ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs MI: ಮುಂಬೈ ಇಂಡಿಯನ್ಸ್‌ ಸೋಲಿಗೆ ನೈಜ ಕಾರಣ ತಿಳಿಸಿದ ಹಾರ್ದಿಕ್‌ ಪಾಂಡ್ಯ!

Hardik pandya on RCB vs MI: ರೋಚಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ನ ಸೋಲಿನ ಬಳಿಕ ನಾಯಕ ಹಾರ್ದಿಕ್ ಪಾಂಡ್ಯ ದೊಡ್ಡ ಹೇಳಿಕೆ ನೀಡಿದ್ದಾರೆ. ರೋಹಿತ್ ಶರ್ಮಾ ಹಾಗೂ ಜಸ್‌ಪ್ರೀತ್‌ ಬುಮ್ರಾ ಅವರ ಬಗ್ಗೆಯೂ ಮಾತನಾಡಿದ ಹಾರ್ದಿಕ್‌, ಮುಂಬೈ ಇಂಡಿಯನ್ಸ್‌ ಸೋಲಿಗೆ ಕಾರಣವಾದ ಅಂಶಗಳ ಮೇಲೆ ಬೆಳಕು ಚೆಲ್ಲಿದ್ದಾರೆ.

ಆರ್‌ಸಿಬಿ ಎದುರು ಮುಂಬೈ ಸೋಲಿಗೆ ಅಸಲಿ ಕಾರಣ ತಿಳಿಸಿದ ಹಾರ್ದಿಕ್‌ ಪಾಂಡ್ಯ!

ಆರ್‌ಸಿಬಿ ವಿರುದ್ಧ ಸೋಲಿನ ಬಗ್ಗೆ ಹಾರ್ದಿಕ್‌ ಪಾಂಡ್ಯ ಪ್ರತಿಕ್ರಿಯೆ ನೀಡಿದ್ದಾರೆ.

Profile Ramesh Kote Apr 8, 2025 10:48 AM

ಮುಂಬೈ: ಸೋಮವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ರೋಚಕ ಪಂದ್ಯದಲ್ಲಿ (RCB vs MI) ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 12 ರನ್‌ಗಳಿಂದ ಗೆಲುವು ಸಾಧಿಸಿತು. ಆರ್‌ಸಿಬಿ (Royal Challengers Bengaluru) ನೀಡಿದ್ದ ಬೃಹತ್‌ ಮೊತ್ತವನ್ನು ಚೇಸ್‌ ಮಾಡುವ ವೇಳೆ ಮುಂಬೈ ಪರ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ತಿಲಕ್ ವರ್ಮಾ ಕಠಿಣ ಹೋರಾಟ ನಡೆಸಿ ತಮ್ಮ ತಂಡದ ಗೆಲುವಿನ ಹಾದಿಯಲ್ಲಿ ಇರಿಸಿದ್ದರು. ಆದರೆ ಇವರಿಬ್ಬರ ನಿರ್ಗಮನದ ನಂತರ ಮುಂಬೈ ಸೋಲು ಒಪ್ಪಿಕೊಂಡಿತು. ಪಂದ್ಯದ ನಂತರ ಮಾತನಾಡಿದ ಮುಂಬೈ ಇಂಡಿಯನ್ಸ್‌ ನಾಯಕ ಹಾರ್ದಿಕ್‌ ಪಾಂಡ್ಯ (Hardik Pandya), ತಮ್ಮ ತಂಡವು ಕೆಲವು ಶಾಟ್‌ಗಳಿಂದ ಗೆಲುವನ್ನು ತಪ್ಪಿಸಿಕೊಂಡಿದೆ ಎಂದು ಒಪ್ಪಿಕೊಂಡರು. ಅವರು ಪಿಚ್ ಅನ್ನು ಬ್ಯಾಟ್ಸ್‌ಮನ್‌ಗಳ ಸ್ವರ್ಗ ಮತ್ತು ಬೌಲರ್‌ಗಳಿಗೆ ಕಷ್ಟಕರವೆಂದು ಬಣ್ಣಿಸಿದರು. ಅಷ್ಟೇ ಅಲ್ಲ, ಕಮ್‌ಬ್ಯಾಕ್ ಪಂದ್ಯದಲ್ಲಿ ವಿಕೆಟ್ ಪಡೆಯಲು ಸಾಧ್ಯವಾಗದ ಜಸ್‌ಪ್ರೀತ್‌ ಬುಮ್ರಾ, ರೋಹಿತ್ ಶರ್ಮಾ, ತಿಲಕ್ ವರ್ಮಾ ಮತ್ತು ನಮನ್ ಧೀರ್ ಬಗ್ಗೆಯೂ ಅವರು ಮಾತನಾಡಿದರು.

