ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs CSK: ಟಾಸ್‌ ಸೋತ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮೊದಲ ಬ್ಯಾಟಿಂಗ್‌!

RCB vs CSK IPL 2025 Match: ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಎಂಟನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಸಿಎಸ್‌ಕೆ ನಾಯಕ ಋತುರಾಜ್‌ ಗಾಯಕ್ವಾಡ್‌ ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.

ಸಿಎಸ್‌ಕೆ ಪಂದ್ಯಕ್ಕೆ ಆರ್‌ಸಿಬಿ ಪ್ಲೇಯಿಂಗ್‌ XIನಲ್ಲಿ ಒಂದು ಬದಲಾವಣೆ!

ಆರ್‌ಸಿಬಿ vs ಸಿಎಸ್‌ಕೆ ನಡುವಣ ಐಪಿಎಲ್‌ ಪಂದ್ಯ.

Profile Ramesh Kote Mar 28, 2025 7:49 PM

ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಎಂಟನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ (RCB vs CSK) ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಸಿಎಸ್‌ಕೆ ನಾಯಕ ಋತುರಾಜ್‌ ಗಾಯಕ್ವಾಡ್‌ (Ruturaj Gaikwad) ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ. ಆ ಮೂಲಕ ರಜತ್‌ ಪಾಟಿದಾರ್‌ ನಾಯಕತ್ವದ ಆರ್‌ಸಿಬಿಗೆ ಮೊದಲ ಬ್ಯಾಟಿಂಗ್‌ ಆಹ್ವಾನ ನೀಡಿದ್ದಾರೆ.

ಆರ್‌ಸಿಬಿ ತಂಡದ ಪ್ಲೇಯಿಂಗ್‌ Xiನಲ್ಲಿ ಒಂದು ಬದಲಾವಣೆ ತರಲಾಗಿದೆ ಎಂದು ನಾಯಕ ರಜತ್‌ ಪಾಟಿದಾರ್‌ ಟಾಸ್‌ ವೇಳೆ ತಿಳಿಸಿದ್ದಾರೆ. ಕಳೆದ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಭುವನೇಶ್ವರ್‌ ಕುಮಾರ್‌ ಅವರು, ಈ ಪಂದ್ಯದ ಆಡುವ ಬಳಗಕ್ಕೆ ಪ್ರವೇಶ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಸಿಖ್‌ ದಾರ್‌ ಸಲಾಮ್‌ ತಮ್ಮ ಸ್ಥಾನವನ್ನು ಭುವನೇಶ್ವರ್‌ ಕುಮಾರ್‌ಗೆ ಬಿಟ್ಟುಕೊಟ್ಟಿದ್ದಾರೆ.

ಇನ್ನು ಎದುರಾಳಿ ಸಿಎಸ್‌ಕೆ ಪ್ಲೇಯಿಂಗ್‌ XIನಲ್ಲಿಯೂ ಒಂದು ಬದಲಾವಣೆಯನ್ನು ತರಲಾಗಿದೆ. ನೇಥನ್‌ ಎಲ್ಲಿಸ್‌ ಅವರ ಸ್ಥಾನದಲ್ಲಿ ಮತೀಶ ಪತಿರಣಗೆ ಸ್ಥಾನವನ್ನು ನೀಡಲಾಗಿದೆ. ಕಳೆದ ಪಂದ್ಯದಲ್ಲಿ ಸಂಪೂರ್ಣ ಫಿಟ್‌ ಇಲ್ಲದ ಕಾರಣ ಶ್ರೀಲಂಕಾ ವೇಗಿಗೆ ವಿಶ್ರಾಂತಿ ನೀಡಲಾಗಿತ್ತು. ಇದೀಗ ಅವರು ನೇಥನ್‌ ಎಲ್ಲಿಸ್‌ ಸ್ಥಾನದಲ್ಲಿ ಆಡುತ್ತಿದ್ದಾರೆ.

RCB vs CSK: ವಿರಾಟ್‌ ಕೊಹ್ಲಿ ಜತೆಗಿನ ತರಬೇತಿಯ ಅನುಭವ ತೆರೆದಿಟ್ಟ ಜಾಶ್‌ ಹೇಝಲ್‌ವುಡ್‌!

