LSG vs RR: ವೈಭವ್ ಸೂರ್ಯವಂಶಿ ಅಬ್ಬರ, ಲಖನೌ ಎದುರು ಗೆದ್ದ ರಾಜಸ್ಥಾನದ ಪ್ಲೇಆಫ್ಸ್ ಆಸೆ ಜೀವಂತ!
LSG vs RR Match Highlights: ವೈಭವ್ ಸೂರ್ಯವಂಶಿ ಅವರ ಅಬ್ಬರದ ಬ್ಯಾಟಿಂಗ್ ಬಲದಿಂದ ರಾಜಸ್ಥಾನ್ ರಾಯಲ್ಸ್ ತಂಡ, ಎದುರಾಳಿ ಲಖನೌ ಸೂಪರ್ ಜಯಂಟ್ಸ್ ಎದುರು 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಆ ಮೂಲಕ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪ್ಲೇಆಫ್ಸ್ ಆಸೆ ಜೀವಂತವಾಗಿದೆ.
ಲಖನೌ ಎದುರು ರಾಜಸ್ಥಾನ್‌ಗೆ 7 ವಿಕೆಟ್ ಜಯ. -
ಜೈಪುರ: ವೈಭವ್ ಸೂರ್ಯವಂಶಿ (Vaibhav Sooryavanshi) ಅವರ ಸ್ಪೋಟಕ ಬ್ಯಾಟಿಂಗ್ ಬಲದಿಂದ ರಾಜಸ್ಥಾನ ರಾಯಲ್ಸ್ ತಂಡ, ಎದುರಾಳಿ ಲಖನೌ ಸೂಪರ್ ಜಯಂಟ್ಸ್ ಎದುರು ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ(RR vs LSG) 7 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪ್ಲೇಆಫ್ಸ್ ಆಸೆಯನ್ನು ಜೀವಂತವಗಿರಿಸಿಕೊಂಡಿದೆ. ಇದೀಗ 13 ಪಂದ್ಯಗಳಿಗೆ 14 ಅಂಕಗಳನ್ನು ಕಲೆ ಹಾಕಿರುವ ಆರ್‌ಆರ್, ಪಾಯಿಂಟ್ಸ್ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು. ತನ್ನ ಕೊನೆಯ ಪಂದ್ಯವನ್ನು ಮೇ 24 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದರೆ, ರಾಜಸ್ಥಾನ್ ಅಧಿಕೃತವಾಗಿ ನಾಕ್‌ಔಟ್‌ಗೆ ಅರ್ಹತೆ ಪಡೆಯಲಿದೆ. ಒಂದು ವೇಳೆ ಸೋತರೆ ಇದರ ಪ್ಲೇಆಫ್ಸ್ ಭವಿಷ್ಯ ಇತರೆ ತಂಡಗಳ ಫಲಿತಾಂಶವನ್ನು ಅವಲಂಬಿಸಬೇಕಾಗುತ್ತದೆ.
ಮಂಗಳವಾರ ಇಲ್ಲಿನ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಎಲ್‌ಎಸ್‌ಜಿ ನೀಡಿದ 221 ರನ್‌ಗಳ ಗುರಿಯನ್ನು ಹಿಂಬಾಲಿಸಿದ ರಾಜಸ್ಥಾನ್ ರಾಯಲ್ಸ್ ಪರ, ಇನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್, ಕೇವಲ 23 ಎಸೆತಗಳಲ್ಲಿ 43 ರನ್‌ಗಳನ್ನು ಸಿಡಿಸಿದರು ಹಾಗೂ ವೈಭವ್ ಸೂರ್ಯವಂಶಿ ಜೊತೆ 75 ರನ್‌ಗಳ ಜೊತೆಯಾಟವನ್ನು ಆಡುವ ತಮ್ಮ ತಂಡಕೆ ಭರ್ಜರಿ ಆರಂಭ ತಂದುಕೊಟ್ಟು ಔಟ್ ಆದರು.
2027ರ ಐಪಿಎಲ್ ಟೂರ್ನಿಯಲ್ಲಿ ಎಂಎಸ್ ಧೋನಿ ಆಡ್ತಾರಾ? ಬಿಗ್ ಅಪ್‌ಡೇಟ್ ಕೊಟ್ಟ ಸ್ಟೀಫನ್ ಫ್ಲೆಮಿಂಗ್!
