ಬುಮ್ರಾ ಎಸೆದ ಆ ಓವರ್ ಇಂಗ್ಲೆಂಡ್ ತಂಡವನ್ನು ಛಿದ್ರಗೊಳಿಸಿತು; ಕೋಚ್ ಮೆಕಲಮ್
India vs England: ಜೇಕಬ್ ಬೆಥೆಲ್ ಕ್ರೀಸ್‌ನಲ್ಲಿ ಇರುವವರೆಗೂ ಇಂಗ್ಲೆಂಡ್ ತಂಡ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಕೊನೆ 3 ಓವರಲ್ಲಿ ತಂಡಕ್ಕೆ 34 ರನ್ ಬೇಕಿತ್ತು. 18ನೇ ಓವರ್‌ನಲ್ಲಿ ಬೂಮ್ರಾ 6, 19ನೇ ಓವರ್‌ನಲ್ಲಿ ಹಾರ್ದಿಕ್ 9 ರನ್ ನೀಡಿದ್ದರಿಂದ ಕೊನೆ ಓವರ್‌ಗೆ 30 ರನ್ ಅಗತ್ಯವಿತ್ತು. ದುಬೆ ಎಸೆದ ಓವರ್‌ನ ಮೊದಲ ಎಸೆತದಲ್ಲೇ ಬೆಥೆಲ್ ರನ್ಔಟ್ ಆದರು.
Bumrah -
ಮುಂಬಯಿ, ಮಾ.6: ಗುರುವಾರ ರಾತ್ರಿ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಅತ್ಯಂತ ರೋಚಕ ಪಂದ್ಯದಲ್ಲಿ ಇಂಗ್ಲೆಂಡ್(India vs England 2nd Semi-Final) ವಿರುದ್ಧ ಹಾಲಿ ಚಾಂಪಿಯನ್ ಟೀಂ ಇಂಡಿಯಾ 7 ರನ್ ರೋಚಕ ಗೆಲುವು ಸಾಧಿಸಿ 10ನೇ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿತು. ಇಂಗ್ಲೆಂಡ್ ತಂಡದ ಸೋಲಿಗೆ ಬುಮ್ರಾ(Jasprit Bumrah) ಎಸೆದ ಒಂದು ಓವರ್ ಕಾರಣ ಎಂದು ಇಂಗ್ಲೆಂಡ್ ಕೋಚ್ ಬ್ರೆಂಡನ್ ಮೆಕಲಮ್ ಹೇಳಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ಕೋಚ್ ಮೆಕಲಮ್, ಸರಗವಾಗಿ 15 ಸಿಕ್ಸರ್ ಮತ್ತು 21 ಬೌಂಡರಿ ಬಾರಿಸುತ್ತಿದ್ದ ತಂಡಕ್ಕೆ 17ನೇ ಓವರ್‌ವರೆಗೂ ಗೆಲುವಿನ ವಿಶ್ವಾಸದಲ್ಲಿತ್ತು. ಆದರೆ ಬುಮ್ರಾ ಅವರು ಎಸೆತ 18ನೇ ಓವರ್ ಇಂಗ್ಲೆಂಡ್ ತಂಡವನ್ನು ಛಿದ್ರಗೊಳಿಸಿತು. ಅವರು ತಮ್ಮ ಕೊನೆಯ ಓವರ್‌ನಲ್ಲಿ ನಿಧಾನವಾದ ಮತ್ತು ಯಾರ್ಕರ್‌ಗಳನ್ನು ಎಸೆದು ಪಂದ್ಯದ ಗತಿಯನ್ನೇ ಬದಲಿಸಿಬಿಟ್ಟರು. ಕೇವಲ 6 ರನ್ ಮಾತ್ರ ಬಿಟ್ಟುಕೊಟ್ಟರು. ಬುಮ್ರಾ ವಿಶ್ವದ ಅತ್ಯುತ್ತಮ ಬೌಲರ್ ಮತ್ತು ಅವರು ಅದ್ಭುತವಾಗಿ ಪ್ರದರ್ಶನ ನೀಡಿದರು" ಎಂದು ಮೆಕಲಮ್ ಹೇಳಿದರು.
ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಸಂಜು ಸ್ಯಾಮ್ಸನ್ ಕೂಡ ಪಂದ್ಯದ ಗೆಲುವಿನ ಶ್ರೇಯವನ್ನು ಜಸ್‌ಪ್ರೀತ್ ಬುಮ್ರಾಗೆ ಅರ್ಪಿಸಿದರು. "ಎಲ್ಲಾ ಶ್ರೇಯಸ್ಸು ವಿಶ್ವ ದರ್ಜೆಯ ಬೌಲರ್, ಒಂದು ಪೀಳಿಗೆಯಲ್ಲಿ ಒಮ್ಮೆ ಕಾಣಿಸಿಕೊಂಡ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ಸಲ್ಲುತ್ತದೆ. ಅವರು ನೀಡಿದ ಪ್ರದರ್ಶನ ಅದನ್ನೇ ಎಂದು ನಾನು ಭಾವಿಸುತ್ತೇನೆ. ಈ ಪ್ರಶಸ್ತಿ ವಾಸ್ತವವಾಗಿ ಅವರಿಗೆ ಸಲ್ಲಬೇಕು. ಅವರು ಡೆತ್ ಓವರ್‌ಗಳಲ್ಲಿ ಆ ರೀತಿ ಬೌಲಿಂಗ್ ಮಾಡದಿದ್ದರೆ, ನಾನು ಇಲ್ಲಿ ನಿಲ್ಲುತ್ತಿರಲಿಲ್ಲ ಎಂದು ನಾನು ಭಾವಿಸುತ್ತೇನೆ. ಎಲ್ಲಾ ಶ್ರೇಯಸ್ಸು ಬೌಲರ್‌ಗಳಿಗೆ ಸಲ್ಲುತ್ತದೆ" ಎಂದು ಸ್ಯಾಮ್ಸನ್ ಪಂದ್ಯದಲ್ಲಿ ಬುಮ್ರಾ ಪ್ರಭಾವವನ್ನು ವಿವರಿಸಿದರು.
T20 World Cup: ಬೆಥೆಲ್ ಶತಕ ವ್ಯರ್ಥ, ಇಂಗ್ಲೆಂಡ್ ಎದುರು ಹೈಸ್ಕೋರಿಂಗ್ ಕದನ ಗೆದ್ದ ಭಾರತಕ್ಕೆ ಫೈನಲ್ ಟಿಕೆಟ್!
ಇಂಗ್ಲೆಂಡ್ ಮೊದಲ ಎಸೆತದಿಂದ 17ನೇ ಓವರ್‌ವರೆಗೂ ಪಂದ್ಯವನ್ನು ತನ್ನ ನಿಯಂತ್ರಣದಲ್ಲಿ ಇರಿಸಿತ್ತು. ಭಾರತಕ್ಕಿಂತಲೂ ವೇಗವಾಗಿ ರನ್ ಕಲೆಹಾಕುತ್ತಾ ಸಾಗಿದ ತಂಡ, ಗೆಲ್ಲುವ ಎಲ್ಲಾ ಸಾಧ್ಯತೆಯಿತ್ತು. ಬಟ್ಲರ್(25), ವಿಲ್ ಜ್ಯಾಕ್ಸ್(35) ಔಟಾದರೂ ಜೇಕಬ್ ಬೆಥೆಲ್ ಕ್ರೀಸ್‌ನಲ್ಲಿ ಇರುವವರೆಗೂ ತಂಡ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಕೊನೆ 3 ಓವರಲ್ಲಿ ತಂಡಕ್ಕೆ 34 ರನ್ ಬೇಕಿತ್ತು. 18ನೇ ಓವರ್‌ನಲ್ಲಿ ಬೂಮ್ರಾ 6, 19ನೇ ಓವರ್‌ನಲ್ಲಿ ಹಾರ್ದಿಕ್ 9 ರನ್ ನೀಡಿದ್ದರಿಂದ ಕೊನೆ ಓವರ್‌ಗೆ 30 ರನ್ ಅಗತ್ಯವಿತ್ತು. ದುಬೆ ಎಸೆದ ಓವರ್‌ನ ಮೊದಲ ಎಸೆತದಲ್ಲೇ ಬೆಥೆಲ್ ರನ್ಔಟ್ ಆದರು. ಅವರು 48 ಎಸೆತಕ್ಕೆ 8 ಬೌಂಡರಿ, 7 ಸಿಕ್ಸರ್‌ನೊಂದಿಗೆ 105 ರನ್ ಸಿಡಿಸಿದರು.