IND vs NZ: ಔಟ್ ಆಫ್ ಫಾರ್ಮ್ ಸಂಜು ಸ್ಯಾಮ್ಸನ್ ಬಗ್ಗೆ ಬ್ಯಾಟಿಂಗ್ ಕೋಚ್ ಹೇಳಿದ್ದಿದು!
ಭಾರತದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ನ್ಯೂಜಿಲೆಂಡ್ ವಿರುದ್ಧದ ನಾಲ್ಕು ಟಿ20 ಪಂದ್ಯಗಳಲ್ಲಿ ಕೇವಲ 40 ರನ್ ಗಳಿಸಿದ್ದಾರೆ. ಇದರ ಹೊರತಾಗಿಯೂ, ಟೀಮ್ ಮ್ಯಾನೇಜ್‌ಮೆಂಟ್ ಅವರ ಮೇಲೆ ಸಂಪೂರ್ಣ ನಂಬಿಕೆಯನ್ನು ಹೊಂದಿದೆ. ಈ ಬಗ್ಗೆ ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸಂಜು ಸ್ಯಾಮ್ಸನ್‌ಗೆ ಬೆಂಬಲ ವ್ಯಕ್ತಪಡಿಸಿದ ಸಿತಾಂಶು ಕೊಟಕ್. -
ತಿರುವನಂತಪುರಂ: ಸಂಜು ಸ್ಯಾಮ್ಸನ್ (Sanju Samson) ಸದ್ಯ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಭಾರತದ ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್ (Sitanshu Kotak) ಒಪ್ಪಿಕೊಂಡಿದ್ದಾರೆ. ಆದರೆ ಬ್ಯಾಟ್ಸ್‌ಮನ್ ಸಾಮರ್ಥ್ಯದ ಬಗ್ಗೆ ತಮಗೆ ಯಾವುದೇ ಸಂದೇಹವಿಲ್ಲ ಮತ್ತು ಸ್ಯಾಮ್ಸನ್‌ಗೆ ಟೀಮ್ ಮ್ಯಾನೇಜ್‌ಮೆಂಟ್ ಕಡೆಯಿಂದ ಸಂಪೂರ್ಣ ಬೆಂಬಲವಿದೆ ಎಂದು ಪುನರುಚ್ಚರಿಸಿದರು. ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟಿ20ಐ (IND vs NZ) ಸರಣಿಯಲ್ಲಿ ಸಂಜು ಸ್ಯಾಮ್ಸನ್ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಅವರು ಆಡಿದ ನಾಲ್ಕು ಪಂದ್ಯಗಳಲ್ಲಿ 10ರ ಸರಾಸರಿಯಲ್ಲಿ ಕೇವಲ 40 ರನ್ ಗಳಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಅಂತಿಮ ಟಿ20ಐ ಪಂದ್ಯಕ್ಕೂ ಮುನ್ನ ಸೀತಾಂಶು ಕೊಟಕ್ ಮಾಧ್ಯಮಗಳ ಜತೆ ಮಾತನಾಡಿದರು. "ಸಂಜು ಒಬ್ಬ ಹಿರಿಯ ಆಟಗಾರ. ಅವರು ಎಲ್ಲರೂ ಇಷ್ಟಪಡುವಷ್ಟು ರನ್ ಗಳಿಸದಿರಬಹುದು, ಆದರೆ ಅದು ಕ್ರಿಕೆಟ್ ವೃತ್ತಿಜೀವನದ ಭಾಗವಾಗಿದೆ. ಕೆಲವೊಮ್ಮೆ ನೀವು ಸತತ ಐದು ಇನಿಂಗ್ಸ್‌ಗಳಲ್ಲಿ ಬಹಳಷ್ಟು ರನ್ ಗಳಿಸುತ್ತೀರಿ ಮತ್ತು ಕೆಲವೊಮ್ಮೆ ನೀವು ಕಠಿಣ ಹಂತವನ್ನು ದಾಟುತ್ತೀರಿ," ಎಂದು ಹೇಳಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿಯಲ್ಲಿ 300 ರನ್ ಗಳಿಸಬಲ್ಲ ತಂಡವನ್ನು ಆರಿಸಿದ ರವಿ ಶಾಸ್ತ್ರಿ!
