IPL 2026: ಚೆನ್ನೈ ಸೂಪರ್ ಕಿಂಗ್ಸ್ ಎದುರು 8 ವಿಕೆಟ್‌ಗಳಿಂದ ಗೆದ್ದು ಬೀಗಿದ ಗುಜರಾತ್ ಟೈಟನ್ಸ್!
CSK vs GT Highlights: ಸಾಯಿ ಸುದರ್ಶನ್ ಅರ್ಧಶತಕ ಹಾಗೂ ಕಗಿಸೊ ರಬಾಡ ಅವರ ಮಾರಕ ಬೌಲಿಂಗ್ ದಾಳಿಯ ಸಹಾಯದಿಂದ ಗುಜರಾತ್ ಟೈಟನ್ಸ್ ತಂಡ, ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ಎದುರು 8 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಟೂರ್ನಿಯಲ್ಲಿ ನಾಲ್ಕನೇ ಗೆಲುವಿನ ಮೂಲಕ ಶುಭಮನ್ ಗಿಲ್ ಸಾರಥ್ಯದ ಜಿಟಿ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು.
ಸಿಎಸ್‌ಕೆ ಎದುರು ಜಿಟಿ ತಂಡಕ್ಕೆ 8 ವಿಕೆಟ್ ಜಯ. -
ಚೆನ್ನೈ: ಋತುರಾಜ್ ಗಾಯಕ್ವಾಡ್ ನಿರ್ಣಾಯಕ ಅರ್ಧಶತಕದ ಹೊರತಾಗಿಯೂ ಇತರೆ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ (CSK) ಎದುರು ತವರು ನೆಲದಲ್ಲಿ ಗುಜರಾತ್ ಟೈಟನ್ಸ್ ಎದುರು 8 ವಿಕೆಟ್‌ಗಳ ಸೋಲು ಅನುಭವಿಸಿತು. ಆದರೆ, ಕಳೆದ ಎರಡು ಪಂದ್ಯಗಳಲಿ ಸತತವಾಗಿ ಸೋತಿದ್ದ ಶುಭಮನ್ ಗಿಲ್ ಸಾರಥ್ಯ ಗುಜರಾತ್ ತಂಡ, ಕಗಿಸೊ ರಬಾಡ (Kagiso Rabada) ಮಾರಕ ಬೌಲಿಂಗ್ ಹಾಗೂ ಸಾಯಿ ಸುದರ್ಶನ್ ಅವರ ಅರ್ಧಶತಕದ ಬಲದಿಂದ ಗೆಲುವಿನ ಲಯಕ್ಕೆ ಮರಳಿತು. ಅಲ್ಲದೆ 8 ಅಂಕಗಳ ಮೂಲಕ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ಐದನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು.
ಭಾನುವಾರ ಇಲ್ಲಿನ ಎಂ ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು, ಕಗಿಸೊ ರಬಾಡ ಹೊಸ ಚೆಂಡಿನಲ್ಲಿ ಸಿಎಸ್‌ಕೆಯ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದರು. ಋತುರಾಜ್ ಗಾಯಕ್ವಾಡ್ ಅವರ ಅಜೇಯ ಅರ್ಧಶತಕದ ನೆರವಿನಿಂದ ಸಿಎಸ್‌ಕೆ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 158 ರನ್‌ಗಳನ್ನು ಕಲೆ ಹಾಕಿತು.
CSK vs GT: 5000 ಐಪಿಎಲ್ ರನ್ ಗಳಿಸಿ ಎಂಎಸ್ ಧೋನಿ ದಾಖಲೆ ಮುರಿದ ಸಂಜು ಸ್ಯಾಮ್ಸನ್!
