ಭಾರತ ಟೆಸ್ಟ್ ತಂಡದ ಮೂರನೇ ಕ್ರಮಾಂಕದ ರೇಸ್‌ನಲ್ಲಿರುವ ಮೂವರು ಬ್ಯಾಟ್ಸ್‌ಮನ್‌ಗಳು!
ಚೇತೇಶ್ವರ್ ಪೂಜಾರ ಭಾರತ ಟೆಸ್ಟ್ ತಂಡದಿಂದ ಹೊರಬಿದ್ದ ಬಳಿಕ ಅವರ ಮೂರನೇ ಕ್ರಮಾಂಕಕ್ಕೆ ಇನ್ನೂ ಸೂಕ್ತ ಬ್ಯಾಟ್ಸ್‌ಮನ್ ಸಿಕ್ಕಿಲ್ಲ. ಇಲ್ಲಿಯವರೆಗೆ 7 ಮಂದಿ ಆಟಗಾರರನ್ನು ಮೂರನೇ ಕ್ರಮಾಂಕದಲ್ಲಿ ಪ್ರಯತ್ನಿಸಲಾಗಿದೆ. ಆದರೂ ಯಾವುದೇ ಬ್ಯಾಟ್ಸ್‌ಮನ್ ಈ ಕ್ರಮಾಂಕದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿಲ್ಲ. ಅಂದ ಹಾಗೆ ಈ ಮೂರನೇ ಕ್ರಮಾಂಕದ ರೇಸ್‌ನಲ್ಲಿ ಇದೀಗ ಮೂವರು ಬ್ಯಾಟ್ಸ್‌ಮನ್ ಇದ್ದಾರೆ.
ಭಾರತ ಟೆಸ್ಟ್ ತಂಡದ ಮೂರನೇ ಕ್ರಮಾಂಕದ ರೇಸ್‌ನಲ್ಲಿ ಗಾಯಕ್ವಾಡ್. -
ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಯಲ್ಲಿ ಭಾರತ ತಂಡ (India) ಹೀನಾಯ ಸೋಲು ಅನುಭವಿಸಿದೆ. ಇದರ ಪರಿಣಾಮ ಟೀಮ್ ಇಂಡಿಯಾ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದೆ. ಭಾರತ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ (Gautam Gambhir) ಅವರ ಅವಧಿಯಲ್ಲಿ ಭಾರತ ತವರಿನಲ್ಲಿ ಸತತ ಎರಡು ಟೆಸ್ಟ್ ಸರಣಿಯಲ್ಲಿ ವೈಟ್‌ವಾಷ್ ಆಘಾತ ಅನುಭವಿಸಿದೆ. ಹಾಗಾಗಿ ಗಂಭೀರ್ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಇದರ ನಡುವೆ 2026 ರಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ (IND vs SL) ಬಲಿಷ್ಠ ಭಾರತ ತಂಡವನ್ನು ಕಟ್ಟಲು ಸಿದ್ದತೆ ನಡೆಸಲಾಗುತ್ತಿದೆ. ರಾಹುಲ್ ದ್ರಾವಿಡ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿಯವರು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಅವರ ಸ್ಥಾನವನ್ನು ತುಂಬುವ ಮೂರನೇ ಕ್ರಮಾಂಕದ ಬ್ಯಾಟರ್ ಯಾರು ಎನ್ನುವ ಚರ್ಚೆಗಳು ನಡೆಯುತ್ತಿವೆ.
ಭಾರತ ಟೆಸ್ಟ್ ತಂಡದ ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್ ಸ್ಪರ್ಧೆಯಲ್ಲಿ ಋತುರಾಜ್ ಗಾಯಕ್ವಾಡ್ ಅವರು ಮುಂಚೂಣಿಯಲ್ಲಿದ್ದಾರೆ ಎನ್ನಲಾಗುತ್ತಿದೆ. ಚೇತೇಶ್ವರ ಪೂಜಾರ ಅವರ ನಂತರ ಮೂರನೇ ಕ್ರಮಾಂಕಕ್ಕೆ ಏಳು ಜನ ಬ್ಯಾಟರ್‌ಗಳನ್ನು ಪ್ರಯತ್ನಿಸಲಾಗಿದೆ. ಆದರೆ ಯಾರೂ ಉತ್ತಮ ಪ್ರದರ್ಶನ ತೋರುತ್ತಿಲ್ಲ. ಇದು ಆಯ್ಕೆ ಸಮಿತಿಗೆ ದೊಡ್ಡ ತಲೆನೋವಾಗಿದೆ. ಮೂಲಗಳ ಪ್ರಕಾರ ರಣಜಿ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ತೋರಿದ ಬಳಿಕ ರಿಂಕು ಸಿಂಗ್ ಮತ್ತು ರಜತ್ ಪಟಿದಾರ್ ಕೂಡ ಟೆಸ್ಟ್ ತಂಡ ಸೇರಿಕೊಳ್ಳುವ ನಿರೀಕ್ಷೆ ಇದೆ.
IND vs SA: ʻಭಾರತ ತಂಡದಲ್ಲಿ ಉತ್ತಮ ಬ್ಯಾಟರ್‌ಗಳಿದ್ದಾರೆ, ಚಿಂತಿಸುವ ಅಗತ್ಯವಿಲ್ಲʼ-ಎಬಿ ಡಿವಿಲಿಯರ್ಸ್!
