ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs WI: ʻಕೇವಲ ಬ್ಯಾಟಿಂಗ್‌ ಪಿಚ್‌ ಮಾಡಬಾರದುʼ-ಗುವಾಹಟಿ ಪಿಚ್‌ ವಿರುದ್ಧ ದಿನೇಶ್‌ ಕಾರ್ತಿಕ್‌ ಕಿಡಿ!

ಭಾರತ ಹಾಗೂ ವೆಸ್ಟ್‌ ಇಂಡೀಸ್‌ ತಂಡಗಳ ನಡುವಣ ಎರಡನೇ ಪಂದ್ಯ ನಡೆದಿದ್ದ ಗುವಾಹಟಿಯ ಬರ್ಸಪರ ಕ್ರೀಡಾಂಗಣದ ಪಿಚ್‌ ಬಗ್ಗೆ ಟೀಕೆಗಳು ಶುರುವಾಗಿವೆ. ಎರಡೂ ತಂಡಗಳಿಂದ 800ಕ್ಕೂ ಅಧಿಕ ರನ್‌ ದಾಖಲಿದ್ದರಿಂದ ಇದು ಬ್ಯಾಟ್ಸ್‌ಮನ್‌ಗಳ ಸ್ನೇಹಿ ಪಿಚ್‌ ಆಗಿತ್ತು. ಈ ಹಿನ್ನೆಲೆಯಲ್ಲಿ ಪಿಚ್‌ ಬಗ್ಗೆ ಆರ್‌ಸಿಬಿ ಮೆಂಟರ್‌ ದಿನೇಶ್‌ ಕಾರ್ತಿಕ್‌ ಟೀಕಿಸಿದ್ದಾರೆ.

ಭಾರತದ ಗೆಲುವಿನ ಬಳಿಕ ಗವಾಹಟಿ ಪಿಚ್‌ ವಿರುದ್ಧ ದಿನೇಶ್‌ ಕಾರ್ತಿಕ್‌ ಕಿಡಿ!

ಗುವಾಹಟಿ ಪಿಚ್‌ ಬಗ್ಗೆ ಟೀಕಿಸಿದ ದಿನೇಶ್‌ ಕಾರ್ತಿಕ್‌. -

Profile
Ramesh Kote Oct 1, 2026 5:34 PM

ಗುವಾಹಟಿ: ಭಾರತ ಮತ್ತು ವೆಸ್ಟ್ ಇಂಡೀಸ್ (IND vs WI) ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ರನ್‌ಗಳ ಹೊಳೆ ಹರಿದ ಬೆನ್ನಲ್ಲೇ ಗುವಾಹಟಿ ಪಿಚ್‌ ಕುರಿತು ಮಾಜಿ ಭಾರತೀಯ ವಿಕೆಟ್‌ಕೀಪರ್ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮೆಂಟರ್ ದಿನೇಶ್ ಕಾರ್ತಿಕ್ (Dinesh Karthik) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬ್ಯಾಟರ್‌ಗಳಿಗೆ ಸಂಪೂರ್ಣವಾಗಿ ಅನುಕೂಲಕರವಾಗಿದ್ದ ಈ ಪಿಚ್‌ನಲ್ಲಿ ಬೌಲರ್‌ಗಳಿಗೆ ಯಾವುದೇ ರೀತಿಯ ನೆರವು ಸಿಗಲಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸೆಪ್ಟೆಂಬರ್ 30ರಂದು ಗುವಾಹಟಿಯ ಬರ್ಸಪರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 405 ರನ್ ಗಳಿಸಿತು. ಜಾನ್ ಕ್ಯಾಂಬೆಲ್, ಶೇಯ್‌ ಹೋಪ್ ಮತ್ತು ಆಮಿರ್ ಜಂಗೋ ಶತಕಗಳನ್ನು ಸಿಡಿಸಿದರು. ಇದಕ್ಕೆ ಪ್ರತಿಯಾಗಿ ಭಾರತ ಕೇವಲ 43.3 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 406 ರನ್‌ಗಳ ಗುರಿಯನ್ನು ಬೆನ್ನಟ್ಟಿತು. ನಾಯಕ ಶುಭಮನ್ ಗಿಲ್ ಅಜೇಯ 223 ರನ್ ಗಳಿಸಿದರೆ, ರೋಹಿತ್ ಶರ್ಮಾ 101 ರನ್ ಬಾರಿಸಿದರು.

