IPL 2026: ಆರ್‌ಸಿಬಿ ಪಂದ್ಯಗಳ ಟಿಕೆಟ್ ಖರೀದಿಸುವುದು ಹೇಗೆ? ಮ್ಯಾಚ್ ಟಿಕೆಟ್ ಇದ್ರೆ ಮೆಟ್ರೋ ಉಚಿತ!
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 19ನೇ ಆವೃತ್ತಿಯ ಆರಂಭಕ್ಕೆ ಇನ್ನು ಕೇವಲ ಒಂದು ವಾರ ಮಾತ್ರ ಬಾಕಿ ಇದೆ. ಮಾರ್ಚ್ 28 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡಯುವ ಮೊದಲನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯಕ್ಕೆ ಟಿಕೆಟ್ ಎಲ್ಲಿ, ಹೇಗೆ ಖರೀದಿಸಬೇಕೆಂದು ಇಲ್ಲಿ ವಿವರಿಸಲಾಗಿದೆ.
ಆರ್‌ಸಿಬಿ ಪಂದ್ಯಗಳ ಟಿಕೆಟ್ ಖರೀದಿ ಹೇಗೆ? -
ಬೆಂಗಳೂರು: ಬಹುನಿರೀಕ್ಷಿತ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ (IPL 2026) ಇನ್ನೇನು ಸನಿಹವಾಗುತ್ತಿದೆ. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಡಿಸಲು ರಾಜ್ಯ ಸರ್ಕಾರ ಅನುಮತಿಯನ್ನು ನೀಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಈ ಬಾರಿ ತವರಿನಲ್ಲಿ 5 ಪಂದ್ಯಗಳನ್ನು ಆಡುತ್ತಿದೆ, ಹಾಗಾಗಿ ಆರ್‌ಸಿಬಿ ಪಂದ್ಯಗಳ ಟಿಕೆಟ್‌ಗಳನ್ನು ಎಲ್ಲಿ? ಹಾಗೂ ಹೇಗೆ? ಖರೀದಿಸಬೇಕೆಂದು ಯೋಚಿಸುತ್ತಿದ್ದೀರಾ? ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ. ಹಾಗಾಗಿ ಈ ಸುದ್ದಿಯನ್ನು ಸಂಪೂರ್ಣವಾಗಿ ಓದಿ.
ಐದು ರಾಜ್ಯಗಳ ವಿಧಾನ ಸಭೆ ಚುನಾವಣೆಯ ನಿಮಿತ್ತ ಬಿಸಿಸಿಐ, 19ನೇ ಆವೃತ್ತಿಯ ಐಪಿಎಲ್‌ನ ಮೊದಲ ಹಂತದ 20 ಪಂದ್ಯಗಳಿಗೆ ಮಾತ್ರ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಇದರ ಪ್ರಕಾರ ಆರ್‌ಸಿಬಿ ತಂಡ ಮೊದಲ ಹಂತದಲ್ಲಿ ಕೇವಲ ನಾಲ್ಕು ಪಂದ್ಯಗಳನ್ನು ಆಡಲಿದೆ. ಇದರಲ್ಲಿ ಎರಡು ಪಂದ್ಯಗಳನ್ನು ಬೆಂಗಳೂರಿನಲ್ಲಿಆಡಲಿದೆ. ಮಾರ್ಚ್ 28 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಮೊದಲ ಪಂದ್ಯವನ್ನು ಆಡಿದರೆ, ಎರಡನೇ ಪಂದ್ಯವನ್ನು ಏಪ್ರಿಲ್ 5 ರಂದು ಚೆನ್ನೈ ಸೂಪರ್ ಕಿಂಗ್ಸ್ ಎದುರು ಆಡಲಿದೆ.
ಮೂರನೇ ಪಂದ್ಯದಲ್ಲಿ ಆರ್‌ಸಿಬಿ, ಏಪ್ರಿಲ್ 10 ರಂದು ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ಎದುರು ಆಡಲಿದೆ. ಇದಾದ ಬಳಿಕ ಮುಂಬೈನ ವಾಂಖೆಡೆ ಕ್ರೀಡಾಣಂಗಣದಲ್ಲಿ ಏಪ್ರಿಲ್ 12 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಕಾದಾಟ ನಡೆಸಲಿದೆ.
IPL 2026: ಎಂಎಸ್ ಧೋನಿಯನ್ನು ಕೈಬಿಟ್ಟು ಸಿಎಸ್‌ಕೆಯ ಬಲಿಷ್ಠ XI ಕಟ್ಟಿದ ಇರ್ಫಾನ್ ಪಠಾಣ್!
