ಹೃದಯವಂತಿಕೆಯಲ್ಲಿ ಶ್ರೀಮಂತ ಈತ: ಐದು ಬೀದಿ ನಾಯಿಗಳಿಗೆ ಸೈಕಲ್ ರಿಕ್ಷಾದಲ್ಲಿ ಆಶ್ರಯ ನೀಡಿದ ವೃದ್ಧ
Viral Video: ವೃದ್ಧರೊಬ್ಬರು ಐದು ಬೀದಿ ನಾಯಿಗಳೊಂದಿಗೆ ಸೈಕಲ್ ರಿಕ್ಷಾದಲ್ಲಿ ಪ್ರಯಾಣಿಸುತ್ತಿರುವ ದೃಶ್ಯವೊಂದು ವೈರಲ್ ಆಗಿದೆ. ಪ್ರೀತಿ ಮತ್ತು ಕರುಣೆಗೆ ಹಣ ಬೇಕಾಗಿಲ್ಲ, ಹೃದಯವಂತಿಕೆ ಇದ್ದರೆ ಸಾಕು ಎಂಬುದನ್ನು ಈ ದೃಶ್ಯ ಒತ್ತಿ ಹೇಳಿದೆ. ವೃದ್ಧನ ಜತೆ ಐದು ಬೀದಿನಾಯಿಗಳು ರಾಜಾರೋಷವಾಗಿ ತಿರುಗಿದ್ದು, ಗಮನ ಸೆಳೆಯುವಂತೆ ಮಾಡಿದೆ. ವಿಡಿಯೊ ವೈರಲ್ ಆಗುತ್ತಿದ್ದಂತೆ ವೃದ್ಧನ ಗುಣಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಬೀದಿ ನಾಯಿಗಳೊಂದಿಗೆ ಸೈಕಲ್ ರಿಕ್ಷಾದಲ್ಲಿ ವೃದ್ಧನ ಪಯಣ -
ನವದೆಹಲಿ, ಮೇ 9: ಹೃದಯವಂತಿಕೆ ಹಣಕ್ಕಿಂತಲೂ ಮಿಗಿಲು ಅನ್ನೋದನ್ನು ನೀವು ಕೇಳಿರಬಹುದು. ಈ ಮಾತಿಗೆ ಸಾಕ್ಷಿ ಎಂಬಂತೆ ವೃದ್ಧರೊಬ್ಬರು ಐದು ಬೀದಿ ನಾಯಿಗಳೊಂದಿಗೆ ಸೈಕಲ್ ರಿಕ್ಷಾದಲ್ಲಿ ಪ್ರಯಾಣ ಮಾಡಿದ ದೃಶ್ಯವೊಂದು ವೈರಲ್ (Viral News) ಆಗಿದೆ. ಪ್ರೀತಿ ಮತ್ತು ಕರುಣೆಗೆ ಹಣ ಬೇಕಾಗಿಲ್ಲ, ಹೃದಯವಂತಿಕೆ ಇದ್ದರೆ ಸಾಕು ಎಂಬುದನ್ನು ಈ ದೃಶ್ಯ ಒತ್ತಿ ಹೇಳಿದೆ. ವೃದ್ಧನ ಜತೆ ಐದು ಬೀದಿನಾಯಿಗಳು ರಾಜಾರೋಷವಾಗಿ ತಿರುಗಿದ್ದು, ಗಮನ ಸೆಳೆದಿದೆ. ವಿಡಿಯೊ ವೈರಲ್ ಆಗುತ್ತಿದ್ದಂತೆ ವ್ಯಕ್ತಿಯ ಗುಣಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಈ ಹೃದಯಸ್ಪರ್ಶಿ ವಿಡಿಯೊ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಸೆಳೆದಿದೆ. ಆಸ್ತಿ- ಅಂತಸ್ತು ಇಲ್ಲದೆ ಇದ್ದರೂ ವ್ಯಕ್ತಿಯ ನಡೆಗೆ ಹೆಚ್ಚಿನವರು ಮೆಚ್ಚುಗೆ ಸೂಚಿಸಿದ್ದಾರೆ. ವೈರಲ್ ಆದ ದೃಶ್ಯದಲ್ಲಿ ವೃದ್ಧ ವ್ಯಕ್ತಿ ಸೈಕಲ್ ರಿಕ್ಷಾ ತಳ್ಳುತ್ತಾ ಸಾಗುತ್ತಿರುವುದು ಕಂಡು ಬಂದಿದೆ. ಅವರ ಜತೆ ಐದು ಬೀದಿ ನಾಯಿಗಳು ಕೂಡ ಶಿಸ್ತಿನಿಂದ ಸಾಗಿವೆ. ಅದರಲ್ಲೂ ಎರಡು ನಾಯಿಗಳು ಬೆಡ್ ಶೀಟ್ ಹಾಗೂ ಚೀಲಗಳ ನಡುವೆ ಆರಾಮವಾಗಿ ಕುಳಿತುಕೊಂಡಿವೆ.