IND vs WI: ದ್ವಿಶತಕ ಸಿಡಿಸಿದ ಶುಭಮನ್‌ ಗಿಲ್‌ ಇನಿಂಗ್ಸ್‌ ಬಗ್ಗೆ ದೊಡ್ಡ ಹೇಳಿಕೆ ನೀಡಿದ ರೋಹಿತ್‌ ಶರ್ಮಾ!

‘ಪಿಚ್ ಸಂಪೂರ್ಣವಾಗಿ ಬ್ಯಾಟರ್‌ಗಳ ಪರವಾಗಿತ್ತು’: ದಿನೇಶ್‌ ಕಾರ್ತಿಕ್‌

ಪಂದ್ಯದ ನಂತರ ಕ್ರಿಕ್‌ಬಜ್ ಕಾರ್ಯಕ್ರಮದಲ್ಲಿ ಮಾತನಾಡಿದ ದಿನೇಶ್ ಕಾರ್ತಿಕ್, "ಗುವಾಹಟಿ ಪಿಚ್‌ನಲ್ಲಿ ವೇಗದ ಬೌಲರ್‌ಗಳಿಗಾಗಲಿ ಅಥವಾ ಸ್ಪಿನ್ನರ್‌ಗಳಿಗಾಗಲಿ ಯಾವುದೇ ಗಮನಾರ್ಹ ನೆರವು ಇರಲಿಲ್ಲ. ಪಿಚ್‌ನಲ್ಲಿ ಟರ್ನ್ ಇರಲಿಲ್ಲ. ವೇಗದ ಬೌಲರ್‌ಗಳಿಗೂ ಹೆಚ್ಚಿನ ಸಹಾಯ ಸಿಗಲಿಲ್ಲ. ಇದರ ಜೊತೆಗೆ ಪಂದ್ಯದ ವೇಳೆ ಕಾಣಿಸಿಕೊಂಡ ಇಬ್ಬನಿ ಕೂಡ ಬ್ಯಾಟಿಂಗ್‌ಗೆ ಮತ್ತಷ್ಟು ಅನುಕೂಲಕರ ಪರಿಸ್ಥಿತಿ ನಿರ್ಮಿಸಿತು," ಎಂದು ಅಸಮಾದಾನವನ್ನು ವ್ಯಕ್ತಪಡಿಸಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಸಮತೋಲನ ಅಗತ್ಯ

ಏಕದಿನ ಕ್ರಿಕೆಟ್‌ನ ಭವಿಷ್ಯದ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಇಂತಹ ಪಂದ್ಯಗಳು ಪ್ರಮುಖ ಉದಾಹರಣೆಯಾಗಿವೆ ಎಂದು ಕಾರ್ತಿಕ್ ಹೇಳಿದ್ದಾರೆ.

“ಏಕದಿನ ಕ್ರಿಕೆಟ್ ಬಗ್ಗೆ ಮಾತನಾಡುವುದಾದರೆ, ಅದು ಸಾಯುತ್ತಿದೆಯೇ ಅಥವಾ ಅದನ್ನು ಹೇಗೆ ಉಳಿಸಬಹುದು ಎಂಬ ಪ್ರಶ್ನೆ ಇದೆ. ಇಂತಹ ಪಂದ್ಯಗಳು ಅದಕ್ಕೆ ಉತ್ತಮ ಉದಾಹರಣೆ. 406 ರನ್‌ಗಳ ಗುರಿಯನ್ನು ಭಾರತ 7-8 ಓವರ್‌ಗಳು ಬಾಕಿ ಇರುವಾಗಲೇ ಬೆನ್ನಟ್ಟಿತು. ಇನ್ನಷ್ಟು ವೇಗವಾಗಿ ಆಡಿದ್ದರೆ ಅದಕ್ಕೂ ಮೊದಲೇ ಗುರಿ ತಲುಪಬಹುದಿತ್ತು. ಭಾರತೀಯ ಅಭಿಮಾನಿಗಳ ದೃಷ್ಟಿಯಿಂದ ಇಂತಹ ದೊಡ್ಡ ಮೊತ್ತದ ಪಂದ್ಯಗಳು ರೋಚಕವಾಗಿರಬಹುದು. ಆದರೆ ಕ್ರಿಕೆಟ್‌ನ ಒಟ್ಟಾರೆ ದೃಷ್ಟಿಯಿಂದ ನೋಡಿದರೆ ಬ್ಯಾಟ್ ಮತ್ತು ಬಾಲ್ ನಡುವೆ ಸಮತೋಲಿತ ಪೈಪೋಟಿ ಇರಬೇಕು," ಎಂದು ದಿನೇಶ್‌ ಕಾರ್ತಿಕ್ ತಿಳಿಸಿದ್ದಾರೆ.

