Chikkaballapur News: 36 ಗಂಟೆಗಳ ನೆಕ್ಸೋರಾ ಹ್ಯಾಕಥಾನ್ ನಲ್ಲಿ ನಾಗಾರ್ಜುನ ಕಾಲೇಜು ತಂಡಕ್ಕೆ ದ್ವಿತೀಯ ಸ್ಥಾನ
ಎರಡು ದಿನಗಳ ಕಾಲ ನಡೆದ ಟೆಕ್ ಸ್ಪರ್ಧೆಯಲ್ಲಿ ಸುಮಾರು 70 ತಂಡಗಳು ಭಾಗವಹಿಸಿ ದ್ದವು. 70 ತಂಡಗಳ ಪೈಕಿ ನಾಗಾರ್ಜುನ ಕಾಲೇಜಿನ ಸಿ ಎಸ್ ಇ ವಿಭಾಗದ ತಂಡವು ಸತತ 36 ಗಂಟೆಗಳ ಕಾಲ ಸತತ ಪ್ರಯತ್ನ ನಡೆಸಿ ಜಯ ಸಾಧಿಸಿದೆ. ಡಾ.ಬಾಬಾ ಫಕ್ರುದ್ದೀನ್ ಅಲಿ ತಂಡಕ್ಕೆ ಮಾರ್ಗದರ್ಶನ ನೀಡಿದ್ದರು.
-
Ashok Nayak
Apr 28, 2026 12:06 AM
ಚಿಕ್ಕಬಳ್ಳಾಪುರ: ಬೆಂಗಳೂರಿನ ಹೆಚ್.ಕೆ.ಬಿ.ಕೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ದಿಂದ ಆರಂಭವಾದ 36 ಗಂಟೆಗಳ ನೆಕ್ಸೋರಾ ಹ್ಯಾಕಥಾನ್ ನಲ್ಲಿ ನಾಗಾರ್ಜುನ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ತಂಡವು ದ್ವಿತೀಯ ಸ್ಥಾನ ಪಡೆದಿದೆ.
ಎರಡು ದಿನಗಳ ಕಾಲ ನಡೆದ ಟೆಕ್ ಸ್ಪರ್ಧೆಯಲ್ಲಿ ಸುಮಾರು 70 ತಂಡಗಳು ಭಾಗವಹಿಸಿ ದ್ದವು. 70 ತಂಡಗಳ ಪೈಕಿ ನಾಗಾರ್ಜುನ ಕಾಲೇಜಿನ ಸಿ ಎಸ್ ಇ ವಿಭಾಗದ ತಂಡವು ಸತತ 36 ಗಂಟೆಗಳ ಕಾಲ ಸತತ ಪ್ರಯತ್ನ ನಡೆಸಿ ಜಯ ಸಾಧಿಸಿದೆ. ಡಾ.ಬಾಬಾ ಫಕ್ರುದ್ದೀನ್ ಅಲಿ ತಂಡಕ್ಕೆ ಮಾರ್ಗದರ್ಶನ ನೀಡಿದ್ದರು.
ಜಯ ಸಾಧಿಸಿದ ತಂಡವನ್ನು ಕಾಲೇಜಿನ ಪ್ರಾಂಶುಪಾಲ ಡಾ.ತಿಪ್ಪೇಸ್ವಾಮಿ ಜಿ, ಐ ಕ್ಯೂ ಎ ಸಿ ಸಹ ನಿರ್ದೇಶಕ ಡಾ.ಯೋಗೇಶ್, ಡಾ.ರಾಜ್ ಕುಮಾರ್, ಸಂಜೀವ್ ಕುಮಾರ್ ಹತ್ತೂರೆ, ಸೈಯದ್ ನಯಮತ್ತುಲ್ಲಾ ಖಾನ್ ಇತರರು ಅಭಿನಂದಿಸಿದ್ದಾರೆ.