ವೈಭವ್ ಸೂರ್ಯವಂಶಿ ಭರ್ಜರಿ ಬ್ಯಾಟಿಂಗ್
ಜೈಸ್ವಾಲ್ ವಿಕೆಟ್ ಒಪ್ಪಿಸಿದ ಬಳಿಕ ತಂಡದ ಜವಾಬ್ದಾರಿ ತೆಗೆದುಕೊಂಡ ವೈಭವ್ ಸೂರ್ಯವಂಶಿ, ಅಪಾಯಕಾರಿ ಆಟವನ್ನು ಪ್ರದರ್ಶಿಸಿದರು. ಎಲ್‌ಎಸ್‌ಜಿಯ ಎಲ್ಲಾ ಬೌಲರ್‌ಗಳ ಎದುರು ಲೀಲಾ-ಜಾಲವಾಗಿ ಬ್ಯಾಟ್ ಬೀಸಿ, ಎಲ್ಲಾ ಕಡೆ ಸಿಕ್ಸರ್ ಹಾಗೂ ಬೌಂಡರಿಗಳ ಸುರಿಮಳೆಯನ್ನು ಹರಿಸಿದರು. ಅವರು ಆಡಿದ ಕೇವಲ 38 ಎಸೆತಗಳಲ್ಲಿ ಬರೋಬ್ಬರಿ 10 ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 93 ರನ್‌ಗಳನ್ನು ಸಿಡಿಸಿದರು. ಇನ್ನೇನು ಶತಕ ಹಾಗೂ ತಮ್ಮ ತಂಡವನ್ನು ಗೆಲ್ಲಿಸುವ ಸನಿಹದಲ್ಲಿ ಮೊಹ್ಸಿನ್ ಖಾನ್‌ಗೆ ವಿಕೆಟ್ ಒಪ್ಪಿಸಿದರು. ವೈಭವ್ ಜೊತೆಗೆ105 ರನ್‌ಗಳ ಜೊತೆಯಾಟವನ್ನು ಧ್ರುವ್ ಜುರೆಲ್ ಕೊನೆಯವರೆಗೂ ಬ್ಯಾಟ್ ಮಾಡಿ 38 ಎಸೆತಗಳಲ್ಲಿ ಅಜೇಯ 53 ರನ್‌ಗಳನ್ನು ಗಳಿಸಿ ತನ್ನ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಂತಿಮವಾಗಿ ಆರ್‌ಆರ್ 19.1 ಓವರ್‌ಗಳಿಗೆ 3 ವಿಕೆಟ್ ನಷ್ಟಕ್ಕೆ 225 ರನ್ ಗಳಿಸಿ ಗೆದ್ದು ಬೀಗಿತು. ಕೊನೆಯಲ್ಲಿ ಡೊನೊವಾನ್ ಫೆರೆರಾ 16 ರನ್ ಸಿಡಿಸಿದರು.
ರಾಜಸ್ಥಾನ್ ರಾಯಲ್ಸ್ ತಂಡದ ಈ ಭರ್ಜರಿ ಗೆಲುವಿನಿಂದ ಪಂಜಾಬ್ ಕಿಂಗ್ಸ್, ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳ ಪ್ಲೇಆಫ್ಸ್ ಹಾದಿ ಕಠಿಣವಾಗಿದೆ.
𝗦𝘁𝗼𝗿𝗺 𝗼𝗳 𝗦𝗶𝘅𝗲𝘀 🚀
— IndianPremierLeague (@IPL) May 19, 2026
Vaibhav Sooryavanshi lit up #RR's chase with a thunderous 93(38) 🎇
Updates ▶️ https://t.co/LvQzM3tl06 #TATAIPL | #KhelBindaas | #RRvLSG | @rajasthanroyals pic.twitter.com/qe6TfmGnTx
220 ರನ್‌ಗಳನ್ನು ಕಲೆ ಹಾಕಿದ ಸನ್‌ರೈಸರ್ಸ್
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಸನ್‌ರೈಸರ್ಸ್ ಹೈದರಾಬಾದ್ ತಂಡ , ಮಿಚೆಲ್ ಮಾರ್ಷ್ ಹಾಗೂ ಜಾಶ್ ಇಂಗ್ಲಿಸ್ ಅವರ ಸ್ಪೋಟಕ ಬ್ಯಾಟಿಂಗ್ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 220 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 221 ರನ್‌ಗಳ ಗುರಿಯನ್ನು ನೀಡಿತು.
