IPL 2026: ಡೆಲ್ಲಿ ಕ್ಯಾಪಿಟಲ್ಸ್ ಎದುರು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಗೆಲ್ಲಿಸಿದ ಸಂಜು ಸ್ಯಾಮ್ಸನ್!
CSK vs DC match Highlights: ನೂರ್ ಅಹ್ಮದ್ ಸ್ಪಿನ್ ಮೋಡಿ ಹಾಗೂ ಸಂಜು ಸ್ಯಾಮ್ಸನ್ ಜವಾಬ್ದಾರಿಯುತ ಬ್ಯಾಟಿಂಗ್ ಬಲದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ, 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲಸ್ ಎದುರು 8 ವಿಕೆಟ್ ಗೆಲುವು ಪಡೆಯಿತು. ಆ ಮೂಲಕ ಪ್ಲೇಆಫ್ಸ್‌ಗೆ ಹಾದಿಯನ್ನು ಜೀವಂತವಾಗಿರಿಸಿಕೊಂಡಿದೆ.
114 ರನ್‌ಗಳ ನಿರ್ಣಾಯಕ ಜೊತೆಯಾಟವಾಡಿದ ಸಂಜು-ಕಾರ್ತಿಕ್. -
ನವದೆಹಲಿ: ಸಂಜು ಸ್ಯಾಮ್ಸನ್ (Sanju Samson) ಅವರ ಜವಾಬ್ದಾರಿಯುತ ಬ್ಯಾಟಿಂಗ್ ಬಲದಿಂದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ, 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು 8 ವಿಕೆಟ್‌ಗಳ ಅಧಿಕಾರಯುತ ಗೆಲುವು ದಾಖಲಿಸಿತು. ಆ ಮೂಲಕ 10 ಅಂಕಗಳಿಂದ ಪಾಯಿಂಟ್ಸ್ ಟೇಬಲ್‌ನಲ್ಲಿ ಆರನೇ ಸ್ಥಾನದಲ್ಲಿ ಉಳಿದರೂ ಟೂರ್ನಿಯ ಪ್ಲೇಆಫ್ಸ್‌ಗೆ ಹಾದಿಯನ್ನು ಜೀವಂತವಾಗಿರಿಸಿಕೊಂಡಿದೆ. ಆದರೆ, ತವರು ಅಂಗಣದಲ್ಲಿ ಸೋಲು ಅನುಭವಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಕೌಟ್ ಹಾದಿ ಅತ್ಯಂತ ಕಠಿಣವಾಗಿದೆ.
ಮಂಗಳವಾರ ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಡಿಸಿ ನೀಡಿದ್ದ 156 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಸಂಜು ಸ್ಯಾಮ್ಸನ್ ( ) ಅವರ ಜವಾಬ್ದಾರಿಯುತ ಇನಿಂಗ್ಸ್ ಸಹಾಯದಿಂದ 17.3 ಓವರ್‌ಗಳಿಗೆ ಎರಡು ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಟೂರ್ನಿಯಲ್ಲಿ ಐದನೇ ಗೆಲುವು ಪಡೆಯಿತು ಹಾಗೂ ಪ್ಲೇಆಫ್ಸ್ ರೇಸ್‌ನಲ್ಲಿ ಉಳಯಿತು. ಸಿಎಸ್‌ಕೆ ಚೇಸಿಂಗ್‌ನಲ್ಲಿ ಅತ್ಯುತ್ತಮ ಬ್ಯಾಟ್ ಮಾಡಿ ತಮ್ಮ ತಂಡವನ್ನು ಗೆಲ್ಲಿಸಿದ ಸಂಜು ಸ್ಯಾಮ್ಸನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
IPL 2026 ಟೂರ್ನಿಯಲ್ಲಿ ಜಸ್‌ಪ್ರೀತ್ ಬುಮ್ರಾ ವೈಫಲ್ಯಕ್ಕೆ ಕಾರಣ ತಿಳಿಸಿದ ರವಿ ಶಾಸ್ತ್ರಿ!