ಪಂದ್ಯದ ಬಳಿಕ ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಹಾರ್ದಿಕ್‌ ಪಾಂಡ್ಯ, "ಅದು ರನ್‌ ಹೊಳೆಯ ಉತ್ಸವವಾಗಿತ್ತು. ವಿಕೆಟ್‌ ತುಂಬಾ ಚೆನ್ನಾಗಿತ್ತು. ಎರಡು ದೊಡ್ಡ ಹೊಡೆತಗಳನ್ನು ಕಳೆದುಕೊಂಡಿದ್ದರಿಂದ ನಾವು ಸೋಲು ಅನುಭವಿಸಿದ್ದೇವೆಂದು ನನಗೆ ನಾನೇ ಹೇಳಿಕೊಂಡಿದ್ದೇನೆ. ಇದರ ಬಗ್ಗೆ ನಾನು ಜಾಸ್ತಿ ಹೇಳುವುದಿಲ್ಲ. ಇಲ್ಲಿನ ವಿಕೆಟ್‌ ಸ್ವರೂಪವನ್ನು ನೋಡಿದರೆ, ಬೌಲರ್‌ಗಳ ಕಡೆಗೆ ಬೆರಳು ತೋರಿಸಬಾರದು. ಇಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸುವುದು ಕಷ್ಟ. ಬ್ಯಾಟ್ಸ್‌ಮನ್‌ಗಳನ್ನು ನೀವು ಕಟ್ಟಿ ಹಾಕಬಹುದು ಆದರೆ, ಬೌಲರ್‌ಗಳನ್ನು ದೂರಬಾರದು. ಇದು ಬೌಲರ್‌ಗಳ ಪಾಲಿಗೆ ಅತ್ಯಂತ ಕಠಿಣ ಪಿಚ್‌ ಆಗಿದೆ ಹಾಗೂ ನಮಗೆ ಮೂರನೇ ಕ್ರಮಾಂಕಕ್ಕೆ ಹೆಚ್ಚಿನ ಆಯ್ಕೆಗಳು ಇಲ್ಲ. ನಮನ್‌ ಧೀರ್‌ ನಮಗೆ ಕೆಳ ಕ್ರಮಾಂಕದಲ್ಲಿ ಆಡುತ್ತಾರೆ. ಮೊನ್ನೆ ರೋಹಿತ್‌ ಶರ್ಮಾ ಅಲಭ್ಯರಾದ ಕಾರಣ ನಮನ್‌ ಮೂರನೇ ಕ್ರಮಾಂಕದಲ್ಲಿ ಆಡಿದ್ದರು," ಎಂದು ತಿಳಿಸಿದ್ದಾರೆ.

RCB vs MI: 10 ವರ್ಷಗಳ ಬಳಿಕ ವಾಂಖೆಡೆಯಲ್ಲಿ ಮುಂಬೈಗೆ ಸೋಲುಣಿಸಿದ ಆರ್‌ಸಿಬಿ!