ಬಳಿಕ ಗುರಿಯನ್ನು ಹಿಂಬಾಲಿಸಿದ ಗುಜರಾತ್ ಟೈಟನ್ಸ್ ತಂಡ ಯಾವುದೇ ತೊಂದರೆಗೆ ಒಳಗಾಗದೆ ಲೋಕಲ್ ಬಾಯ್ ಸಾಯಿ ಸುದರ್ಶನ್ ಅವರು ನಿರ್ಣಾಯಕ ಬ್ಯಾಟಿಂಗ್ ಬಲದಿಂದ 16.4 ಓವರ್‌ಗಳಿಗೆ ಎರಡು ವಿಕೆಟ್ ನಷ್ಟಕ್ಕೆ 162 ರನ್‌ಗಳನ್ನು ಗಳಿಸಿ ಎಂಟು ವಿಕೆಟ್‌ಗಳಿಂದ ಗೆದ್ದು ಬೀಗಿತು. ಸಿಎಸ್‌ಕೆ ಬ್ಯಾಟ್ಸ್‌ಮನ್‌ಗಳು ಸಾಧಾರಣ ಗುರಿಯನ್ನು ನೀಡಿದ್ದರ ಪರಿಣಾಮ ಬೌಲರ್‌ಗಳು ಎಷ್ಟೇ ಪ್ರಯತ್ನ ನಡೆಸಿದರೂ ಜಿಟಿ ಬ್ಯಾಟ್ಸ್‌ಮನ್‌ಗಳ ಒತ್ತಡವನ್ನು ಹಾಕಲು ಸಾಧ್ಯವಾಗಲಿಲ್ಲ. ಹಾಗಾಗಿ ಅಂತಿಮ ಸೋಲು ಒಪ್ಪಿಕೊಳ್ಳಬೇಕಾಯಿತು.
🎥 High & handsome from Jos Buttler to seal victory for @gujarat_titans 💙
— IndianPremierLeague (@IPL) April 26, 2026
An emphatic chase and a very important 2⃣ points 👏
Scorecard ▶️ https://t.co/zJBovAaCoM #TATAIPL | #KhelBindaas | #CSKvGT pic.twitter.com/rcc3CD7gqM
ಸಿಎಸ್‌ಕೆ ಬ್ಯಾಟಿಂಗ್ ವೈಫಲ್ಯ
ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ಸಂಜು ಸ್ಯಾಮ್ಸನ್ ಎರಡು ಬೌಂಡರಿಗಳೊಂದಿಗೆ 11 ರನ್ ಗಳಿಸಿ ಸಿಎಸ್‌ಕೆಗೆ ಭರವಸೆ ನೀಡಿದ್ದರು. ಆದರೆ, ನಾಲ್ಕನೇ ಓವರ್‌ನಲ್ಲಿ ಕಗಿಸೊ ರಬಾಡಗೆ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕೀಪರ್‌ಗೆ ಕ್ಯಾಚ್ ಕೊಟ್ಟರು. ಊರ್ವಿಲ್ ಪಟೇಲ್, ಸರ್ಫರಾಝ್ ಖಾನ್ ಹಾಗೂ ಡೆವಾಲ್ಡ್ ಬ್ರೆವಿಸ್ ಕಂಡೀಷನ್ಸ್‌ಗೆ ಹೊಂದಿಕೊಳ್ಳುವುದಕ್ಕೂ ಮೊದಲೇ ಪೆವಿಲಿಯನ್‌ಗೆ ಮರಳಿದರು. ಸಿಎಸ್‌ಕೆ ಕೇವಲ 37 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
Captain stepping up when needed most 🫡
— IndianPremierLeague (@IPL) April 26, 2026
Ruturaj Gaikwad compiles his 2⃣1⃣st #TATAIPL fifty to lead #CSK's revival 💛
Updates ▶️ https://t.co/zJBovAaCoM #KhelBindaas | #CSKvGT pic.twitter.com/g9u4XefJBx