ಸಿಎಸ್‌ಕೆ ತಂಡವನ್ನು ಗೆಲ್ಲಿಸಿದ ಸಂಜು ಸ್ಯಾಮ್ಸನ್
ಸಿಎಸ್‌ಕೆ ಪರ ಇನಿಂಗ್ಸ್ ಆರಂಭಿಸಿದ ಸಂಜು ಸ್ಯಾಮ್ಸನ್ ಹಾಗೂ ಋತುರಾಜ್ ಗಾಯಕ್ವಾಡ್ ಜೋಡಿ 24 ರನ್‌ಗಳಿಗೆ ಸೀಮಿತವಾಯಿತು. ಕಳೆದ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಇನಿಂಗ್ಸ್ ಆಡಿದ್ದ ಗಾಯಕ್ವಾಡ್, ಈ ಪಂದ್ಯದಲ್ಲಿ ಬೇಗ ಔಟ್ ಆದರು. ತದ ನಂತರ ತಂಡದ ಜವಾಬ್ದಾರಿ ಹೊತ್ತು ಬ್ಯಾಟ್ ಮಾಡಿದ ಸಂಜು ಸ್ಯಾಮ್ಸನ್, ಸಮಯಕ್ಕೆ ತಕ್ಕಂತೆ ಆಡಿದರು. ಒಂದು ಹಾಗೂ ಎರಡು ರನ್ ಜೊತೆಗೆ ಕೆಟ್ಟ ಎಸೆತಗಳಲ್ಲಿ ಚೆಂಡನ್ನು ಬೌಂಡರಿಗೆ ಅಟ್ಟುತ್ತಿದ್ದ ಸಂಜು ಅಂತಿಮವಾಗಿ ಆಡಿದ 52 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 7 ಬೌಂಡರಿಗಳ ಮೂಲಕ ಅಜೇಯ 87 ರನ್ ಗಳಿಸಿದರು. ಆ ಮೂಲಕ ಸಿಎಸ್‌ಕೆ ಗೆಲುವಿನ ಮಾಲೆ ತೊಡಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಸಾಥ್ ನೀಡಿದ್ದ ಕಾರ್ತಿಕ್ ಶರ್ಮಾ 31 ಎಸೆತಗಳಲ್ಲಿ ಅಜೇಯ 41ರನ್ ಗಳಿಸಿದರು. ಸಂಜು ಹಾಗೂ ಕಾರ್ತಿಕ್ ಮೂರನೇ ವಿಕೆಟ್‌ಗೆ 114 ರನ್‌ಗಳ ಜೊತೆಯಾಟವನ್ನು ಆಡಿದರು.
VictorioUS! 💪🥳#WhistlePodu #DCvCSK pic.twitter.com/EKk6XIpz7R
— Chennai Super Kings (@ChennaiIPL) May 5, 2026
155 ರನ್ ಕಲೆ ಹಾಕಿದ ಡೆಲ್ಲಿ ಕ್ಯಾಪಿಟಲ್ಸ್
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿರೀಕ್ಷೆಯಂತೆ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರುವಲ್ಲಿ ವಿಫಲವಾಯಿತು. ನೂರ್ ಅಹ್ಮದ್ ಸೇರದಂತೆ ಸಿಎಸ್‌ಕೆ ಬೌಲರ್‌ಗಳ ಶಿಸ್ತುಬದ್ದ ಬೌಲಿಂಗ್ ದಾಳಿಗೆ ನಲುಗಿ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ ಕೇವಲ 155 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಚೆನ್ನೈ ಸೂಪರ್ ಕಿಂಗ್ಸ್‌ಗೆ 156 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿತ್ತು.