ಆರ್‌ಸಿಬಿ ಪಂದ್ಯಗಳಿಗೆ ಟಿಕೆಟ್ ಖರೀದಿಸುವುದು ಹೇಗೆ?
ಆರ್‌ಸಿಬಿ ಪಂದ್ಯಗಳ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಬಹುದು. ಬುಕ್‌ಮೈಶೋ, ಡಿಸ್ಟ್ರಿಕ್ಟ್ ಆಪ್ ಹಾಗೂ ಆರ್‌ಸಿಬಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಖರೀದಿಸಬಹುದು. ಇಲ್ಲಿ ನೀವು ಯಾವ ಸೀಟ್, ಎಷ್ಟು ಮೊತ್ತದ ಟಿಕೆಟ್ ಎಂದು ನೋಡಿದ ಬಳಿಕ ಖರೀದಿಸಬಹುದು ಹಾಗೂ ಯುಪಿಐ, ಕಾರ್ಡ್‌ಗಳು ಹಾಗೂ ನೆಟ್ ಬ್ಯಾಂಕಿಂಗ್ ಮೂಲಕ ಟಿಕೆಟ್ ಹಣವನ್ನು ಪಾವತಿಸಬಹುದು. ನೀವು ಖರೀದಿಸಿದ ಬಳಿಕ ಇಮೇಲ್ ಅಥವಾ ಎಸ್‌ಎಂಎಸ್ ಮೂಲಕ ಟಿಕೆಟ್ ನಿಮ್ಮ ಕೈ ಸೇರಲಿದೆ. ಆರ್‌ಸಿಬಿ ಟಿಕೆಟ್ ಇದ್ದರೆ, ಪಂದ್ಯದ ದಿನ ಮೆಟ್ರೋದಲ್ಲಿ ನೀವು ಉಚಿತವಾಗಿ ಪ್ರಯಾಣಿಸಬಹುದು ಎಂದು ಆರ್‌ಸಿಬಿ ತಿಳಿಸಿದೆ.
IPL 2026: ಆರ್‌ಸಿಬಿಗೆ ಪಂದ್ಯ ಗೆದ್ದುಕೊಡಬಲ್ಲ ಐವರು ಸ್ಟಾರ್ ಆಟಗಾರರು!
ಆಫ್‌ಲೈನ್‌ನಲ್ಲಿಯೂ ಟಿಕೆಟ್ ಖರೀದಿಸಬಹುದಾ?
ಆನ್‌ಲೈನ ಜೊತೆಗೆ ಆಫ್ ಲೈನ್‌ನಲ್ಲಿಯೂ ಆರ್‌ಸಿಬಿ ಪಂದ್ಯಗಳ ಟಿಕೆಟ್ ಅನ್ನು ಖರೀದಿಸಬಹುದು. ಪಂದ್ಯಕ್ಕೂ ಒಂದು ದಿನ, ಎರಡು ದಿನಗಳ ಮುನ್ನ ಸ್ಟೇಡಿಯಂನ ಕೌಂಟರ್ ಬಳಿ ನಿಂತು ಟಿಕೆಟ್ ಪಡೆಯಬಹುದು. ಇಲ್ಲಿ ನೀವು ಯುಪಿಐ ಅಥವಾ ಕ್ಯಾಷ್ ನೀಡಿ ಟಿಕೆಟ್ ಖರೀದಿಸಬಹುದು. ಪ್ರತಿಯೊಂದು ಐಪಿಎಲ್ ಟೂರ್ನಿಯಲ್ಲಿ ಒಂದು ತಂಡಕ್ಕೆ 7 ತವರು ಪಂದ್ಯಗಳನ್ನು ನಿಗದಿಪಡಿಸಲಾಗುತ್ತದೆ. ಆದರೆ, ಕಳೆದ ಐಪಿಎಲ್ ಟೂರ್ನಿಯ ಬಳಿಕ ಆರ್‌ಸಿಬಿಯ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಸಂಭವಿಸಿ 11 ಮಂದಿ ಅಭಿಮಾನಿಗಳು ಮೃತ ಪಟ್ಟಿದ್ದರು. ಹಾಗಾಗಿ ಈ ಬಾರಿ ಷರತ್ತುಬದ್ದವಾಗಿ ಬೆಂಗಳೂರಿನಲ್ಲಿ ಕೇವಲ 5 ಪಂದ್ಯಗಳಿಗೆ ಅವಕಾಶವನ್ನು ನೀಡಲಾಗಿದೆ. ಇನ್ನುಳಿದ ಎರಡು ತವರು ಪಂದ್ಯಗಳನ್ನು ರಾಯ್ಪುರದಲ್ಲಿ ಆಡಿಸಲಾಗುತ್ತದೆ.