ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಕೆಕೆಆರ್‌ ವಿರುದ್ದ ಆರ್‌ಸಿಬಿಗೆ ಪಂದ್ಯ ಗೆದ್ದುಕೊಡಬಲ್ಲ ಮೂವರು ಆಟಗಾರರು!

RCB's 3 Key Players against KKR: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಗಳು ಶನಿವಾರ ನಡೆಯುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಆರ್‌ಸಿಬಿಯನ್ನು ಗೆಲ್ಲಿಸಿಕೊಡಬಲ್ಲ ಪ್ರಮುಖ ಮೂವರು ಸ್ಟಾರ್‌ ಆಟಗಾರರನ್ನು ಇಲ್ಲಿ ವಿವರಿಸಲಾಗಿದೆ.

RCB vs KKR: ಆರ್‌ಸಿಬಿಗೆ ಪಂದ್ಯ ಗೆದ್ದುಕೊಡಬಲ್ಲ ಮೂವರು ಸ್ಟಾರ್‌ಗಳು!

ಆರ್‌ಸಿಬಿ ತಂಡದ ಕೀ ಆಟಗಾರರು.

Profile Ramesh Kote Mar 21, 2025 4:21 PM

ಕೋಲ್ಕತಾ: ಬಹುನಿರೀಕ್ಷಿತ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಆರಂಭಕ್ಕೆ ಇನ್ನು ಒಂದೇ ಒಂದು ದಿನ ಬಾಕಿ ಇದೆ. ಮಾರ್ಚ್‌ 22 ರಂದು ಶನಿವಾರ ಇಲ್ಲಿನ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆಯುವ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ (RCB vs KKR) ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದ ಮೂಲಕ ಹದಿನೆಂಟನೇ ಆವೃತ್ತಿಯ ಐಪಿಎಲ್‌ ಟೂರ್ನಿ ಅಧಿಕೃತವಾಗಿ ಆರಂಭವಾಗಲಿದೆ. ಈ ಪಂದ್ಯವನ್ನು ಕಣ್ತುಂಬಿಸಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅಂದ ಹಾಗೆ ಎರಡೂ ತಂಡಗಳು ಬಲಿಷ್ಠವಾಗಿರುವ ಕಾರಣ ಯಾವ ತಂಡ ಪಂದ್ಯವನ್ನು ಗೆಲ್ಲಲಿದೆ ಎಂದು ಅಂದಾಜಿಸುವುದು ಕಷ್ಟ.

ಕಳೆದ ಆವೃತ್ತಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಪ್ಲೇಆಫ್ಸ್‌ಗೆ ಅರ್ಹತೆ ಪಡೆದಿದ್ದರೂ ಫೈನಲ್‌ಗೆ ಪ್ರವೇಶಿಸುವಲ್ಲಿ ವಿಫಲವಾಗಿತ್ತು. ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಚಾಂಪಿಯನ್‌ ಆಗಿತ್ತು. ಇದರ ಹೊರತಾಗಿಯೂ ಶ್ರೇಯಸ್‌ ಅಯ್ಯರ್‌ ಅವರನ್ನು ಉಳಿಸಿಕೊಳ್ಳುವಲ್ಲಿ ಕೋಲ್ಕತಾ ಫ್ರಾಂಚೈಸಿ ಮನಸು ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ಹೋಗಿದ್ದಾರೆ. ಇದೀಗ ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಕೆಕೆಆರ್‌ ಈ ಆವೃತ್ತಿಯಲ್ಲಿ ಕಣಕ್ಕೆ ಇಳಿಯಲಿದೆ.

RCB vs KKR: ಕೋಲ್ಕತಾ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್‌ XI, ಪಿಚ್‌ ರಿಪೋರ್ಟ್‌, ಮುಖಾಮುಖಿ ದಾಖಲೆ!