Sanju in charge! 💪
— Chennai Super Kings (@ChennaiIPL) May 5, 2026
5️⃣0️⃣* For Chettan! 🥳💛#WhistlePodu #DCvCSK pic.twitter.com/gxslXpZGHi
ಅಗ್ರ ಐವರು ಬ್ಯಾಟರ್ಸ್ ವೈಫಲ್ಯ
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಗ್ರ ಐವರು ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಪಥುಮ್ ನಿಸಾಂಕ (19), ಕೆಎಲ್ ರಾಹುಲ್ (12),ನಿತೀಶ್ ರಾಣಾ (15), ಕರುಣ್ ನಾಯರ್ (13) ಹಾಗೂ ನಾಯಕ ಅಕ್ಷರ್ ಪಟೇಲ್ (2) ಬಹುಬೇಗ ವಿಕೆಟ್ ಒಪ್ಪಿಸಿದರು. ಆದರೆ, ಆರನೇ ವಿಕೆಟ್‌ಗೆ ಜೊತೆಯಾದ ಟ್ರಿಸ್ಟನ್ ಸ್ಟಬ್ಸ್ ಹಾಗೂ ಇಂಪ್ಯಾಕ್ಟ್ ಪ್ಲೇಯರ್ ಸಮೀರ್ ರಿಝ್ವಿ ಕೆಲ ಕಾಲ ಕ್ರೀಸ್‌ನಲ್ಲಿ ಸಿಎಸ್‌ಕೆ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಈ ಜೋಟಿ 47 ಎಸೆತಗಳಲ್ಲಿ 65 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ತಂಡದ ಮೊತ್ತವನ್ನು 130ರ ಗಡಿ ದಾಟಿಸಿದರು.
Innings Break!#CSK struck early, but #DC fought back brilliantly to post a fighting total 💪
— IndianPremierLeague (@IPL) May 5, 2026
Who's winning this one from here? 👇
Updates ▶️ https://t.co/f1bRZthndy#TATAIPL | #KhelBindaas | #DCvCSK pic.twitter.com/BJxuntAMEg
ಡಿಸಿಗೆ ಸಮೀರ್ ರಿಝ್ವಿ ಆಸರೆ
ಸಮಯಕ್ಕೆ ತಕ್ಕಂತೆ ಬ್ಯಾಟ್ ಮಾಡಿದ ಟ್ರಿಸ್ಟನ್ ಸ್ಟಬ್ಸ್ 31 ಎಸೆತಗಳಲ್ಲಿ 38 ರನ್‌ಗಳನ್ನು ಗಳಿಸಿದರು. ಕೊನಯ ಹಂತದಲ್ಲಿ ಇವರು ಜೇಮಿ ಓವರ್ಟನ್‌ಗೆ ವಿಕೆಟ್ ಒಪ್ಪಿಸಿದರು. ಆದರೆ, ಡೆತ್ ಓವರ್‌ಗಳನ್ನು ಅಬ್ಬರಿಸಿದ ಸಮೀರ್, 24 ಎಸೆತಗಳಲ್ಲಿ ಅಜೇಯ 40 ರನ್ ಚಚ್ಚಿ ಡೆಲ್ಲಿ ಮೊತ್ತವನ್ನು 150ರ ಗಡಿ ದಾಟಿಸಿದರು. ಆಶುತೋಷ್ ಶರ್ಮಾ ಕೊನೆಯಲ್ಲಿ 5 ಎಸೆತಗಳಲ್ಲಿ 2 ಸಿಕ್ಸರ್ ಸೇರಿ 14 ರನ್ ಗಳಿಸಿದರು.
ಸಿಎಸ್‌ಕೆ ಪರ ನೂರ್ ಅಹ್ಮದ್ ಎರಡು ವಿಕೆಟ್ ಕಿತ್ತರೆ, ಗುರ್ಜಪ್‌ನೀತ್ ಸಿಂಗ್, ಜೇಮಿ ಓವರ್ಟನ್, ಮುಖೇಶ್ ಚೌಧರಿ ಹಾಗೂ ಅಕೀಲ್ ಹುಸೇನ್ ತಲಾ ಒಂದೊಂದು ವಿಕೆಟ್ ಕಿತ್ತರು.