ರೋಹಿತ್‌ ಶರ್ಮಾ ಟೂರ್ನಿಯ ಆರಂಭಿಕ ಮೂರು ಪಂದ್ಯಗಳಿಂದ ಕೇವಲ 13ರನ್‌ಗಳನ್ನು ಗಳಿಸಿದ್ದರು. ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧದ ಕಳೆದ ಪಂದ್ಯದಲ್ಲಿ ರೋಹಿತ್‌ ಶರ್ಮಾ ಆಡಿರಲಿಲ್ಲ. ತವರು ಅಂಗಣದಲ್ಲಿ ಆರ್‌ಸಿಬಿ ವಿರುದ್ಧ ಕಣಕ್ಕೆ ಇಳಿದಿದ್ದ ರೋಹಿತ್‌ ಶರ್ಮಾ 9 ಎಸೆತಗಳಲ್ಲಿ 17 ರನ್‌ಗಳನ್ನು ಕಲೆ ಹಾಕಿ ವಿಕೆಟ್‌ ಒಪ್ಪಿಸಿದ್ದರು.

ರೋಹಿತ್‌ ಶರ್ಮಾ ಬಗ್ಗೆ ಮಾತನಾಡಿದ ಹಾರ್ದಿಕ್‌ ಪಾಂಡ್ಯ, "ಕಳೆದ ಪಂದ್ಯಕ್ಕೆ ರೋಹಿತ್‌ ಶರ್ಮಾ ಅಲಭ್ಯರಾಗಿದ್ದರು ಹಾಗಾಗಿ ಅಗ್ರ ಕ್ರಮಾಂಕದಲ್ಲಿ ಬೇರೊಬ್ಬರು ಆಡಬೇಕಾಗಿತ್ತು. ಇವರ ಸ್ಥಾನದಲ್ಲಿ ಆಡುವ ಆಟಗಾರ ಕೊನೆಯವರೆಗೂ ಆಡುವ ಸಾಮರ್ಥ್ಯವನ್ನು ಹೊಂದಿರಬೇಕಾಗಿತ್ತು. ಈ ಕಾರಣದಿಂದಲೇ ನಮನ್‌ಗೆ ಕೊನೆಯ ಪಂದ್ಯದಲ್ಲಿ ಮೇಲಿನ ಕ್ರಮಾಮಕದಲ್ಲಿ ಅವಕಾಶವನ್ನು ನೀಡಲಾಗಿತ್ತು. ರೋಹಿತ್‌ ಶರ್ಮಾ ತಂಡಕ್ಕೆ ಮರಳಿದ್ದರಿಂದ ನಮನ್‌ ಕೆಳ ಕ್ರಮಾಂಕಕ್ಕೆ ಮರಳಬೇಕಾಯಿತು. ತಿಲಕ್‌ ಅದ್ಭುತವಾಗಿ ಆಡಿದ್ದಾರೆ. ಕೊನೆಯ ಪಂದ್ಯದಲ್ಲಿ ಸಾಕಷ್ಟು ಸಂಗತಿಗಳು ನಡೆದಿವೆ. ಜನರು ಇದರ ಬಗ್ಗೆ ಸಾಕಷ್ಟು ಮಾತನಾಡಿದ್ದರು. ತಿಲಕ್‌ ಪಾಲಿಗೆ ಅಷ್ಟೊಂದು ಚೆನ್ನಾಗಿರಲಿಲ್ಲ ಹಾಗೂ ಅದು ತಂತ್ರಗಾರಿಕೆಯ ಕರೆ ಎಂದು ಜನರಿಗೆ ಗೊತ್ತಿಲ್ಲ. ತಿಲಕ್‌ ಬೆರಳು ಸರಿ ಇರಲಿಲ್ಲ. ಈ ಕಾರಣದಿಂದ ಕೋಚ್‌, ಬೇರೆ ಯಾರಾದರೂ ಅವರ ಸಾನದಲ್ಲಿ ಆಡಲಿ ಎಂದು ಬಯಸಿದ್ದರು. ಈ ಪಂದ್ಯದಲ್ಲಿ ಪವರ್‌ಪ್ಲೇ ತುಂಬಾ ನಿರ್ಣಾಯಕವಾಗಿರುತ್ತದೆ. ಮಧ್ಯಮ ಓವರ್‌ಗಳಲ್ಲಿಯೂ ನಮ್ಮ ಪಾಲಿಗೆ ಸಂಗತಿ ಚೆನ್ನಾಗಿರಲಿಲ್ಲ. ಡೆತ್‌ ಓವರ್‌ಗಳ ಕೆಲ ಹಂತದಲ್ಲಿ ನಾವು ಎಡವಿದ್ದೇವೆ," ಎಂದು ಮುಂಬೈ ಇಂಡಿಯನ್ಸ್‌ ಕ್ಯಾಪ್ಟನ್‌ ಹೇಳಿದ್ದಾರೆ.