ಸಂಜು ಸ್ಯಾಮ್ಸನ್‌ಗೆ ಬ್ಯಾಟಿಂಗ್ ಕೋಚ್ ಬೆಂಬಲ
ಈ ಕಷ್ಟದ ಸಮಯದಲ್ಲಿ ಟೀಮ್ ಮ್ಯಾನೇಜ್‌ಮೆಂಟ್ ಸ್ಯಾಮ್ಸನ್‌ಗೆ ಬೆಂಬಲವಾಗಿ ನಿಲ್ಲುತ್ತದೆ ಎಂದು ಕೊಟಕ್ ಹೇಳಿದ್ದಾರೆ. "ವ್ಯಕ್ತಿಯ ಮನಸ್ಸು ಎಷ್ಟು ಬಲಶಾಲಿಯಾಗಿದೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ ಮತ್ತು ನಮ್ಮ ಕೆಲಸ ಖಂಡಿತವಾಗಿಯೂ ಅವರನ್ನು ಸಕಾರಾತ್ಮಕ ಮನಸ್ಥಿತಿಯಲ್ಲಿಡುವುದು. ಅವರು ಅಭ್ಯಾಸ ಮಾಡುತ್ತಿದ್ದಾರೆ ಮತ್ತು ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ, ಆದ್ದರಿಂದ ಸಂಜು ಏನು ಸಮರ್ಥರಾಗಿದ್ದಾರೆಂದು ನಮಗೆಲ್ಲರಿಗೂ ತಿಳಿದಿದೆ. ಸಂಜು ಬಗ್ಗೆ ಹೆಚ್ಚು ಹೇಳಲು ಏನೂ ಇಲ್ಲ ಎಂದು ನಾನು ಭಾವಿಸುತ್ತೇನೆ, ಏಕೆಂದರೆ ಅವರು ನಿಜವಾಗಿಯೂ ಚೆನ್ನಾಗಿ ಆಡುತ್ತಿದ್ದಾರೆ," ಎಂದು ಅವರು ತಿಳಿಸಿದ್ದಾರೆ.
2026ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭೀತಿ ಹುಟ್ಟಿಸಿರುವ ತಂಡವನ್ನು ಹೆಸರಿಸಿದ ಫಿಲ್ ಸಾಲ್ಟ್!
30 ನಿಮಿಷಗಳ ಬ್ಯಾಟಿಂಗ್ ಅಭ್ಯಾಸ
ಸ್ಯಾಮ್ಸನ್ ಇಲ್ಲಿನ ಗ್ರೀನ್‌ಫೀಲ್ಡ್ ಕ್ರೀಡಾಂಗಣದಲ್ಲಿ ಸುಮಾರು 30 ನಿಮಿಷಗಳ ಕಾಲ ನೆಟ್ಸ್‌ನಲ್ಲಿ ಅಭ್ಯಾಸ ನಡೆಸುತ್ತಿರುವುದು ಕಂಡುಬಂದಿದೆ. ಬಲಗೈ ಬ್ಯಾಟ್ಸ್‌ಮನ್, ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಮತ್ತು ಇತರ ಬೌಲರ್‌ಗಳ ವಿರುದ್ಧ ಹೆಚ್ಚು ಹೊತ್ತು ಬ್ಯಾಟಿಂಗ್ ಅಭ್ಯಾಸವನ್ನು ನಡೆಸಿದರು. ಅವರು ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಅವರೊಂದಿಗೆ ಮಾತನಾಡುತ್ತಿರುವುದು ಕೂಡ ಕಂಡುಬಂದಿದೆ.
ರೋಹಿತ್ ಶರ್ಮಾರ ಟಿ20ಐ ವಿಶ್ವ ದಾಖಲೆಯನ್ನು ಮುರಿದ ಪಾಲ್ ಸ್ಟರ್ಲಿಂಗ್!
ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಸರಣಿ ಮತ್ತು ಅದಕ್ಕೂ ಮೊದಲು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಳು ಭಾರತಕ್ಕೆ ಟಿ20 ವಿಶ್ವಕಪ್‌ಗೆ ಸಜ್ಜಾಗಲು ಅತ್ಯುತ್ತಮ ಅವಕಾಶಗಳಾಗಿವೆ ಎಂದು ಬ್ಯಾಟಿಂಗ್ ಕೋಚ್ ಹೇಳಿದರು. "ಇವು ನಮಗೆ ಬಹಳ ಮುಖ್ಯವಾದ ಸರಣಿಗಳಾಗಿವೆ. ಅವು ಖಂಡಿತವಾಗಿಯೂ ತುಂಬಾ ಉಪಯುಕ್ತವಾಗಿವೆ ಏಕೆಂದರೆ ವಿಶ್ವಕಪ್‌ಗೆ ಮೊದಲು ನೀವು ಲಯಕ್ಕೆ ಬರಲು ಪ್ರಾರಂಭಿಸುತ್ತೀರಿ, ನೀವು ಸಂಯೋಜನೆಗಳನ್ನು ಕಂಡುಹಿಡಿಯಲು ಪ್ರಾರಂಭಿಸುತ್ತೀರಿ ಮತ್ತು ನೀವು ಆಟಗಾರರಿಗೆ ಅವಕಾಶಗಳನ್ನು ನೀಡಲು ಪ್ರಯತ್ನಿಸುತ್ತೀರಿ," ಎಂದು ಸಿತಾಂಶು ಕೊಟಕ್ ತಿಳಿಸಿದ್ದಾರೆ.