ಈ ಬಾರಿ ಆರ್‌ಸಿಬಿ ತಂಡ ಅತ್ಯುತ್ತಮ ಕಾಂಬಿನೇಷನ್‌ ಅನ್ನು ಹೊಂದಿದೆ ಹಾಗಾಗಿ, ಬೆಂಗಳೂರು ತಂಡವನ್ನು ಸೋಲಿಸುವುದು ಸುಲಭವಲ್ಲ. ಹಲವು ಮ್ಯಾಚ್‌ ವಿನ್ನರ್‌ಗಳು ಆರ್‌ಸಿಬಿಯಲ್ಲಿದ್ದಾರೆ. ಅಂದ ಹಾಗೆ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಕೆಕೆಆರ್‌ ಎದುರು ಆರ್‌ಸಿಬಿ ತಂಡವನ್ನು ಗೆಲ್ಲಿಸಬಲ್ಲ ಮೂವರು ಸ್ಟಾರ್‌ ಆಟಗಾರರನ್ನು ಇಲ್ಲಿ ವಿವರಿಸಲಾಗಿದೆ.

ಕೆಕೆಆರ್‌ ಎದುರು ಆರ್‌ಸಿಬಿಯನ್ನು ಗೆಲ್ಲಿಸಬಲ್ಲ ಮೂವರು ಆಟಗಾರರು

1 ವಿರಾಟ್‌ ಕೊಹ್ಲಿ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ವಿರಾಟ್‌ ಕೊಹ್ಲಿ ಕೂಡ ಮ್ಯಾಚ್‌ ವಿನ್ನರ್‌ ಆಗಿದ್ದಾರೆ. ಅವರು ಶನಿವಾರ ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ದ ತಮ್ಮ ತಂಡವನ್ನು ಗೆಲ್ಲಿಸಲು ಎದುರು ನೋಡುತ್ತಿದ್ದಾರೆ. ಕೆಕೆಆರ್‌ ವಿರುದ್ಧ ವಿರಾಟ್‌ ಕೊಹ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. ಕೋಲ್ಕತಾದ ಈಡನ್‌ ಗಾರ್ಡನ್ಸ್‌ನಲ್ಲಿ ಕೆಕೆಆರ್‌ ವಿರುದ್ಧ ವಿರಾಟ್‌ ಕೊಹ್ಲಿ 13 ಪಂದ್ಯಗಳಿಂದ 130.18ರ ಸ್ಟ್ರೈಕ್‌ ರೇಟ್‌ನಲ್ಲಿ 371 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಅವರು ಒಂದು ಶತಕ ಹಾಗೂ ಒಂದು ಅರ್ಧಶತಕವನ್ನು ಬಾರಿಸಿದ್ದಾರೆ. ಕೆಕೆಆರ್‌ ಸ್ಪಿನ್‌ ವಿರುದ್ಧ ಕೊಹ್ಲಿ ಅತ್ಯುತ್ತಮವಾಗಿಲ್ಲವಾದರೂ ಆರ್‌ಸಿಬಿಗೆ ಮಾಜಿ ನಾಯಕ ತುಂಬಾ ನಿರ್ಣಾಯಕವಾಗಿದ್ದಾರೆ.

IPL 2025 ಟೂರ್ನಿಯನ್ನು ವಿಥ್‌ಡ್ರಾ ಮಾಡಿಕೊಂಡ ಹ್ಯಾರಿ ಬ್ರೂಕ್‌ ವಿರುದ್ದ ಮೈಕಲ್‌ ಕ್ಲಾರ್ಕ್‌ ಕಿಡಿ!