ಚೆನ್ನೈ ಸೂಪರ್ ಕಿಂಗ್ಸ್ ಮಾನ ಕಾಪಾಡಿದ್ದ ಗಾಯಕ್ವಾಡ್
ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ದೀರ್ಘಾವಧಿ ಬ್ಯಾಟ್ ಮಾಡಿದ ಋತುರಾಜ್ ಗಾಯಕ್ವಾಡ್ ಪ್ರಸಕ್ತ ಋತುವಿನಲ್ಲಿ ಮೊದಲ ಅರ್ಧಶತಕ ಬಾರಿಸಿದರು. ಶಿವಂ ದುಬೆ (22), ಕಾರ್ತಿಕ್ ಶರ್ಮಾ (15) ಹಾಗೂ ಜೇಮಿ ಓವರ್ಟನ್ (18) ಅವರು ಕೆಲ ಕಾಲ ಗಾಯಕ್ವಾಡ್‌ಗೆ ಸಾಥ್ ನೀಡಿದ್ದರು. ಆದರೆ, ಕೊನೆಯವರೆಗ ಏಕಾಂಗಿಯಾಗಿ ಬ್ಯಟ್ ಮಾಡಿದ ಸಿಎಸ್‌ಕೆ ನಾಯಕ, 60 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ 74 ರನ್ ಗಳಿಸಿದರು. ಆ ಮೂಲಕ ಕಡಿಮ್ ಮೊತ್ತಕ್ಕೆ ಕಡಿಮೆ ಮೊತ್ತಕ್ಕೆ ಆಲ್‌ಔಟ್ ಆಗುತ್ತಿದ್ದ ತಮ್ಮ ತಂಡಕ್ಕೆ ಆಸರೆಯಾದರು. ಜಿಟಿ ಪರ ಪರ ಕಗಿಸೊ ರಬಾಡ ಮೂರು ವಿಕೆಟ್ ಕಿತ್ತರೆ, ಅರ್ಷದದ ಖಾನ್ ಎರಡು ವಿಕೆಟ್ ಪಡೆದರು.
𝑨 𝒉𝒂𝒑𝒑𝒚 𝒉𝒐𝒎𝒆𝒄𝒐𝒎𝒊𝒏𝒈 𝒇𝒐𝒓 𝑺𝒂𝒊 𝑺𝒖𝒅𝒉𝒂𝒓𝒔𝒂𝒏 🏚️ pic.twitter.com/HglwQC7XjM
— Gujarat Titans (@gujarat_titans) April 26, 2026
ಗುಜರಾತ್ ಟೈಟನ್ಸ್‌ಗೆ ಜಯ ತಂದುಕೊಟ್ಟ ಸಾಯಿ ಸುದರ್ಶನ್
159 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಗುಜರಾತ್ ಟೈಟನ್ಸ್ ತಂಡದ ಪರ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದಿದ್ದು ಲೋಕಲ್ ಬಾಯ್ ಸಾಯಿ ಸುದರ್ಶನ್. ಶುಭಮನ್ ಗಿಲ್ 33 ರನ್ ಗಳಿಸಿ ತಂಡಕ್ಕೆ ಉತ್ತಮ ಆರಂಭ ತಂದುಕೊಟ್ಟು ಸ್ಟಂಪ್ ಔಟ್ ಆದರು. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ ಸಾಯಿ ಸುದರ್ಶನ್, ತಾವು ಆಡಿದ ಬೆಳೆದ ಪಿಚ್‌ನ ಲಾಭವನ್ನು ಸಂಪೂರ್ಣವಾಗಿ ಬಳಸಿಕೊಂಡರು. ಅವರು ಆಡಿದ 46 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 87 ರನ್ ಸಿಡಿಸಿ ಗುಜರಾತ್ ಟೈಟನ್ಸ್ ಗೆಲುವಿಗೆ ನೆರವು ನೀಡಿದರು. ಕೊನೆಯಲ್ಲಿ ಜೋಸ್ ಬಟ್ಲರ್ 30 ಎಸೆತಗಳಲ್ಲಿ ಅಜೇಯ 39 ರನ್ ಗಳಿಸಿದರು. ಕೊನೆಯಲ್ಲಿ ಸಿಕ್ಸರ್ ಮೂಲಕ 16.4 ಓವರ್‌ಗಳಿಗೆ ಪಂದ್ಯವನ್ನು ಮುಗಿಸಿದರು.