WTC 2025-26: ಪಾಕ್ ಎದುರು ಟೆಸ್ಟ್ ಸರಣಿ ಗೆದ್ದು ಅಂಕಪಟ್ಟಿಯಲ್ಲಿ ಭಾರತವನ್ನು ಹಿದಿಕ್ಕಿದ ಬಾಂಗ್ಲಾದೇಶ!
ಪಾಕಿಸ್ತಾನ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡ ಫಲವಾಗಿ ಬಾಂಗ್ಲಾದೇಶ ತಂಡ 2025-26ರ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಅಂಕಪಟ್ಟಿಯಲ್ಲಿ ಭಾರತ ತಂಡವನ್ನು ಹಿದಿಕ್ಕಿ ಐದನೇ ಸ್ಥಾನಕ್ಕೆ ಪ್ರವೇಶ ಮಾಡಿದೆ. ಪಾಕ್ ಎದುರು ಎರಡನೇ ಟೆಸ್ಟ್ ಪಂದ್ಯವನ್ನು 78 ರನ್‌ಗಳಿಂದ ಗೆಲುವು ಪಡೆದ ಬಳಿಕ ಬಾಂಗ್ಲಾ ಶ್ರೇಯಾಂಕದಲ್ಲಿ ಪ್ರಗತಿಯಾಗಿದೆ.
ಟೆಸ್ಟ್ ಶ್ರೇಯಾಂಕದಲ್ಲಿ ಭಾರತ ತಂಡವನ್ನು ಹಿಂದಿಕ್ಕಿದ ಬಾಂಗ್ಲಾದೇಶ. -
ನವದೆಹಲಿ: ಪಾಕಿಸ್ತಾನ ವಿರುದ್ದ ಎರಡನೇ ಟೆಸ್ಟ್ ಪಂದ್ಯದಲ್ಲಿ (BAN vs PAK) ಬಾಂಗ್ಲಾದೇಶ ತಂಡ 78 ರನ್‌ಗಳನ್ನು ಗೆಲುವು ಪಡೆಯಿತು. ಆ ಮೂಲಕ ತವರು ನೆಲದಲ್ಲಿ ಪಾಕಿಸ್ತಾನ ಎದುರು ಇದೇ ಮೊದಲ ಬಾರಿ ಬಾಂಗ್ಲಾದೇಶ ತಂಡ ಟೆಸ್ಟ್ ಸರಣಿಯನ್ನು ಗೆದ್ದು ಐತಿಹಾಸಿಕ ಗೆಲುವು ಪಡೆಯಿತು. ಅಂದ ಹಾಗೆ ಈ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಬಾಂಗ್ಲಾ ತಂಡ 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿದ್ದು ವಿಶೇಷ. ಈ ಫಲಿತಾಂಶದ ನೆರವಿನಿಂದ ಬಾಂಗ್ಲಾದೇಶ ತಂಡ 2025-26ರ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (WTC 2025-26 Points Table) ಅಂಕಪಟ್ಟಿಯಲ್ಲಿ ಭಾರತ ತಂಡವನ್ನು (India) ಹಿಂದಿಕ್ಕಿದೆ.
2025-26ರ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಪಾಯಿಂಟ್ಸ್ ಟೇಬಲ್‌ನಲ್ಲಿ ಇಲ್ಲಿಯವರೆಗೂ ಬಾಂಗ್ಲಾದೇಶ ತಂಡ ಆಡಿದ ನಾಲ್ಕು ಪಂದ್ಯಗಲ್ಲಿ ಎರಡರಲ್ಲಿ ಗೆಲುವು ಪಡೆದಿದ್ದು, ಒಂದು ಡ್ರಾ ಹಾಗೂ ಇನ್ನೊಂದು ಪಂದ್ಯದಲ್ಲಿ ಸೋಲು ಅನುಭವಿಸಿದೆ. 28 ಅಂಕಗಳ ಮೂಲಕ 58.33ರ ಗೆಲುವಿನ ಸರಾಸರಿಯಲ್ಲಿ ಬಾಂಗ್ಲಾದೇಶ ತಂಡ ಐದನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಬಾಂಗ್ಲಾದೇಶ ಒಂದು ಸ್ಥಾನವನ್ನು ಏರಿಕೆ ಕಂಡ ಬಳಿಕ ಶುಭಮನ್ ಗಿಲ್ ನಾಯಕತ್ವದ ಟೀಮ್ ಇಂಡಿಯಾ ಆರನೇ ಸ್ಥಾನಕ್ಕೆ ಇಳಿದಿದೆ.
ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ವಿದಾಯ ಹೇಳಲು ಕಾರಣ ತಿಳಿಸಿದ ವಿರಾಟ್ ಕೊಹ್ಲಿ!
ಭಾರತ ತಂಡ ಇಲ್ಲಿಯವರೆಗೂ ಪ್ರಸಕ್ತ ಸಾಲಿನಲ್ಲಿ ಆಡಿದ 9 ಪಂದ್ಯಗಳಿಂದ ಗೆದ್ದಿರುವುದು ಕೇವಲ 4ರಲ್ಲಿ ಮಾತ್ರ ಹಾಗೂ 48.15ರ ಗೆಲುವಿನ ಸರಾಸರಿಯನ್ನು ಹೊಂದಿದೆ. ದಕ್ಷಿಣ ಆಫ್ರಿಕಾ ವಿರುದ್ಧ ತವರು ಟೆಸ್ಟ್ ಸರಣಿಯಲ್ಲಿ 0-2 ಅಂತರದಲ್ಲಿ ಸೋಲು ಅನುಭವಿಸಿರುವುದು ಭಾರತ ತಂಡಕ್ಕೆ ಭಾರಿ ಹಿನ್ನಡೆಯನ್ನು ತಂದೊಡ್ಡಿದೆ.