ಇತ್ತಂಡಗಳ ಪ್ಲೇಯಿಂಗ್‌ XI

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ (ವಿ.ಕೀ), ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿ.ಕೀ), ಟಿಮ್ ಡೇವಿಡ್, ಕೃನಾಣ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಯಶ್ ದಯಾಳ್‌, ಜಾಶ್‌ ಹೇಝಲ್‌ವಿಡ್‌, ಸುಯಾಶ್ ಶರ್ಮಾ



ಚೆನ್ನೈ ಸೂಪರ್‌ ಕಿಂಗ್ಸ್‌: ರಾಹುಲ್ ತ್ರಿಪಾಠಿ, ರಚಿನ್ ರವೀಂದ್ರ, ಋತುರಾಜ್ ಗಾಯಕ್ವಾಡ್ (ನಾಯಕ), ಶಿವಂ ದುಬೆ, ದೀಪಕ್ ಹೂಡ, ರವೀಂದ್ರ ಜಡೇಜಾ, ಸ್ಯಾಮ್ ಕರನ್, ಎಂಎಸ್ ಧೋನಿ (ವಿ.ಕೀ), ರವಿಚಂದ್ರನ್ ಅಶ್ವಿನ್, ಮತೀಶ ಪತಿರಣ, ನೂರ್ ಅಹ್ಮದ್, ಖಲೀಲ್ ಅಹ್ಮದ್



ತಂಡಗಳ ವಿವರ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು

ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ(ವಿ.ಕೀ), ಟಿಮ್ ಡೇವಿಡ್, ಕೃಣಾಲ್ ಪಾಂಡ್ಯ, ರಾಸಿಖ್ ದರ್ ಸಲಾಂ, ಸುಯಾಶ್ ಶರ್ಮಾ, ಜಾಶ್ ಹೇಝಲ್‌ವುಡ್, ಯಶ್ ದಯಾಳ್‌, ಅಭಿನಂದನ್ ಸಿಂಗ್, ಮನೋಜ್ ಭಾಂಡಗೆ, ರೊಮಾರಿಯೋ ಶೆಫರ್ಡ್, ಸ್ವಪ್ನಿಲ್‌ ಸಿಂಗ್‌, ಭುವೇಶ್ವರ್ ಸಿಂಗ್, ಲುಂಗಿ ಎನ್‌ಗಿಡಿ, ನುವಾನ್ ತುಷಾರ, ಜಾಕೋಬ್‌ ಬೆಥೆಲ್, ಮೋಹಿತ್ ರಾಠಿ, ಸ್ವಸ್ತಿಕ್ ಚಿಕಾರಾ.

ಚೆನ್ನೈ ಸೂಪರ್‌ ಕಿಂಗ್ಸ್‌

ರಚಿನ್‌ ರವೀಂದ್ರ (ನಾಯಕ), ರಾಹುಲ್‌ ತ್ರಿಪಾಠಿ, ದೀಪಕ್‌ ಹೂಡ, ಶಿವಂ ದುಬೆ, ಸ್ಯಾಮ್‌ ಕರನ್‌, ರವೀಂದ್ರ ಜಡೇಜಾ, ಎಂಎಸ್‌ ಧೋನಿ (ವಿ.ಕೀ), ರವಿಚಂದ್ರನ್‌ ಅಶ್ವಿನ್‌, ನೂರ್‌ ಅಹ್ಮದ್‌, ನೇಥನ್‌ ಎಲ್ಲಿಸ್‌, ಖಲೀಲ್‌ ಅಹ್ಮದ್‌, ವಿಜಯ್‌ ಶಂಕರ್‌, ಜೇಮಿ ಓವರ್ಟನ್‌, ಶ್ರೇಯಸ್‌ ಗೋಪಾಲ್‌, ಡೆವೋನ್‌ ಕಾನ್ವೇ, ಕಮಲೇಶ್‌ ನಾಗರಕೋಟಿ, ಮುಖೇಶ ಚೌಧರಿ, ಅಂಶುಲ್‌ ಕಾಂಬೋಜ್‌, ಮತೀಶ ಪತಿರಣ, ಗುರ್ಜಪ್ನೀತ್ ಸಿಂಗ್, ಶೈಕ್‌ ರಶೀದ್‌, ರಾಮಕೃಷ್ಣ ಘೋಷ್‌, ಆಂಡ್ರೆ ಸಿದ್ದಾರ್ಥ್‌, ವಂಶ್‌ ಬೇಡಿ