ಭಾರತದ ದಾಖಲೆಯ ರನ್ ಚೇಸ್ ಬಳಿಕ ಗುವಾಹಟಿ ಪಿಚ್ ವಿರುದ್ಧ ಗೌತಮ್ ಗಂಭೀರ್ ಕಿಡಿ

ಈ ಪಂದ್ಯ ನೋಡಲು ಮಜವಾಗಿರಲಿಲ್ಲ

“ಇದು ಬ್ಯಾಟರ್‌ಗಳಿಗೆ ಮಾತ್ರ ಅನುಕೂಲವಾಗುವಂತಿರಬಾರದು. ಕ್ರಿಕೆಟ್‌ನಲ್ಲಿ ಎಲ್ಲಾ ಕೌಶಲಗಳಿಗೂ ಸಮಾನ ಅವಕಾಶ ನೀಡುವ ಪಿಚ್‌ಗಳು ಬೇಕು. ಬೌಲರ್‌ಗಳಿಗೂ ಸ್ವಲ್ಪ ಹೆಚ್ಚಿನ ನೆರವು ನೀಡುವ ಪಿಚ್‌ಗಳ ಅಗತ್ಯವಿದೆ. ನಾನು ಪ್ರಾಮಾಣಿಕವಾಗಿ ಹೇಳಬೇಕಾದರೆ, ಈ ಪಂದ್ಯವನ್ನು ನೋಡಲು ಮಜವಾಗಿರಲಿಲ್ಲ,” ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಒಂದೇ ಪಂದ್ಯದಲ್ಲಿ ಐದು ಶತಕಗಳು

ಗುವಾಹಟಿ ಪಂದ್ಯದಲ್ಲಿ ಎರಡೂ ತಂಡಗಳ ಬ್ಯಾಟರ್‌ಗಳು ಭರ್ಜರಿ ಪ್ರದರ್ಶನ ನೀಡಿದರು. ವೆಸ್ಟ್ ಇಂಡೀಸ್ ಪರ ಮೂವರು ಬ್ಯಾಟರ್‌ಗಳು ಶತಕ ಬಾರಿಸಿದರೆ, ಭಾರತದ ಪರ ರೋಹಿತ್ ಶರ್ಮಾ ಶತಕ ಹಾಗೂ ಶುಭಮನ್ ಗಿಲ್ ದ್ವಿಶತಕ ದಾಖಲಿಸಿದರು. ಹೀಗಾಗಿ ಒಂದೇ ಏಕದಿನ ಪಂದ್ಯದಲ್ಲಿ ಒಟ್ಟು ಐದು ಶತಕಗಳು ದಾಖಲಾಗಿವೆ.

ಪಂದ್ಯದಲ್ಲಿ 800ಕ್ಕೂ ಹೆಚ್ಚು ರನ್‌ಗಳು ದಾಖಲಾಗಿದ್ದು, ವೆಸ್ಟ್ ಇಂಡೀಸ್ 405/7 ಗಳಿಸಿದರೆ ಭಾರತ 43.3 ಓವರ್‌ಗಳಲ್ಲಿ 408/2 ಗಳಿಸಿ ಎಂಟು ವಿಕೆಟ್‌ಗಳ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಪಡೆದುಕೊಂಡಿತು.