ವಿಡಿಯೊ ನೋಡಿ:
ಪ್ರಾಣಿಗಳ ಈ ಶಾಂತ ನಡವಳಿಕೆಯು ವೀಕ್ಷಕರ ಗಮನವನ್ನು ಸೆಳೆದಿದೆ. ನಾಯಿಗಳು ಯಾವುದೇ ರೀತಿ ಆತಂಕಕ್ಕೆ ಒಳಗಾಗಿಲ್ಲ. ಬದಲಾಗಿ, ಆ ವ್ಯಕ್ತಿಯೊಂದಿಗೆ ಪ್ರಯಾಣಿಸುವುದು ಅವುಗಳ ದೈನಂದಿನ ದಿನಚರಿಯ ಭಾಗ. ವೃದ್ಧನ ಬಳಿ ಇರುವ ವಸ್ತು ಕಂಡರೆ ಅವರು ತೀರಾ ಬಡತನದಲ್ಲಿದ್ದಾರೆ ಎಂದು ಕಾಣುತ್ತದೆ. ಅವರು ತನ್ನ ಬದುಕನ್ನು ಅದೇ ಸೈಕಲ್ ರಿಕ್ಷಾದಲ್ಲಿ ಕಳೆಯುತ್ತಿದ್ದಾರೆ.
ಬೆಳಗ್ಗೆ 6:30ಕ್ಕೆ ಆಫೀಸ್‌ಗೆ ಹಾಜರಾಗಬೇಕು ಎಂಬ ಆದೇಶಕ್ಕೆ ಜೆನ್ ಝೀ ಉದ್ಯೋಗಿಯ ಖಡಕ್ ರೆಸ್ಪಾನ್ಸ್
ಸದ್ಯ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ಸಾವಿರಾರು ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರು "ಓಹ್, ತುಂಬಾ ಮುದ್ದಾಗಿದೆ. ಒಬ್ಬ ಬಡವ ಮತ್ತು ಐದು ನಾಯಿಗಳು. ದೇವರು ನಿಮ್ಮೆಲ್ಲರನ್ನೂ ಆಶೀರ್ವದಿಸಲಿ'' ಎಂದು ಬರೆದಿದ್ದಾರೆ. ಮತ್ತೊಬ್ಬರು, ʼʼನಾಯಿಗಳಿಗೆ ಯಾರು ಶ್ರೀಮಂತರು ಮತ್ತು ಬಡವರು ಎಂದು ತಿಳಿದಿಲ್ಲ. ಅವುಗಳಿಗೆ ಒಳ್ಳೆಯ ಹೃದಯ ಮಾತ್ರ ಇಷ್ಟವಾಗುತ್ತದೆʼʼ ಎಂದು ಕಮೆಂಟ್ ಮಾಡಿದ್ದಾರೆ.