2. ರಜತ್‌ ಪಾಟಿದಾರ್‌

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ನೂತನ ನಾಯಕನಾಗಿ ರಜತ್‌ ಪಾಟಿದಾರ್‌ ನೇಮಕಗೊಂಡಿದ್ದಾರೆ. ವರುಣ್‌ ಚಕ್ರವರ್ತಿ ಹಾಗೂ ಸುನೀಲ್‌ ನರೇನ್‌ ಎದುರು ಮಧ್ಯಮ ಓವರ್‌ಗಳಲ್ಲಿ ರಜತ್‌ ಆರ್‌ಸಿಬಿಗೆ ಕೀ ಫ್ಯಾಕ್ಟರ್‌ ಆಗಿದ್ದಾರೆ. ಸ್ಪಿನ್‌ ಬೌಲಿಂಗ್‌ನಲ್ಲಿ ಆರ್‌ಸಿಬಿ ಪರ ಅತ್ಯುತ್ತಮ ಬ್ಯಾಟ್‌ ಮಾಡುವ ಬ್ಯಾಟ್ಸ್‌ಮನ್‌ ಇವರು. ಈ ಹಿನ್ನೆಲೆಯಲ್ಲಿ ಶನಿವಾರದ ಪಂದ್ಯದಲ್ಲಿ ಆರ್‌ಸಿಬಿ ನಾಯಕನ ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಇಡಲಾಗಿದೆ. ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ರಜತ್‌ ಪಾಟಿದಾರ್‌ 212ರ ಸ್ಟ್ರೈಕ್‌ ರೇಟ್‌ನಲ್ಲಿ ಶತಕ ಸಿಡಿಸಿದ್ದಾರೆ ಹಾಗೂ ಕೆಕೆಆರ್‌ ಎದುರು ಕೇವಲ ಎರಡು ಪಂದ್ಯಗಳು ಮಾತ್ರವಾದರೂ 212.99ರ ಸ್ಟ್ರೈಕ್‌ ರೇಟ್‌ನಲ್ಲಿ 164 ರನ್‌ಗಳನ್ನು ಸಿಡಿಸಿದ್ದಾರೆ.

IPL 2025: ಈ ಬಾರಿಯೂ ಆರ್‌ಸಿಬಿ ಅಭಿಮಾನಿಗಳಿಗೆ ಬಿಸಿ ತುಪ್ಪವಾದ ತವರಿನ ಪಂದ್ಯಗಳ ಟಿಕೆಟ್‌ ದರ

3. ಭುವನೇಶ್ವರ್‌ ಕುಮಾರ್‌

ಜಾಶ್‌ ಹೇಝಲ್‌ವುಡ್‌ ಸಾರಥ್ಯದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವೇಗದ ಬೌಲಿಂಗ್‌ ವಿಭಾಗದಲ್ಲಿ ಸ್ವಿಂಗ್‌ ಕಿಂಗ್‌ ಭುವನೇಶ್ವರ್‌ ಕುಮಾರ್‌ ಆಡಲಿದ್ದಾರೆ. ಪವರ್‌ಪ್ಲೇ ಹಾಗೂ ಡೆತ್‌ ಓವರ್‌ಗಳಲ್ಲಿ ತಮ್ಮ ಚಾಣಾಕ್ಷತನದಿಂದ ಬೌಲ್‌ ಮಾಡುವ ಭುವನೇಶ್ವರ್‌ ಕುಮಾರ್‌, ಎದುರಾಳಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಕ್ಕೆ ಕಠಿಣವಾಗಲಿದ್ದಾರೆ. ಕೋಲ್ಕತಾದ ಈಡನ್‌ ಗಾರ್ಡನ್ಸ್‌ನಲ್ಲಿ ಭುವನೇಶ್ವರ್‌ ಕುಮಾರ್‌ ಆಡಿರುವ 10 ಪಂದ್ಯಗಳಿಂದ 13 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಒಟ್ಟಾರೆ ಕೆಕೆಆರ್‌ ವಿರುದ್ಧ ಆಡಿದ್ದ 30 ಪಂದ್ಯಗಳಿಂದ 27.25ರ ಸರಾಸರಿಯಲ್ಲಿ 32 ವಿಕೆಟ್‌ಗಳನ್ನು ಕಿತ್ತಿದ್ದಾರೆ.