Innings Break!
— IndianPremierLeague (@IPL) May 19, 2026
A batting storm in Jaipur by #LSG 🌪️
Huge chase coming up next ⏳
Scorecard ▶️ https://t.co/LvQzM3tl06 #TATAIPL | #KhelBindaas | #RRvLSG pic.twitter.com/zBhouTlKKK
ಮಾರ್ಷ್-ಇಂಗ್ಲಿಸ್ ಜುಗಲ್‌ಬಂದಿ
ಲಖನೌ ಪರ ಇನಿಂಗ್ಸ್ ಆರಂಭಿಸಿದ ಮಿಚೆಲ್ ಮಾರ್ಷ್ ಹಾಗೂ ಜಾಶ ಇಂಗ್ಲಿಸ್ ಅವರು ಆರಂಭದಿಂದಲೂ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಈ ಇಬ್ಬರೂ 8.2 ಓವರ್‌ಗಳಿಗೆ 109 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ಎಲ್‌ಎಸ್‌ಜಿಗೆ ಭರ್ಜರಿ ಆರಂಭವನ್ನು ತಂದುಕೊಟ್ಟರು. 206.90ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಿದ ಜಾಶ್ ಇಂಗ್ಲಿಸ್ 29 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 60 ರನ್‌ಗಳಿಸಿದ ಬಳಿಕ ರಾಜ್ ಪುಂಜಾಗೆ ವಿಕೆಟ್ ಒಪ್ಪಿಸಿದರು.
4️⃣th fifty-plus score in his last 5️⃣ innings 💥
— IndianPremierLeague (@IPL) May 19, 2026
Mitchell Marsh in 𝘂𝗻𝘀𝘁𝗼𝗽𝗽𝗮𝗯𝗹𝗲 𝗺𝗼𝗱𝗲 😎
Updates ▶️ https://t.co/LvQzM3tl06 #TATAIPL | #KhelBindaas | #RRvLSG | @LucknowIPL pic.twitter.com/9X22hmN3VU
ಮಿಚೆಲ್ ಮಾರ್ಷ್ ಭರ್ಜರಿ ಬ್ಯಾಟಿಂಗ್
ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ ಮಿಚೆಲ್ ಮಾರ್ಷ್, ಆರ್‌ಆರ್ ಬೌಲರ್‌ಗಳು ದೀರ್ಘಾವಧಿ ಕಾಡಿದರು. 20ನೇ ಓವರ್‌ವರೆಗೂ ಬ್ಯಾಟ್ ಮಾಡಿದ ಮಾರ್ಷ್, 57 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 11 ಬೌಂಡರಿಗಳೊಂದಿಗೆ 96 ರನ್ ಗಳಿಸಿದರು. ಆ ಮೂಲಕ ತಂಡದ ಮೊತ್ತವನ್ನು 220ರ ಗಡಿ ದಾಟಿಸುವಲ್ಲಿ ಮಹತ್ತರ ಪಾತ್ರವಹಿಸಿದರು. ಆದರೆ, ಅವರು 20ನೇ ಓವರ್‌ನಲ್ಲಿ ರನ್‌ಔಟ್ ಆಗುವ ಮೂಲಕ ಕೇವಲ 4 ರನ್ ಅಂತರದಲ್ಲಿ ಶತಕ ಸಿಡಿಸಬಹುದಾದ ಅವಕಾಶವನ್ನು ಕಳೆದುಕೊಂಡರು. ಕೊನೆಯಲ್ಲಿ ರಿಷಭ್ ಪಂತ್ 23 ಎಸೆತಗಳಲ್ಲಿ 35 ರನ್ ಗಳಿಸಿದರು. ಪಂತ್ ಹಾಗೂ ಮಾರ್ಷ್ ನಡುವೆ 64 ರನ್ ಜೊತೆಯಾಟ ಮೂಡಿಬಂದಿತು.