RCB vs MI: ತಮಗೆ ಸಿಕ್ಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಬೌಲರ್‌ಗಳಿಗೆ ಸಮರ್ಪಿಸಿ ಹೃದಯವಂತಿಕೆ ಮೆರೆದ ರಜತ್‌ ಪಾಟಿದಾರ್‌!

ಜಸ್‌ಪ್ರೀತ್‌ ಬುಮ್ರಾ ಕಮ್‌ಬ್ಯಾಕ್‌ ಬಗ್ಗೆ ಹಾರ್ದಿಕ್‌ ಹೇಳಿದ್ದಿದು

ಗಾಯದಿಂದ ಚೇತರಿಸಿಕೊಂಡ ಬಳಿಕ ಜಸ್‌ಪೀತ್‌ ಬುಮ್ರಾ ಅವರು 2025ರ ಐಪಿಎಲ್‌ ಟೂರ್ನಿಯಲ್ಲಿ ಆಡಿದ ಮೊದಲನೇ ಪಂದ್ಯ ಇದಾಗಿದೆ. ತಮ್ಮ ಮೊದಲನೇ ಪಂದ್ಯದಲ್ಲಿ ಬೌಲ್‌ ಮಾಡಿದ ನಾಲ್ಕು ಓವರ್‌ಗಳಲ್ಲಿ ಜಸ್‌ಪ್ರೀತ್‌ ಬುಮ್ರಾ 29 ರನ್‌ ನೀಡಿ ಒಂದೇ ಒಂದು ವಿಕೆಟ್‌ ಪಡೆಯಲು ಸಾಧ್ಯವಾಗಲಿಲ್ಲ.

"ಜಸ್‌ಪ್ರೀತ್‌ ಬುಮ್ರಾ ಅವರನ್ನು ಹೊಂದಿರುವ ವಿಶ್ವದ ಯಾವುದೇ ತಂಡಕ್ಕೆ ತುಂಬಾ ವಿಶೇಷವಾಗಿರುತ್ತದೆ. ಅವರು ಬಂದು ಅವರ ಕೆಲಸವನ್ನು ಮಾಡಿದ್ದಾರೆ. ಅವರನ್ನು ಹೊಂದಿರುವುದು ನಮಗೆ ಸಂತಸವನ್ನು ತಂದಿದೆ. ಜೀವನದಲ್ಲಿ ಎಂದಿಗೂ ಹಿಂದೆ ಉಳಿಯಬಾರದು. ಯಾವಾಗಲೂ ಸಕಾರಾತ್ಮಕವಾಗಿ ಉಳಿಯಬೇಕಾಗುತ್ತದೆ. ಜೀವನದಲ್ಲಿ ಮುಂದೆ ಹೋಗಿ ಒಳ್ಳೆಯ ಕ್ರಿಕೆಟ್‌ ಆಡಬೇಕು ಹಾಗೂ ನಿಮ್ಮನ್ನು ನೀವು ಬೆಂಬಲಿಸಬೇಕು. ಪಂದ್ಯದ ಫಲಿತಾಂಶ ನಮ್ಮ ಹಾದಿಯಲ್ಲಿ ಬರಲಿ ಎಂದು ನಾವು ಆಟಗಾರರನ್ನು ಬೆಂಬಲಿಸುತ್ತೇವೆ," ಎಂದು ಹಾರ್ದಿಕ್‌ ಪಾಂಡ್ಯ ತಿಳಿಸಿದ್ದಾರೆ.