ಅಭಿಮನ್ಯು ಈಶ್ವರನ್ ಮತ್ತು ಸರ್ಫರಾಜ್ ಖಾನ್ ಮೇಲೆ ನಂಬಿಕೆ ಇಲ್ಲ
ಅಭಿಮನ್ಯು ಈಶ್ವರನ್ ಮತ್ತು ಸರ್ಫರಾಜ್ ಖಾನ್ ಇತ್ತೀಚಿಗೆ ಭಾರತ ಟೆಸ್ಟ್ ತಂಡ ಸೇರಿಕೊಂಡಿದ್ದರು. ಆದರೆ, ಈಗಿನ ತಂಡದಲ್ಲಿ ಅವರಿಲ್ಲ. ತಮಗೆ ಸಿಕ್ಕ ಸೀಮಿತ ಅವಕಾಶಗಳಲ್ಲಿ ಸರ್ಫರಾಝ್ ಖಾನ್ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಆದರೆ, ಅಣಿಮನ್ಯು ಈಶ್ವರನ್‌ಗೆ ಭಾರತ ತಂಡದಲ್ಲಿ ಸ್ಥಾನ ನೀಡಿದ್ದರೂ ಪ್ಲೇಯಿಂಗ್ XIನಲ್ಲಿ ಆಡಲು ಚಾನ್ಸ್ ಸಿಕ್ಕಿಲ್ಲ. ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಹೊರತಾಗಿಯೂ, ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ನೃತೃತ್ವದ ಆಯ್ಕೆ ಸಮಿತಿ ಈ ಇಬ್ಬರು ಆಟಗಾರರನ್ನು ನಿರಂತರವಾಗಿ ಕಡೆಗಣಿಸುತ್ತಿದ್ದಾರೆ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಅಜಿತ್ ಅಗರ್ಕರ್, ನಾಯಕ ಶುಭಮನ್ ಗಿಲ್ ಅವರಿಗೆ ಉಭಯ ಆಟಗಾರರ ಪ್ರದರ್ಶನದ ಬಗ್ಗೆ ನಂಬಿಕೆ ಇಲ್ಲದಿರಬಹುದು ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅಜಿತ್ ಅಗರ್ಕರ್, "ಅಭಿಮನ್ಯು ಮತ್ತು ಸರ್ಫರಾಜ್ ಅವರನ್ನು ಆಯ್ಕೆ ಮಾಡದಿರಲು ಜನರು ಆಯ್ಕೆ ಸಮಿತಿಯನ್ನು ದೂಷಿಸಬಹುದು. ಆದರೆ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಶುಭ್‌ಮನ್ ಗಿಲ್ ಅವರಿಗೆ ಈ ಆಟಗಾರರ ಸಾಮರ್ಥ್ಯದ ಬಗ್ಗೆ ನಂಬಿಕೆ ಹೊಂದಿದ್ದಾರೆಯೇ? ಇಲ್ಲದಿದ್ದರೆ ಅಜಿತ್ ಮಾತ್ರ ಏನು ಮಾಡಲು ಸಾಧ್ಯ," ಎಂದು ತಿಳಿಸಿದ್ದಾರೆ.
IND vs SA: ಭಾರತ ತಂಡದ ಹೆಡ್ ಕೋಚ್ ಸ್ಥಾನದಿಂದ ಗೌತಮ್ ಗಂಭೀರ್‌ರನ್ನು ಕಿತ್ತಾಕಿ ಎಂದ ಮನೋಜ್ ತಿವಾರಿ!
ಗೌತಮ್ ಗಂಭೀರ್ ಕೋಚ್ ಸ್ಥಾನದಲ್ಲಿ ಮುಂದುವರಿಕೆ
ಗುವಾಹಟಿ ಟೆಸ್ಟ್ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನು ಪ್ರಧಾನ ಕೋಚ್ ಹುದ್ದೆಯಿಂದ ಕೆಳಗಿಳಿಸಿ ಎನ್ನುವ ಕೂಗು ಎದ್ದಿದ್ದವು. ಇದರ ಮಧ್ಯೆ ಬಿಸಿಸಿಐ ನನ್ನ ಭವಿಷ್ಯ ನಿರ್ಧರಿಸಲಿ ಎಂದು ಹೇಳಿಕೆ ನೀಡಿದ್ದ ಗಂಭೀರ್ ಅಚ್ಚರಿ ಮೂಡಿಸಿದ್ದರು. ಅವರ ಈ ಹೇಳಿಕೆ ಬಳಿಕ ಬಿಸಿಸಿಐ ಗಂಭೀರ್ ಅವರನ್ನು ಕೆಳಗಿಳಸಲಿದೆಯಾ ಎನ್ನುವ ಪ್ರಶ್ನೆ ಉದ್ಭವವಾಗಿತ್ತು. ಆದರೆ ಇದೀಗ ಈ ಬಗ್ಗೆ ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದು, ಅವರನ್ನು 2027ರ ವಿಶ್ವಕಪ್‌ವರೆಗೆ ಮುಂದುವರಿಸಲಾಗುತ್ತದೆ. ವಿಶ್ವಕಪ್ ಸಮೀಪಿಸುತ್ತಿರುವುದರಿಂದ ಸದ್ಯ ಕೋಚ್ ಬದಲಾವಣೆ ಕುರಿತು ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಹೇಳೀದ್ದಾರೆ.