2025-26ರ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಅಂಕಪಟ್ಟಿ
1.ಆಸ್ಟ್ರೇಲಿಯಾ (AUS)-87.50%-84-8
2.ನ್ಯೂಜಿಲೆಂಡ್ (NZ)- 77.78%- 28-3
3.ದಕ್ಷಿಣ ಆಫ್ರಿಕಾ (SA)-75.00%-36-4
4.ಶ್ರೀಲಂಕಾ (SL)-66.67%- 16-2
5.ಬಾಂಗ್ಲಾದೇಶ (BAN)- 58.33% -28-4
6.ಭಾರತ (IND)- 48.15%- 52-9
7.ಇಂಗ್ಲೆಂಡ್ (ENG)- 31.67%- 38-10
8.ಪಾಕಿಸ್ತಾನ (PAK)- 8.33%- 4-4
9.ವೆಸ್ಟ್ ಇಂಡೀಸ್ (WI)- 4.17%-4-8
ಭಾರತ ತಂಡದಲ್ಲಿ ಮೊಹಮ್ಮದ್ ಶಮಿಗೆ ಸ್ಥಾನ ಸಿಗದೇ ಇರಲು ಕಾರಣ ತಿಳಿಸಿದ ಅಜಿತ್ ಅಗರ್ಕರ್!
ಬಾಂಗ್ಲಾದೇಶ ತಂಡಕ್ಕೆ 78 ರನ್ ಭರ್ಜರಿ ಜಯ
ಇನ್ನು ಈ ಪಂದ್ಯದ ಬಗ್ಗೆ ಹೇಳುವುದಾದರೆ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದ ಪಾಕಿಸ್ತಾನ ತಂಡ, ಬಾಂಗ್ಲಾದೇಶ ತಂಡವನ್ನು 116 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಿತ್ತು ಆಘಾತ ನೀಡಿತ್ತು. ಆದರೆ, ಲಿಟನ್ ದಾಸ್ (126 ರನ್) ಅವರ ಅತ್ಯುತ್ತಮ ಶತಕದ ಮೂಲಕ ಬಾಂಗ್ಲಾದೇಶ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 278 ರನ್‌ಗಳನ್ನು ಕಲೆ ಹಾಕಿತು. ನಂತರ ಪಾಕಿಸ್ತಾನ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 232 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ಆತಿಥೇಯ ಬಾಂಗ್ಲಾ ತಂಡ ಅಲ್ಪ ಮುನ್ನಡೆ ಪಡೆದಿತ್ತು.
ಎರಡನೇ ಇನಿಂಗ್ಸ್‌ನಲ್ಲಿ ಬಾಂಗ್ಲಾದೇಶ ತಂಡ, ಪಾಕಿಸ್ತಾನ ತಂಡದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿತು ಹಾಗೂ 390 ರನ್‌ಗಳನ್ನು ಕಲೆ ಹಾಕಿತು. ಹಿರಿಯ ಬ್ಯಾಟ್ಸ್‌ಮನ್ ಮುಷ್ಫಿಕರ್ ರಹೀಮ್ ಅವರು ಸೋಗಸಾಗಿ ಬ್ಯಾಟ್ ಮಾಡಿ 137 ರನ್‌ಗಳನ್ನು ಕಲೆ ಹಾಕಿದರು ಹಾಗೂ ಲಿಟನ್ ದಾಸ್ ಎರಡನೇ ಇನಿಂಗ್ಸ್‌ನಲ್ಲಿಯೂ 69 ರನ್‌ಗಳನ್ನು ಗಳಿಸಿದರು. ಆ ಮೂಲಕ ಪಾಕಿಸ್ತಾನ ತಂಡಕ್ಕೆ 437 ರನ್‌ಗಳ ಗುರಿಯನ್ನು ಬಾಂಗ್ಲಾ ನೀಡಿತ್ತು.
IND vs AFG: ರಿಷಭ್ ಪಂತ್‌ರನ್ನು ಟೆಸ್ಟ್ ಉಪ ನಾಯಕತ್ವದಿಂದ ಕೆಳಗಿಳಿಸಲು ಕಾರಣವೇನು?
ಗುರಿ ಹಿಂಬಾಲಿಸಿದ ಪಾಕಿಸ್ತಾನ ತಂಡ ಮೊಹಮ್ಮದ್ ರಿಝ್ವಾನ್ (90 ರನ್) ಅವರ ಬ್ಯಾಟಿಂಗ್ ಬಲದಿಂದ ಕಠಿಣ ಹೋರಾಟ ನಡೆಸಿತ್ತು. ಆದರೆ, ಎಡಗೈ ಸ್ಪಿನ್ನರ್ ತೈಜುಲ್ ಇಸ್ಲಾಮ್ ಅಂತಿಮ ದಿನ ಪಾಕ್ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿದರು. ತೈಜುಲ್ ಇಸ್ಲಾಮ್ ತಮ್ಮ ಸ್ಪಿನ್ ಮೋಡಿಯಿಂದ 120 ರನ್‌ಗಳಿಗೆ 6 ವಿಕೆಟ್ ಸಾಧನೆ ಮಾಡಿದರು. ಆ ಮೂಲಕ ಪ್ರವಾಸಿ ತಂಡವನ್ನು 358 ರನ್‌ಗಳಿಗೆ ಆಲ್‌ಔಟ್ ಮಾಡುವಲ್ಲಿ ಬಾಂಗ್ಲಾಗೆ ನೆರವು ನೀಡಿದರು.