟ್ ‘ಸಿ’ ಗುಂಪಿನಲ್ಲಿ ಪಂಜಾಬ್, ದೆಹಲಿ ಮತ್ತು ಮಹಾರಾಷ್ಟ್ರ ಪ್ರಮುಖ ಸ್ಥಾನದಲ್ಲಿವೆ. ಇನ್ನು ಎಲೈಟ್ ‘ಡಿ’ ಗುಂಪಿನಲ್ಲಿ ಕರ್ನಟಕ, ಉತ್ತರ ಪ್ರದೇಶ, ಕೇರಳ, ಹಾಗೂ ಪಶ್ಚಿಮ ಬಂಗಾಳ ತಂಡಗಳು ಸ್ಥಾನ ಪಡೆದಿವೆ.